Previous ಹಡಪದ ರೇಚಣ್ಣ ಹಾವಿನಾಳ ಕಲ್ಲಯ್ಯ Next

ಹಾದರಕಾಯಕದ ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮ

*
ಅಂಕಿತ: ಗಂಗೇಶ್ವರ
ಕಾಯಕ: ಶರಣೆಯಾಗುವುದಕ್ಕಿಂತ ಮುಂಚೆ ಹಾದರದ ಕಾಯಕ (ವೇಶ್ಯೆ)

೧೩೪೯
ಆವ ಕಾಯಕವ ಮಾಡಿದಡೂ ಒಂದೆ ಕಾಯಕವಯ್ಯಾ.
ಆವ ವ್ರತವಾದಡೂ ಒಂದೆ ವ್ರತವಯ್ಯಾ.
ಆಯ ತಪ್ಪಿದಡೆ ಸಾವಿಲ್ಲ, ವ್ರತತಪ್ಪಿದಡೆ ಕೂಡಲಿಲ್ಲ.
ಕಾಕಪಿಕದಂತೆ ಕೂಡಲು ನಾಯಕನರಕ ಗಂಗೇಶ್ವರಲಿಂಗದಲ್ಲಿ.

ಈಕೆ ಹಾದರ ಕಾಯಕದ ಮಾರಯ್ಯನ ಸತಿ. ಕಾಲ-೧೧೬೦. 'ಗಂಗೇಶ್ವರ' ಅಂಕಿತದಲ್ಲಿ ಒಂದು ವಚನ ದೊರೆತಿದೆ. ಕಾಯಕ ಸಮಾನತೆ, ವ್ರತನಿಷ್ಠೆ, ಭಕ್ತರ ಗುಣ ಲಕ್ಷಣ, ಶರಣನ ಇರುವು ಅಪ್ರಾಮಾಣಿಕರ ದೂಷಣೆ, ಶರಣಸ್ತುತಿ ಇದರ ಮುಖ್ಯ ಆಶಯ.

ಪರಿವಿಡಿ (index)
*
Previous ಹಡಪದ ರೇಚಣ್ಣ ಹಾವಿನಾಳ ಕಲ್ಲಯ್ಯ Next