Previousಉಪ್ಪರಗುಡಿಯ ಸೋಮಿದೇವಯ್ಯಉರಿಲಿಂಗಪೆದ್ದಿNext

ಉರಿಲಿಂಗದೇವ

*
ಅಂಕಿತ: ಉರಿಲಿಂಗದೇವ, ಉರಿಲಿಂಗ ತಂದೆ

ಅಂಗದ ಮೇಲೆ ಲಿಂಗದೇವನಿದ್ದಂತೆ, ಇತರ ಸ್ಥಾವರಲಿಂಗಕ್ಕೆ ಹೋಗಿ ಹೋಗಿ,
ದೇವರ ಕಂಡೆನೆಂದು ನಲಿದು ಉಲಿವುತಿಪ್ಪ ಸಲೆ ಮನುಜರುಗಳಿಗೆ,
ಉಪದೇಶವ ಮಾಡುವ ಗುರುವಿಂಗೆ,
ಪುಣ್ಯದ ಬಟ್ಟೆಯ ಕೊಡ ಉರಿಲಿಂಗ ತಂದೆ.

ಈತ 'ಶರಣಸತಿ ಲಿಂಗಪತಿ' ಭಾವದ ವಚನಕಾರ. 'ಅವಸೆ ಕಂಧಾರ' ಎಂಬುದು ಈತನ ಸ್ಥಳ. ಪುಲಿಗೆರೆಯ ಮಹಾಲಿಂಗದೇವೆನ ಗುರುಪರಂಪರೆಗೆ ಸೇರಿದ ಶಿವಲೆಂಕ ಮಂಚಣ್ಣನ ಶಿಷ್ಯ. ಈತನ ಲಿಂಗನಿಷ್ಠೆಯನ್ನು ಪರಿಕ್ಷಿಸಲೆಂದು ಪರವಾದಿಗಳು ಗುಡಿಸಲಿಗೆ ಬೆಂಕಿ ಹಚ್ಚಿದರೂ ವಿಚಲಿತನಾಗದೆ ಇಷ್ಟಲಿಂಗ ಪೂಜೆಯಲ್ಲಿ ಮೈಮರೆತು ಮಹಿಮೆ ಮೆರೆಯುತ್ತಾನೆ. ವಿದ್ವಾಂಸನಾದ ದಲಿತ ವಚನಕಾರ ಉರಿಲಿಂಗಪೆದ್ದಿ ಈತನ ಶಿಷ್ಯ. ತನ್ನ ಹೆಸರನ್ನೇ ಅಂಕಿತವನ್ನಾಗಿ ಮಾಡಿಕೊಂಡು ಉರಿಲಿಂಗದೇವ ರಚಿಸಿದ ೪೮ ವಚನಗಳು ದೊರೆತಿವೆ. ಎಲ್ಲವೂ ಲಿಂಗವಿಕಳಾವಸ್ಥೆಯನ್ನು ಪ್ರಕಟಿಸುತ್ತವೆ. ಸರಳ ಭಾಷೆ, ಮಧುರ ಭಾವ, ಆತ್ಮೀಯ ಶೈಲಿ ಅವುಗಳ ವೈಶಿಷ್ಟ್ಯವೆನಿಸಿದೆ.

`ಶರಣಸತಿ - ಲಿಂಗಸತಿ' ಪರಿಕಲ್ಪನೆಗೆ ಇವನ ವಚನಗಳು ಶ್ರೇಷ್ಠ ಮಾದರಿಗಳು ; ಮಧುರ ಭಾವಕ್ಕೆ ಹೆಸರಾಗಿದೆ, ಆತ್ಮಶೋಧನೆಯ ವಚನಗಳೂ ಇವನಲ್ಲಿ ಸಾಕಷ್ಟು ಇವೆ. ಭಗವಂತನನ್ನು ಪ್ರಿಯಕರನನ್ನಾಗಿ ಮಾಡಿಕೊಂಡ ಶೃಂಗಾರದ ಅನುನಯನ ತೀರಾ ರೋಚಕವಾದುದು. ಶೃಂಗಾರದ ಅಭಿವ್ಯಕ್ತಿಯಲ್ಲಿ ಭಾಷೆಯ ಬಳಕೆಯಂತೂ ಅತ್ಯಪೂರ್ವವಾದುದು.

ಶಿವಶಿವಾ ಮಹಾದೇವಾ, ಉರಿಲಿಂಗದೇವನೆ ಚೆಲುವನು.
ಶಿವಶಿವಾ ಮಹಾದೇವಾ, ಉರಿಲಿಂಗದೇವನೆ ಗುರುವನು.
ಶಿವಶಿವಾ ಮಹಾದೇವಾ, ಉರಿಲಿಂಗದೇವನೆ ಹರಿಯನು.
ಶಿವಶಿವಾ ಮಹಾದೇವಾ, ಉರಿಲಿಂಗದೇವನೆ ಪುರುಷನು.
ಶಿವಶಿವಾ ಮಹಾದೇವಾ, ಉರಿಲಿಂಗದೇವನೆ ದೇವನು.

ಪರಿವಿಡಿ (index)
*
Previousಉಪ್ಪರಗುಡಿಯ ಸೋಮಿದೇವಯ್ಯಉರಿಲಿಂಗಪೆದ್ದಿNext