ಇಷ್ಟಲಿಂಗ ಪೂಜೆ ಮೂರ್ತಿಪೂಜೆ ಅಲ್ಲ

ಜನರಲ್ಲಿ ಇಷ್ಟಲಿಂಗ ಪೂಜೆ ಅನ್ನೋದು ಒಂದು ಮೂರ್ತಿಪೂಜೆ ಅನ್ನೋ ಕಲ್ಪನೆ ಬೇರೂರಿದೆ, ಇದು ಸುಶಿಕ್ಷಿತರನ್ನು ಬಿಟ್ಟಿಲ್ಲ, ಇದು ತಪ್ಪು ತಿಳುವಳಿಕೆಯಾಗಿದೆ. ಮೂರ್ತಿಪೂಜೆ ಮಾಡಬೇಕೋ ಬಿಡಬೇಕೋ ಅನ್ನೋ ಗೋಜಿಗೆ ಹೋಗದೆ ಇಷ್ಟಲಿಂಗ ಪೂಜೆಯು ಮೂರ್ತಿಪೂಜೆ ಅಲ್ಲ. ಇಷ್ಟಲಿಂಗ ಪೂಜೆ ಮೂರ್ತಿ ಪೂಜೆಗೆ ಹೊರತಾದುದು, ಇದು ಲಿಂಗಾಯತ ಧರ್ಮಿಯರ ಉಪಾಸ್ಯ ವಸ್ತು , ನಿರಾಕಾರ ನಿರಯವನಾದ ಪರಮಾತ್ಮನ ಸಾಕಾರ; ಗೋಲಾಕಾರದ, ವಿಶ್ವದ ಆಕಾರದಲ್ಲಿರುವ ಸಾಕಾರ ರೂಪದ, ಸಾಮಾಜಿಕ ಸಮಾನತೆ ಸ್ಥಾಪನೆಯ ಕುರುಹೇ ಹೊರತು ಯಾವುದೊ ವ್ಯೆದಿಕ ಪರಂಪರೆಯ ಅಥವಾ ಧ್ಯೆವಿಪುರುಶನ ಕುರುಹಲ್ಲ ಇಷ್ಟಲಿಂಗ.

ಇಷ್ಟಲಿಂಗಕ್ಕೆ ಸರ್ವಸಮ್ಮತ, ವ್ಯೆಜ್ಞಾನಿಕ, ತಾತ್ವಿಕ ಹಿನ್ನೆಲೆ ಇದೆ, ಇದು ನಿರ್ಗಣೋಪಾಸನೆಗೆ ಸಾದನ, ನಿರ್ಗುಣದ ಸಾಕಾರ, ಆದರೆ ಮೂರ್ತಿ ಪೂಜೆಯು ಸಗುಣದ ಸಾಕಾರ ವಿಷ್ಣು, ಶಿವ, ರಾಮ ಮೊದಲಾದ ವ್ಯಕ್ತಿ ಮೂರ್ತಿಗಳಿಗೆ ನಿರಾಕಾರ ಕಲ್ಪನೆ ಕೊಡಲು ಬರೋದಿಲ್ಲ ಅಂತೆಯೇ ವ್ಯೆಜ್ಞಾನಿಕ ದೃಷ್ಟಿಯಲ್ಲಿ ಯಾವಾ ಬೆಲೆಯೂ ಇಲ್ಲಾ.

ಇಷ್ಟಲಿಂಗ ಪೂಜೆ ಸ್ವರೂಪ ಪೂಜೆ ಇದಕ್ಕೆ ಬಸವಲಿಂಗ ಶರಣರ ಪದ್ಯವೇ ಸಾಕ್ಷಿ.

ಮುನ್ನನಾದಿಯ ಪರಾತ್ಪರ ನಿರಂಜನ ಶರಣ
ತನ್ನ ಹೃತ್ಕಮಲದ ಪರಂಜ್ಯೋತಿ ಲಿಂಗವನು
ಭಿನ್ನವಿಲ್ಲದೆ ವಾಮಕರಕಂಜದೊಳು ಪಿಡಿದು ತನ್ನ ತಾನರ್ಚಿಸುತಿಹ !

ಹೀಗೆ ಇಷ್ಟಲಿಂಗ ಪೂಜೆ ಸ್ವರೂಪ ಪೂಜೆ , ಮೂರ್ತಿ ಪೂಜೆ ಪ್ರತಿಕೋಪಾಸನೆ ಅಂದರೆ ವ್ಯಕ್ತಿಯ ಪ್ರತೀಕವಾಗಿ ಮೂರ್ತಿಯನ್ನ ಮಾಡಿ ಪೂಜಿಸುವುದು. ಇದು ಇಷ್ಟಲಿಂಗ ಪೂಜೆಯಂತೆ ಅಂತರಾತ್ಮನ ಪೂಜೆಯಾಗಿರದೆ ಯಾವುದೊ ವ್ಯಕ್ತಿಯ ಮೂರ್ತಿ ಪೂಜೆ ಆಗಿರುತ್ತೆ.

ಇಷ್ಟಲಿಂಗ ಪರಮಾತ್ಮನ ಕುರುಹಿನ ಪೂಜೆ, ಎನ್ನ ಕರಸ್ಥಲದ ಮಧ್ಯದಲ್ಲಿ ಪರಮ ನಿರಂಜನದ ಕುರುಹು ತೋರಿದ

ಈ ವಚನದಿಂದ ಇಷ್ಟಲಿಂಗವು ಪರಮ ನಿರಂಜನದ ಕುರುಹು ಎಂದೂ, ಇಷ್ಟಲಿಂಗ ಪೂಜೆ ಸ್ವರೂಪ ಪೂಜೆಯ ಸಿದ್ದವಸ್ತುವಾಗಿದೆ, ಪರಶಿವನ (ಸೃಷ್ಟಿಕರ್ತನ) ಇರುಹಿನ ನೆಲೆಯ ತೋರುವ ಕುರುಹಿದು.

ವ್ಯೆತ್ಯಾಸಗಳು

ಇಷ್ಟಲಿಂಗ ಪೂಜೆ

ಮೂರ್ತಿ ಪೂಜೆ

೧. ನಿರ್ಗುಣ ಸಾಕಾರ ಪೂಜೆ ೧. ಸಗುಣ ಸಾಕಾರ ಪೂಜೆ
೨. ಅಹಂಗ್ರಹೋಪಾಸನೆ ೨. ಪ್ರತೀಕೋಪಾಸನೆ
೩. ಪರಮಾತ್ಮನ ಕುರುಹಿನ ಪೂಜೆ ೩. ಮಹಾತ್ಮರ ಮೂರ್ತಿಯ ಪೂಜೆ
೪. ಮುಕ್ತಿ ದಾತನ ಪೂಜೆ ೪. ಮುಕ್ತಾತ್ಮನ ಪೂಜೆ
೫. ಎಂದಿಗೂ ಮಂಗಲದಾತನ ಪೂಜೆ ೫. ಕೆಲವೊಮ್ಮೆ ಡಾಂಭಿಕರ ಪೂಜೆ
೬. ನಿರವಯದ ಸಾಕಾರ ಪೂಜೆ ೬. ಸಾವಯವದ ಸಾಕಾರ ಪೂಜೆ
೭. ನಿರಾಕಾರದ ಸಾಕಾರ ಪೂಜೆ ೭. ಸಾಕಾರದ ಸಾಕಾರ ಪೂಜೆ
೮. ಅರ್ಚನೆ-ಅರ್ಪಣೆ- ಅನುಸಂಧಾನಗಳಿಗೆ (ಯೋಗಕ್ಕೆ) ಅವಕಾಶವಿದೆ ೮. ಕೇವಲ ಅರ್ಚನೆ-ಅರ್ಪಣೆಗೆ ಅವಕಾಶವಿದೆ.
೯. ಸಾಮರಸ್ಯದ ಸಂತೃಪ್ತಿಯಿದೆ ೯. ಸಾಮರಸ್ಯವಿಲ್ಲ
೧೦. ವಿಶ್ವದ ಆಕಾರದಲ್ಲಿ ಪೂಜೆ ೧೦. ವ್ಯಕ್ತಿ ಅಥವಾ ಪ್ರಾಣಿಗಳ ಆಕಾರದಲ್ಲಿ ಪೂಜೆ
೧೧. ಲಿಂಗ ಭೇದವಿಲ್ಲ ೧೧. ಲಿಂಗಭೇದವಿದೆ
೧೨. ಸುಜ್ಞಾನಯುತ ಸದ್ಭಕ್ತಿ ಸಮ್ಮೇಲನವಿದೆ ೧೨. ಕೆಲೊವೊಮ್ಮೆ ಮುಢಭಕ್ತಿಯನ್ನು ಪ್ರೇರೇಪಿಸುತ್ತದೆ.
೧೩. ಏಕದೆವೋಪಾಸನೆ ೧೩. ಬಹುದೇವೋಪಾಸನೆ
೧೪. ಅಂಗದ ಮೇಲೆ ಧರಿಸಿ ಅಂಗ್ಯೆಯಲಿಟ್ಟು ಪೂಜಿಸುವಂತದ್ದು ೧೪. ಅಂಗದ ಮೇಲೆ ಆಯತವಾಗದೆ ಗುಡಿ, ದೇಗುಲ, ಮನೆಯ ಮಂಟಪ ದಲ್ಲಿಟ್ಟು ಪೂಜಿಸುವಂತದ್ದು
೧೫. ದೇವಾಲಯ ರಚನೆಗೆ ಪ್ರೋತ್ಸಾಹಿಸದು ಇದು ಬಡವನ ಭಕ್ತಿಗೆ ಚ್ಯುತಿ ತಾರದೆ ಶ್ರೀ ಸಾಮಾನ್ಯನ ಧರ್ಮ ಬೆಳೆಸುವುದು ೧೫. ದೇವಾಲಯ ನಿರ್ಮಾಣದಲ್ಲಿ ಧನ ವ್ಯಯವಾಗುವುದು; ತತ್ಪರಿಣಾಮವಾಗಿ ಶ್ರೀಮಂತ ಪ್ರಭುತ್ವ ಬೆಳೆಸುವುದು.
೧೬. ಪೂಜಾರಿ ವರ್ಗದ ಬೆಳವಣಿಗೆಗೆ ಅವಕಾಶವಿಲ್ಲ. ೧೬. ಮಂದಿರ ಸ್ಥಾಪನೆಯಿಂದ ಪೂಜಾರಿ ವರ್ಗಕ್ಕೆ ಅವಕಾಶವಿದೆ, ಸುಲಿಗೆ ಶೋಷಣೆ ಇತ್ಯಾದಿ ನಡೆಯಬಹುದು.
೧೭.ಯಾವ ಗೊಂದಲ ರೋಗ ರುಜಿನಕ್ಕೆ ಅವಕಾಶವಿಲ್ಲ. ೧೭. ಜಾತ್ರೆ ಮುಂತಾದವುಗಳಿಂದ ರೋಗ ರುಜಿನ ಮುಂತಾದ್ದಕ್ಕೆ ಅವಕಾಶವಿದೆ.
ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು, ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.
ಪರಿವಿಡಿ (index)
*
Previousಇಷ್ಟಲಿಂಗ - ಚರಲಿಂಗ - ಸ್ಥಾವರಲಿಂಗಬಸವಣ್ಣನವರು ಸಾರಿದ ಸಮಾನತೆNext
*