Previous ವಚನ ಸಾಹಿತ್ಯ Vachana Sahitya ಬಸವಣ್ಣನವರ ವಚನಗಳು, Basava Vachana Next

ಶರಣರ ವಚನಗಳಲ್ಲಿ "ಲಿಂಗ"ದ ಸ್ವರೂಪ

*

"ಲಿಂಗ" ಪದದ ಅರ್ಥವು ವ್ಯಾಪಕವಾಗಿದೆ. ಅದರ ಸಾಮಾನ್ಯ ವಾದ ಅರ್ಥವು ಚಿಹ್ನೆ, ಗುರುತು ಕುರುಹು ಎಂದು ಹೇಳಬಹುದು, ಇದೇ ಅರ್ಥಗಳನ್ನ ಅನೇಕ ಪ್ರಯೋಗ ಗಳ್ಳನ್ನು ಉಪನ್ನಿಷತ್ ಸಾಹಿತ್ಯದಲ್ಲಿರುವ ವಾಕ್ಯಗಳಿಂದ ನಾವು ಕಂಡುಕೊಳ್ಳಬಹುದು. ವಚನ ವಾಜ್ಮಯದಲ್ಲಿ 'ಪರಶಿವ', ಶಿವ, ಲಿಂಗ ಮುಂತಾದ ಎಲ್ಲಾ ಪದಗಳು ಪರಮಾತ್ಮನನ್ನು ಸಂಕೇತಿಸುವೆ. ಶಿವ ಶಬ್ದವನ್ನು ವಚನಕಾರರು ಬಳಸಿಕೊಂಡಿರುವರಾದರು ಅವರು ಹೆಚ್ಚು ಒತ್ತುಕೊಟ್ಟು, ಆಸಕ್ತಿ ವಹಿಸಿ ಬಳಸಿಕೊಂಡಿರಿವಿದು "ಲಿಂಗ" ಪದವನ್ನು. ವಚನ ವಾಜ್ಮಯದಲ್ಲಿ ದೃಷ್ಟಿ ಯಲ್ಲ್ಲಿ. ಲಿಂಗಾಯತ ಧರ್ಮ, ತತ್ವ ಶಾಸ್ತ್ರಗಳಲ್ಲಿ "ಲಿಂಗ" ದ ಅರ್ಥವ್ಯಾಪಿ ನೋಡೋಣ.

"ಲಿಂಗ" ಸಂಸ್ಕೃತ ಪದ, ಇದನ್ನ ಮಗ್ಗಿಯ ಮಾಯಿದೆವರು ತಮ್ಮ ಶಿವಾನುಭವ ಸೂತ್ರದಲ್ಲಿ ಹೀಗೆ ವ್ಯಾಖ್ಯಾನಿಸುತ್ತಾರೆ.
ಲೀಯತೆ ಗಮ್ಯತೇಯತ್ರ ಏನ ಸರ್ವಂ ಚರಚರಂ
ತದೇ ತಲ್ಲಿಂಗ ಮಿತ್ಮುಕ್ತಂ ಲಿಂಗತತ್ತ್ವ ಪರಾಯಣ್ಯೇ :

ಈ ತೋರುವ ಸಚರಾಚರ ಸೃಷ್ಟಿಯಲ್ಲವೂ ಯಾವುದರಿಂದ ಹೊರಹೊಮ್ಮಿ, ಎಲ್ಲಿ ಲೀಲೆಯಾಡಿ ಕೊನೆಗೆ ಯಾವುದರಲ್ಲಿ ಲಯವಾಗುವುದೋ ಅದು ಲಿಂಗವೆಂದು ಮಗ್ಗೆಯ ಮಾಯಿದೆವರು ಲಿಂಗಕ್ಕೆ ನಿರ್ವಚನ ನೀಡಿದ್ದಾರೆ. ತೋರುವ ತೋರಿಕೆಯಿಲ್ಲದಕ್ಕೂ ಆಧಾರಭೂತವಾಗಿ, ಅದರ ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣ ಕರ್ತೃವಾಗಿ ಇರುವ ಅವ್ಯಕ್ತವಾದ ಚೈತನ್ಯವೇ ಲಿಂಗವೆಂದು ಹೇಳಬಹುದು.

ಲಿಕಾರವೇ ಶೂನ್ಯ, ಬಿಂದುವೇ ಲೀಲೆ
ಗಕಾರವೇ ಚಿತ್ತು, ಈ ತ್ರಿವಿಧದೊಳಗದೆ
ಲಿಂಗವೆಂಬ ಸಕೀಲ. ಅದರ ಸಂಚವನಾವಾತಬಲ್ಲ
ಆತನೇ ಲಿಂಗ ಸಂಗಿ, ಕೂಡಲ ಚನ್ನಾ ಸಂಗಮದೇವಾ
ಲಿಂಗನುಭಾವಿಗಳ ಶ್ರೀಚರಣಕ್ಕೆ ನಮೋ ನಮೋ ಎಂಬೆ !

ಚಿತ್ ಚೈತನ್ಯ ಗಮಿಸಿ ಜಗತ್ ಚೈತನ್ಯವಾಗಿ ಸೃಷ್ಟಿಯಾಯಿತ್ತಾಗಿ ಗಕಾರವೇ ಚಿತ್ತು ಎಂಬುದಾಗಿಯೂ. ಆ ಮಧ್ಯದ ಚಿದ್ಬಿಂದುವೆ ಆ ಚಿತ್ ಚೈತನ್ಯಕ್ಕೆ ಅಂಗವಾಗಿ ಲೀಲಸ್ಥಿತಿಯ ನಟಿಸುತ್ತಿಹುದಾಗಿ. ಬಿಂದುವೇ ಲೀಲೆ ಎಂದೂ, ಲಿಕಾರವೇ ಲಯವನೆಯ್ದಿಸಿ ಸರ್ವ ಶೂನ್ಯ ಮಾಡುವುದಾಗಿ. ಲಿಕಾರವೇ ಶೂನ್ಯವೆಂದೂ ಹೀಗೆ ಜಗದುತ್ಪತ್ತಿ ಸ್ತಿತಿ ಲಯಗಳು ಯಾವುದರಿಂದ ಆಗುವುದೋ ಅದುವೇ ಲಿಂಗವೆಂದೂ ಲಿಂಗ ಶಬ್ದಕ್ಕೆ ನಿರ್ವಚನ ಮಾಡಿದ್ದರೆ ಮತ್ತು ಅಂಥ ಲಿಂಗದ ಮರ್ಮವನರಿದು ಆಚರಿಸುವ ಲಿಂಗನುಭಾವಿಗಳಿಗೆ ಶರಣು ಮಾಡಿದ್ದರೆ ಚೆನ್ನಬಸವಣ್ಣ ನವರು.

ಲಿಂಗವೆಂಬುದು ಪರಶಕ್ತಿಯುಕ್ತ
ಲಿಂಗವೆಂಬುದು ಪರಶಿವನ ನಿಜದೇಹ
ಲಿಂಗವೆಂಬುದು ಪರಶಿವನ ಘನ ತೇಜ
ಲಿಂಗವೆಂಬುದು ಪರಶಿವನ ನಿರತಿಶಯಾನಂದ ಸುಖ
ಲಿಂಗವೆಂಬುದು ಪರಶಿವನ ಪರಮಜ್ಞಾನ
ಲಿಂಗವೆಂಬುದು ಪರಶಿವನು ತಾನು,
ಲಿಂಗವೆಂಬುದು ಷಡಧ್ವಮಯ ಜಗಜ್ಜನ್ಮ ಭೂಮಿ ತಾನು ,
ಲಿಂಗವೆಂಬುದು ಅಖಂಡಿತ ಅಭೆಧ್ಯ ಪಂಚ ಸಂಜ್ಞೆ ತಾನು,
ಲಿಂಗವೆಂಬುದು ಹರಿಬ್ರಹ್ಮ ರ ನಡುವೆ ನೆಗಳ್ದ
ಜ್ಯೋತಿರ್ಮಯಲಿಂಗ ಶ್ರುತಿ: "ಅಲಯಂ
ಸರ್ವ ಭೂತಾನಾಂ ಲಯಾನಾಮ್ ಲಿಂಗ ಮುಚ್ಯತೆ" ಎಂದುದಾಗಿ
ಇದು ಲಿಂಗದ ಮರ್ಮ ಉರಿಲಿಂಗ ಪೆದ್ದಿಪ್ರಿಯ
ವಿಶ್ವೇಶ್ವರ ಲಿಂಗದೋ ತಿಳಿಯಬಲ್ಲಾತನೇ ಬಲ್ಲವನು...

"ಲಿಂಗ" ಪದದ ಬಳಕೆಯನ್ನ ವ್ಯೆವಿಧ್ಯಮಯ ಅರ್ಥಗಳೊಡನೆ ಮಾಡಬಹುದೆಂದು ಉರಿಲಿಂಗ ಪೆದ್ದಿಗಳು ಅಭಿಪ್ರಯ ಪಡುತ್ತಾರೆ. "ಲಿಂಗ"ವು ಪರಾಶಕ್ತಿ ಯುಕ್ತಾನಾದ ಪರಮಾತ್ಮನನ್ನು ಸಂಕೇತಿಸುತ್ತದೆ. ನಿರಾಕಾರ ದೇವನ ನಿಜದೇಹ ಅಥವಾ ಸಾಕಾರದ ಸಂಕೇತ. ಪರಮಾತ್ಮನ ಪ್ರಕಾಶ, ಆನಂದ, ಜ್ಞಾನಗಳ ತವರು ಎನ್ನುವುದನ್ನೂ ಈ ಪದವು ಪ್ರತಿನಿಧಿಸುತ್ತದೆ. ಲಿಂಗವೆನ್ನುವುದು ಪರಶಿವನಿಗೇ. ಇದು ಷಡ್ ತತ್ವಗಳಿಂದ ಕೂಡಿದ ಜಗತ್ತಿಗೆ ಜನ್ಮ ಭೂಮಿ. ಅಂದರೆ ಲೋಕವನ್ನ ಹೆರುವ ಮಹಾ ಗರ್ಭ. ಪರಮಾತ್ಮನು ಹರಿ, ಹರ ರನ್ನೂ ಮೀರಿದ ಜ್ಯೋತಿ ಸ್ವರೂಪನು. ಸಮಸ್ತ ಜಗತ್ತು ಲಯವಾಗಲು ಇರುವ ಗಮ್ಯವು ಮತ್ತು ಸಚರಾಚರ ವಸ್ತುಗಳಿಗೆಲ್ಲ ಆಲಯವು.

ಹೀಗೆ "ಲಿಂಗ" ಪದವು ಪರಮಾತ್ಮ ವಾಚಕ, ಪರಶಿವ ಸೂಚಕ ಎಂಬುದು ಇಲ್ಲಿ ಸ್ಪಷ್ಟ ವಾಗುತ್ತದೆ.
ಲಿಂಗವೆಂಬುದು ಸರ್ವಕಾರಣ ನಿರ್ಮಲ ,
ಲಿಂಗವೆಂಬುದು ಸಚ್ಚಿದಾಂದ ನಿತ್ಯಪರಿಪೂರ್ಣ,
ಲಿಂಗವೆಂಬುದು ಸರ್ವ ಲೋಕೋತ್ಪತ್ತಿಗೆ ಕಾರಣ,
ಲಿಂಗವೆಂಬುದು ಸರ್ವತತ್ವ ಪುರಾಣ ನಿಜ ಚೈತನ್ಯವು,
ಲಿಂಗವೆಂಬುದು ಜನ್ಮವರಿಧಿಯ ದಾಂ ಟಿಸುವ ಭ್ಯೇತ್ರವು;
ಲಿಂಗವೆಂಬುದು ಶರಣರ ಹೃದಯದಲ್ಲಿ ಬೆಳಗುವ
ಜ್ಯೋತಿರ್ಮಯ ಲಿಂಗವು. ಇಂತಿ ಲಿಂಗದ ಮರ್ಮವನರಿದವನೆ
ಅರಿದವನು ನಿಜಗುರು ಸ್ವತಂತ್ರ ಸಿದ್ದಲಿಂಗೇ ಶ್ವರಾ...

'ಲಿಂಗ' ಅರ್ಥಾತ್ ಪರಮಾತ್ಮನ ಸರ್ವಕಾರಣ ನಿರ್ಮಲನು, ಅಂದರೆ ತಾನು ವಿಕಾರಕ್ಕೊಳಗಾಗದೆಯೇ ಎಲ್ಲವನು ಸೃಷ್ಟಿಸ ಬಲ್ಲ; ಎಲ್ಲಕ್ಕೂ ಆದಿ ಕಾರಣವಾದ ಮೂಲಶಕ್ತಿ ಅದು ಸತ್-ಚಿತ್-ಆನಂದ-ನಿತ್ಯ-ಪರಿಪೂರ್ಣ ಲಕ್ಷಣಗಳಿಂದ ಕುಡಿದುದು; ಸಕಲ ತತ್ವಗಳಿಗೆ ಆಶ್ರಯೀಭೂತವಾದುದು, ಚೈತನ್ಯ ಸ್ವರೂಪವು. ಇದು ಪರಕಾಶ ಸ್ವರೂಪವು. ಮಾತ್ರವಲ್ಲ ಹೃದಯ ಕಮಲದಲ್ಲಿ ಅಂಶರೂಪದಲ್ಲಿ ಆತ್ಮವಾಗಿ ನೆಲೆಸಿರುತ್ತದೆ.

"ಜನ್ಮ ವಾರಿಧಿಯ ದಾಂ ಟಿಸುವ ಭ್ಯೇತ್ರ" ಎಮಬಲ್ಲಿಗೆ ಲಿಂಗ ಪದವು ಉಪಾಸ್ಯ ವಸ್ತುವಾದ ಇಷ್ಟಲಿಂಗವನ್ನು ನಿರ್ದೇಶಿಸುತ್ತದೆ. ಮಾನವ ಜನ್ಮವೆಂಬ ಭಾವಸಗರವನ್ನ ದಾಟಲು ಇದು ಒಂದು ನಾವೆ ಎಂಬುದಾಗಿ ಪ್ರತಿಪಾದಿಸಲ್ಪಟ್ಟಿದೆ. ಈ ಮರ್ಮವನ್ನರಿತು ನಡೆದಾಗಲೇ ಓರ್ವನು ಶಿವನುಭಾವಿಯಾಗಬಲ್ಲ ಎನ್ನುತ್ತಾರೆ ಸ್ವತಂತ್ರ ಸಿದ್ದಲಿಂಗೇಶ್ವರ ರು.

ಹೀಗೆ ಎಲ್ಲಾ ವಚನಕಾರರು, ಪರಾತ್ಪರ ವಸ್ತುವನ್ನು ಲಿಂಗವೆಂದೂ, ಶಿವನೆಂದೂ, ಬಯಲು, ನಿರ್ಬಯಲೆಂದೂ, ಶೂನ್ಯ-ನಿಶೂನ್ಯ ವೆಂದು ಕರೆದಿದ್ದಾರೆ. ಈ ಬಯಲು ಅಥವಾ ಶೂನ್ಯವು ಏನೂ ಇಲ್ಲದ್ದು ಎಂಬರ್ಥದಲ್ಲಿ ಬಳಸಿಲ್ಲವೆಂಬುದನ್ನ ಗಮನಿಸಬೇಕು. ಯಾವ ದ್ವಂದ್ವಗಳು ಇಲ್ಲದೆ ತಾನೇ ತಾನಾಗಿರುವ ಅತೀತವಾದ ಶುದ್ದ ಇರಹು ಸತ್ ಎಂಬರ್ಥದಲ್ಲಿ ಉಪಯೋಗಿಸಿದ್ದಾರೆ. ಇಲ್ಲದಂತೆ ಇಲ್ಲದುದು ಬೌದ್ಧರ ಶೂನ್ಯವಾದರೆ. ಇಲ್ಲದಂತೆ ಇರುವುದು ಲಿಂಗಾಯತ ಧರ್ಮದ ಶೂನ್ಯವು. ಅದು ಪರಿಪೂರ್ಣ; ಅದನ್ನು ಅಂಗಳಕ್ಕಳವಡಿಸಿಕೊಳ್ಳುವುದು ಶೂನ್ಯದ ಸಂಪಾದನೆಯೂ. ಅದೇ ಲಿಂಗಾಯತ ಧರ್ಮದ, ಯೋಗದ ಗುರಿಯು ಕೂಡ.

ಅಮೂಲ್ಯನು ಅಪ್ರಮಾಣನು ಅಗೋಚರ ಲಿಂಗ;
ಆದಿ ಮಧ್ಯಾವಸಾನಗಳಿಲ್ಲದ ಸ್ವತಂತ್ರ ಲಿಂಗ;
ನಿತ್ಯ ನಿರ್ಮಳ ಲಿಂಗ;
ಅಯೋನಿ ಸಂಭವನಯ್ಯಾ, ನಮ್ಮ ಕೂಡಲ ಸಂಗಮದೇವರು...


ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.

ಬಸವಣ್ಣ ನವರು "ಲಿಂಗ" ಎಂಬ ಪದದ ತಾತ್ವಿಕ ಅರ್ಥವನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಪರಮಾತ್ಮನು ಅಮೂಲ್ಯನು; ಬೆಲೆ ಕೆಟ್ಟ ಲಾರದವನು; ಯಾವುದೇ ಲೌಕಿಕ ಪ್ರಮಾಣಗಳಿಂದ ಸಾಧಿಸಿ ತೋರಿಸದ ಅಪ್ರಮಾಣನು; ಪಂಜೇಂದ್ರಿಯ ಗಳ ಅನುಭವಕ್ಕೆ ನಿಲುಕದ ಆಗೋಚರನು, ಹುಟ್ಟು ಅವಸಾನ ಇಲ್ಲದ, ಪರವಲಂಬಿ ಯಲ್ಲದ ಸ್ವತಂತ್ರನು, ನಾಶವಿಲ್ಲದ ನಿತ್ಯನು; ಕಾಮ ಕ್ರೋಧಾದಿಗಳೇನು ಇಲ್ಲದ ನಿರ್ಮಲನು, ಅವನು ತಾಯಿತಂದೆಗಳಲ್ಲಿ ಹುಟ್ಟಿದವನಲ್ಲ, ಅಸಂಭವ ಅಜಾತ ಹೀಗೆ "ಲಿಂಗ" ಪದವು ನಿರ್ದೇಶಿವುವುದು ದೇವರನ್ನು, ಪರಾತ್ಪರ ಪರಬ್ರಹ್ಮವನ್ನು.
ಪರಿವಿಡಿ (index)
*
Previous ವಚನ ಸಾಹಿತ್ಯ Vachana Sahitya ಬಸವಣ್ಣನವರ ವಚನಗಳು, Basava Vachana Next
cheap jordans|wholesale air max|wholesale jordans|wholesale jewelry|wholesale jerseys