Post a question Back to Questions
Question
Question by: Ankush B N , Post Date: November 10, 2023

eating habits

hi,
is eating egg or meat allowed according to basavanna
Total Responses: 3
Answer(s)
Answer by: Shivshanker Cheral, answered on: Nov 11, 2023

https://lingayatreligion.com/K/Lingayat-Supports-Vegetarian
Answer by: Shivshanker Cheral, answered on: Nov 11, 2023

ಎಡದ ಕೈಯಲ್ಲಿ ಕತ್ತಿ, ಬಲದ ಕೈಯಲ್ಲಿ ಮಾಂಸ,
ಬಾಯಲಿ ಸುರೆಯ ಗಡಿಗೆ,
ಕೊರಳಲಿ ದೇವರಿರಲು ಅವರ ಲಿಂಗನೆಂಬೆ,
ಸಂಗನೆಂಬೆ, ಕೂಡಲಸಂಗಮದೇವಾ,
ಅವರ ಮುಖಲಿಂಗಿಗಳೆಂಬೆನು.
ಎಂದಿದ್ದಾರೆ, ಈ ವಚನದ ಭಾವರ್ಥ ಈ ರೀತಿಯಾಗಿ ಇದೆ.ಅಪ್ಪ ಬಸವಣ್ಣನವರು ಮಾತೃ ಹೃದಯವಂತರಾಗಿದ್ದು, ಅಂದಿನ ಎಲ್ಲ ಶೋಷಿತ ಧಮನಿತ ದಲಿತರನ್ನ ಅಪ್ಪಿಕೊಂಡು, ಅವರ ಮನ ಪರಿವರ್ತನೆ ಮಾಡುವ ಮೂಲಕ ವಚನಚಳುವಳಿಯನ್ನ ಆರಂಭಿಸಿದರು. ಅವರಿಗೆ ಇಷ್ಟಲಿಂಗ ಕರುಣಿಸುವ ಮುಖಾಂತರ ಸರ್ವಸಮಾನತೆಯನ್ನ ಘೋಷಿಸಿದರು. ಅಂದು ಬಸವಣ್ಣನವರು ಸ್ತ್ರೀಪರ, ಕಳ್ಳರಪರ, ವೇಶ್ಯೆಯರಪರ, ಹೀಗೆ ಎಲ್ಲರ ಪರ ಧ್ವನಿಯಾಗಿ ಅವರಿಗೆ ಸಾಮಾಜಿಕ ನ್ಯಾಯವನ್ನ ಕೊಡಿಸಿದರು. ಅವರೆಲ್ಲರು ತಮ್ಮ ಪೂರ್ವಶ್ರಯವನ್ನ ಕಳೆದುಕೊಂಡು ವಚನಕ್ರಾಂತಿಗೆ ಮುಂದಾದರು. ಅವರೆಲ್ಲರಗಳಲ್ಲಿಯೂ ಮಾಂಸಹಾರಿಗಳು, ಮದ್ಯಪಾನ ಮಾಡುವವರು ಸಹ ಇದ್ದರು. ಅವರಿಗೂ ಸಹ ಇಷ್ಟಲಿಂಗವನ್ನ ಧರಿಸಿಕೊಳ್ಳಬೇಕೆಂಬ ಆಸೆ ಇತ್ತು, ಆದರೆ ಅವರು ನಾವು ಮಾಂಸಹಾರಿಗಳು ಮತ್ತು ಮದ್ಯಪಾನ ಮಾಡುವವರು ನಮಗೆ ಈ ಇಷ್ಟಲಿಂಗವನ್ನ ಧರಿಸುವ ನೈತಿಕ ಹಕ್ಕು ಇದೆ ಇಲ್ಲವೊ? ಎಂಬ ಪ್ರಶ್ನೆ ಕಾಡುವ ಸಂದರ್ಭದಲ್ಲಿ ಅವರ ಮುಖದಲ್ಲಿನ ಆಸೆಯನ್ನ ಕಂಡುಕೊಂಡು ಬಸವಣ್ಣನವರು, ಅವರಲ್ಲಿರುವ ಸಂಶಯ ಹಾಗು ಸಂಕುಚಿತ ಮನೋಭಾವವನ್ನು ಹೋಗಲಾಡಿಸಲು ಮೇಲಿನ ವಚನವನ್ನ ಅವರ ಮನ ಪರಿವರ್ತನೆ ಆಗುವ ರೀತಿಯಲ್ಲಿ ಹೇಳುತ್ತಾರೆ. ಎಡಗೈಯಲ್ಲಿ ಕತ್ತಿ, ಬಲಗೈಯಲ್ಲಿ ಮಾಂಸ, ಬಾಯಿಯಲ್ಲಿ ಮದ್ಯ
Answer by: Shivshanker Cheral, answered on: Nov 11, 2023

ಮೊಟ್ಟಮೊದಲಿಗೆ ಬಸವಣ್ಣನವರು. ದಯವಿಲ್ಲದ ಧರ್ಮವದೇವುದಯ್ಯಾ? ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ ದಯವೆ ಧರ್ಮದ ಮೂಲವಯ್ಯ.* ಎಂಬುದಾಗಿ ಸಕಲ ಜೀವರಾಶಿಗಳಿಗೆ ಲೇಸನ್ನೆ ಬಯಸಿ ಹಿಂಸೆಗೆ ಕಡಿವಾಣ ಹಾಕಿದ್ದಾರೆ

First of all Basavanna. What is a religion without mercy? He wanted mercy for all living beings and put an end to violence because all animals need mercy.

ಅಂಗದಿಚ್ಚೆಗೆ ಮದ್ಯಮಾಂಸವ ತಿಂಬರು,
ಕಂಗಳಿಚ್ಚೆಗೆ ಪರವಧುವ ನೆರೆವರು.
ಲಿಂಗಲಾಂಛನಧಾರಿಯಾದಲ್ಲಿ ಫಲವೇನು?
ಲಿಂಗಪಥವ ತಪ್ಪಿ ನಡೆವವರು
ಜಂಗಮ ಮುಖದಿಂದ ನಿಂದೆ ಬಂದಡೆ
ಕೊಂಡಮಾರಿಂಗೆ ಹೋಹುದು ತಪ್ಪದು ಕೂಡಲಸಂಗಮದೇವ.
Post Answer
To post answers you have to be member.
To become member click here!
Already have account Login here
*

Copyright © 2013-2016 Concept, Design, Development and Maintained by S.S.Cheral. | Terms of Use | Feedback