Previous Basava-Thoughts Basava-As-Seen-by-Others Next

Guru Basava, Basaweshawara Statue Gadag, Karnataka

ಗದಗ ಗುರು ಬಸವ ಅತಿ ಎತ್ತರದ ಮೂರುತಿ

ಗದಗ ಎತ್ತರದ ಮೂರುತಿ ಸುತ್ತ ವಿಶಾಲವಾದ ಜಾಗ. ಕೆರೆ. ಅಂಗಳದಲ್ಲಿ ಪಾರ್ಕ್‌. ಪಾರ್ಕ್‌ನಲ್ಲಿ ತಲೆ ಎತ್ತಿ ನೋಡಿದರೆ ಬಸವಣ್ಣ. ಆಕಾಶದೆತ್ತರಕ್ಕೆ ನಿಂತ ಅನುಭವ. ಅಷ್ಟು ದೊಡ್ಡ ಮೂರ್ತಿ. ೧೦೮ ಅಡಿ ಎತ್ತರದ ಬಸವಣ್ಣನವರ ಪುತ್ಥಳಿ ಬೀದರ್‌ ಜಿಲ್ಲೆಯ ಬಸವಕಲ್ಯಾಣದಲ್ಲಿದೆ. ಆದರೆ, ಗದಗನ ಭೀಷ್ಮ ಕೆರೆಯ ಎರಡು ಎಕರೆ ಶಾಲ ಪ್ರದೇಶದಲ್ಲಿ 116 ಅಡಿ ಎತ್ತರದ ನಿಂತಿರುವ ಬಂಗಿಯಲ್ಲಿರುವ ಬಸವಣ್ಣನವರ ಪುತ್ಥಳಿ ಇದು.

ಗದಗ ತೋಂಟದಾರ್ಯ ಮಠದ ಜಗದ್ಗುರು ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳವರ ಪ್ರೇರಣೆ ಮೇರೆಗೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ.ಶ್ರೀರಾಮುಲು ಅವರು ಪುತ್ಥಳಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದರು.

ಅಂದಿನ ಪ್ರವಾಸೋದ್ಯಮ ಇಲಾಖೆ ಸಚಿವರಾಗಿದ್ದ ಜನಾರ್ಧನ ರೆಡ್ಡಿ ತಮ್ಮ ಇಲಾಖೆಯಿಂದ ಪುತ್ಥಳಿ ನಿರ್ಮಾಣಕ್ಕೆ 7.63 ಕೋಟಿ ರೂ. ಮಂಜೂರು ಮಾಡಿದರು. ನಗರಸಭೆ ಮಾಲೀಕತ್ವದ ಭೀಷ್ಮ ಕೆರೆಯಲ್ಲಿ ಎರಡು ಎಕರೆ ಜಾಗವನ್ನು ಪಡೆದು ಬಸವಣ್ಣನವರ ಪುತ್ಥಳಿ ನಿರ್ಮಿಸಲಾಗಿದೆ. ನಂತರ ಅಧಿಕಾರಕ್ಕೆ ಬಂದ ಗದಗ ಶಾಸಕ ಶ್ರೀಶೈಲಪ್ಪ ಬಿದರೂರ ನೇತೃತ್ವದಲ್ಲಿ ಪುತ್ಥಳಿ ನಿರ್ಮಾಣ ಕಾರ್ಯ ನಡೆಯಿತು.

ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಎಚ್‌.ಕೆ.ಪಾಟೀಲ ಅವರು ಡಾ. ತೋಂಟದ ಸಿದ್ದಲಿಂಗ ಸ್ವಾಮೀಜಿ ಅವರ ಆಶಯ ಹಾಗೂ ಡಾ.ಜಾಮದಾರ ಮತ್ತಿತರ ತಜ್ಞರ ತಂಡದ ಮಾರ್ಗದರ್ಶನದಲ್ಲಿ ಭೀಷ್ಮ ಕೆರೆಯಲ್ಲಿ ಬಸವಣ್ಣವರ ಪುತ್ಥಳಿ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗದಗನ್ನು ವಿಶ್ವವೇ ಗಮನ ಸೆಳೆಯುವಂತೆ ಪ್ರವಾಸೋದ್ಯಮ ತಾಣವನ್ನಾಗಿ ಮಾಡುವ ಆಶಯ ಅವರದು.

ಪುತ್ಥಳಿಯ ಸುತ್ತಲಿನ ಎರಡು ಎಕರೆ ಪ್ರದೇಶದಲ್ಲಿ ಸುಂದರ ಪರಿಸರ ನಿರ್ಮಿಸಲಾಗಿದೆ. ಬಸವಣ್ಣನವರ ಅತಿ ಎತ್ತರದ ಪುತ್ಥಳಿ ಹೊಂದುವ ಮೂಲಕ ಗದಗ ವಿಶ್ವದ ಗಮನ ಸೆಳೆದಿದೆ.

ಬಸವಣ್ಣನವರ ವಿಚಾರಧಾರೆ ವಿಶ್ವದಗಲಕ್ಕೂ ಹಬ್ಬಿದೆ. ಅನುಭವ ಮಂಟಪ ಮೂಲಕ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದ ಬಸವಣ್ಣನವರು ಅಸ್ಪ್ರಶ್ಯತೆಯ ವಿರುದ್ಧ ಭಾರತದಲ್ಲಿ ಮೊದಲ ಬಾರಿಗೆ ಹೋರಾಟ ನಡೆಸಿದರು. ತಮ್ಮ ವಚನಗಳ ಮೂಲಕ ಇಡೀ ವಿಶ್ವಕ್ಕೆ ಸಮಾನತೆ ಸಾರಿದವರು. ಕನ್ನಡಿಗರೊಬ್ಬರು ದೇಶದ ಸ್ಥಳೀಯ ಸಂಸ್ಥೆಯೊಂದರ ಮೇಯರ್‌ ಆಗಿದ್ದು, ಅಲ್ಲಿಯೂ ಅವರು ಬಸವಣ್ಣನವರ ಪುತ್ಥಳಿ ಸ್ಥಾಪಿಸಿದ್ದಾರೆ.

ಮೈಸೂರು ಆಸ್ಥಾನದ ಕಲಾವಿದರ ಕುಟುಂಬದ ಸ್ಟ್ರಕ್ಚರಲ್‌ ಇಂಜನಿಯರ್‌ ಶ್ರೀಧರ ಮೂರ್ತಿ ಕೈಚಳಕ ಕೂಸು ಇದು. ಇವರು ಈಗಾಗಲೇ ಬಸವಕಲ್ಯಾಣ, ಮುರಡೇಶ್ವರ, ಗುಜರಾತ್‌ ಸೇರಿದಂತೆ ಹಲವು ಮೂರ್ತಿಗಳ ತಯಾರಿಕೆಯಲ್ಲಿ ಕೀರ್ತಿ ಪಡೆದಿದ್ದಾರೆ.

ಬಸವಣ್ಣನವರ ಪತ್ಥಳಿಯ ಕೆಳಭಾಗದಲ್ಲಿ ಬಸವಣ್ಣನವರ ಹುಟ್ಟಿನಿಂದ ಐಕ್ಯವಾಗುವವರೆಗಿನ ಹಲವಾರು ಸನ್ನಿವೇಶಗಳನ್ನೊಳಗೊಂಡ ಆಕರ್ಷಕ ಪುತ್ಥಳಿಗಳೊಂದಿಗೆ ಗ್ಯಾಲರಿ ನಿರ್ಮಿಸಲಾಗಿದೆ. ಬಸವಣ್ಣನವರ ಕಾಲದ ಆಗು ಹೋಗುಗಳನ್ನು ಕಣ್ಣಿಗೆ ಕಟ್ಟುವಂತೆ ಕಲಾವಿದರು ಹದಿನಾರು ಸನ್ನಿವೇಶಗಳನ್ನು ನಿರ್ಮಾಣ ಮಾಡುವ ಮೂಲಕ ತಮ್ಮ ನೈಪುಣ್ಯತೆ ಮೆರೆದಿದ್ದಾರೆ. ಬಸವಣ್ಣನವರ ಸ್ಮಾರಕದಲ್ಲಿ ಏನೇನಿದೆ ಪುತ್ಥಳಿಯ ಕೆಳ ಭಾಗದಲ್ಲಿ 12ನೇ ಶತಮಾನದ ಶರಣರ ಲೋಕವನ್ನೇ ಸೃಷ್ಟಿಸಲಾಗಿದೆ. ಇಲ್ಲಿನ ಹದಿನಾರು ಸನ್ನಿವೇಶಗಳು ನೋಡುಗರನ್ನು ಭಾವಪರವಶರನ್ನಾಗಿಸುತ್ತವೆ.

ಸ್ಮಾರಕದಲ್ಲಿ ಏನೇನಿದೆ?

ಬಸವಣ್ಣನವರ ತಂದೆ ಮಾದರಸ, ತಾಯಿ ಮಾದಲಾಂಬಿಕೆ ಹಾಗೂ ಅಕ್ಕ ನಾಗಮ್ಮ ಅವರು ಬಸವಣ್ಣನವರನ್ನು ತೊಟ್ಟಿಲಲ್ಲಿ ಹಾಕುತ್ತಿರುವುದು, ಅಸ್ಪೃಶ್ಯತೆ, ಮೂಢನಂಬಿಕೆ, ಹಾವಿನ ಪೂಜೆ ಮುಂತಾದವುಗಳನ್ನು ಕಂಡು ಚಿಂತನೆಗೊಳಗಾದ ಬಸವಣ್ಣನವರು, ನೀರಲ್ಲಿ ಮುಳುಗಿದ ದಲಿತ ಬಾಲಕನನ್ನು ಬಸವಣ್ಣನವರು ರಕ್ಷಿ$ಸಿದ ದೃಶ್ಯ ಕಂಡ ಜನರು ದಿಗ್ಬ›ಮೆ ವ್ಯಕ್ತಪಡಿಸಿರುವ ಸನ್ನಿವೇಶ ಅಂದಿನ ಸಮಾಜದ ಕನ್ನಡಿಯಂತೆ ಮೂಡಿ ಬಂದಿದೆ.

ಸಮಾಜದಲ್ಲಿನ ಪ್ರಾಣಿ ವಧೆ, ಧವೆಯರ ತಲೆ ಬೋಳಿಸುವುದು, ಅಗ್ನಿಪೂಜೆ ದೃಶ್ಯಗಳ ನಡುವೆ ಯಜೊnàಪವೀತ ಬಸವಣ್ಣನವರು ತನ್ನ ಅಕ್ಕನಿಗೆ ನೀಡದ ಜನವಾರವನ್ನು ತಿರಸ್ಕರಿಸಿ ಮನೆ ಬಿಟ್ಟು ಕೂಡಲ ಸಂಗಮಕ್ಕೆ ಪ್ರಯಾಣಿಸುತ್ತಿರುವ ಆಕರ್ಷಕ ಸನ್ನಿವೇಶವೂ ಇದರಲ್ಲಿದೆ.

ಬಿಜ್ಜಳನ ಆಸ್ಥಾನದ ತಾಮ್ರಪತ್ರ ಓದುತ್ತಿರುವ ಬಸವಣ್ಣನವರು, ರಾಜವಾಡೆ, ಬಿಜ್ಜಳನ ಆಸ್ಥಾನದ ದೃಶ್ಯಾವಳಿಗಳು, ಮಂತ್ರಿ ಮಂಡಳದ ಸಭೆ ಕಣ್ಣಿಗೆ ಕಟ್ಟುವಂತಿದೆ.

12ನೇ ಶತಮಾನದ ಶರಣರ ಜೊತೆ ದಲಿತರ ಮನೆಯಲ್ಲಿ ಊಟ ಮಾಡುತ್ತಿರುವ ಬಸವಣ್ಣನವವರು. ಲಿಂಗಪೂಜೆ, ಜನರು ಅಚ್ಚರಿ ವ್ಯಕ್ತಪಡಿಸಿ ನೋಡುತ್ತಿರುವ ಚಿತ್ರಗಳು ಅಂದಿನ ಸಮಾಜದಲ್ಲಿ ನಡೆಯುತ್ತಿರುವುದನ್ನು ಮನೋಜ್ಞವಾಗಿ ಮೂಡಿಬಂದಿವೆ.

20ಸಾವಿರ ಸಿಮೆಂಟ್‌, 150ಟನ್‌ ಕಬ್ಬಿಣ

ನಾಲ್ಕು ವರ್ಷ ನಾಲ್ಕು ತಿಂಗಳು ಹತ್ತು ದಿನದಲ್ಲಿ ಮೂರ್ತಿ ಸಿದ್ಧ. 150ಟನ್‌ ಕಬ್ಬಿಣ, 20ಸಾವಿರ ಮೂಟೆ ಸಿಮೆಂಟ್‌, ಸುಮಾರು ಪ್ರತಿದಿನ 50ಜನ ಕಾರ್ಮಿಕರಿಂದ ನಿರ್ಮಾಣ. ಮೂರ್ತಿ ಹೊರಭಾಗದ ಸೌಂದರ್ಯ ಹೆಚ್ಚಿಸಲು ಸತತ 6ತಿಂಗಳುಗಳ ಕಾಲ 25ಜನ ಕಲಾವಿದರ ಪರಿಶ್ರಮ.

116 ಅಡಿ ಎತ್ತರದ ಬಸವಣ್ಣನವರ ಪುತ್ಥಳಿ ನಿರ್ಮಾಣ ನಿರೀಕ್ಷೆಯಂತೆ ಪೂರ್ಣವಾಗಿದ್ದು, ಇದು ಗದಗ ಇತಿಹಾಸ ಪುಟ ಸೇರಲಿದೆ. ಬಸವಣ್ಣನವರ ಜೀವನಗಾಥೆ ಹೊಂದಿರುವ ಸ್ಮಾರಕ ಅತ್ಯಾಕರ್ಷಕವಾಗಿದೆ. ಪ್ರವಾಸೋಧ್ಯಮ ತಾಣವಾಗಿ ಗದಗ ವಿಶ್ವದ ಗಮನ ಸೆಳೆಯುವುದರಲ್ಲಿ ಅನುಮಾನವಿಲ್ಲ

Guru Basava, Basaweshawara Statue Gadag, Karnataka
1/30: Guru Basava, Basaweshawara Statue Gadag, Karnataka

Guru Basava, Basaweshawara Statue Gadag, Karnataka
2/30: Guru Basava, Basaweshawara Statue Gadag, Karnataka

Back to Index
*
Previous Basava-Thoughts Basava-As-Seen-by-Others Next