ಎಣ್ಣೆ ಹೊಳೆ (ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕ)

ಅಕ್ಕನಾಗಮ್ಮ ಗದ್ದುಗೆ Akkanagamma Gadduge, Tarikeri, Chikkamagaluru, Karnataka

ಅಕ್ಕನಾಗಮ್ಮ ಗದ್ದುಗೆ

ಉಳವಿಯಲ್ಲಿ ಚೆನ್ನಬಸವಣ್ಣನವರು ಲಿಂಗೈಕ್ಯರಾದ ಮೇಲೆ ಅವರ ತಾಯಿ ಅಕ್ಕನಾಗಮ್ಮನವರು ನುಲಿಯ ಚಂದಯ್ಯನೊಂದಿಗೆ ಸಂಚರಿಸುತ್ತ ಎಣ್ಣೆಹೊಳೆಗೆ ಬಂದು ಅಲ್ಲಿಯೇ ಲಿಂಗೈಕ್ಯರಾದರು. ಚಿಕ್ಕಮಗಳೂರು ಜಿಲ್ಲೆ ಎಣ್ಣೆಹೊಳೆ ತೀರದ ತರೀಕೆರೆಯಲ್ಲಿ. ಅವರ ಸಮಾಧಿ ಗದ್ದುಗೆ ಒಂದು ಚಿಕ್ಕ ಗುಡಿಯಲ್ಲಿದೆ. ಗದ್ದುಗೆಯ ಮೇಲೆ ನಂದಿ ಮತ್ತು ಈಶ್ವರ ಲಿಂಗಗಳಿವೆ. ಖಾಸಗಿಯವರ ಜಮೀನಿನಲ್ಲಿದ್ದ ಈ ಸ್ಥಳವನ್ನು ಈಗ ’ಅಕ್ಕನಾಗಮ್ಮ ಟ್ರಸ್ಟ್‌’ನವರು ಪಡೆದುಕೊಂಡು ಅಭಿವೃದ್ಧಿ ಕಾರ್ಯ ನಡೆಸಿದ್ದಾರೆ. ನಿರ್ದಿಷ್ಟ ಅರ್ಚಕರಿಲ್ಲ. ಯಾರಾದರೂ ಭಕ್ತರು ಬಂದು ನಿತ್ಯ ಗದ್ದುಗೆ ಪೂಜೆ ಮಾಡುತ್ತಾರೆ. ಸ್ಥಳೀಯರಲ್ಲದೆ ದೂರದ ಊರುಗಳಿಂದಲೂ ಭಕ್ತರು ಬರುವುದುಂಟು.

ಅಕ್ಕನಾಗಮ್ಮ ಗದ್ದುಗೆ Akkanagamma Gadduge, Tarikeri, Chikkamagaluru, Karnataka
ಅಕ್ಕನಾಗಮ್ಮ ಗದ್ದುಗೆ Akkanagamma Gadduge, Tarikeri, Chikkamagaluru, Karnataka

ತರಿಕೇರಿಯಿಂದ ಎಣ್ಣೆಹೊಳೆ ೩ಕೀ. ಮೀ. ದೂರದಲ್ಲಿದೆ.

*
ಪರಿವಿಡಿ (index)
Previousಇಂಗಳೇಶ್ವರಮಲೆ ಮಹಾದೇಶ್ವರ ಬೆಟ್ಟNext
*