Previous Vibhuti-Box Ulavi-Temple-Caves Next

Sirsangi Lingaraj Desai Palace, ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿಯವರ ಅರಮನೆ

ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿಯವರ ವಾಡೆಯ(ಅರಮನೆ) ದುಸ್ಥಿತಿ!😢😥 ನಮ್ಮ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬರಲು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿಯವರ ವಾಡೆಯ(ಅರಮನೆ) ದುಸ್ಥಿತಿಯನ್ನು ನೋಡಿದವರಿಗೆ ಕಣ್ಣೀರು ಬರದೇ ಇರಲಾರವು.

Sir Sirsangi Lingaraj Desai, ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ
ಶಿರಸಂಗಿ ವಾಡೆಯು ಸುತ್ತಲೂ ನಾಲ್ಕು ಬುರುಜುಗಳಿಂದ ಆವೃತವಾಗಿದ್ದು ಒಳಗಿನ ಅರಮನೆ, ಮುಖ್ಯ ಭಾಗ ಎರಡು ಅಂತಸ್ತಿನದಾಗಿದೆ. ಇಡಿ ಅರಮನೆಯನ್ನು ತೇಗಿನ ಕಟ್ಟಿಗೆ ಬಳಸಿ ಕಟ್ಟಲಾಗಿದೆ ಎರಡು ಬಾಜು(ಪಕ್ಕ) ಐದು ಎಡ ಬಲದಿ ಅಂಕಣದ ಪಡಸಾಲೆಗಳು ನೆಲಕಚ್ಚುವ ಹಂತದಲ್ಲಿದೆ ಮುಖ್ಯವಾಗಿ ಅದರ ಆವರಣದ ಜಂತಿಗಳು ಮಳೆ ನೀರು ಸೋರಿ ಎಲ್ಲವೂ ಮುರಿದು ಬೀಳುತ್ತಿವೆ. ಒಳಭಾಗದಲ್ಲಿಯ ಅಡುಗೆ ಮನೆ, ಊಟದಮನೆ, ಅತಿಥಿ ಗೃಹ, ವಿಶ್ರಾಂತಿ ಕೊಠಡಿ ಎಲ್ಲವೂ ನಾಶವಾಗಿದೆ. ಒಳಭಾಗದ ಪಾವುಟಿಗೆಗಳಿಂದ ಮೇಲುಪ್ಪರಿಗೆಯ ಆಡಳಿತ ನಡೆಸಿದ ಸದರ ಕೂಡಾ ಸಂಪೂರ್ಣವಾಗಿ ಹಾಳಾಗಿದೆ. ಅದರ ಆಸರೆಯ ಪಡಿಜಂತಿಗಳು ಜೋತು ಬಿದ್ದಿವೆ. ಅದರ ಮುಖ್ಯ ಆವರಣದ ಬಾಗಿಲುಗಳ ಮೇಲೆ ಲಿಂಗರಾಜ ದೇಸಾಯಿಯವರ ದತ್ತಕ ತಂದೆ ಜಾಯಪ್ಪ ದೇಸಾಯಿಯವರ ವರ್ಣಚಿತ್ರ ಗಳು ಅವರಿಗೆ ಆಪ್ತರಾಗಿದ್ದ ಅರಟಾಳ ರುದ್ರಗೌಡರ ಚಚಡಿ ದೇಸಾಯಿಯವರ ಫೋಟೋಗಳಿವೆ. ಅವರ ಮನೆ ದೇವರ ಕಾಡಸಿದ್ದೇಶ್ವರ ಲಿಂಗದ ದೇವರ ಮನೆ ಗದ್ದುಗೆ ಇದ್ದು ಒಳಾವರಣದ ಬಾವಿ ಮುಚ್ಚಿ ಪಾಳು ಬಿದ್ದಿದೆ. ಅರಮನೆಯ ಒಳಗಿನಿಂದಲೆ ಕೋಟೆಯ ಬುರುಜುಗಳ ಮೇಲೆ ಹತ್ತುವ ಕಾವಲು ಮಾರ್ಗಗಳಲಿ ಕಂಠಿ ಕಾಬಲು ಬೆಳೆದಿವೆ. ಶಿರಸಂಗಿ ಲಿಂಗರಾಜ ದೇಸಾಯಿಯವರು ತಮ್ಮ ಜೀವಿತಾವಧಿಯಲ್ಲಿ ಇಲ್ಲಿ ಸಂಸ್ಥಾನಿಕರಾದ ಮೇಲೆ ಮಾಡಿದ ಜನೋಪಕಾರ ಅನುಪಮವಾಗಿದೆ. ರೈತರಿಗೆ ಕೃಷಿ ತರಬೇತಿಗೆ 150ಎಕರೆ ಜಮೀನು ಹಾವೇರಿಯ ದೇವಿ ಹೊಸೂರಿನಲ್ಲಿ ಕೊಡಮಾಡಿದ್ದು, ನವಲಗುಂದ ಮತ್ತು ಶಿರಸಂಗಿಯಲ್ಲಿ ದೊಡ್ಡ ಕೆರೆನಿರ್ಮಾಣದಿಂದ ರೈತರಿಗೆ ಕೆರೆ ನೀರಾವರಿ ಕಲ್ಪಿಸಿ ಅವರ ಆದಾಯ ಹೆಚ್ಚಿಸಲು ಶ್ರಮಿಸಿದರು, ಅಮ್ಮಣಗಿಯ ಜಮೀನಿನ ಆದಾಯವನ್ನು ವಿದ್ಯಾರ್ಥಿಗಳ ಸ್ಕಾಲರ್‌ಶಿಪಗೆ ಕೊಟ್ಟು ಬಿಟ್ಟರು. ಕೊನೆಗೆ ತಮ್ಮ ಇಡಿ ಸಂಸ್ಥಾನದ ಸಮಸ್ತ ಆಸ್ತಿಯನ್ನು ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಲಿಂಗರಾಜ ದೇಸಾಯಿಯವರ ಟ್ರಸ್ಟ್ ಮೂಲಕ ಹಣಕಾಸಿನ ಸಹಾಯವನ್ನು ಪಡೆದವರು ಮುಖ್ಯಮಂತ್ರಿಗಳಾಗಿ ಹೋಗಿದ್ದಾರೆ. ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆ ಕಟ್ಟಿದ್ದಾರೆ. ಅನೇಕರು ಬಡತನದಿಂದ ಸಿರಿವಂತಿಕೆ ಯತ್ತ ನಡೆದು ಸಾಮಾಜಿಕ ಗೌರವ ಪಡೆದಿದ್ದಾರೆ. ಎಲ್ಲಾ ಸಮುದಾಯಗಳ ಅಸಂಖ್ಯಾತ ಜನರು ಶಿರಸಂಗಿ ಲಿಂಗರಾಜ ರವರ ಶೈಕ್ಷಣಿಕ ಸಹಾಯ ಪಡೆದವರು ಲೆಕ್ಕಕ್ಕೆ ಸಿಗುವದಿಲ್ಲ ಹೀಗೆ ಕರ್ನಾಟಕದ ಸಂಸ್ಕೃತಿಯ ಹಿರಿಮೆಯನ್ನು ಹೆಚ್ಚಿಸಲು ದುಡಿದ ಈ ಕನ್ನಡಿಗನು ವಾಸಿಸಿದ್ದ ಮನೆ ದುಸ್ಥಿತಿ ಕಂಡು ಬಹಳ ವ್ಯಥೆ ಎನಿಸಿದೆ. ಶಿರಸಂಗಿ ಲಿಂಗರಾಜ ದೇಸಾಯಿಯವರ ತಮಗಾಗಿ ಅವರ ಬಂದು ಬಳಗದವರಿಗಾಗಿ ಏನೂ ಕೇಳಲಿಲ್ಲ. ಬ್ರಿಟಿಷರ ಜಮಾನದಲ್ಲಿ ಸಂಸ್ಥಾನದ ಅಂದಿನ ಕಾಲದ ಆರು ಲಕ್ಷದಷ್ಟು ಆದಾಯದಲ್ಲಿ ಬೇಕಾದ ಹಾಗೆ ಐಷಾರಾಮಿಯಾಗಿ ಮೆರೆಯಬಹುದಿತ್ತು.ಆದರೆ ಸಮಾಜಮುಖಿಯಾಗಿ ಜನಪರವಾಗಿ ಚಿಂತನೆ ನಡೆಸಿ ಕನ್ನಡ ಜನರ ಸೇವೆಯಲ್ಲಿ ತೊಡಗಿದರು. ಈಗ ಅವರು ವಾಸಿಸಿದ್ದ ವಾಡೆ ಅನೇಕ ಜನಪರ ಕಾರ್ಯಗಳನ್ನು ಮಾಡಲು ನಿರ್ಣಯಿಸಿದ ಕಾರ್ಯಸ್ಥಳ ಸದರ ಹಾಳುಬೀಳುತ್ತಿದೆ. ಅದನ್ನು ರಕ್ಷಿಸುವವರಾರು? ಎನ್ನುವದೇ ನನಗೆ ಯಕ್ಷ ಪ್ರಶ್ನೆ ಯಾಗಿದೆ..! ಶಿರಸಂಗಿಯಲ್ಲಿ ಜನರೂ ಇದರ ಬಗ್ಗೆ ಸಂಬಂಧಪಟ್ಟವರಿಗೆ ಹೇಳಿ ಹೇಳಿ ಸುಸ್ತಾಗಿ ಹೋಗಿದ್ದಾರೆ. ಇದರ ದುರವಸ್ಥೆ ಕುರಿತು ನಾಡಿನ ಚಿಂತಕರಾದ ರಂಜಾನ ದರ್ಗಾರವರು ಪತ್ರಿಕೆ ಗಳಲ್ಲಿ ಬರೆದಿದ್ದಾರೆ. ಯಾರೂ ಲಕ್ಷ್ಯ ವಹಿಸುತ್ತಿಲ್ಲ ಬಹಳ ಖೇದಕರವೆನಿಸಿದೆ. ✍️ ರವೀಂದ್ರನಾಥ ದೊಡ್ಡಮೇಟಿ

Sirsangi Lingaraj Desai Palace, ಶಿರಸಂಗಿ ಲಿಂಗರಾಜ ದೇಸಾಯಿಯವರ ಅರಮನೆ
1/10: Sirsangi Lingaraj Desai Palace, ಶಿರಸಂಗಿ ಲಿಂಗರಾಜ ದೇಸಾಯಿಯವರ ಅರಮನೆ

Sirsangi Lingaraj Desai Palace, ಶಿರಸಂಗಿ ಲಿಂಗರಾಜ ದೇಸಾಯಿಯವರ ಅರಮನೆ
2/10: Sirsangi Lingaraj Desai Palace, ಶಿರಸಂಗಿ ಲಿಂಗರಾಜ ದೇಸಾಯಿಯವರ ಅರಮನೆ

Back to Index
*
Previous Vibhuti-Box Ulavi-Temple-Caves Next