ಶ್ರೀ ಸಿದ್ಧಗಂಗಾ ಮಠ

ಶ್ರೀ ಸಿದ್ಧಗಂಗಾ ಮಠವು ಕ್ರಿ. ಶ. ೧೫ನೆ ಶತಮಾನದಲ್ಲಿ ಸ್ಥಾಪಿಸಲ್ಪಟ್ಟಿದೆ. "ಶೂನ್ಯ ಸಿಂಹಾಸನ"ದ ಶ್ರೀ ಗೋಶಾಲ ಸಿದ್ಧೇಶ್ವರ ಸ್ವಾಮಿಜಿ ಅವರು ಈ ಮಠವನ್ನು ಸ್ಥಾಪಿಸಿದರೆಂದು ಇತಿಹಾಸ ಪುಟಗಳಿಂದ ತಿಳಿದುಬರುತ್ತದೆ. ಶ್ರೀ ಸಿದ್ದಗಂಗಾ ಮಠ ತುಮಕೂರು ನಗರದಿಂದ ಸುಮಾರು ಆರು ಕಿಲೋಮೀಟರುಗಳ ದೂರದಲ್ಲಿದೆ. ಹತ್ತಿರವೆಂದರೆ ಕ್ಯಾತಸಂದ್ರ ರೈಲು ನಿಲ್ದಾಣದಿಂದ ಅರ್ಧ ಕಿ.ಮಿ. ದೂರವಿದೆ. ಶ್ರೀಸಿದ್ಧಗಂಗ ಮಠ ತುಮಕೂರು ಮತ್ತು ಬೆಂಗಳೂರಿನ ಬಸ್ಸುಗಳಿಗೆ ಸುಲಭವಾಗಿ ಸಂಪರ್ಕವಿರುತ್ತದೆ. ಅನ್ನ, ವಿದ್ಯೆ ಮತ್ತು ವಸತಿಯ ಉಚಿತ ವ್ಯವಸ್ಥೆ ಇದ್ದು, ಇದೇ ಕಾರಣದಿಂದ ತ್ರಿವಿಧ ದಾಸೋಹದ ಕ್ಷೇತ್ರವೆಂದೇ ಪ್ರಸಿದ್ದಿ ಪಡೆದಿದೆ. ಸುಮಾರು ಆರು ಸಾವಿರ ಮಕ್ಕಳಿಗೆ ತ್ರಿವಿಧ ದಾಸೋಹ ಕಾರ್ಯ ನಡೆಯುತ್ತಿದೆ.

ಕರ್ನಾಟಕ ರತ್ನ ಪ್ರಶಸ್ತಿಯನ್ನು ಡಾ||ಶ್ರೀ ಶಿವಕುಮಾರ ಸ್ವಾಮಿಗಳವರಿಗೆ ನೀಡಲಾಗಿದೆ. ಶ್ರೀ ಕ್ಷೇತ್ರದ ಮಠಾಧಿಪತಿಗಳು ಡಾ|| ಶ್ರೀ ಶಿವಕುಮಾರ ಸ್ವಾಮಿಗಳು. ಕಿರಿಯ ಸ್ವಾಮಿಜಿ ಶ್ರೀ ಸಿದ್ದಲಿಂಗಸ್ವಾಮಿಗಳು ಕ್ಷೇತ್ರದ ಹಿಂದಿನ ಮಠಾಧಿಪತಿಗಳು ಶ್ರೀಉದ್ದಾನ ಶಿವಯೋಗಿಗಳು. ಇವರು ಎಡೆಯೂರು ಸಿದ್ಧಲಿಂಗೇಶ್ವರರ ಶಿಷ್ಯಪರಂಪರೆಗೆ ಸೇರಿದವರಾಗಿದ್ದಾರೆ.

ಕ್ಷೇತ್ರದ ಪ್ರಮುಖ ದೇವಸ್ಥಾನಗಳು: ಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನ, ಶ್ರೀ ಸಿದ್ದಗಂಗಾ ಮಾತೆ ದೇವಸ್ಥಾನ.

ಪರಿವಿಡಿ (index)
*
Previousಡಾ|| ಫ.ಗು.ಹಳಕಟ್ಟಿ ತೊಂಟಾದಾರ್ಯ ಮಠ ಗದಗNext
*