Previous ಸಿದ್ಧಾಂತ ಶಿಖಾಮಣಿಯ ಅಸಂಬದ್ಧ ಸಿದ್ಧಾಂತಗಳು ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿ Next

ಲಂಡನ್‌ನಲ್ಲಿ ಧರ್ಮಗುರು ಬಸವೇಶ್ವರ ಪ್ರತಿಮೆ

*

ಬಸವೇಶ್ವರ ಪುತ್ಥಳಿ (ಮೂರ್ತಿ) ಲಂಡನ ನಲ್ಲಿ

Basava staute inagurated by India PM Narendra Modi

ನವೆಂಬರ್ ೧೪, ೨೦೧೫ರಂದು ಸಮಾಜ ಸುಧಾರಕ ಜಗಜ್ಯೋತಿ ಬಸವೇಶ್ವರ ಪುತ್ಥಳಿಯನ್ನು ಲಂಡನ್‌ನ ಲ್ಯಾಂಬೆತ್ ನಗರದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು. 'ಅನುಭವ ಮಂಟಪದ’ ಕಲ್ಪನೆ ನೀಡಿದ್ದ ಬಸವಣ್ಣ ಅವರು ಮಹಾನ್ ಮಾನವತಾವಾದಿ' ಎಂದು ಮೋದಿ ಬಣ್ಣಿಸಿದರು. ಲಂಡನ್ ಕಾಲಮಾನ ಬೆಳಗ್ಗೆ 9.45ಕ್ಕೆ ನಡೆದ ಸಮಾರಂಭದಲ್ಲಿ ಲ್ಯಾಂಬೆತ್ ನಗರದ ಥೇಮ್ಸ್ ನದಿಯ ದಂಡೆಯ ಆಲ್ಬರ್ಟ್ ಎಂಬಾಕ್ ಮೆಂಟ್ ಎಂಬ ಪ್ರದೇಶದಲ್ಲಿ ನರೇಂದ್ರ ಮೋದಿ ಬಸವೇಶ್ವರ ಪ್ರತಿಮೆ ಲೋಕಾರ್ಪಣೆಗೊಳಿಸಿದರು.

ನನ್ನ ಜೀವನದ ಅಪೂರ್ವ ಕ್ಷಣ : ಪ್ರತಿಮೆ ಲೋಕಾರ್ಪಣೆ ಮಾಡಿದ ಬಳಿ ಮಾತನಾಡಿದ ಮೋದಿ 'ಇದು ನನ್ನ ಜೀವನದ ಅಪೂರ್ವ ಕ್ಷಣವಾಗಿದೆ. ಬಸವಣ್ಣ ಪ್ರತಿಮೆ ಅನಾವರಣ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಜಾತಿ ಅಸಮಾನತೆ ಹೋಗಲಾಡಿಸುವಲ್ಲಿ ಬಸವಣ್ಣನವರ ಪಾತ್ರ ಮಹತ್ತರವಾದದ್ದು. ಅನುಭವ ಮಂಟಪದ ಕಲ್ಪನೆ ನೀಡಿದ್ದ ಬಸವಣ್ಣ ಮಹಾನ್ ಮಾನವತಾವಾದಿ ಎಂದು ಬಣ್ಣಿಸಿದರು.

Basava staute inagurated by India PM Narendra Modi Basava staute inagurated by India PM Narendra Modi

ಸುಮಾರು 2 ಅಡಿ ಎತ್ತರದ ಬಸವಣ್ಣ ಪ್ರತಿಮೆಯನ್ನು ಹಡಗಿನ ಮೂಲಕ ಲಂಡನ್‌ಗೆ ರವಾನಿಸಲಾಗಿತ್ತು. 2012ರ ಜುಲೈ ತಿಂಗಳಲ್ಲಿ ಪ್ರತಿಮೆ ಸ್ಥಾಪನೆಗೆ ಅನುಮತಿ ಸಿಕ್ಕಿತ್ತು. 2013ರ ಫೆಬ್ರುವರಿಯಲ್ಲಿ ತುಮಕೂರು ಸಿದ್ದಗಂಗಾ ಶ್ರೀಗಳು ಸಾಂಕೇತಿಕವಾಗಿ ಶಿಲಾನ್ಯಾಸ ನೆರವೇರಿಸಿದ್ದರು. ಕಲಬುರ್ಗಿ ಮೂಲದ ಕನ್ನಡಿಗ, ಲಂಡನ್‌ನ ಲ್ಯಾಂಬೆತ್ ನಗರದ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ಅವರ ಪರಿಶ್ರಮದಿಂದ ಥೇಮ್ಸ್ ನದಿ ದಂಡೆಯ ಪ್ರದೇಶದಲ್ಲಿ ಬಸವೇಶ್ವರರ ಪ್ರತಿಮೆಯನ್ನು ನಿರ್ಮಿಸಲಾಗಿತ್ತು. ಅದನ್ನು ನವೆಂಬರ್ ೧೪, ೨೦೧೫ರಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ.

ಪರಿವಿಡಿ (index)
*
Previous ಸಿದ್ಧಾಂತ ಶಿಖಾಮಣಿಯ ಅಸಂಬದ್ಧ ಸಿದ್ಧಾಂತಗಳು ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿ Next