Previous Ulavi-Temple-Caves Sharanara Galary Next

Lingayat in Govt Records, in School Transfer Certificates

೧೦೦+ ವರ್ಷಗಳ ಹಿಂದಿನ ಶಾಲಾ ದಾಖಲೆಯಲ್ಲಿ ವಿದ್ಯಾರ್ಥಿಯ ಧರ್ಮ: ಲಿಂಗವಂತ

ಸ್ವಾತಂತ್ರ್ಯ ಪೂರ್ವದಲ್ಲಿ ಬಸವಣ್ಣನವರು ಸ್ಥಾಪಿಸಿದ ಧರ್ಮದ ಹೆಸರು: ಲಿಂಗವಂತ

ದಾಖಲೆಗಳಲ್ಲಿ ಧರ್ಮ: ಲಿಂಗಾಯತ

ಪೂಜ್ಯ ಶ್ರೀಗುರು ರುದ್ರಮುನಿ ಶಿವಯೋಗಿಗಳ ೧೨೩ ವರ್ಷಗಳ ಹಿಂದಿನ ವರ್ಗಾವಣೆ ಪ್ರಮಾಣ ಪತ್ರ ( ಟಿಸಿ) ವನ್ನು ಕೆಳಗೆ ಲಗತ್ತಿಸಲಾಗಿದೆ. ಲಿಂಗವಂತ ಅಥವಾ ಲಿಂಗಾಯತ ಒಂದು ಜಾತಿ ಎನ್ನುವವರು ಕಣ್ಣು ತೆರೆದು ನೋಡಲಿ. ಶತಮಾನಗಳಿಂದ ಸ್ವತಂತ್ರ ಧರ್ಮವಾಗಿದ್ದ/ ಲಿಂಗಾಯತ ಧರ್ಮಿಯರನ್ನು ಹಿಂದೂ ಕೆಳಗೆ ಒಂದು ಜಾತಿಯನ್ನಾಗಿ ಮಾಡಿ ಬಸವಾದಿ ಶರಣರಿಗೆ ಮೋಸ/ ಅವಮಾನ ಮಾಡಲಾಗಿದೆ. ೨೦೦೩ರಲ್ಲಿ ಜಗಜ್ಜ್ಯೋತಿ ಬಸವಣ್ಣನವರ ಬಹಿರಂಗದ ದ್ರೋಹಿಗಳಾದ ಪಂಚಾಚಾರ್ಯರು ಮತ್ತು ಅಖಿಲ ಭಾರತ ವೀರಶೈವ ಮಹಾಸಭಾದವರು ಸರಕಾರದ ಮೇಲೆ ಒತ್ತಡದ ರಾಜಕಾರಣ ಮಾಡಿ 'ಲಿಂಗಾಯತ' ಎಂಬುವುದನ್ನು 'ವೀರಶೈವ ಲಿಂಗಾಯತ' ಎಂದು ತಿರುಚಿ ಸಮಾಜಕ್ಕೆ ದ್ರೋಹ ಮಾಡಿದ್ದಾರೆ.

ಅನುಭವ ಮಂಟಪದ ೭೭೦ ಶರಣರು ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಲಿಂಗಾಯತ ಧರ್ಮದ ಸಾಹಿತ್ಯ ರಕ್ಷಣೆಗಾಗಿ ಕಲಚೂರಿ ಸೇನೆಯೊಂದಿಗೆ ಯುದ್ಧದಲ್ಲಿ ಪ್ರಾಣವನ್ನು ಕೊಟ್ಟು ಹುತಾತ್ಮರಾಗಿದ್ದರೆ, ಬಸವಣ್ಣನವರ ಪ್ರಾಣವೇ ಆಗಿದ್ದ ಲಿಂಗವಂತ/ಲಿಂಗಾಯತ ಪದವನ್ನು ತಿರುಚಿ ವೀರಶೈವ ಲಿಂಗಾಯತ ಎಂದು ತಿರುಚಿದ ಈ ಎರಡು ಪದಗಳಿಗೆ ಎಷ್ಟು ಪಾಪ ಅಂಟಿದೆ ಎಂಬುವುದನ್ನು ಸಮಾಜ ಅರಿಯಬೇಕಿದೆ. ಬಸವಾದಿ ಶರಣರು ಧರ್ಮಕ್ಕಿಟ್ಟ ಹೆಸರು ಲಿಂಗಾಯತ! ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಧರ್ಮಗುರು ಬಸವಣ್ಣನವರ ಅನುಯಾಯಿ/ಅಭಿಮಾನಿಗಳ ಮೇಲಿದೆ.

ಸಕಲ ಜೀವಾತ್ಮರಿಗೆ ಲೇಸ ಬಯಸುವ ಕೂಡಲಸಂಗನ ಶರಣರೇ ಕುಲಜರು!

ಶರಣು ಶರಣಾರ್ಥಿಗಳು....

        Lingayat in Govt Records, in School Transfer Certificates
1/7: Lingayat in Govt Records, in School Transfer Certificates

        Lingayat in Govt Records, in School Transfer Certificates
2/7: Lingayat in Govt Records, in School Transfer Certificates

ಮೈಸೂರು ವಿದ್ಯಾಭ್ಯಾಸದ ಇಲಾಖೆ ಪ್ರಾಥಮಿಕ ಶಾಲಾ ಉಪಾಧ್ಯಾಯರ ಶಿಕ್ಷಣ ಕೈಪಿಡಿಯನ್ನು ೧೯೫೩ ರಲ್ಲಿ ಹೊರ ತಂದಿದ್ದು ಅದರಲ್ಲಿ ಲಿಂಗಾಯತ ಮಾತ್ರ ಉಲ್ಲೇಖವಿದ್ದು ವೀರಶೈವ ಇಲ್ಲವೇ ಇಲ್ಲ.

Back to Index
*
Previous Ulavi-Temple-Caves Sharanara Galary Next