ಯತೋ ವಾಚೋ ನಿವರ್ತಂತೇ

*

ಯತೋ ವಾಚೋ ನಿವರ್ತಂತೇ ಶ್ರುತಿ ಬಸವ
ಏಕೋ ದೇವನದ್ವಿತೀಯ ಬಸವ |ಪ|

ಬಕಾರ ಭವವಿನಾಶನೆ ಬಸವ
ವಕಾರ ಚೈತನ್ಯಾತ್ಮನೇ ಬಸವ
ವಕಾರ ಚರಜಂಗಮಸ್ಯ ಬಸವ
ಏಕೋದೇವ ತ್ರಿವಿಧರೂಪ ನೀನೆ ಬಸವ |1|

ಅಕಾರನಾದ ಉಕಾರ ಬಿಂದು ಬಸವ
ಮಕಾರ ಕಳೆ ತ್ರಿವಿಧರೂಪನೆ ಬಸವ
ಓಂಕಾರ ಪ್ರಣವ ರೂಪನೆ ಬಸವ
ನಾಗೇಶನಮಿತ ಚರಣವೆ ಬಸವ |2|

ವಿಶ್ವನಾಮ ಅಷ್ಟವಿದೂರನೆ ಬಸವ
ವಿಶ್ವತೋಮುಖನಾದಿ ರೂಪನೆ ಬಸವ
ಸತ್ಯಜ್ಞಾನ ವಿಶ್ವರೂಪನೆ ಬಸವ
ವಿಶ್ವವ್ಯಾಪಿ ಲಿಂಗರೂಪನೆ ಬಸವ |3|

ಭಕ್ತಿಯುಕ್ತಿ ಮುಕ್ತಿ ಶಕ್ತಿ ಬಸವ
ಸತ್ಯ ನಿತ್ಯ ಕರ್ತೃ ಕರ್ಮ ಬಸವ
ಅತ್ಯಧಿಕ ಮೃತ್ಯು ದೂರನೆ ಬಸವ
ಅತ್ಯತಿಷ್ಠದ್ದಂಶಾಂಗುಲನೆ ಬಸವ |4|

ಶರಣ ಜನರ ಕಾಮಧೇನುವೆ ಬಸವ
ಶರಣ ಜನರ ಕಲ್ಪತರುವೆ ಬಸವ
ಶರಣ ಜನರ ಭಕ್ತಿನಿಧಿಯೆ ಬಸವ
ಶರಣು ಕೂಡಲಚನ್ನಸಂಗನ ಬಸವ |5|

- ಶ್ರೀ ಗುರು ಚೆನ್ನಬಸವಣ್ಣನವರು.

ಪರಿವಿಡಿ (index)
Previousಲಿಂಗಾಯತ ಭಕ್ತಿಗೀತೆಗಳುಬೀಜ ಮಂತ್ರNext
Guru Basava Vachana

Akkamahadevi Vachana

[1] From the book "Vachana", pub: Basava Samiti Bangalore 2012.