Previousಅಕ್ಕಮಹಾದೇವಿ ಸ್ವರ ವಚನಗಳುಶಿವಶರಣರನ್ನು ನೆನೆಯಿರೋNext

ತಾನೇ ತಾನಾಗಿ

*

ತಾನೇ ತಾನಾಗಿ, ರಚನೆ: ಆದಯ್ಯ

- ರಾಗ: ಸಾಳಗ

ತಾನೇ ತಾನಾಗಿ ತಾನಿದಿರೆನ್ನದ
ತಾನೇ ಪ್ರತಿಯಲ್ಲದಪ್ರತಿಮ |ಪ|

ತಾನೇ ತನ್ನಿಂ ತೋರುವ ತೋರಿಕೆ
ತಾನೇ ತನ್ನಿಂದಾದುದನು
ತಾನೇ ತನ್ನಿಂ ತನ್ನನೆ ತಿಳಿಯಲು
ತಾನೇ ತನ್ನಿಂದನ್ಯವೊಂದುಂಟೆ |೧|

ತಾನೇ ಅಷ್ಟತನುವಿನೊಳು ಸಿಲುಕಿರ್ದು
ತಾನೇ ಮೀರಿ ತೋರ್ಪಾತ ತಾನೆ
ತಾನೇ ತನ್ನ ಘನತೆಯಿಂದಿರ್ಪನ ತಾ
ನಾನರಿತೆನೆಂಬುದು ದಿಟವಹುದೆ |೨|

ತಾನೆ ಸನ್ಮಣಿಮುಕುರದಂತಿರುತಿರ್ಪ
ತಾನೆ ಪ್ರತಿಯಿಟ್ಟು ತೋರ್ಪ ತಾನೆ
ತಾನೆ ತಾನೆಂದರಿದ ನಿಜಾತ್ಮನು
ತಾನೆ ಸೌರಾಷ್ಟ್ರ ಸೋಮೇಶ ತಾನೆ |೩|

ಗ್ರಂಥ ಋಣ: ಡಾ. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previousಅಕ್ಕಮಹಾದೇವಿ ಸ್ವರ ವಚನಗಳುಶಿವಶರಣರನ್ನು ನೆನೆಯಿರೋNext