ಪ್ರಶ್ನೆ
|
ಉತ್ತರ
|
ಪಂಚಭೂತಗಳು ಯಾವುವು? |
ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ |
ಪಂಚೇಂದ್ರಿಯಗಳು ಯಾವುವು? |
ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ |
ಅಂತಕರಣ ಚತುಷ್ಟಯಗಳು ಯಾವುವು? |
ಮನ, ಬುದ್ಧಿ, ಚಿತ್ತ, ಅಹಂಕಾರ, |
ಕರಣಗಳು ಯಾವುವು? |
ಮಾತು, ಮನಸ್ಸು, ದೇಹ |
ಅಜಗಣ್ಣನ ಊರು ಯಾವುದು? |
ಲಕ್ಕುಂಡಿ |
ಮಲಗಳು ಎಷ್ಟು ಪ್ರಕಾರ? |
3 (3) |
ಮೂರು ಮಲಗಳು ಯಾವುವು? |
ಮಾಯಾ, ಆಣವ, ಕಾರ್ಮಿಕ |
ತ್ರಿವಿಧ ದಾಸೋಹಗಳು ಯಾವುವು? |
ತನು, ಮನ, ಧನ |
ಕರಣೇಂದ್ರಿಯಗಳು ಯಾವುವು? |
ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ, ಮನ, ಬುದ್ಧಿ, ಚಿತ್ತ, ಅಹಂಕಾರ, |
ಪುರುಷಾರ್ಥಗಳು ಯಾವುವು? |
ಧರ್ಮ, ಅರ್ಥ, ಕಾಮ, ಮೋಕ್ಷ |
ಚುಳುಕು ಇದರ ಅರ್ಥವೇನು? |
ಚಿಕ್ಕದಾಗುವುದು |
ಕರಿ ಎಂದರೇನು? |
ಆನೆ |
ಬಸವ ಜಯಂತಿ ಸರಕಾರಿ ಕಾರ್ಯಕ್ರಮವೆಂದು ಜಾರಿಯಾದ ವರ್ಷ? |
2003 (2003) |
ಬಸವ ಜಯಂತಿಯನ್ನು ಸರಕಾರಿ ಕಾರ್ಯಕ್ರಮವೆಂದು ಘೋಷಿಸಿದ ಮುಖ್ಯಮಂತ್ರಿ ಯಾರು? |
ಎಸ್. ಎಂ. ಕೃಷ್ಣ |
ಬಸವ ಜಯಂತಿಯಂದು ರಜೆ ಘೋಷಿಸಿದ ಮುಖ್ಯಮಂತ್ರಿ ಯಾರು? |
ಆರ್. ಗುಂಡೂರಾವ |
ಬಸವಪ್ರಿಯ ಕೂಡಲಚೆನ್ನಬಸವಣ್ಣ ಯಾರ ವಚನಾಂಕಿತ? |
ಹಡಪದ ಅಪ್ಪಣ್ಣ |
ಜಾಂಬೇಶ್ವರಾ ಯಾರ ವಚನಾಂಕಿತ? |
ರಾಯಸದ ಮಂಚಣ್ಣ |
ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗವು ಯಾರ ವಚನಾಂಕಿತ? |
ವ್ಯೆದ್ಯ ಸಂಗಣ್ಣ |
ನಿಜಗುರು ಶಂಕರದೇವಾ ಯಾರ ವಚನಾಂಕಿತ? |
ಶಂಕರದಾಸಿಮಯ್ಯ |
ಶಂಭುಜಕ್ಕೆಶ್ವರ ಯಾರ ವಚನಾಂಕಿತ? |
ಸತ್ಯಕ್ಕ |
ಎಳೆಹೊಟ್ಟೆ ಶಿಕ್ಷೆಗೋಳಪಟ್ಟ ಶರಣರು ಯಾರು? |
ಹರಳಯ್ಯ, ಶೀಲವಂತ, ಮಧುವರಸ |
ಬಸವಣ್ಣವರ ಮನೆಗೆ ನುಗ್ಗಿದ ಕಳ್ಳನ ಹೆಸರು? |
ಲೆಂಕರಸ |
ಬಿಜನಳ್ಳಿ ಯಾವ ಶರಣರಿಗೆ ಸಂಭದ ಪಟ್ಟಿದ್ದು.? |
ಹರಳಯ್ಯ |
ಹರಳಯ್ಯನವರು ಮೈ-ಚರ್ಮದಿಂದ ಮಾಡಿದ ಪಾದುಕೆಗಳು ಲಭ್ಯ ಇವೆಯೆ? |
ಇವೆ. |
ಹರಳಯ್ಯನವರು ಮೈ-ಚರ್ಮದಿಂದ ಮಾಡಿದ ಪಾದುಕೆಗಳು ಏಲ್ಲಿ ಇವೆ? |
ಬಿಜನಳ್ಳಿ |
ಹರಳಯ್ಯನವರು ಲಿಂಗೈಕ್ಯ ಸ್ಥಳ ಯಾವುದು? |
ಬಿಜನಳ್ಳಿ |
ಶ್ರೀ ಶೈಲದಲ್ಲಿ ಹರಿಯುವ ನದಿ ಯಾವುದು? |
ಕೃಷ್ಣಾ ನದಿ |
ಕೂಡಲ ಸಂಗಮದಲ್ಲಿ ಕೂಡುವ ನದಿಗಳು ಯಾವುವು? |
ಕೃಷ್ಣಾ ; ಮಲಪ್ರಭಾ ; ಘಟಪ್ರಭಾ |
ಬಸವ ಸಾಗರ ಯಾವ ಊರ ವ್ಯಾಪ್ತಿಗೆ ಬರುತ್ತದೆ? |
ನಾರಾಯಣಪುರ |
ನಾರಾಯಣಪುರ ಯಾವ ತಾಲೂಕು ವ್ಯಾಪ್ತಿಗೆ ಬರುತ್ತದೆ? |
ಸುರಪುರ |
ಬಸವಸಾಗರ ಯಾವ ಜಿಲ್ಲೆಯ ವ್ಯಾಪ್ತಿಗೆ ಸೇರಿದೆ.? |
ಕಲಬುರ್ಗಿ |
ಷಣ್ಮುಖ ಶಿವಯೋಗಿಗಳ ಜನ್ಮಸ್ಥಳ ಯಾವುದು? |
ಜೆವರ್ಗಿ |
ಮಾದರಸನ ಏಕೈಕ ಪುತ್ರನ ಹೆಸರು.? |
ಬಸವಣ್ಣ. |
ಮಾದಲಾಂಬಿಕೆಯ ಮಗಳ ಹೆಸರು? |
ಅಕ್ಕನಾಗಮ್ಮ |
ಬಿಜ್ಜಳನ ವಂಶ ಯಾವುದು ? |
ಕಲಚೂರಿ |
ಬಸವಣ್ಣನವರ ಚರಮ (ಅಂತೀಮ) ಗೀತೆ ಬರೆದವರಾರು? |
ಮಲ್ಲಿಕಾರ್ಜುನ ಪಂಡಿತಾರಾಧ್ಯ |
ಕರ್ಣದಲ್ಲಿ ಜನಿಸಿದವರುಂಟೆ, ಇದು ಯಾರ ವಚನದ ಭಾಗ? |
ಬಸವಣ್ಣ |
ಗುಹೇಶ್ವರನ ಶರಣ ಅಲ್ಲಮ ಯಾರ ವಚನಾಂಕಿತ? |
ಗಾಣದ ಕಣ್ಣಪ್ಪ |
ನಿ:ಕಳಂಕ ಮಲ್ಲಿಕಾಜರ್ುನ ಯಾರ ವಚನಾಂಕಿತ? |
ಮೋಳಿಗೆಯ ಮಾರಯ್ಯ |
ಚೆಮ್ಮಲಿಗೆಯ ಚೆನ್ನರಾಮ ಯಾರ ವಚನಾಂಕಿತ? |
ಚಂದಿಮರಸ |
ಬಿಡಾಡಿ ಯಾರ ವಚನಾಂಕಿತ? |
ಬೋಂತಾದೇವಿ |
ತುರುಗಾಹಿ ರಾಮಣ್ಣನ ಕಾಯಕ ಯಾವುದು? |
ದನಕರುಗಳನ್ನು ಕಾಯುವುದು |
ಬದುಕಿನ ಸಪ್ತ ಸೂತ್ರಗಳನ್ನು ಹೇಳುವ ಬಸವಣ್ಣನವರ ವಚನ ಯಾವುದು? |
ಕಳಬೇಡ ಕೊಲಬೇಡ |
ನುಲಿಯ ಚಂದಯ್ಯನ ವಚನಾಂಕಿತ ಯಾವುದು? |
ಚಂದೇಶ್ವರಲಿಂಗ |
ಕಲ್ಯಾಣ ಕ್ರಾಂತಿಯ ನಂತರ ಬಿಜ್ಜಳನ ಸೈನ್ಯ ಮತ್ತು ಶರಣರ ಮಧ್ಯ ಅಂತಿಮ ಕಾಳಗ ಎಲ್ಲಿ ನಡೆಯಿತು? |
ಮುರಗೋಡು |
ಉರಿಲಿಂಗಪೆದ್ದಿಯ ವಚನಾಂಕಿತ ಯಾವುದು? |
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ |
ಬಸವ ಬಾರಯ್ಯ ಮತ್ರ್ಯದೊಳಗೆ ಭಕ್ತರುಂಟೆ ಹೇಳಯ್ಯಾ ಇದು ಯಾರ ವಚನ? |
ಬಸವಣ್ಣ |
ಮಹಾತ್ಮಾ ಗಾಂಧಿಯವರಿಗೆ ಬಸವಣ್ಣನವರ ಬಗ್ಗೆ ತಿಳಿಸಿಕೊಟ್ಟವರಾರು? |
ಹರ್ಡೇಕರ್ ಮಂಜಪ್ಪ |
ಬಸವ ಪೀಠವು ಎದ್ದು ಒಸೆದು ನಾಣ್ಯವು ಹುಟ್ಟ ಈ ವಚನ ಹೇಳಿದವರಾರು? |
ಸರ್ವಙ್ಞ |
ಬಾಲ ಸಂಗಯ್ಯ ಯಾರ ಮಗ? |
ಬಸವಣ್ಣನ ಮಗ |