Previous ತ್ರೈಲೋಚನ ಮನೋಹರ ಮಾಣಿಕೇಶ್ವರಲಿಂಗ ?? ಈಶ್ವರೀಯ ವರದ ಚೆನ್ನರಾಮ ?? Next

ಆನಂದ ಸಿದ್ಧೇಶ್ವರ ??

*

ಈ ಅಂಕಿತದ ವಚನಗಳ ಕರ್ತೃ ಅಜ್ಞಾತ, ಕಾಲ ಸು.1600 ಸದ್ಯ ಎರಡು ವಚನಗಳು ದೊರೆತಿವೆ. ಸಂಸಾರ ಸಾಗರದಲ್ಲಿ ಮುಳುಗಿದ ಅಜ್ಞಾನಿಗಳ ನಿಂದೆ ಮತ್ತು ಶರಣರ ನಿಲುವು ಇವುಗಳಲ್ಲಿ ನಿರೂಪಿತವಾಗಿವೆ.

ಕಂಗಳ ಸುಖ ಕರ್ಮವೆಂಬುದನರಿಯರು.
ಕಿವಿಯ ಸುಖ ಕೇಡೆಂಬುದನರಿಯರು.
ನಾಸಿಕದ ಸುಖ ಹೇಸಿಕೆಯೆಂಬುದನರಿಯರು.
ಬಾಯಸುಖ ಭ್ರಮೆಯೆಂಬುದನರಿಯರು.
ಕಾಂಕ್ಷೆಯ ಸುಖ ಹುಚ್ಚೆಂಬುದನರಿಯರು.
ಇಂತಪ್ಪ ವಿಷಯಾಬ್ಧಿಗಳೊಳಗೆ
ಮುಳುಗುತ್ತಿಪ್ಪ ಅಜ್ಞಾನಿಜಡರುಗಳ
ಎನ್ನತ್ತ ತೋರದಿರಾ, ಆನಂದ ಸಿದ್ಧೇಶ್ವರಾ. /೧೨೧೯ [1]

ವಿಷಯವೆನ್ನುವ ಸಮುದ್ರದಲ್ಲಿ ಮುಳುಗೇಳುತ್ತಿರುವ ಅಜ್ಞಾನಿ ಜಡರುಗಳನ್ನು ಎನ್ನತ್ತ ತೋರದಿರು ಎಂದು ತನ್ನ ಇಷ್ಟ ದೈವದಲ್ಲಿ ಪ್ರಾರ್ಥಿಸಿರುವನು. ಸಮತೆಯೇ ಪ್ರಧಾನವಾಗಿರುವ ಶರಣನಿಗೆ ಅಂಬಲಿಯೂ ಸರಿ, ಅಮೃತವೂ ಸರಿ, ಹಂಚೂ ಸರಿ, ಕಂಚೂ ಸರಿ, ತಟ್ಟೂ ಸರಿ, ತಗಡೂ ಸರಿ, ರೆಂಬೆಯೂ ಸರಿ, ಸಿಂಬೆಯೂ ಸರಿ, ಅರಸೂ ಸರಿ, ಆಳೂ ಸರಿ, ಊರೂ ಸರಿ, ಕಾಡೂ ಸರಿ, ಸ್ತುತಿಯೂ ಸರಿ, ನಿಂದೆಯೂ ಸರಿ ಎನ್ನುವನು.

ಮೃದು ಕಠಿಣ ಶೀತೋಷ್ಣಾದಿಗಳನರಿಯದನ್ನಕ್ಕ
ಅರ್ಪಿತವ ಮೀರಲಾಗದು.
ಅಂಗವುಂಟಾದಡೆ ಲಿಂಗವಲ್ಲದೆ ಅರಿಯಲರಿಯದೊ.
ಅಭಂಗ ಶರಣಂಗೆ ಅಂಬಲಿಯೂ ಸರಿ, ಅಮೃತವು ಸರಿ.
ಹಂಚೂ ಸರಿ ಕಂಚೂ ಸರಿ, ತಟ್ಟೂ ಸರಿ ತಗಡೂ ಸರಿ.
ರೆಂಬೆಯೂ ಸರಿ ಸಿಂಬೆಯೂ ಸರಿ, ಅರಸೂ ಸರಿ ಆಳೂ ಸರಿ.
ಊರೂ ಸರಿ ಕಾಡೂ ಸರಿ, ಸ್ತುತಿಯೂ ಸರಿ ನಿಂದೆಯೂ ಸರಿ.
ಇಂತಿವ ಮೀರಿದ ಮಹಾಪುರುಷನ ನಿವಲ
ಇಳೆಯೊಳಗಣವರೆತ್ತ ಬಲ್ಲರಯ್ಯಾ, ಆನಂದ ಸಿದ್ಧೇಶ್ವರಾ. /೧೨೨೦ [1]

[1] ವಚನ ಸಂಖ್ಯೆ ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

-??: ಈ ಪ್ರಶ್ನೆ ಚಿಹ್ನೆಯು ವಚನಕಾರನ ಹೆಸರು ಅಜ್ಞಾತವೆಂಬುದನ್ನು ಸೂಚಿಸುತ್ತದೆ.

ಪರಿವಿಡಿ (index)

*
Previous ತ್ರೈಲೋಚನ ಮನೋಹರ ಮಾಣಿಕೇಶ್ವರಲಿಂಗ ?? ಈಶ್ವರೀಯ ವರದ ಚೆನ್ನರಾಮ ?? Next
cheap jordans|wholesale air max|wholesale jordans|wholesale jewelry|wholesale jerseys