Previousಪುಷ್ಪವತಿಯಾದ ಬಾಲೆಗೆ ಆರತಿಉಡಿ ತುಂಬುವುದುNext

ದಂಪತಿಗಳ ಮೇಲೆ ಪುಷ್ಪವೃಷ್ಟಿ

*

ಹೂವ ಸೂರ‍್ಯಾಡೋಣ ದಂಪತಿಗಳ ಮೇಲೆ

ಹೂವ ಸೂರ‍್ಯಾಡೋಣ ದಂಪತಿಗಳ ಮೇಲೆ
ಶುಭ ಹರಸುತ ನಾವು ಹೂವ ಸೂಯ್ಯಾಡೋಣ || ಪ ||

ಗುರು ಬಸವಣ್ಣನ ಶ್ರೀ ರಕ್ಷೆ ಇರಲೆಂದು
ಐಹಿಕ ಬಾಳು ಸುಖಮಯವಾಗಲೆಂದು || 1 ||

ಗುರುಲಿಂಗಜಂಗಮದ ಕಾರುಣ್ಯವಿರಲೆಂದು
ಶರಣ ಬಂಧುಗಳೆಲ್ಲ ಒಂದಾಗಿ ಹರಸಿ || 2 ||

ಆಯುಷ್ಯ, ಆರೋಗ್ಯ ಐಶ್ವಯ್ಯ ಸಂತಾನ
ಸಂವೃದ್ದಿ ಸಂತೃಪ್ತಿ ಹರಿದು ತಾ ಬರಲೆಂದು. || 3 ||

ಗಣ ಸಾಕ್ಷಿಯ ನಡುವೆ ದಂಪತಿಗಳಾಗಿ
ಶರಣರ ಪಥದಲ್ಲಿ ಸಾಗುವ ಜೋಡಿಯ ಮೇಲೆ || 4 ||

ವಿವಾಹ ವಾರ್ಷಿಕೋತ್ಸವ ಸಂದರ್ಭದ ಹಾಡುಗಳು. (ದಂಪತಿಗಳ ಮೇಲೆ ಎನ್ನುವಾಗ ಹೆಸರು ಸಹ ಹೇಳಬಹುದು. )

ಬೆಳಗಿರಿ ಬೆಳಗಿರಿ, ಆರತಿ ಬೆಳಗಿರಿ

ಬೆಳಗಿರಿ ಬೆಳಗಿರಿ, ಆರತಿ ಬೆಳಗಿರಿ
ಹರಸಿರಿ ಶುಭವನು ದಂಪತಿಗಳಿಗೆ ||ಪ||

ಲಿಂಗದೇವನ ಕರುಣೆ ಕಾಪಾಡಲೆಂದು
ಗುರು ಬಸವಣ್ಣನ ರಕ್ಷೆಯು ಇರಲೆಂದು || 1 ||

ಆಯುಷ್ಯ - ಆರೋಗ್ಯ ನಿಮಗಿರಲಿ ಎಂದು
ಸಂಪತ್ತು- ಸಂತಾನ ನಿಮಗಾಗಲೆಂದು || 2 ||

ಮನೆ ಮನ ತುಂಬುವ ಮಡದಿಯಾಗಮ್ಮ
ಹಿರಿಯರ ಸಲಹುವ ಮಗಳಾಗಮ್ಮ || 3 ||

ಸತಿಸುತ ಹಿರಿಯರ ಅರ್ತಿಯಿಂ ಪೊರೆವ
ಕೀರ್ತಿಯ ಕುವರ ನೀನಾಗು ಅಣ್ಣ || 4 ||

ನಯನವೆರಡಾದರೂ ನೋಟವೊಂದಾಗುವೊಲು
ಕಾಯವೆರಡಾದರೂ ಭಾವವೊಂದಾಗಲೆಂದು || 5 ||

ಶರಣರ ಪಥದಲ್ಲಿ ಮುನ್ನಡೆಯಿರೆಂದು.
ಸಚ್ಚಿದಾನಂದನ ಸ್ಮರಿಸುತ ಹರಸಿ || 6 ||

*
ಪರಿವಿಡಿ (index)
Previousಪುಷ್ಪವತಿಯಾದ ಬಾಲೆಗೆ ಆರತಿಉಡಿ ತುಂಬುವುದುNext