ಥಾಯ್‌ಲ್ಯಾಂಡನಲ್ಲಿ ಬಸವಣ್ಣ!

*

- ✍ ಜಿ. ಬಿ. ಪಾಟೀಲ

ಥಾಯಲ್ಯಾಂಡಿನ ವರೆಗೂ ಬಸವಣ್ಣನವರು ಹಬ್ಬಿದ್ದಾರೆ.

ಕಾಂಬೊಡಿಯಾ ಪ್ರವಾಸ ಮುಗಿಸಿ ಅದರ ಸುಂದರವಾದ ನೆನಪಿನೊಂದಿಗೆ ನೆರೆಯ ಥೈಲಾಂಡ ದೇಶಕ್ಕೆ ಕಾರಿನಲ್ಲಿ ೪೧೨ ಕಿ.ಮಿ.ಪ್ರಯಾಣ.ಐದು ಘಂಟೆಗಳಿಗಿಂತ ಹೆಚ್ಚಿಗೆ ಸಮಯ ಹಿಡಿಯಬಹುದೆಂದು ಚಾಲಕ ತನ್ನ ಹರಕು ಇಂಗ್ಲಿಷ ಬಾಷೆಯಲ್ಲಿ ಕಿರುಚಿದ. ದಣಿದ ದೇಹಕ್ಕೆ ಕಾರಿನ ಸಿಟಿಗೆ ವರಗಿದ ತಕ್ಷಣ ನಿದ್ದೆಆವರಿಸಿತು.ಅನೇಕ ಬಾರಿ ಬ್ಯಾಂಕಾಕ ಹಾಗು ಅಲ್ಲಿಯ ಸಮುದ್ರ ತಿರದ ನಗರಗಳನ್ನು ಕಂಡಿರುವ ನನಗೆ ಅವುಗಳ ಬಗ್ಗೆ ಹೆಚ್ಚಿನ ಆಸಕ್ತಿ ಎನು ಇರಲಿಲ್ಲ. ಕಾಂಬೊಡಿಯಾ ಹಾಗೂ ಥೈಲ್ಯಾಂಡ ದೇಶಗಳು ಅಕ್ಕ ಪಕ್ಕದ ದೇಶಗಳು. (Land locked countries ) ಪೂರ್ವದಲ್ಲಿ ಇವೆರಡು ದೇಶಗಳು ಒಂದೆ ರಾಜ ಮನೆತನದ ಒಡೆತನಲ್ಲಿ ಇರಬಹುದು.ಜನರ ಸ್ವರೂಪ, ಆಚಾರ, ಜೀವನ ಪದ್ದತಿ ಎಲ್ಲದರಲ್ಲಿಯೂ ಇವೆರಡು ದೇಶಗಳು ಸಾಮ್ಯತೆಯನ್ನು ಹೊಂದಿವೆ.

Basava in Thailand

ಥಾಯಲ್ಯಾಂಡ ದೇಶದ ಅತ್ಯಂತ ಚಮಕ್ ಧಮಕ್ ನಗರವೇ ಪಟ್ಟಾಯ. ಈ ನಗರ ಜಗತ್ತಿನ ಎಲ್ಲ ಯುವಕರ ಆಕರ್ಷಣೆಯ ನಗರ. ಸಾಮಾನ್ಯವಾಗಿ ಭಾರತಿಯ ಪ್ರವಾಸಿ ವಿದೇಶಿ ನೆಲದಲ್ಲಿ ಮೊದಲು ನೊಡವ ನಗರ. ಪಟ್ಟಾಯ ನಗರವು ಹಗಲಿನಲ್ಲಿ ಮಲಗುವದು ರಾತ್ರಿಯಲ್ಲಿ ಎಚ್ಚರ ಗೊಳ್ಳುವದು ಆ ನಗರದಲ್ಲಿ ನಾವು ಒಂದು ರಾತ್ರಿ ತಂಗಿ ಮರು ದಿವಸ ನಾವು ರಸ್ತೆಯ ಮುಖಾಂತರ ಬ್ಯಾಂಕಾಕ ಸೆರುವದು ಎಂದು ನಮ್ಮ ಪ್ರವಾಸದ ವಪ್ಪಂದವಾಗಿತ್ತು, ಅದರಂತೆ ನಾವು ರಾತ್ರಿ ಅಲ್ಲಿ ತಂಗಿದ್ದೆವು. ಅಂದು ನಾನು ನನ್ನ ಬೆಳಗಿನ ವಾಯು ವಿಹಾರಾರ್ಥವಾಗಿ ನಾವು ತಂಗಿದ ಹೋಟೆಲ್ ಎದುರಿಗಿರುವ ಸಮುದ್ರ ದಂಡೆಯಲ್ಲಿ ದಾಪುಗಾಲು ಹಾಕುತ್ತಿದ್ದೆ, ಒಂದು ಚಿಕ್ಕ ದೇವಸ್ಥಾನ ನನ್ನ ಗಮನ ಸೆಳೆಯಿತು.ನಾಲ್ಕು ಹೆಜ್ಜೆ ಮುಂದೆ ಹೊದವನು ತಿರುಗಿ ಬಂದೆ. ಸಂಗಮವರಿ (Marble) ಕಲ್ಲಿನಲ್ಲಿ ಕೆತ್ತಿದ ಅಸ್ಟೆನು ಆಕರ್ಷಣೆಇಲ್ಲದ ಎರಡು ಮೂರ್ತಿಗಳನ್ನು ಒಂದು ಚಿಕ್ಕ ದೇವಸ್ಥಾನದಲ್ಲಿ ಕಂಡೆ. ಒಂದು ಮೂರ್ತಿಯ ಅಂಗೈಯಲ್ಲಿ ಲಿಂಗ ಹಿಡಿದು ಪೂಜಿಸುವದು ಎರಡನೇಯ ಮೂರ್ತಿಯ ಎದುರಿನಲ್ಲಿ ಸ್ಥಾವರಲಿಂಗ. ವೀರಭದ್ರನ ಮೂರ್ತಿಯ ಆಕಾರದ ಚಿಕ್ಕ ಚಿಕ್ಕ ಮೂರ್ತಿಗಳು.ನಾನು ಒಂದು ಕ್ಷಣ ದಂಗಾದೆ.ತಲೆಯಲ್ಲಿ ಸಾವಿರ ಬಲ್ಬ ಒಮ್ಮೆಲೆ ಹತ್ತಿಕೊಂಡಂತೆ.ನಾನು ನೋಡುತ್ತಿರುವದು ಇಷ್ಟಲಿಂಗ ಪೂಜಾ ಧಾರಿಯ ಶರಣನದು. ಅದು ಬಸವಣ್ಣನವರದೂ ಆಗಿರಬಹುದು ಅಥವಾ ಯಾವದೋ ಶರಣರ ದಿರಬಹುದು. ಇಂದಿನ ವರೆಗೂ ನಾವು ಬಸವಣ್ಣನವರ ವ್ಯಾಪ್ತಿಯು (ಪ್ರಚಾರವು) ಅಫಘಾನಿಸ್ಥಾನದ ವರೆಗೆ ಹರಡಿತ್ತೆಂದು ಕೊಂಡಿದ್ದೆವು. ದೂರದ ಕಾಶ್ಮೀರ ದೊರೆಯು ವಚನ ಕಾರನಾಗಿದ್ದನ್ನು ಕಂಡಿದ್ದೇವೆ, ಆದರೆ ದೂರದ ಥೈಲ್ಯಾಂಡಿನಲ್ಲಿಬಸವಣ್ಣ !!!.ಅದ್ಬುತ!!, ಅಚ್ಚರಿ!. ನಡೆಯುವವನಿಗೆ ನಿಧಿಯನ್ನು ಎಡವಿದಂತೆ. ಕೈಲಿರುವ ಮೊಬೈಲನಲ್ಲಿ ಫೊಟೊ ತೆಗೆದೆ. ಸುತ್ತಲು ಕಣ್ಣಾಡಿಸಿದೆ. ಹೆಚ್ಚಿನ ಕುರುಹುಗಳನ್ನು ಸುತ್ತಲೂ ಹುಡುಕಲು ಪ್ರಾರಂಬಿಸಿದೆ. ನನ್ನ ದೃಷ್ಟಿ ರಸ್ತೆಯ ಅಚೆ ಬದಿಯಲ್ಲಿ ಹರಿಯಿತು ಅಲ್ಲೊಂದು ರಿಸಾರ್ಟ. ಅದರ ಹೆಸರು ಬಸಯಾ ಬಸವನ ವಿರೂಪಗೊಂಡ ಹೆಸರು, ಮತ್ತೊಂದು ನಿಧಿ!!! ಥಾಯಲ್ಯಾಂಡಿನಲ್ಲಿ ಬಸವ. ರೂಮಿಗೆ ಓಡಿದೆ ಸ್ನೆಹಿತ ಮಲಗಿದ್ದ ಅವನ್ನ ಎಬ್ಬಿಸಲಿಲ್ಲ.ಸ್ನಾನ ಮಾಡಿ ಮತ್ತದೆ ಸ್ಥಾನಕ್ಕೆ ಬಂದೆ.

Basava in Thailand

ರಿಸಾರ್ಟ ಒಳಹೊಕ್ಕೆ,ಇಂಗ್ಲಿಷ ಭಾಷೆ ಬಲ್ಲವನನ್ನು ಕೇಳಬೇಕು,ಥೈಲ್ಯಾಂಡನಲ್ಲಿ ಇಂಗ್ಲಿಷ ಕೇವಲ ಸಂಪರ್ಕ ಭಾಷೆ. ವ್ಯವಹಾರಕ್ಕೆ ಅನೂಕೂಲ ವಾಗುವಸ್ಟು ಮಾತ್ರ ಇಂಗ್ಲಿಷ್ ಬಲ್ಲವರು ಸಿಗುವರು. ನಿರರ್ಗಳವಾಗಿ ಇಂಗ್ಲಿಷ ಬಾಷೆಯಲ್ಲಿ ಸಂಭಾಷಿಸುವವರು ವಿರಳ. ನಾಲ್ಕಾರು ಜನರೊಂದಿಗೆ ವಿಚಾರಿಸಿದ ನಂತರ ರಿಸಾರ್ಟ ಸಿಬ್ಬಂದಿಯವರು ತಮ್ಮ ಜನರಲ್ ಮ್ಯಾನೆಜರನ ಹತ್ತಿರ ಕರೆದುಕೊಂಡು ಹೊದರು. ಜನರಲ್ ಮ್ಯಾನೆಜರನ ಇಂಗ್ಲಿಷ್ ಜ್ಞಾನವು ಅಸ್ಟಕ್ಕೆ ಅಸ್ಟೇ. ನಾನು ಕೇಳಿದ ಪ್ರಶ್ನೆಗಳಿಗೆ ಪ್ರಯತ್ನಪಟ್ಟು ಉತ್ತರಿಸಿದ. ಅಥಿತಿ ಗ್ರಹಕ್ಕೆ ಬಸಯಾ ಎಂದು ಯಾಕೆ ಹೇಸರಿಟ್ಟದ್ದಿರಿ? ನನ್ನ ಮೋದಲನೇ ಪ್ರಶ್ನೆ. ಉತ್ತರ ತಿಳಿಯದು. ಇದರ ಮಾಲೀಕರು ಯಾರು? ಎರಡನೇ ಪ್ರಶ್ನೆ. ರಿಸಾರ್ಟ ಮಾಲೀಕರು ಬ್ಯಾಂಕಾಕ್ ನಲ್ಲಿ ಇರುವುದಾಗಿಯು ಅವರೊಬ್ಬರು ಅತ್ಯಂತ ಶ್ರೀಮಂತರೆಂದು ತಿಳಿಯಿತು. ನೂರಾರು ವರ್ಷಗಳ ಪೂರ್ವದಲ್ಲಿ ಅವರು ಮಿಲಟರಿ ದಂಡ ನಾಯಕರಾ ಗಿದ್ದಾಗಿಯೂ ಐದು ಸಾವಿರ ಎಕರೆಯ ದೊಡ್ಡ ಜಮೀನದಾರರೆಂದು ತಿಳಿದು ಬಂತು.ಅವರ ಭಾವ ಚಿತ್ರ ತೋರಿಸಿದರು,ಮಿಲಿಟರಿ ವೇಷದಲ್ಲಿದ್ದ ಅವರ ಭಾವ ಚಿತ್ರ ಸುಂದರವಾಗಿತ್ತು. ಅವರ ಫೊಟೊ ಸೆರೆ ಹಿಡಿದೆ. ಇಂದು ಅವರ ವಂಶಜರು ಬ್ಯಾಕಾಂಕ ನಗರ ದಲ್ಲಿ ಉದ್ದಿಮೆ ದಾರರೆಂದು ತಿಳಿಸಿದ. ನಾನು ಅವರ ವಿಳಾಸ ಕೇಳಲಾಗಿ ,ಅದನ್ನು ಕೊಡಲು ಹಿಂದೇಟು ಹಾಕಿದ, ಅಲ್ಲದೆ ಅವರು ಸಮಯ ನಿಗದಿ ಪಡಿಸದೆ ಯಾರನ್ನೂ ನೋಡುವದಿಲ್ಲವೆಂದು ತಿಳಿಸಿದ. ನಾನು ಪರಿ ಪರಿ ಯಾಗಿ ಒತ್ತಾಯಿಸಿದೆ.ನನ್ನ ಪಾಸ್ ಪೊರ್ಟ ತೋರಿಸಿದೆ, ನನ್ನ ಪ್ರವಾಸದ ದಿನಗಳನ್ನು ಅವರನ್ನು ಬೆಟ್ಟಿ ಮಾಡಿಸುವದಾದರೆ ನಾನು ಕಾಯಲು ಸಿದ್ದವಿರುವದಾಗೀಯು ಅಲ್ಲದೆ ಅವಶ್ಯವಿದ್ದಲ್ಲಿ ನಾನು ಭಾರತಕ್ಕೆ ಹಿಂದಿರುಗುವ ದಿನವನ್ನು ವಿಸ್ತರಿಸುವುದಾಗಿ ತಿಳಿಸಿದೆ. ನನ್ನ ಯಾವುದೇ ಬೇಡಿಕೆಯನ್ನು ಅವನು ಪುರಸ್ಕರಿಸಲಿಲ್ಲ. ಬಹುಷಃ ನನ್ನ ಕ್ರೆಡಿಬಿಲಿಟಿ ಸಾಲದೆ ಬಂದಿರಬಹುದು.

ನನ್ನ ಒತ್ತಾಯ ಫಲಿಸಲಿಲ್ಲ,ಕಾರಣ ನಾನೊಬ್ಬ ಸಾಮಾನ್ಯ ಪ್ರವಾಸಿ. ಮತ್ತೊಮ್ಮೆ ಭಾರತಿಯ ದೂತಾವಾಸದ ಪ್ರಭಾವ ಬಳಿಸಿ ಪ್ರಯತ್ನ ಪಡುವುದೆಂದು ಹಾಗೆ ಪ್ರಯತ್ನ ಪಟ್ಟಲ್ಲಿ ಯಶಸ್ಸು ಸಾಧಿಸಬಹುದೆಂದು ಭಾರವಾದ ಹೃದಯದಿಂದ ತಾಯ್ನಾಡಿನತ್ತ ಮುಖ ಮಾಡಿದೆ.

*
Previousಐದು ದೇಹಗಳುವೀರಶೈವ ಬೇಡ ಲಿಂಗಾಯತ ಇರಲಿNext
*