Previous ಹಡಪದ ಅಪ್ಪಣ್ಣ ಹಾದರಕಾಯಕದ ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮ Next

ಹಡಪದ ರೇಚಣ್ಣ

*

ಹಡಪದ ರೇಚಣ್ಣ

ಅಂಕಿತ: ನಿಃಕಳಂಕ ಕೂಡಲ ಚೆನ್ನ ಸಂಗಮದೇವ
ಕಾಯಕ: ಹಡಪದ (ಸಂಚಿ) ಕಾಯಕ (ತಾಂಬೂಲಕರಂಡ)

೧೦೮೮
ಮರದ ದೇವರಿಗೆ ಉರಿಯ ಪೂಜೆಯುಂಟೆ ?
ಮಣ್ಣಿನ ಹರುಗುಲದಲ್ಲಿ ತುಂಬಿದ ತೊರೆಯ ಹಾಯಬಹುದೆ ?
ತೆರಕಾರನ ನಚ್ಚಿ ಕಳನೇರಬಹುದೆ ?
ಇಂತೀ ಗುಣದ ದೃಷ್ಟವ ಕಡೆಗಾಣಿಸಿದಲ್ಲಿ,
ಪ್ರಮಾಣಿಸಿದಲ್ಲಿಯೂ ಏತರನು,
ಹಾಂಗೆ ಬರಿಹುಂಡರ, ಆಚಾರಭ್ರಷ್ಟರ, ಅರ್ತಿಕಾರರ,
ಚಚ್ಚಗೋಷ್ಠಿವಂತರ, ಬಹುಯಾಚಕರ,
ಪಗುಡೆ ಪರಿಹಾಸಕರ, ತ್ರಿವಿಧದಲ್ಲಿ ಸೂತವನರಸುವ
ವಿಶ್ವಾಸಘಾತಕರ, ಅಪ್ರಮಾಣ ಪಾತಕರ,
ಭಕ್ತಿಯ ತೊಟ್ಟಲ್ಲಿ ಭಕ್ತನೆಂದಡೆ,
ವಿರಕ್ತಿಯ ತೊಟ್ಟಲ್ಲಿ ಕರ್ತುವೆಂದಡೆ, ದೀಕ್ಷೆಯ ಮಾಡಿದಲ್ಲಿ ಗುರುವೆಂದಡೆ,
ತಪ್ಪ ಕಂಡಲ್ಲಿ ಎತ್ತಿ ತೋರುವೆನು.
ಗುಟ್ಟಿನಲ್ಲಿ ಚಿತ್ತ ಬಿಡಲಾರದಿರ್ದಡೆ,
ನಿಃಕಳಂಕ ಕೂಡಲಚೆನ್ನ ಸಂಗಮದೇವರಾದಡೂ ಎತ್ತಿಹಾಕುವೆನು.

ತಾಂಬೂಲ ಹಡಪದ ಕಾಯಕವನ್ನು ಕೈಗೊಂಡಿದ್ದ ಈತ ಕಲ್ಯಾಣಕ್ರಾಂತಿಯ ಸಂದರ್ಭದಲ್ಲಿ ಶರಣರ ದಂಡಿನೊಂದಿಗೆ ಉಳುಮೆಯವರೆಗೆ ಹೋಗಿದ್ದನೆಂದು ತಿಳಿಯುತ್ತದೆ. ಕಾಲ-೧೧೬೦. 'ನಿ:ಕಳಂಕ ಕೂಡಲಸಂಗಮದೇವ' ಅಂಕಿತದಲ್ಲಿ ೯ ವಚನಗಳು ದೊರೆತಿವೆ. ಶಿವಭಕ್ತರ ಗುಣಲಕ್ಷಣ, ವ್ರತನಿಷ್ಠೆ, ಭಕ್ತರ ಗುಣ ಲಕ್ಷಣ, ಶರಣನ ಇರುವು ಅಪ್ರಾಮಾಣಿಕರ ದೂಷಣೆ, ಶರಣಸ್ತುತಿ ಅವುಗಳ ವಸ್ತು.

೧೦೮೧
ಎನ್ನಾಧಾರಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಬಸವಣ್ಣನು.
ಎನ್ನ ಸ್ವಾದಿಷ್ಠಾನ ಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಚೆನ್ನಬಸವಣ್ಣನು.
ಎನ್ನ ಮಣಿಪೂರಕ ಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ
ಘಟ್ಟಿವಾಳ ಮದ್ದಯ್ಯನು.
ಎನ್ನ ಅನಾಹತ ಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಸಿದ್ಧರಾಮಯ್ಯನು.
ಎನ್ನ ವಿಶುದ್ಧಿ ಚಕ್ರಸ್ಥಾನದಲ್ಲಿಸ ಮೂರ್ತಿಗೊಂಡನಯ್ಯಾ ಮರುಳಶಂಕರದೇವರು.
ಎನ್ನ ಆಜ್ಞಾ ಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಪ್ರಭುದೇವರು.
ಆಧಾರಕ್ಕಾಚಾರ ಲಿಂಗವಾದಾತ ಬಸವಣ್ಣ.
ಸ್ವಾಧಿಷ್ಠಾನಕ್ಕೆ ಗುರುಲಿಂಗವಾದಾತ ಚೆನ್ನಬಸವಣ್ಣ.
ಮಣಿಪೂರಕಕ್ಕೆ ಶಿವಲಿಂಗವಾದಾತ ಘಟ್ಟಿವಾಳ ಮದ್ದಯ್ಯ.
ಅನಾಹತಕ್ಕೆ ಜಂಗಮಲಿಂಗವಾದಾತ ಸಿದ್ಧರಾಮಯ್ಯ.
ವಿಶುದ್ಧಿಗೆ ಪ್ರಸಾದಲಿಂಗವಾದಾತ ಮರುಳಶಂಕರದೇವರು.
ಆಜ್ಞೆಗೆ ಮಹಾಲಿಂಗವಾದಾತ ಪ್ರಭುದೇವರು.
ನಿಃಕಳಂಕ ಕೂಡಲ [ಚೆನ್ನ]ಸಂಗಮದೇವಾ,
ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.

*
ಪರಿವಿಡಿ (index)
Previous ಹಡಪದ ಅಪ್ಪಣ್ಣ ಹಾದರಕಾಯಕದ ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮ Next
cheap jordans|wholesale air max|wholesale jordans|wholesale jewelry|wholesale jerseys