ಚಂದಿಮರಸ

ಚನ್ನಬಸವಣ್ಣ

ಚೆನ್ನಯ್ಯ

ಜಂಗಮಲಿಂಗ ಪ್ರಭುವೆ ??

ಜಕ್ಕಣ್ಣಯ್ಯ

ಜಗಳಗಂಟ ಕಾಮಣ್ಣ

ಜೇಡರ ದಾಸಿಮಯ್ಯ

ಜೋದರ ಮಾಯಣ್ಣ

ಢಕ್ಕೆಯ ಬೊಮ್ಮಣ್ಶೀಲವ ಮಾಡಬೇಕಲ್ಲದೆ
ತಾನಿದೆಡೆಯಲ್ಲಿ ಸುಳಿದು ಮಾಡುವ ಶೀಲ,
ಕೊಟ್ಟು ಪೂಜಿಸುವ ಕೈಕೂಲಿ ತನಗಿಲ್ಲ.
ಪೂಜೆಯ ಫಲವು ಕೊಡವಾಲ ಕರೆವ ಸುರಭಿಯಂತೆ
ಅಟ್ಟಿದರಟ್ಟು ವರವ ಬೇಡಿ ಮರುಗುವ ದಾಸಿಯ ಪಥದಂತೆ,
ತನ್ನ ಉದರನಿಮಿತ್ತ್ಯವಿಡಿದು,
ನೇಮ ಬೇಕೆಂಬ ದುಶ್ಶೀಲರ ಮೆಚ್ಚ, ಸಕಳೇಶ್ವರದೇವನು.

ಮಾಡುವ ಭಕ್ತಂಗೆಯೂ ಕೊಡುವ ದೇವಂಗೆಯೂ ಎಂದೆಂದಿಗೂ ಕೇಡಿಲ್ಲ,
ಮಾಡಿ ಭೋ ಮಾಡಿ ಭೋ
ಎನಗೆ ಲೆಸಾಯಿತ್ತು,ಹೋಯಿತ್ತೆಂಬ ಚಿಂತೆ ಬೇಡ
ಇದಿತ್ತೆಂಬ ಸಂತೋಷ ಬೇಡ
ಸಕಳೇಶ್ವರ ದೇವನವರನಂದು ಸಲಹುವನಾಗಿ.

ಈ ವಚನದಲ್ಲಿ ಸಕಲೇಶ ಮಾದರಸ ಕಾಯಕದಲ್ಲಿರಬೇಕಾದ ಸಹಜ ಗಣಗಳನ್ನು ವಿವರಿಸುತ್ತಾ ಅದು ಅಧ್ಯಾತ್ಮ ಸಾಧನೆ ಕೂಡ ಎಂದು ಹೇಳುತ್ತಾನೆ.ಸದಾ ಒಳ್ಳೆಯ ಕೆಲಸವನ್ನು ಮಾಡುವ ಭಕ್ತನಿಗೂ,ಅಂತ ಭಕ್ತನಿಗೆ ಸಕಲವನ್ನೂ ನೀಡುವ ದೇವರಿಗೂ ಎಂದಿಗೂ ಕೇಡು ಎಂಬುದಿಲ್ಲ.ತನಗೆ ಲೆಸಾಯಿತ್ತು,ತನಗೆ ಸಿಗಲಿಲ್ಲ ಎಂಬ ಚಿಂತೆ ಬೇಡ,ಎಂದು ಹೇಳುತ್ತಾ ಹೆಚ್ಚು ಇದೆ ಎಂಬ ಸಂತೋಷ ಪಡದೆ ತನ್ನ ಕಾಯಕವನ್ನು ಮಾಡಬೇಕು.ಆ ಕಾಯಕದಲ್ಲಿ ದೇವರನ್ನು ಅರಿಯಬೇಕು,ಆಗ ಶಿವನು ತಮ್ಮನ್ನು ಸಲಹುವವನು ಎಂದು ಹೇಳುತ್ತಾನೆ ವಚನಕಾರ.

*
Previous ಸಂಗಮೇಶ್ವರ ಅಪ್ಪಣ್ಣ ಸತ್ತಿಗೆ ಕಾಯಕದ ಮಾರಯ್ಯ Next
cheap jordans|wholesale air max|wholesale jordans|wholesale jewelry|wholesale jerseys