Ishtalinga

ಸಮಸ್ಯೆ/ಸಮಾಧಾನ | ಸಲಹೆ/ಅನಿಸಿಕೆ | ಭಾಷೆ ಬದಲಾಯಿಸಿ: | ಕೊಂಡಿಗಳು:

ಹಡಪದ ಅಪ್ಪಣ್ಣ

ಹನ್ನೇರಡನೆಯ ಶತಮಾನದಲ್ಲಿ ಕಲ್ಯಾಣ ಪಟ್ಟಣದಲ್ಲಿ ಬಸವಾದಿ ಪ್ರಮಥರ ಜೊತೆಯಲ್ಲಿದ್ದ ಹಡಪದ ಅಪ್ಪಣ್ಣ ಬಸವಣ್ಣನವರಿಗೆ ಅಪ್ತನಾಗಿದ್ದನು. ಲೌಕಿಕದಲ್ಲಿ ಮಾತ್ರವಲ್ಲ, ಪಾರಮಾರ್ಥದಲ್ಲಿಯೂ ಬಸವಣ್ಣನವರಿಗೆ ಹತ್ತಿರದವನಾಗಿದ್ದವನು.

ಅಪ್ಪಣ್ಣನವರದು ಹಡಪದ ಕಾಯಕ. "ಹಡಪ" ಎಂದರೆ ತಾಂಬೂಲದ ಚೀಲ. ಇನ್ನೂಂದು ಅರ್ಥದಲ್ಲಿ ಕ್ಷೌರ ಮಾಡುವ ಕಾಯಕದ ಚೀಲ. ವೀರಶೈವರಲ್ಲಿರುವ ಹಡಪದ ಕಾಯಕದವರಂತೂ ತಾವು ಅಪ್ಪಣ್ಣನವರ ವಂಶಸ್ಥರೆಂದು ಹೇಳಿಕೊಳ್ಳುತ್ತಾರೆ. ಅವನ ವೃತ್ತಿ ಕ್ಷೌರಮಾಡುವುದು ಎಂಬುದಕ್ಕೆ ಆತನ ವಚನಗಳಲ್ಲಿ ಆಧಾರವಿಲ್ಲ. ಆತ ತನ್ನ ಕಾಯಕ ಭಕ್ತಿ ನಿಷ್ಟೆ ಶ್ರದ್ಧೆಯಿಂದ ಮಾಡುತ್ತಿದ್ದನೆಂಬುದಕ್ಕೆ ಅವನ ವಚನವೊಂದರಲ್ಲಿ ಈ ರೀತಿ ಪ್ರಸ್ತಾಪಿಸಿದ್ದಾನೆ:

ಎನ್ನ ತನು ನಿಮ್ಮ ಸೇವೆಯಲ್ಲಿ ಸವೆದು
ಎನ್ನ ಮನ ನಿಮ್ಮ ನೆನಹಿನಲ್ಲಿ ಸವೆದು
ಎನ್ನ ಅರಿವು ನಿಮ್ಮ ಘನದೊಳಗೆ ಸವೆದು
ನಿಶ್ಚಲ ನಿಜೈಕ್ಯವಾಗಿ ಬಸವ ಪ್ರಿಯ ಕೂಡಲ ಸಂಗಯ್ಯ
ನಾ ನೀನೆಂಬುದು ಏನಾಯಿತ್ತೆಂದರಿಯೆ!