ಕೋಪದ ಬಗ್ಗೆ

ಅಲ್ಲಮ ಪ್ರಭುವಿನ ವಚನಗಳಲ್ಲಿ ಖಗೋಳ ವಿಜ್ಞಾನ

ಆದಯ್ಯ ಶರಣರ ವಚನದಲ್ಲಿ ಖಗೋಳ ವಿಜ್ಞಾನದ ಅಂಶಗಳು

ಎಲ್ಲ ದಿನವೂ ಶುಭ ದಿನವೇ! ಎಲ್ಲಾ ಕಾಲವೂ ಶುಭವೇ!

ಕಾಯಕ ಸಿದ್ಧಾಂತ

ಜ್ಯೋತಿಷ್ಯ, ಪಂಚಾಂಗ ನಿಷಿದ್ಧ

ತೀರ್ಥಕ್ಷೇತ್ರ, ಯಾತ್ರೆ ಅನಾವಶ್ಯಕ

ನಿಮ್ಮನ್ನು ನೀವು ತಿದ್ದಿಕೊಳ್ಳಿ

ನೇಮಗಳು; ಅರ್ಥವಿಲ್ಲದ ನೇಮಗಳು ಷಟಸ್ಥಲಕ್ಕೆ ಹೊರಗು

ಮದುವೆ, ಕುಟುಂಬ ಕಲ್ಯಾಣ

ಲಿಂಗದೀಕ್ಷೆಯಾದ ನಂತರ ಪಂಚಸೂತಕವಿರುವುದಿಲ್ಲ

ಲಿಂಗಾಯತ ತತ್ವ-ಸಿದ್ಧಾಂತಗಳು Lingayat Philosophy

ಲಿಂಗಾಯತ/ಲಿಂಗವಂತ ವೆಂದು ಸ್ಪಷ್ಟವಾಗಿ ಬರೆಯಿರಿ

ಲಿಂಗಾಯತರಲ್ಲಿ ದೇಹವೇ ದೇವಾಲಯ

ಲಿಂಗಾಯತರಲ್ಲಿ ಪ್ರತಿಯೊಬ್ಬರು ಲಿಂಗಪೂಜೆ ಮಾಡಬೇಕು

ಲಿಂಗಾಯತರು "ಶೈವ"ರಲ್ಲ

ಲಿಂಗಾಯತರು 'ಲಿಂಗವಂತ'ರು

ಲೋಕವಿರೋಧಿ ಶರಣನಾರಿಗಂಜುವನಲ್ಲ,

ವಚನ ಸಾಹಿತ್ಯ Vachana Sahitya

ವಚನ ಸಾಹಿತ್ಯದಲ್ಲಿ ಮಾನವ ಸಮಾನತೆ Human Equality in Vachana Sahitya

ವಚನಸಾಹಿತ್ಯದಲ್ಲಿ ಮೂಢನಂಬಿಕೆಗಳ ನಿವಾರಣೆ

ವ್ರತಗಳು; ವ್ರತಗಳು ಹೇಗಿರಬೇಕು

ವಿಶ್ವಪತಿ ವಿಶ್ವನಾಥನ ವಚನಗಳು

ವೀರಶೈವ ಎಂಬುದು ಒಂದು ವ್ರತ, ಮಾರ್ಗ(way)

ವೀರಶೈವ ಲಿಂಗವಂತ/ಲಿಂಗಾಯತ ಎರಡೂ ಬೇರೆ ಬೇರೆ

ವೇದ,ಶಾಸ್ತ್ರ, ಶ್ರುತಿ, ಆಗಮ ಇತ್ಯಾದಿಗಳ ಓದಿದ ಮಾತ್ರಕ್ಕೆ ಶ್ರೆಷ್ಟತೆ ಬರುವುದಿಲ್ಲ, ಗಿಳಿಯು ಓದಬಲ್ಲದು.

ವೇದಶಾಸ್ತ್ರ ಆಗಮ ಪುರಾಣ Veda Shastra Agama Purana

ಶರಣ ಶರಣನ ಕಂಡು, 'ಶರಣು' ಎಂದು ಕರವ ಮುಗಿವುದೆ ಭಕ್ತಿ ಲಕ್ಷಣ. (ಅತಿಥಿ ಸತ್ಕಾರ)

ಶರಣರ ಸಂಗ/ಅನುಭಾವ/ಭಕ್ತಿಪಕ್ಷ

ಶೀಲ ಎಂದರೇನು? ಶೀಲಗಳು ಹೇಗಿರಬೇಕು

ಸ್ತ್ರೀ ಪುರುಷ ಸಮಾನತೆ (Male Female Equality)

ಸ್ವರ್ಗ- ಕೈಲಾಸಕ್ಕೆ ಸಂಬಂಧಿಸಿದ ನಂಬಿಕೆಗಳು

ವಚನ ಸಾಹಿತ್ಯ

ಅಕ್ಕನಾಗಮ್ಮ ವಚನಗಳು

ಅಕ್ಕಮಹಾದೇವಿ ವಚನಗಳು

ಅಗ್ಘವಣಿ ಹೊನ್ನಯ್ಯ ವಚನಗಳು

ಅಜಗಣ್ಣ ತಂದೆ ವಚನಗಳು

ಅನಾಮಿಕ ನಾಚಯ್ಯ ವಚನಗಳು

ಅಮುಗೆ ರಾಯಮ್ಮ ವಚನಗಳು

ಅಲ್ಲಮ ಪ್ರಭು ವಚನಗಳು, AllamaPrabhu Vachanas

ಆಕ್ಕಮ್ಮನ ವಚನಗಳು

ಆದಯ್ಯ ವಚನಗಳು

ಆಯ್ದಕ್ಕಿ ಮಾರಯ್ಯನ ವಚನಗಳು

ಆಯ್ದಕ್ಕಿ ಲಕ್ಕಮ್ಮ ವಚನಗಳು

ಉಗ್ಘಡಿಸುವ ಗಬ್ಬಿದೇವಯ್ಯ ವಚನಗಳು

ಏಕಾಂತ ರಾಮಿತಂದೆ ವಚನಗಳು

ಕದಿರಕಾಯಕದ ಕಾಳವ್ವೆ ವಚನಗಳು

ಕನ್ನದ ಮಾರಿತಂದೆ ವಚನಗಳು

ಕರಸ್ಥಲದ ಮಲ್ಲಿಕಾರ್ಜುನೊಡೆಯ ವಚನಗಳು

ಕರುಳ ಕೇತಯ್ಯ ವಚನಗಳು

ಕಾಮಾಟದ ಭೀಮಣ್ಣ ವಚನಗಳು

ಗಜೇಶಮಸಣಯ್ಯದ ಪುಣ್ಯಸ್ತ್ರೀ ವಚನಗಳು

ಗಾಣದ ಕಣ್ಣಪ್ಪ ವಚನಗಳು

ಗಾವುದಿ ಮಾಚಯ್ಯ ವಚನಗಳು

ಗುರುಪುರದ ಮಲ್ಲಯ್ಯ ವಚನಗಳು

ಗುಹೇಶ್ವರಲಿಂಗದಲ್ಲಿ ಪ್ರಭುವೆ ಸಾಕ್ಷಿಯಾಗಿ ಬಸವಪ್ರಿಯ ಕೂಡಲಸಂಗಮದೇವ

ಗೊಗ್ಗವ್ವೆ ವಚನಗಳು

ಚೆನ್ನಬಸವಣ್ಣನವರ ವಚನಗಳು

ಜಗಳಗಂಟ ಕಾಮಣ್ಣ ವಚನಗಳು

ಜೇಡರ ದಾಸಿಮಯ್ಯ ವಚನಗಳು, Jedara Dasimayya Vachana

ಜೋದರ ಮಾಯಣ್ಣನ ವಚನಗಳು

ಡೋಹರ ಕಕ್ಕಯ್ಯ ವಚನಗಳು

ತೆಲುಗೇಶ ಮಸಣಯ್ಯ ವಚನಗಳು

ತಳವಾರ ಕಾಮಿದೇವಯ್ಯನ ವಚನಗಳು

ದಶಗಣ ಸಿಂಗಿದೇವಯ್ಯ ವಚನಗಳು

ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮನ ವಚನಗಳು

ಬಸವಣ್ಣನವರ ವಚನಗಳು, Basava Vachana

ಬಸವಯೋಗಿ ಸಿದ್ಧರಾಮೇಶ್ವರ ವಚನಗಳು

ಬೊಂತಾದೇವಿ ವಚನಗಳು

ಮಡಿವಾಳ ಮಾಚಿದೇವ ವಚನಗಳು

ಮಡಿವಾಳ ಮಾಚಿದೇವರ ಸಮಯಾಚಾರದ ಮಲ್ಲಿಕಾರ್ಜುನ ವಚನಗಳು

ಮಾರೇಶ್ವರೊಡೆಯರು ವಚನಗಳು

ಮೈದುನ ರಾಮಯ್ಯನ ವಚನಗಳು

ರಕ್ಕಸಬೊಮ್ಮಿತಂದೆ - ರಕ್ಕಸ ಬ್ರಹ್ಮಯ್ಯನ ವಚನಗಳು

ರಾಯಸದ ಮಂಚಣ್ಣನ ವಚನಗಳು

ವೈದ್ಯ ಸಂಗಣ್ಣ ವಚನಗಳು

ಶಂಕರದಾಸಿಮಯ್ಯನ ವಚನಗಳು

ಶರಣ/ಶರಣೆಯರ ವಚನಗಳು

ಶಿವನಾಗಮಯ್ಯನ ವಚನಗಳು

ಸತ್ತಿಗೆ ಕಾಯಕದ ಮಾರಯ್ಯನ ವಚನಗಳು

ಸಿದ್ಧಾಂತಿ ವೀರಸಂಗಯ್ಯನ ವಚನಗಳು

ಸೂಜಿಕಾಯಕದ ರಾಮಿತಂದೆಯ ವಚನಗಳು

ಹಡಪದ ಲಿಂಗಮ್ಮನ ವಚನಗಳು

ಜೇಡರ ದಾಸಿಮಯ್ಯ ವಚನಗಳು

ಆತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲ

ಮೊಲೆ ಮುಡಿಬಂದಡೆ ಹೆಣ್ಣೆಂಬರು.
ಗಡ್ಡ ಮೀಸೆ ಬಂದಡೆ ಗಂಡೆಂಬರು.
ನಡುವೆ ಸುಳಿವ ಆತ್ಮನು
ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ! ರಾಮನಾಥ!! - ಜೇಡರ ದಾಸಿಮಯ್ಯ ಸವಸ7/845/136[1]

833
ಮಡದಿಯ ಪ್ರಾಣಕ್ಕೆ ಮೊಲೆ ಮುಡಿ ಇದ್ದಿತ್ತೆ?
ಒಡೆಯನ ಪ್ರಾಣಕ್ಕೆ ಇದ್ದಿತ್ತೆ ಯಜ್ಞೋಪವೀತ?
ಕಡೆಯಲ್ಲಿದ್ದ ಅಂತ್ಯಜನು ಹಿಡಿದಿದ್ದನೆ ಹಿಡಿಗೋಲ?
ನೀ ತೊಡಕಿಕ್ಕಿದ ತೊಡಕನೀ ಲೋಕದ ಜಡರೆತ್ತ ಬಲ್ಲರೈ ರಾಮನಾಥ.

ದಾಸಿಮಯ್ಯ ಬಸವ ಪೂರ್ವ ಅಲ್ಲವೆಂಬುದಕ್ಕೆ ವಚನ ಪುರಾವೆ.

ಕೀಳು ಡೋಹರ ಕಕ್ಕ; ಕೀಳು ಮಾದಾರ ಚೆನ್ನ.
ಕೀಳು ಓಹಿಲದೇವ; ಕೀಳು ಉದ್ಭಟಯ್ಯ.
ಕೀಳಿಂಗಲ್ಲದೆ ಹಯನು ಕರೆಯದು ಕಾಣಾ! ರಾಮನಾಥ. - ಜೇಡರ ದಾಸಿಮಯ್ಯ ಸವಸ7/777/68[1]

810
ನಂಬಿದ ಚೆನ್ನನ ಅಂಬಲಿಯನುಂಡ.
ಕೆಂಬಾವಿಯ ಭೋಗಯ್ಯನ ಹಿಂದಾಡಿಹೋದ.
ಕುಂಭದ ಗತಿಗೆ ಕುಕಿಲಿರಿದು ಕುಣಿದ.
ನಂಬದೆ ಕರೆದವರ ಹಂಬಲನೊಲ್ಲನೆಮ್ಮ ರಾಮನಾಥ.

ಜ್ವರ ಪೀಡಿಸಿದ ಮನುಜರಿಗೆ ನೊರೆವಾಲು ಸೊಗಸುವದೆ?
ಭವಜನ್ಮದಲ್ಲಿ ಬರುವ ಕ್ರೂರಮರಿಗಳಿಗೆ
ಶಿವಾಚಾರ ಹೇಳಿದಡೆ
ಹಗೆಯ ಮಾಡುವರು ಕಾಣಾ! ರಾಮನಾಥಾ. - ಜೇಡರ ದಾಸಿಮಯ್ಯ ಸವಸ7/795/86[1]

ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ.
ಸುಳಿದು ಬೀಸುವ ವಾಯು ನಿಮ್ಮ ದಾನ.
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ, ರಾಮನಾಥ.

ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಣ್ಬುದೆ?
ಕಡೆಗೀಲು ಬಂಡಿಗಾಧಾರ.
ಈ ಕಡುದರ್ಪವೇರಿದ ಒಡಲೆಂಬ ಬಂಡಿಗೆ
ಮೃಢಭಕ್ತರ ನುಡಿಗಡಣವೆ ಕಡೆಗೀಲು ಕಾಣಾ! ರಾಮನಾಥ.

ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ.
ಸತಿಪತಿಗಳೊಂದಾಗದವನ ಭಕ್ತಿ
ಅಮೃತದೊಳು ವಿಷ ಬೆರೆದಂತೆ ಕಾಣಾ! ರಾಮನಾಥ.

ಸತಿಯರ ಸಂಗವನು ಅತಿಶಯ ಗ್ರಾಸವನು
ಪೃಥ್ವಿಗೀಶ್ವರನ ಪೂಜೆಯನು
ಅರಿವುಳ್ಳಡೆ ಹೆರರ ಕೈಯಿಂದ ಮಾಡಿಸುವರೆ! ರಾಮನಾಥ.

769
ಕತ್ತೆ ಬಲ್ಲುದೆ ಕಸ್ತೂರಿಯ ವಾಸನೆಯ?
ತೊತ್ತು ಬಲ್ಲಳೆ ಗುರುಹಿರಿಯರುತ್ತಮರೆಂಬುದ?
ಭಕ್ತಿಯನರಿಯದ ವ್ಯರ್ಥಜೀವಿಗಳು
ನಿಮ್ಮವರನೆತ್ತ ಬಲ್ಲರೈ? ರಾಮನಾಥ.

772
ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತಡೆ ಒಲ್ಲೆ.
ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ.
ನಿಮ್ಮ ಶರಣರ ಸೂಳ್ನುಡಿಯ ಒಂದರೆಘಳಿಗೆಯಿತ್ತಡೆ
ನಿನ್ನನಿತ್ತೆ ಕಾಣಾ! ರಾಮನಾಥ.

778
ಕುಲಛಲವ ಬಿಟ್ಟು ನಿಮ್ಮನೊಲಿಸಿದ ಶರಣರಿಗೆ
ತಲೆವಾಗುವೆ ನಾನು ಕುಲಜರೆಂದು.
ಬೆಬ್ಬನೆ ಬೆರತು ನಿಮ್ಮನೊಲಿಸಿದ ಶರಣರಿಗೆ
ತಲೆವಾಗದವನ ತಲೆ ಶೂಲದ ಮೇಲಣ ತಲೆ ಕಾಣಾ!
ರಾಮನಾಥ.

842
ಮಾರಿಯ ಪೂಜಿಸಿ, ಮಸಣಕ್ಕೆ ಹೋಗಿ
ಗೋರಿಗೊಳಿಸಿ ಕುರಿಯ ಕೊರಳನೆ ಕೊಯ್ದುಂಬ
ಕ್ರೂರಕರ್ಮಿಗಳನವರ ಶಿವಭಕ್ತರೆನಬಹುದೆ?
ಆರೈಯದೆ ಅವನ ಮನೆಯಲುಂಡ ಭಕ್ತ
ಅಘೋರನರಕಕ್ಕಿಳಿವ ಕಾಣಾ! ರಾಮನಾಥ.

ಪರವಧುವ ನೆರೆಯದೆ; ಪರಧನವ ತುಡುಕದೆ.
ಪರದೈವದಿಚ್ಚೆವಡೆಯದೆ
ಗುರು ಲಿಂಗ ಜಂಗಮಕ್ಕೆ ವರದಾಸನಾದಾತನೆ
ಧರೆ ಮೂರಕ್ಕೆ ಗುರುವಾಗಿಪ್ಪನೈ, ರಾಮನಾಥ. - ಜೇಡರ ದಾಸಿಮಯ್ಯ ಸವಸ7/819/110[1]

[1] ಈ ತರಹದ ಸಂಖ್ಯೆಯ ವಿವರ: ಸವಸ-7/845 :- ಸಮಗ್ರ ವಚನ ಸಂಪುಟ-7, ವಚನ ಸಂಖ್ಯೆ-845 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
Previousಲಿಂಗಾಯತ ತತ್ವ-ಸಿದ್ಧಾಂತಗಳು Lingayat Philosophyಲಿಂಗಾಯತರಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರು ದೇವರಲ್ಲNext