ತೊಂಟಾದಾರ್ಯ ಮಠ ಗದಗ

ತೋಂಟದಾರ್ಯ ಸಂಸ್ಥಾನ ಮಠವು ೧೫ನೇಯ ಶತಮಾನದಲ್ಲಿ ಬದುಕಿ ಬಾಳಿದ ಶಿವಯೋಗಿ ಸೂರ್ಯ ಶ್ರೀ ಯಡೆಯೂರು ತೋಂಟದ ಶ್ರೀ ಸಿದ್ದಲಿಂಗ ಯತಿಗಳ ನೇರ ವಾರಸುದಾರಿಕೆಯ ಮಠ. ಸದ್ಯ ಈ ಮಠದ ೧೯ ನೇಯ ಪೀಠಾಧಿಕಾರಿಗಳಾಗಿರುವವರು ಜಗದ್ಗುರು ಡಾ|| ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು. ಶ್ರೀ ತೊಂಟದಾರ್ಯ ಮಠ ಇಲ್ಲಿನ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಲಿದೆ. ಲಿಂಗಾಯತ ಅಧ್ಯಯನ ಸಂಸ್ಥೆಯಿಂದ ಉತ್ಕೃಷ್ಟ ಪುಸ್ತಕಗಳ ಪ್ರಕಟಣೆಗೆ ಚಾಲನೆ ನೀಡಲಾಗಿದೆ. ಲಿಂಗಾಯತ ಪುಣ್ಯಪುರುಷ ಮಾಲೆಯ ಕೃತಿಗಳು ಆಧುನಿಕ ಗಣಂಗಳ ಹಾಗೂ ಪುರಾತನರ ಚರಿತ್ರೆಗಳು ಈ ಅಧ್ಯಯನ ಸಂಸ್ಥೆಯ ಪ್ರಮುಖ ಪ್ರಕಟಣೆಗಳು.

ತೋಂಟದಾರ್ಯ ಮಠವು ಜನಪರ ಹಾಗೂ ಜ್ಞಾನಪರವಾದ ಜಾತ್ರೋತ್ಸವ ಮೂಲಕ ಅರಿವು-ವೈಚಾರಿಕತೆಯ ಪ್ರಸಾರಕ್ಕೆ ತನ್ನದೆ ಆದ ಕೊಡುಗೆ ನೀಡುತ್ತಿದೆ. ಗದುಗಿನ ಮಠದ ಜಾತ್ರೆ ಉಳಿದ ಜಾತ್ರೆಗಳಿಗಿಂತ ವಿಭಿನ್ನವಾಗಿದೆ. ತೋಂಟದ ಶ್ರೀಗಳು ಉತ್ಕೃಷ್ಟ ಸಾಹಿತ್ಯ ಕೃತಿಗಳ ಬಿಡುಗಡೆ ಹಾಗೂ ವೈಚಾರಿಕ ಚಿಂತನ ಕಾರ್ಯಕ್ರಮಗಳ ಮೂಲಕ ಮುಖ್ಯವಾಗಿ ವಿಚಾರ ಸಂಕಿರಣಗಳ ಮೂಲಕ ಜಾತ್ರೆಯನ್ನು ಜನಪರ ಕಾಳಜಿಯ ಜನೋತ್ಸವವನ್ನಾಗಿ ಆಚರಿಸಲಾಗುತ್ತದೆ.

Previousಶ್ರೀ ಸಿದ್ಧಗಂಗಾ ಮಠ ತುಮಕೂರುಲಿಂಗಾಯತರು ಹಿಂದುಗಳಲ್ಲ - ಶ್ರೀ ಪಿ. ಎಲ್. ಪಾಟೀಲNext
*