Previousಏಕೋರಾಮೇಶ್ವರಲಿಂಗ ??ಜಂಗಮಲಿಂಗ ಪ್ರಭುವೆ ??Next

ಗುರುವರದ ವಿರೂಪಾಕ್ಷ ??

*

ಕರ್ತೃವಿನ ಹೆಸರು ಗೊತ್ತಿರದ ಈ ಅಂಕಿತದಲ್ಲಿ ಒಂದು ವಚನ ದೊರೆತಿದೆ. ಕಾಲ ಸು. 1600 ಇರಬಹುದು. ಸಿರಿಯ ಮಹತಿಯನ್ನು ಕಾವ್ಯಮಯ ಶೈಲಿಯಲ್ಲಿ ನಿರೂಪಿಸುವ ಈ ವಚನ ತುಂಬ ಸುಂದರವಾಗಿದೆ.

ಸಿರಿಯೆಂದಡೆಲ್ಲರೂ ಬರ್ಪರೈಸೆ.
ಉರಿಯೆಂದಡಾರೂ ನಿಲಲಾರರಯ್ಯಾ.
ಉರಿವುತಿದೆ ಲೋಕ ಗರಳದುರಿಯಿಂದ.
ತೆರಳುತಿದೆ ದೆಸೆದೆಸೆಗೆ ಸುರಾಸುರಾಳಿ.
ಹರಿವಿರಂಚಿಗಳು ಸಿರಿ ಸರಸ್ವತಿಯ ಕೈವಿಡಿದು
ಮರುಳುಗೊಂಡರು, ನಿಮ್ಮ ನಿಜವನರಿಯದೆ.
ಸಿರಿಯ ಭಕ್ತರಿಗಿತ್ತು, ಉರಿಯ ನೀ ಧರಿಸಿದೆ.
ಸರಿಯಾರು ನಿನಗೆ ಗುರುವರದ ವಿರೂಪಾಕ್ಷಾ ! /೧೨೨೯ [1]

[1] ವಚನ ಸಂಖ್ಯೆ ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

-??: ಈ ಪ್ರಶ್ನೆ ಚಿಹ್ನೆಯು ವಚನಕಾರನ ಹೆಸರು ಅಜ್ಞಾತವೆಂಬುದನ್ನು ಸೂಚಿಸುತ್ತದೆ.

ಪರಿವಿಡಿ (index)

*
Previousಏಕೋರಾಮೇಶ್ವರಲಿಂಗ ??ಜಂಗಮಲಿಂಗ ಪ್ರಭುವೆ ??Next