ಲಿಂಗಾಯತ ಪದಕೋಶ | ಲಿಂಗಾಯತ ಮತ್ತು ಇಷ್ಟಲಿಂಗ |
ಲಿಂಗಾಯತರ ಪ್ರಮುಖ ಹಬ್ಬಗಳು |
೧) ಸಂಕ್ರಾಂತಿ - ಜನೆವರಿ- ೧೪
೨) ಸಿದ್ಧರಾಮೇಶ್ವರ ಜಯಂತಿ - ಜನೆವರಿ- ೧೪
೩) ಮಹಾ ಶಿವರಾತ್ರಿ
೪) ಪ್ರಥಮ ಶೂನ್ಯ ಪೀಠಾಧೀಶ ಅಲ್ಲಮ ಪ್ರಭು ಜಯಂತಿ (ಉಗಾದಿ/ಯುಗಾದಿ)
೫) ಗುರು ಬಸವ ಜಯಂತಿ (ವೈಶಾಖ ಮಾಸ, ಅಕ್ಷಯ ತೃತೀಯ) ಬಸವಶಕೆ ೮೯೦ ಪ್ರಾರಂಭ
೬) ಜಗನ್ಮಾತೆ ಅಕ್ಕ ಮಹಾದೇವಿ ಜಯಂತಿ
೭) ಕಾಯಕ ದಿನಾಚರಣೆ (ಮೇ ಡೇ)
೮) ಬಸವ ಪಂಚಮಿ (ಶ್ರಾವಣ ಮಾಸ, ಶುದ್ಧ ಪಂಚಮಿ) [ನಾಗ ಪಂಚಮಿ] ಗುರು ಬಸವಣ್ಣನವರು ಲಿಂಗೈಕ್ಯರಾದ ದಿನ
೯) ನೀಲಮ್ಮ ಷಷ್ಠಿ (ಬಸವ ಪಂಚಮಿಯ ಮಾರನೆ ದಿನ) ನೀಲಾಂಬಿಕೆ ಲಿಂಗೈಕ್ಯರಾದ ದಿನ
೧೦) ಚಿನ್ಮಯ ಜ್ಞಾನಿ ಚೆನ್ನ ಬಸವಣ್ಣ ಜಯಂತಿ (ದೀಪಾವಳಿ ಪಾಡ್ಯ).
ಜನೇವರಿ -೨೧ ಸಿದ್ಧಗಂಗಾ ಡಾ|| ಶಿವಕುಮಾರ ಸ್ವಾಮಿಗಳ ಪುಣ್ಯಸ್ವರಣೆ.
ಫೆಬ್ರವರಿ - ೧೮ ಹರ್ಡೇಕರ ಮಂಜಪ್ಪನವರ ಸ್ಮರಣೋತ್ಸವ
ಮಾರ್ಚ್ - ೧೩ ಪೂಜ್ಯ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ ಜಯಂತಿ
ಮಾರ್ಚ್ - ೧೪ ಪೂಜ್ಯ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ ಲಿಂಗೈಕ್ಯ ಸಂಸ್ಮರಣೆ
ಜೂನ್ - ೨೯ ಫ. ಗು. ಹಳಕಟ್ಟಿಯವರ ಸ್ಮರಣೋತ್ಸವ
ಜೂನ್ - ೩೦ ಪ್ರವಚನ ಪಿತಾಮಹ ಪೂಜ್ಯ ಲಿಂಗಾನಂದ ಸ್ವಾಮಿಜಿಯವರ ಲಿಂಗೈಕ್ಯ ಸಂಸ್ಮರಣೆ
ಜುಲೈ - ೦೨ ವಚನ ಪಿತಾಮಹ, ಫ. ಗು. ಹಳಕಟ್ಟಿಯವರ ಜಯಂತೋತ್ಸವ
ಆಗಷ್ಟ - ೨೨ ಪ್ರವಚನ ಪಿತಾಮಹ ಲಿಂಗಾನಂದ ಸ್ವಾಮಿ ಜಯಂತಿ; ಗಣೇಶ ಚೌತಿ; ರಾಷ್ಟ್ರೀಯ ಬಸವದಳ ಹುಟ್ಟುಹಬ್ಬ;
ಆಗಷ್ಟ - ೩೦ ಶರಣ ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿ (ಎಂ.ಎಂ.ಕಲಬುರಗಿ) ಸ್ಮರಣೋತ್ಸವ
ಅಕ್ಟೋಬರ ೨೮ ಶರಣ ಉತ್ತಂಗಿ ಚೆನ್ನಪ್ಪನವರ ಜಯಂತಿ
೧) ಮೊದಲು ಲಿಂಗಾಯತ ಧರ್ಮ ಸ್ಥಾಪಕ ಗುರು ಬಸವಣ್ಣವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿರಿ, ನಂತರ ಯಾವ ಶರಣರ/ಶರಣೆಯರ ಜಯಂತಿ ಇರುವುದೊ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿರಿ,
೨) "ಶರಣ ಸಂಗಮ", "ವಚನ ಕಮ್ಮಟ" ಗಳನ್ನು ಅಯೋಜಿಸಿರಿ. ವಚನ ಕಂಠಪಾಠ, ವಚನ ಗಾಯನ, ಮತ್ತು ವಚನ ವಿಶ್ಲೇಷಣೆ ಮುಂತಾದ ಕಾರ್ಯ ಕ್ರಮಗಳನ್ನು ಆಯೋಜಿಸಿರಿ.
೩) ಎಲ್ಲಾ ಹಬ್ಬಗಳಂದು ಸಾಮೂಹಿಕ ಪ್ರಸಾದ ದಾಸೋಹ ವನ್ನು ಏರ್ಪಡಿಸಿರಿ.
೪) ಬಡ ಮಕ್ಕಳಿಗೆ ಪುಸ್ತಕಗಳನ್ನು ಹಂಚಿ ಹಾಗೂ ಬಡ ಪ್ರತಿಭಾವಂತರಿಗೆ ಹಣಕಾಸು/ಇತರೆ ಸಹಾಯ ಮಾಡಿರಿ.
೫) ಶರಣ/ಶರಣೆಯರ ಜಯಂತಿ ಅಂಗವಾಗಿ, ಜನರಿಗೆ ಕೆಟ್ಟ ಚಟಗಳನ್ನು ಬಿಡುವಂತೆ ಪ್ರೇರೆಪಿಸಿರಿ, ತಂಬಾಕು, ಗುಟ್ಕಾ, ಸರಾಯಿ, ಸಿಗರೇಟು ಇವುಗಳ ಕೆಟ್ಟ ಪರಿಣಾಮಗಳನ್ನು ತಿಳಿಸಿರಿ.
೬) ಸಮಾಜ ಕಾರ್ಯಗಳನ್ನು ಮಾಡಿರಿ, ರಕ್ತದಾನ ಶಿಬಿರ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛ ಗೊಳಿಸುವುದು, ಸಸಿಗಳನ್ನು ನೆಡುವುದು ಇತ್ಯಾದಿ.
ಲಿಂಗಾಯತ ಪದಕೋಶ | ಲಿಂಗಾಯತ ಮತ್ತು ಇಷ್ಟಲಿಂಗ |