Previous Annihilation-of-caste-Allamaprabhu Annihilation-of-caste-Ambigara-Chowadayya Next

Eradication of Discrimination
Annihilation of caste-pride, obstinacy and birth-pride

*

Maadara Chennayya

ಸಾಂಖ್ಯ ಶ್ವಪಚ, ಅಗಸ್ತ್ಯ ಕಬ್ಬಿಲ,
ದೂರ್ವಾಸ ಮಚ್ಚಿಗ, ದಧೀಚಿ ಕೀಲಿಗ,
ಕಶ್ಯಪ ಕಮ್ಮಾರ, ರೋಮಜ ಕಂಚುಗಾರ,
ಕೌಂಡಿಲ್ಯ ನಾವಿದನೆಂಬುದನರಿದು,
ಮತ್ತೆ ಕುಲವುಂಟೆಂದು ಛಲಕ್ಕೆ ಹೋರಲೇತಕ್ಕೆ ?
ಇಂತೀ ಸಪ್ತಋಷಿಯರುಗಳೆಲ್ಲರೂ
ಸತ್ಯದಿಂದ ಮುಕ್ತರಾದುದನರಿಯದೆ,
ಅಸತ್ಯದಲ್ಲಿ ನಡೆದು, ವಿಪ್ರರು ನಾವು ಘನವೆಂದು
ಹೋರುವ ಹೊತ್ತುಹೋಕರ ಮಾತೇತಕ್ಕೆ ?
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ,
ಅರಿ ನಿಜಾ[ತ್ಮಾ] ರಾಮ ರಾಮನಾ. -8/1164 #
Translation:
Sankha was of low birth,
Agasthya, a kabbila, Durvaasa, a shoe maker,
Dadhichi, a backsmith;
Kashyapa, a labourer;
Romaja, a paihter,
Koundilya, a ferry man
Is there any caste low enough
Or high, if not pride
The seven sages got themselves redeemed
Why care for those Brahmins
Who lead a life of lies?
But regard themselves great?
Do not be a sole to the footwear
Subject to the awl in hand
Know thy GOD, Nijaatma Ramaramana

Jedara Daasimayya

ಕುಲಸ್ವಾಮಿ ನಿಮ್ಮವ ಒಲಿವುದ ಕಂಡಡೆ
ತಲೆವಾಗುವೆ ಕಾತ ಕಳವೆಯಂತೆ
ಕುಲಜ ನಾನೆಂದು ತಲೆವಾಗದಿದ್ದಡೆ ಸಲೆ
ಶೂಲದ ತಲೆಯಯ್ಯಾ, ರಾಮನಾಥ. -7/779 #
Translation:
O Lord of the community,
I bow to those who bow to you,
Like a ripe paddy
If I bow not, owing to
The superiority of my caste,
My head is on the gallows,
O Raamanatha!

Urilingadeva

ಶ್ರುತಿಭ್ರಾಂತು ನಿರಸನ:ಶಿವಾಗಮಪ್ರತಿಷ್ಠೆ,
ಕುಲಾಭಿಮಾನ ನಿರಸನ:ಶಿವಕುಲಪ್ರತಿಷ್ಠೆ,
ಅನ್ಯದೈವನಿರಸನ:ಏಕೋದೇವಪ್ರತಿಷ್ಠೆ,
ಸ್ಥಾವರನಿರಸನ:ಏಕಲಿಂಗನಿಷ್ಠಾಪ್ರತಿ[ಷ್ಠೆ].
ಪರಮತತಿರಸ್ಕಾರ ಸ್ವಮತಸ್ಥಾಪನದಿಂ
ಮಾಹೇಶ್ವರನ ನಿಜಸ್ಥಲ
ಅನಂತ ವೇದಶಾಸ್ತ್ರಪುರಾಣಾಗಮತರ್ಕಂಗಳ
ಆತ್ಮ ಮಾಡಿದನಲ್ಲದೆ ಆತ್ಮನನವು ಮಾಡಿದುದಿಲ್ಲ
ಎನ್ನಂತರಂಗದ ಅರಿವಿನ ಮೂರ್ತಿಯಾಗಿ
ಎನ್ನ ಉರಿಲಿಂಗದೇವರು ಸಂಕಲ್ಪಿಸಿ ಆಗೆಂದಡಾದವು. -6/1262 #
Translation:
The eradication of the illusion of Shruti is the prestige of Shivagama
The eradication of the pride of caste is the prestige of Shivakula
The annihilation of other gods is the prestige of Monism
The annihilation of the installed Linga is the prestige of Ishtalinga
Maheshwara’s true state was achieved
By rejecting other religion and establishing our own religion
The Self made the infinite scripture
Like Veda, Shastra, Purana, Agama, Tarka
They did not make the Self
When Lord Urilinga the embodiment
Of my inner consciousness willed,
They came into existence

Akkamma

ಬತ್ತಲೆ ಇದ್ದವರೆಲ್ಲ ಕತ್ತೆಯ ಮಕ್ಕಳು.
ತಲೆ ಬೋಳಾದವರೆಲ್ಲ ಮುಂಡೆಯ ಮಕ್ಕಳು.
ತಲೆ ಜಡೆಗಟ್ಟಿದವರೆಲ್ಲ ಹೊಲೆಯರ ಸಂತಾನ.
ಆವ ಪ್ರಕಾರವಾದಡೇನು ಅರಿವೆ ಮುಖ್ಯವಯ್ಯಾ,
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ. -5/526 #
Translation:
The naked ones are all the children of a donkey
The bald-headed are all the children of a widow
All those with knotted hair on the head are the children of pariahs
What matters of what birth they are?
O Sir, what matters is their knowledge
In Rameshwaralinga to whom good conduct it-self is the life-breath

Siddharameshwara

ಏಕಪಂಕ್ತಿಯಲ್ಲಿ ತಾ ಭೋಜನಭೇದ ಮಾಡಬಾರದು
ಭೋಜನಭೇದ ಮಾಡಿದಡೆಯು ತಾನೆಣಿಸಬಾರದು
ತಾನೆಣಿಸಿದಲ್ಲಿಯೂ ಅನ್ಯರಿಗೆ ಕಳಿಯಬಾರದು
ಅನ್ಯರಿಗೆ ತಿಳಿದಡೆಯು ಮನೆ ಬೇರಾಗಬಾರದು
ಮನೆ ಬೇರಾದಡೆಯು ಮನ ಬೇರಾಗಬಾರದು
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ -4/1940 #
Translation:
At the common dinner session there should be no discrimination
If there is discrimination,
Let none take note of it
If one takes note of it
One should not tell it to others
Even if one tells
It should not be a cause for breaking a family
Should the family break?
Let there be no breach in the hearts
Look, O Kapila Siddha Mallikarjuna

ಸರ್ವರು ಜ್ಞಾನದಿಂದಲ್ಲದೆ,
ಗೋತ್ರ್ಕಾಭಿಮಾನದಿಂದ ಮೋಕ್ಷವಂತರಲ್ಲ ಕೇಳಾ
“ತಪಸಾ ಬ್ರಾಹ್ಮಣೋ ಜಾತೋ ವಿಶ್ವಾಮಿತ್ರೋ ಮಹಾಮುನಿಃ|
ತಪಸಾ ಬ್ರಾಹ್ಮಣೋ ಜಾತೋ ನಾರದೋ ಹಿ ಮಹಾಮುನಿಃ|
ತಪಸಾ ಬ್ರಾಹ್ಮಣೋ ಜಾತಿಶ್ಚಾಗಸ್ತ್ಯೋ ಮುನಿಪುಂಗವಃ|
ತಪಸಾ ಬ್ರಾಹ್ಮಣೋ ಜಾತಃ ಪರಶರಮಹಾಮುನಿಃ|
ತಪಸಾ ಬ್ರಾಹ್ಮಣೋ ಜಾತೋ ದೂರ್ವಾಸಸ್ತು ಮಹಾಮುನಿಃ|
ತಪಸಾ ಬ್ರಾಹ್ಮಣೋ ಜಾತೋ ಭೃಗುವ್ರ್ಯಾಸಶ್ಚ ಮಾಂಡವಃ|”
ಎಂಬುದು ಹುಸಿಯಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ -4/1942 #
Translation:
All won deliverance through knowledge,
And not through pride of clan
It is no wrong to say:
The great sage Vishwamitra
Became a Brahmain through penance
The great sage Naarada
Became a Brahmin through penance
The greatest sage ahyastya
Became a Brahmin through penance
The great sage Parasuram
Became a Brahmin through penance
The great sage Durvaasa
Became a Brahmin through penance
Bhragu, Vyasa and Mandava
Became Brahmins through penance”,
O Kapila Siddha Mallikarjuna!

ವೇದವನೋದಿ ವೇದಾಧ್ಯಯನವ ಮಾಡಿದಡೇನು,
ಬ್ರಾಹ್ಮಣನಾಗಬಲ್ಲನೆ?
ಬ್ರಹ್ಮವೇತ್ತುಗಳ ಶುಕ್ಲಶೋಣಿತಂದ ಜನಿಸಿದಡೇನು,
ಬ್ರಾಹ್ಮಣನಾಗಬಲ್ಲನೆ?
ಯಜನಾ[ದಿಇ] ಷ್ಟ ಷಟ್ಕರ್ಮಂಗಳ ಬಿಡದೆ ಮಾಡಿದಡೇನು,
ಬ್ರಾಹ್ಮಣನಾಗಬಲ್ಲನೆ?
`ಬ್ರಹ್ಮ ಜಾನಾತಿ ಇತಿ ಬ್ರಾಹ್ಮಣಃ' ಎಂಬ ವೇದವಾಕ್ಯವನರಿದು,
ಬ್ರಹ್ಮಭೂತನಾದಾತನೆ ಬ್ರಾಹ್ಮಣ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ. -4/1930 #
Translation:
What if one pores over Vedas?
Does that make him a Brahmin?
What if one is born from
The blood and seed of the Brahmavettar
Does that make him a Brahmin?
What if one performs the six rites continuously?
Does that make him a Brahmin?
The one having known the scriptural word
“He who knows Brahma and
Is possessed by Brahma is a Brahmin”,
Look, O Kapila Siddha Mallikarjuna!

ಕುಲದಲ್ಲಿಯೂ ಅಧಿಕ ಜ್ಞಾನದಲ್ಲಿಯೂ ಅಧಿಕನಾಗಲಾಗಿ,
ಆ ಕುಲೀನ ಜ್ಞಾನವಂತನಲ್ಲಿ ಸಮರಸ ಸಲ್ಲದು ನೋಡಾ, ಗುರುವೆ.
ಶಿವಶಕ್ತಿಯೆ ಸತ್ಕುಲ, ಶಿವಧ್ಯಾನವೆ ಸತ್ಕುಲ,
ಶಿವಪೂಜೆಯೆ ಸತ್ಕುಲ ನೋಡಾ ಗುರುವೆ.
ಶಿವಕಥಾವರ್ಣನವೆ ಸತ್ಕುಲ, ಶಿವಗೋಷ್ಠಿಯೆ ಸತ್ಕುಲ ನೋಡಾ
ಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನ ಗುರುವೆ. -4/1943 #
Translation:
Although a man is high in birth and knowledge,
It’ll not do to have communion with him, O master!
Shivasakti is high birth;
Shivadhyana is high birth;
Shivapuja is high birth;
Telling of Shiva-stories is high birth;
Discourse of Shiva is high Birth,
Look, O Master Kapila Siddha Mallikarjuna!

ಕುಲಮದ ಪೊತ್ತಲ್ಲಿ ಚಂಡಾಲಗಿತ್ತಿಯಾಗಿ ಕೆಡಿಸಿತ್ತು ಮಾಯೆ, ಮಯೂರನೃಪಗೆ
ಛಲಮದ ಪೊತ್ತಲ್ಲಿ ಮಾಂಸ ಭೋಗಿಸಿತ್ತು ಮಾಯೆ, ವೀರ ವಿಕ್ರಮಗೆ
ಧನಮದ ಪೊತ್ತಲ್ಲಿ ದರಿದ್ರವಾಗಿ ಕಾಡಿತ್ತು ಮಾಯೆ, ಹರಿಶ್ಚಂದ್ರಂಗೆ
ರೂಪಮದ ಪೊತ್ತಲ್ಲಿ ಕುರೂಪನ ಮಾಡಿತ್ತು ಮಾಯೆ, ನಳಂಗೆ
ಯೌವನಮದ ಪೊತ್ತಲ್ಲಿ ಹಿಡಿಂಬಿಯಾಗಿ ಕಾಡಿತ್ತು ಮಾಯೆ, ಭೀಮಂಗೆ
ವಿದ್ಯಾಮದ ಪೊತ್ತಲ್ಲಿ ಅಜ್ಞಾನವಾಗಿ ಕಾಡಿತ್ತು ಮಾಯೆ, ಅಂದು ಪರ್ವತದಲ್ಲಿ ಕವಿ ವಾದಿಶೇಖರಂಗೆ
ರಾಜಮದ ಪೊತ್ತಲ್ಲಿ ರಾಕ್ಷಸನ ಮಾಡಿತ್ತು ಮಾಯೆ, ಮುಮ್ಮಡಿ ಸಿಂಗನೃಪಂಗೆ
ತಪೋಮದ ಪೊತ್ತಲ್ಲಿ ಹಲವು ಆಗಿ ಕಾಡಿತ್ತು ಮಾಯೆ, ವಿಶ್ವಾಮಿತ್ರಂಗೆ
ಇಂತೀ ಅಷ್ಟಮದವಳಿದು ಅಷ್ಟಾವರಣ ಧರಿಸಿಪ್ಪ
ಮಹಾಗಣಂಗಳು ಲಯವಿಲ್ಲದ ರಾಜಯೋಗವ
ಪಡೆದಿಹರಯ್ಯಾ. ಕಪಿಲಸಿದ್ಧಮಲ್ಲಿಕಾರ್ಜುನಾ. -4/1524 #
Translation:
Maaya destroyed King Mayura in a periah woman’s form
When he was possessed by pride of birth
Maaya made brave Vikrama eat flesh,
When he was possessed by pride of will
Maaya plagued Harishchandra in the form of poverty,
When he was possessed by pride of wealth
Maaya made Nala look ugly
When he was possessed by pride of looks
Maaya bothered Bheema in the form of Hidimba
When he was possessed by pride of youth
Maaya annoyed the poet Vadishkhara in the form ignorance
When he was possessed by pride of learning
Maaya transformed Royal Singa the third into a demon
When he was possessed by pride of kingship
Maaya worried Vishvamitra in several forms
When he was possessed by pride of penance
But the great Sharanas
Who, shedding the eight-fold, pride,
Wear the eight-fold aid to faith,
Have gained the perennial Raja Yoga,
O Kalipla Siddha Mallikarjuna!

ಕುಲಾಕುಲ ಅನುಭವಕ್ಕಲ್ಲದೆ ಸಮರಸಕ್ಕೇನೋ ಅಯ್ಯಾ?
ವಾದವಿವಾದವೆಂಬುದು ಶಾಸ್ತ್ರದಲ್ಲಲ್ಲದೆ ಸಭೆಯಲ್ಲೇನ ಅಯ್ಯಾ?
ಹಾಸ್ಯಾಹಾಸ್ಯ ನುಡಿಗಡಣದಲ್ಲಲ್ಲದೆ
ನುಡಿಯುವ ಕಾಯದಲ್ಲೇನೋ ಅಯ್ಯಾ?
ಕಪಿಲಸಿದ್ಧಮಲ್ಲಿಕಾರ್ಜುನಾ. -4/1528 #
Translation:
High birth and low birth are for worldly experience
What use are they for spiritual communion, O Sir?
Debates and disputes go to make the Shastra
But what use are they in the spiritual assembly, O Sir?
Wit and humour enliven the speech,
But how do they profit the body
That produces the speech, O Sir
Kapila Siddha Mallikarjuna?

Chennabasavanna

ಕುಲವಳಿದು, ಛಲವಳಿದು, ಮದವಳಿದು, ಮಚ್ಚರವಳಿದು,
ಆತ್ಮತೇಜವಳಿದು, ಸರ್ವಾಹಂಭಾವವಳಿದು,
ನಿಜ ಉಳಿಯಿತ್ತು
ಲಿಂಗಜಂಗಮವೆಂಬ ಶಬ್ದವಿಡಿದು ಸಾಧ್ಯವಾಯಿತ್ತು ನೋಡಾ,
ತಾನಳಿದು ತಾನುಳಿದು ತಾನು ತಾನಾದ ಸಹಜ ನಿಜಪದವಿಯಲ್ಲಿ
ಕೂಡಲಚೆನ್ನಸಂಗ ಲಿಂಗೈಕ್ಯವು. -3/724 #
Translation:
The true alone remained,
When obstinacy disappeared,
Caste perished, arrogance evaporated,
Jealousy perished, the self lost its Light,
And all egoism was abandoned
The realization of the True was possible
Through the telling of Linga and Jangama
The merger in Kudala Chennasanga
Was possible by obtaining the true title
In which he became himself
By destroying himself
And protecting himself all at once

Allamaprabhu

ಕುಲಮದ ಛಲಮದ ವಿದ್ಯಾಮದದವರ ತೋರದಿರಾ.
ಅವರ ಅರೂಢಪದವಿಯನೆನಗೆ ತೋರದಿರಾ.
ಅವರ ಗರುವ ಗಂಬಿರವನೆನಗೆ ತೋರದಿರಾ.
ಶಮೆದಮೆಯುಳಿದು ದಶಮುಖ ನಿಂದು
ಲಿಂಗದಲ್ಲಿ ಲೀಯವಾದವರನಲ್ಲದೆ, ಎನಗೆ ತೋರದಿರಾ ಗುಹೇಶ್ವರಾ. -2/464 #
Translation:
Do not show me those who are swollen
With the pride of caste, obstinacy and learning
Do not show me their high titles
Do not show me their arrogance
Show me no other than those
Who remain absorbed in Linga?
After having spent all passion,
O Guheswhara!

#: 1/653 number indicaets, 1-Vachana Samputa number 653-Vachana number, in the 15 samputas of Samagara Vachana Sahithya, pub: Kannada and Culture Department, Government of Karnataka.
ಈ ತರಹದ ಸಂಖ್ಯೆಯ ವಿವರ:-1/653 :- ಸಮಗ್ರ ವಚನ ಸಂಪುಟದ ಸಂಖ್ಯೆ-1, ವಚನ ಸಂಖ್ಯೆ-1653 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2001)
English translation is from the book "Heaven of Equality", Translated by Dr. C. R. Yaravintelimath and Dr. M. M. Kalburgi. Pub: Shree Basaveshwara Peetha, Karnataka University Dharwad-580003. 2003.

Back to index
Previous Annihilation-of-caste-Allamaprabhu Annihilation-of-caste-Ambigara-Chowadayya Next