ಭೃತ್ಯಾಚಾರ

ಬಸವ ಬಾರಯ್ಯ, ಮತ್ರ್ಯದೊಳಗೆ
ಭಕ್ತರುಂಟೆ ಹೇಳಯ್ಯಾ ?
ಮತ್ತಾರು ಇಲ್ಲಯ್ಯ, ಮತ್ತಾರು ಇಲ್ಲಯ್ಯ
ಮತ್ತಾರು ಇಲ್ಲಯ್ಯ ನಾನೊಬ್ಬನೇ ಭಕ್ತ !
ಮತ್ರ್ಯಲೋಕದೊಳಗಣ ಭಕ್ತರಲ್ಲರೂ
ಲಿಂಗ ಜಂಗಮ ನೀನೇ ಅಯ್ಯಾ ಕೂಡಲ ಸಂಗಮ ದೇವಾ !
--ಬಸವಣ್ಣನವರು

ನೀವು ಯಾರಾದರೂ ನನ್ನನ್ನು ಹೀಗೆ ಪ್ರಶ್ನಿಸುತ್ತೀರಾ ? ಭಕ್ತರು ಯಾರು ? ಜಂಗಮರಾರು ? ಲಿಂಗವೆಂದರೇನು ? ಆಗ ನಾನು ಹೇಳುವೆ ; "ಮತ್ತಾರು ಇಲ್ಲ. ನಾನೊಬ್ಬನೇ ಭಕ್ತ. ನನ್ನ ಹೊರತು ಉಳಿದುದೆಲ್ಲ ಲಿಂಗಸ್ವರೂಪ, ಜಂಗಮ ಸ್ವರೂಪ". ಹೀಗೆ ಪ್ರತಿಯೊಬ್ಬನೂ ತಾನು ಭಕ್ತ, ಸೇವಕ ; ತನ್ನನ್ನು ಹೊರತುಪಡಿಸಿ ಮಿಕ್ಕುದೆಲ್ಲ ದೇವ ಸ್ವರೂಪ, ಸೇವ್ಯ ಎಂಬ ಭಾವ ಬೆಳೆಸಿಕೊಳ್ಳಬೇಕು.

ಪರಿವಿಡಿ (index)
*
Previousಶಿವಾಚಾರ-(ಸಾಮಾಜಿಕ ಸಮಾನತೆ)ಗಣಾಚಾರNext
*