ಪ್ರಶ್ನೆ
|
ಉತ್ತರ
|
ಆಲಿ ಎಂದರೇನು? |
ಕಣ್ಣಿನ ರೆಪ್ಪೆ |
ಕರತಲಾಮಲಕ ಎಂದರೇನು? |
ಅಂಗೈಯಲ್ಲಿ ನೆಲ್ಲಿಕಾಯಿ ಇಟ್ಟುಕೊಂಡಷ್ಟು ಸುಲಭ |
ಲಿಂಗಾರ್ಪಿತ ಎಂದರೇನು? |
ಲಿಂಗಕ್ಕೆ ನೈವೆದ್ಯ ಮಾಡಿದುದು, ಅರ್ಪಿಸಿದುದು |
ಗಣಪರ್ವ ಎಂದರೇನು? |
ಧರ್ಮಬಂಧುಗಳ ಸಮಾವೇಶ |
ಪಿಂಡಾಂಡಗತ ಎಂದರೇನು? |
ಜೀವಾತ್ಮ |
ಬ್ರಹ್ಮಾಂಡಗತ ಎಂದರೇನು? |
ಪರಮಾತ್ಮ |
ಸಿದ್ಧರಾಮೇಶ್ವರರ ತಂದೆ ಹೆಸರು ಏನು? |
ಮುದ್ದೆಗೌಡ |
ಸಿದ್ಧರಾಮೇಶ್ವರರ ತಾಯಿ ಹೆಸರು ಏನು? |
ಸುಗ್ಗವ್ವೆ |
ಆದ್ಯರು ಎಂದರೇನು? |
ಪುರಾತನರು/ ಹಿರಿಯರು |
ಇಷ್ಟಲಿಂಗ ಏನನ್ನು ಪ್ರತಿನಿಧಿಸುತ್ತದೆ? |
ನಿರಾಕಾರ ದೇವನನ್ನು |
ಇಷ್ಟಲಿಂಗದಲ್ಲಡಗಿರುವ ಹುಟ್ಟುಲಿಂಗ (ಚಿಲ್ಲಿಂಗ) ಏನನ್ನು ಪ್ರತಿನಿಧಿಸುತ್ತದೆ? |
ಜೀವಾತ್ಮ |
ಇಷ್ಟಲಿಂಗದಲ್ಲಿಯ ಕಂತೆ ಏನನ್ನು ಪ್ರತಿನಿಧಿಸುತ್ತದೆ? |
ವಿಶ್ವವನ್ನು |
ವಿಭೂತಿ ಯಾವುದರಿಂದ ತಯ್ಯಾರಾಗುತ್ತದೆ? |
ಹಸುವಿನ ಸಗಣಿ |
ಕರ್ಮತ್ರಯಗಳು ಯಾವವು? |
ಸಂಚಿತ, ಪ್ರಾರಬ್ಧ, ಆಗಾಮಿ |
ಗುಣತ್ರಯಗಳು ಯಾವವು? |
ಸತ್ವ, ರಜ, ತಮ |
ಶಕ್ತಿತ್ರಯಗಳು ಯಾವವು? |
ಇಚ್ಛಾ , ಕ್ರಿಯಾ, ಜ್ಞಾನ ಶಕ್ತಿ |
ಸ್ವಾಯತ ಎಂದರೇನು? |
ಆಧೀನ ಮಾಡಿಕೊಳ್ಳುವುದು ( ಅಳವಡಿಸಿಕೊಳ್ಳುವುದು) |
ಪಿಂಡತ್ರಯಗಳು ಯಾವವು? |
ನಾದ, ಬಿಂದು , ಕಳೆ |
ಅಜಾತ ಎಂದರೇನು? |
ಹುಟ್ಟು (ಅಸ್ಥಿತ್ವ) ಇಲ್ಲದವನು |
ಅವಿಮುಕ್ತ ಎಂದರೇನು? |
ಪುಣ್ಯ ಸ್ಥಳ, ಸುಕ್ಷೇತ್ರ |
ನಾರಿವಾಳ ಎಂದರೇನು? |
ತೆಂಗು |
ತೇಜ ಎಂದರೇನು? |
ಬೆಂಕಿ, ಅಥವಾ ಬೆಳಕು |
ವಾಯುಗುಣವ ಸರ್ಪ ಬಲ್ಲುದು ಇದು ಯಾರ ವಚನ |
'ಮಡಿವಾಳ ಮಾಚಿದೇವ' |
ಭೂಮಿನಿನ್ನದಲ್ಲ, ಹೇಮನಿನ್ನದಲ್ಲ,ಇದು ಯಾರ ವಚನ |
'ಅಲ್ಲಮಪ್ರಭು' |
ಕಾಗೆಒಂದಗುಳ ಕಂಡಡೆ ಕೂಗಿ ಕರೆಯದೆ ತನ್ನ ಬಳಗವ ಇದು ಯಾರ ವಚನ |
'ಬಸವಣ್ಣ' |
ಕಲ್ಲನಾಗರ ಕಂಡರೆ ಹಾಲನೆರೆ ಎಂಬರಯ್ಯ ಇದು ಯಾರ ವಚನ |
'ಬಸವಣ್ಣ' |
ಕಲ್ಯಾಣ ವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದುಇದು ಯಾರ ವಚನ |
'ಅಲ್ಲಮಪ್ರಭು' |
ಇಸಕ್ಕಿ ಆಸೆ ನಿಮಗೇಕೆ ಇದು ಯಾರ ವಚನ |
'ಸತ್ಯಕ್ಕ' |
ದೇಹವೆಂಬುದು ಬಂಡಿ ಕಂಡಯ್ಯ ಕಾಲುಗಳೆರಡು ಗಾಲಿ ಕಂಡಯ್ಯಇದುಯಾರವಚನ |
'ಅಲ್ಲಮಪ್ರಭು' |
ನಾ ಹುಟ್ಟಿದಲ್ಲಿ ಸಂಸಾರ ಹುಟ್ಟಿತ್ತು ಇದು ಯಾರ ವಚನ |
'ಅಕ್ಕಮಹಾದೇವಿ' |
ಕಟ್ಟಿದ ಲಿಂಗವ ಬಿಟ್ಟು ಬೆಟ್ಟದ ಲಿಂಗಕ್ಕೆ ಹೋಗಿ ಇದು ಯಾರ ವಚನ |
'ಅಂಬಿಗರ ಚೌಡಯ್ಯ' |
ಮನೆಯೊಳಗೆ ಮನೆಯೊಡೆಯ ಇದ್ದಾನೊ ಇಲ್ಲವೊಇದು ಯಾರ ವಚನ |
'ಬಸವಣ್ಣ' |
ವಚನದಲ್ಲಿ ನಾಮಾಮೃತ ತುಂಬಿ ಇದು ಯಾರ ವಚನ |
'ಬಸವಣ್ಣ' |
ಅಕ್ಕಯ್ಯ ಕೇಳವ್ವ ನಾನೊಂದು ಕನಸ ಕಂಡೆ ಇದು ಯಾರ ವಚನ |
'ಅಕ್ಕಮಹಾದೇವಿ' |
ಶರಣರ ಬರವೆಮಗೆ ಪ್ರಾಣಜೀವಾಳವಯ್ಯಾ ಇದು ಯಾರ ವಚನ |
'ಬಸವಣ' |
ಸಾವಿಲ್ಲದ,ಕೇಡಿಲ್ಲದ,ರೊಪಿಲ್ಲದ, ಚೆಲುವಂಗಾನೊಲಿದೆನವ್ವಾಇದು ಯಾರ ವಚನ |
'ಅಕ್ಕಮಹಾದೇವಿ' |
ಆಯಿತ್ತು ಬಸವಾ ನಿಮ್ಮಿಂದ ಗುರು ಸ್ವಾಯತವೆನಗೆ ಇದು ಯಾರ ವಚನ |
'ಅಲ್ಲಮಪ್ರಭು' |
ನೀನೊಲಿದರೆ ಕೊರಡು ಕೊನರುವುದಯ್ಯಇದು ಯಾರ ವಚನ |
'ಬಸವಣ್ಣ' |
ಅಡವಿಯೊಳಗರಸುವಡೆ ಸಿಡಿಗಂಟೆ ತಾನಲ್ಲಇದು ಯಾರ ವಚನ |
'ಅಂಬಿಗರ ಚೌಡಯ್ಯ' |
ಬಸವಣ್ಣನೆ ತಾಯಿ ಬಸವಣ್ಣನೆ ತಂದೆಇದು ಯಾರ ವಚನ |
'ಸಿದ್ಧರಾಮೇಶ್ವರ' |
ತಂದೆ ನೀನು ತಾಯಿ ನೀನು ಇದು ಯಾರ ವಚನ |
'ಬಸವಣ್ಣ' |
ಬ ಎಂಬಲ್ಲಿ ಎನ್ನ ಭವವು ಹರಿಇತ್ತಯ್ಯ ಇದು ಯಾರ ವಚನ |
'ಅಲ್ಲಮಪ್ರಭು' |
ಉಂಬ ಬಟ್ಟಲು ಬೇರೆ ಕಂಚಲ್ಲ ಇದು ಯಾರ ವಚನ |
'ಬಸವಣ್ಣ' |
ನರಜನ್ಮವ ತೊಡೆದು ಹರನಜ್ಮವ ಮಾಡಿದ ಗುರುವೆ ಇದು ಯಾರ ವಚನ |
'ಅಕ್ಕಮಹಾದೇವಿ' |
ಇಳೆ ನಿಮ್ಮದಾನ ಬೆಳೆ ನಿಮ್ಮದಾನಇದು ಯಾರ ವಚನ |
'ಜೇಡರ ದಾಸಿಮಯ್ಯ' |
ಕಡೆಗೀಲಿಲ್ಲದ ಬಂಡಿ ಹೊಡೆಗೆಡುವುದು ಮಾಣ್ಬುದೆ ಇದು ಯಾರ ವಚನ |
'ಜೇಡರ ದಾಸಿಮಯ್ಯ' |
ನಾ ನಿಮ್ಮನರಿವೆನು ನಿ ವೆನ್ನನರಿಯಿರಿಇದು ಯಾರ ವಚನ |
'ಬಸವಣ್ಣ' |
ಶರಣರ ನೊಸಲಿಗೆ ಶ್ರೀವಿಭೂತಿಯೆ ಶೃಂಗಾರ ಇದು ಯಾರ ವಚನ |
'ಬಸವಣ್ಣ' |
ಮತ್ರ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ ಇದು ಯಾರ ವಚನ |
'ಬಸವಣ್ಣ' |
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಇದು ಯಾರ ವಚನ |
'ಬಸವಣ್ಣ' |