Previousಭಾರತ ಮಾತೆ ಜನ್ಮದಾತೆಕನ್ನಡ ನೆಲದಲಿ ಹುಟ್ಟಿಹ ನಾನುNext

ಭಾರತ ನೆಲದಲಿ ಹುಟ್ಟಿದ ನಾನು

*

ಭಾರತ ನೆಲದಲಿ ಹುಟ್ಟಿದ ನಾನು

ಭಾರತ ನೆಲದಲಿ ಹುಟ್ಟಿಹ ನಾನು
ಭಾರತ ಮಾತೆಗೆ ವಂದಿಪೆನು
ಗುರುವನು ಸರಿಸಿ ದೇವನ ನಂಬಿ
ಪೈಜೆಯ ತೊಟ್ಟು ದುಡಿಯುವೆನು || ಪ ||

ಭಕ್ತಿಯ ಜಲದಲಿ ಮೈ ತೊಳೆಯುವೆನು
ಜ್ಞಾನದ ವಸ್ತವ ಧರಿಸುವೆನು
ದೀನ ದಲಿತರ ಸೇವೆಯ ಗೈಯ್ಯಲು
ಗಂಧದೋಲ್ ಬಾಳನು ಸವೆಸುವೆನು || 1 ||

ಧರ್ಮದ ಕವಚವ ಧರಿಸುವೆನು
ಸತ್ಯದ ಖಡ್ಗವ ಹಿಡಿಯುವೆನು
ದೇಶ ವಿದೇಶದಿ ಭಾರತ ಕೀರ್ತಿ
ಹಸರಿಸುವೋಲ್ ನಾ ದುಡಿಯುವೆನು || 2 ||

ನಾಡಿನ ಜನರು ಎಲ್ಲ ನನ್ನವರು
ಎನ್ನುವ ಭಾವವ ತಾಳುವೆನು
ಸುಂದರ ಬಂಧುರ ಭಾರತ ಮಂದಿರ
ಕಟ್ಟಲು ನಾನು ಬಾಳುವೆನು ! || 3 ||

- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.

*
ಪರಿವಿಡಿ (index)
Previousಭಾರತ ಮಾತೆ ಜನ್ಮದಾತೆಕನ್ನಡ ನೆಲದಲಿ ಹುಟ್ಟಿಹ ನಾನುNext