Previous ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿ ಬಸವಣ್ಣನವರ ಕಾಯಕ ಸಿದ್ಧಾಂತದ ಆಯಾಮಗಳು Next

ವಿಶ್ವಕಲ್ಯಾಣ ಮಿಷನ್‌ ಚಾರಿಟಬಲ್‌ ಟ್ರಸ್ಟ್‌ (ರಿ)

ಬಸವ ಮಂಟಪ, ೨೦೩೫, ೨೦ನೇ ಮೇನ್, ೨ನೇ ಬ್ಲಾಕು,
ರಾಜಾಜಿನಗರ ಬೆಂಗಳೂರು ೫೬೦೦೧೦

*

ವಿಶ್ವಕಲ್ಯಾಣ ಮಿಷನ್‌ ಸಂಸ್ಥೆಯು ೧೯೭೭ರಲ್ಲಿಯೇ ಸ್ಥಾಪನೆಗೊಂಡಿದ್ದು ನಾಡಿನಾದ್ಯಂತ ಧಾರ್ಮಿಕ ಮತ್ತು ನೈತಿಕ ಮೌಲ್ಯಗಳನ್ನು ಪ್ರಚಾರ ಮಾಡುವುದರಲ್ಲಿ ನಿರತವಾಗಿದೆ. ಜೊತೆಗೆ ಸಮಾಜ ಸೇವೆಯ ಅಂಗವಾಗಿ ಅನಾಥಾಲಯ ಮತ್ತು ವೃದ್ಧಾಶ್ರಮಗಳನ್ನು ನಡೆಸುತ್ತಲಿದೆ. ಪರಮ ಪೂಜ್ಯ ಲಿಂ||ಶ್ರೀಮನ್‌ ನಿರಂಜನ ಮಹಾ ಜಗದ್ಗುರು ಲಿಂಗಾನಂದ ಸ್ವಾಮೀಜಿಯವರು ಅಧ್ಯಕ್ಷರಾಗಿ ಪೂಜ್ಯ ಶ್ರೀ ಜಗದ್ಗುರು ಡಾ|| ಮಾತೆ ಮಹಾದೇವಿಯವರು ಉಪಾಧ್ಯಕ್ಷರಾಗಿ ಆರಂಭವಾದ ಸಂಸ್ಥೆಯು ೧೯೭೭ರಿಂದಲೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ. ದಿ. 14 March 2019 ರಂದು ಪೂಜ್ಯ ಶ್ರೀ ಮಹಾ ಜಗದ್ಗುರು ಡಾ|| ಮಾತೆ ಮಹಾದೇವಿಯವರು ಲಿಂಗೈಕ್ಯರಾದ ಮೇಲೆ ಪೂಜ್ಯ ಶ್ರೀ ಜಗದ್ಗುರು ಮಾತೆ ಗಂಗಾದೇವಿ ಅಧ್ಯಕ್ಷರಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ವಿಶ್ವಸ್ಥ ಸಂಸ್ಥೆಯ ಇನ್ನಿತರ ಸದಸ್ಯರೆಂದರೆ , ಪೂಜ್ಯ ಮಾತೆ ಕಸ್ತೂರಿದೇವಿ, ಪೂಜ್ಯ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಮತ್ತು ಪೂಜ್ಯ ಶ್ರೀ ಜಗದ್ಗುರು ಬಸವಕುಮಾರ ಸ್ವಾಮೀಜಿ, ಪೂಜ್ಯ ಶ್ರೀ ಜಗದ್ಗುರು ಮಹದೇಶ್ವರ ಸ್ವಾಮಿಜಿ,

೧೯೭೫ರಲ್ಲಿ ನಿರ್ಮಾಣವಾದ ಬಸವ ಮಂಟಪದಲ್ಲಿ ಸಂಸ್ಥೆಯ ಕಾರ್ಯಾಲಯವಿದ್ದು, ಸಂಸ್ಥೆಯ ಕಾರ್ಯ ವಿಸ್ತಾರ ಹೆಚ್ಚಾದುದರಿಂದ ೧೯೭೮ರಲ್ಲಿ ಬೆಂಗಳೂರು - ಮೈಸೂರ ಹೆದ್ದಾರಿ ಕುಂಬಳಗೋಡು ಸಮೀಪ ಜಮೀನನ್ನು ಖರೀದಿಸಿ ಬಸವ ಗಂಗೋತ್ರಿ ಎಂದು ಹೆಸರಿಡಲಾಯಿತು. ಇಂದು ಬಸವ ಗಂಗೋತ್ರಿಯಲ್ಲಿ ಅನಾಥಾಲಯ ಮತ್ತು ವೃದ್ಧಾಶ್ರಮಗಳು ನಡೆಯುತ್ತಿದ್ದು ಅವುಗಳಲ್ಲಿ ಅನಾಥ ಮತ್ತು ನಿರ್ಗತಿಕ ಮಕ್ಕಳಿಗೆ ಮತ್ತು ನಿಸ್ಸಹಾಯಕ ವೃದ್ಧರಿಗೆ ಆಶ್ರಯ ನೀಡಲಾಗಿದೆ. ಆಗಾಗ ಧಾರ್ಮಿಕ ಮತ್ತು ನೈತಿಕ ಮೌಲ್ಯಗಳನ್ನು ವರ್ಧಿಸುವ ತತ್ವ ತರಬೇತಿ ಶಿಬಿರಗಳನ್ನು ನಡೆಸಲಾಗುವುದು. ವರ್ಷಕ್ಕೊಮ್ಮೆ ವೈಶಾಖ ಮಾಸದ ತ್ರಯೋದಶಿ, ಚತುದರ್ಶಿ ಮತ್ತು ಪೌರ್ಣಿಮೆಯಂದು ಬಸವೋತ್ಸವ ಎಂಬ ೩ ದಿವಸಗಳ ಉತ್ಸವ ನಡೆಸಲಾಗುತ್ತಿದೆ. ಬಸವ ಗಂಗೋತ್ರೀ ಆಶ್ರಮದ ಕ್ಯಾಂಪಸ್ಸಿನಲ್ಲಿ ಬಸವಾಲಯ ಎಂಬ ಮಂದಿರವನ್ನು ನಿರ್ಮಿಸಿ ಅಲ್ಲಿ ಗುರು ಬಸವಣ್ಣನವರ ಮೂರ್ತಿಯನ್ನು ಸ್ಥಾಪಿಸಿ ನಿತ್ಯವೂ ಪೂಜೆ, ಪ್ರಾರ್ಥನೆಯನ್ನು ನಡೆಸುಲಾಗುತ್ತಿದೆ. ವಿಶ್ವಕಲ್ಯಾಣ ಮಿಷನ್ ಕಲ್ಯಾಣ ಕಿರಣ ಎಂಬ ಧಾರ್ಮಿಕ ಮಾಸ ಪತ್ರಿಕೆಯನ್ನು ನಡೆಸುತ್ತಿದೆ. ಸುಯಿಧಾನ ಸುಗ್ರಂಥ ಮಾಲೆ ಎಂಬ ಪ್ರಕಾಶನ ಸಂಸ್ಥೆಯ ಮೂಲಕ ವಿವಿಧ ಭಾಷೆಗಳಲ್ಲಿ ನೂರಾರು ಗ್ರಂಥಗಳನ್ನು ಪ್ರಕಟಿಸಿದೆ.

ಬಸವಣ್ಣನವರ 112 ಅಡಿ ಪುತ್ಥಳಿ

ರೂ. 5 ಕೋಟಿ ವೆಚ್ಚದಲ್ಲಿ 111 ಅಡಿ ಎತ್ತರದ ಬಸವ ಪುತ್ಥಳಿಯನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. 30 ಅಡಿ ಎತ್ತರದ ಪೀಠದ ಮೇಲೆ ಇದು ಸ್ಥಾಪನೆಯಾಗಲಿದೆ. ಮೂರ್ತಿಯ ಸುತ್ತ ಶರಣೋದ್ಯಾನ ಇರಲಿದೆ. ಈ ಬೃಹತ್ ಯೋಜನೆಗೆ ಧನ ಸಹಾಯ ಮಾಡಬಯಸುವವರು ಸಂಪರ್ಕಿಸಿ. ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ೨೦೩೫, ೨೦ನೇ ಮೇನ್, ೨ನೇ ಬ್ಲಾಕು, ರಾಜಾಜಿನಗರ ಬೆಂಗಳೂರು ೫೬೦೦೧೦, ದೂರವಾಣಿ: 080-22923736, 23131476

80G Income Tax (೮೦ ಜಿ.) ಇನಕಮ್‌ ಟ್ಯಾಕ್ಸ್‌ ರಿಯಾಯಿತಿ ಬೇಕೆನ್ನುವ ದಾನಿಗಳು "ಬಸವ ಮಹಾಮನೆ ಚಾರಿಟಬಲ್‌ ಟ್ರಸ್ಟ್‌ ಹೆಸರಿನಲ್ಲಿ ಬ್ಯಾಂಕ್‌ ಡ್ರಾಫ್ಟ್‌/ಚೆಕ್‌ ಕಳಿಸಬೇಕೆಂದು ತಿಳಿಸುತ್ತಾ ಉದಾರ ಹೃದಯಿಗಳಾಗಿ ಬಸವ ಪುತ್ಥಳಿಯ ನಿರ್ಮಾಣಕ್ಕೆ ಧನ ಸಹಾಯ ಮಾಡಬೇಕೆಂದು ಕೋರುತ್ತೇವೆ.

ಧನ ಸಹಾಯಕ್ಕಾಗಿ ಕೋರಿಕೆ.

ಅನಾಥಾಲಯ ಮತ್ತು ವೃದ್ಧಾಶ್ರಮದ ಸದಸ್ಯರಿಗೆ ನೆರವಾಗಬೇಕು ಎನ್ನುವವರಿಗೆ ಸಾಕಷ್ಟು ಅವಕಾಶಗಳಿವೆ. ಅನಾಥಾಲಯದ ಮಕ್ಕಳಿಗೆ ನೋಟ್‌ಬುಕ್ಕು ಪೆನ್ಸಿಲ್ಸ್‌, ಜಾಮಿಟ್ರಿ ಬಾಕ್ಸ್‌, ಹಾಸಿಕೊಳ್ಳುವ ಜಮಖಾನಾ ಹೊದೆಯಲು ರಗ್ಗು (ಚಾದರ), ಬಟ್ಟೆಗಳು, ಸ್ವಟರುಗಳು ಮುಂತಾಗಿ ಕೊಡಿಸಬಹುದು. ಹುಟ್ಟು ಹಬ್ಬ, ವಿವಾಹ ವಾರ್ಷಿಕೋತ್ಸವ ಮುಂತಾದ ಸನ್ನಿವೇಶಗಳ ನಿಮಿತ್ತ ಆಶ್ರಮವಾಸಿಗಳಿಗೆಲ್ಲ ಪ್ರಸಾದ (ಊಟ)ದ ವ್ಯವಸ್ಥೆ ಮಾಡಬಹುದು.

ಪರಿವಿಡಿ (index)
*
Previous ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿ ಬಸವಣ್ಣನವರ ಕಾಯಕ ಸಿದ್ಧಾಂತದ ಆಯಾಮಗಳು Next