ವಿಶ್ವಗುರು ಬಸವಣ್ಣನವರ ಜೀವನದ ಪ್ರಮುಖ ಘಟನೆಗಳು 1134-1196
|
|
*
1 |
ಧರ್ಮಪಿತ ವಿಶ್ವಗುರು ಬಸವಣ್ಣನವರ ಜನನ:ಆನಂದ ನಾಮ ಸಂವತ್ಸರದ ವೈಶಾಖ ಮಾಸದ ಅಕ್ಷಯ ತೃತೀಯಾದಂದು, ರೋಹಿಣಿ ನಕ್ಷತ್ರದಲ್ಲಿ; ತಾಯಿ:ಮಾದಲಾಂಬಿಕೆ, ತಂದೆ:ಮಾದರಸ |
30 ಎಪ್ರಿಲ್ 1134. |
2 |
ಮನೆಯಿಂದ ಬಾಲಕನ ನಿರ್ಗಮನ; ಸಂಗಮಕ್ಕೆ ಆಗಮನ |
1142 |
3 |
ಮೂರೇಳು ವಯಸ್ಸಿನವರೆಗೆ (21) ಗುರುಕುಲಾಭ್ಯಾಸ ಅರ್ಚಕವೃತ್ತಿ, ವಿವಾಹ ಪ್ರಸ್ತಾಪ, ಸಗುಣ ಸಾಕ್ಷಾತ್ಕಾರ, ಇಷ್ಟಲಿಂಗದ ಪರಿಕಲ್ಪನೆ, ದೇವಾನುಗ್ರಹದ ಅವತೀರ್ಣ, ಹೊಸಧರ್ಮದ ಕಲ್ಪನೆಯ ರೂಪುಗೊಂಡುದು; ಮಂಗಳವೇಡೆಗೆ ಆಗಮನ, ನೀಲಗಂಗಳೊಡನೆ ವಿವಾಹ. |
1155 |
4 |
ಮಂಗಳವೇಡೆಯಲ್ಲಿ ವಾಸ್ತವ್ಯ; ಕರಣಿಕ ಕಾಯಕ |
1155 ರಿಂದ 1160 |
5 |
ಕಲ್ಯಾಣಕ್ಕೆ ಆಗಮನ, ವಿಕ್ರಮ ನಾಮ ಸಂವತ್ಸರ ಶ್ರಾವಣ ಶುದ್ಧ ಪಂಚಮಿ |
1160 |
6 |
ಅನುಭವ ಮಂಟಪ ಸ್ಥಾಪನೆ |
1169 |
7 |
ಚೆನ್ನಬಸವಣ್ಣನವರ ಜನನ |
1172 |
8 |
ಅಲ್ಲಮ ಪ್ರಭುದೇವ ಮತ್ತು ಸಿದ್ಧರಾಮೇಶ್ವರ ಆಗಮನ |
1184 |
9 |
ಶೂನ್ಯ ಪೀಠ ಸ್ಥಾಪನೆ, ಪ್ರಭುದೇವರ ಪೀಠಾರೋಹಣ, ವಿಶ್ವಾವಸು ಸಂವತ್ಸರ, ಚೈತ್ರಶುದ್ಧ ಪಾಡ್ಯ ಯುಗಾದಿ ದಿವಸ ಸೋಮವಾರ, ರೇವತಿ ನಕ್ಷತ್ರದಲ್ಲಿ |
1185 |
10 |
ಹರಳಯ್ಯನವರ ಮಗ ಶೀಲವಂತನಿಗೆ ಮಧುವರಸರ ಮಗಳು ಲಾವಣ್ಯವತಿಯನ್ನು ಕೊಟ್ಟು ವರ್ಣಾಂತರ ವಿವಾಹ, ರಾಕ್ಷಸನಾಮ ಸಂವತ್ಸರ ಫಾಲ್ಗುಣ ಏಕಾದಶಿ ಸೋಮವಾರ |
12 ಫೆಬ್ರವರಿ 1196 |
11 |
ಧರ್ಮಪಿತ ಬಸವಣ್ಣನವರ ಗಡಿಪಾರು (ದ್ವಾದಶಿ) |
13 ಫೆಬ್ರವರಿ 1196 |
12 |
ವಿವಾಹದಲ್ಲಿ ಭಾಗಿಗಳಾದ ಶರಣರ ಬಂಧನ |
14 ಫೆಬ್ರವರಿ 1196 |
13 |
ವಿಚಾರಣೆ, ಶಿಕ್ಷೆ (ಚತುರ್ದಶಿ) |
15 ಫೆಬ್ರವರಿ 1196 |
14 |
ಬಿಜ್ಜಳನ ವಧೆ (ಹೋಳಿ ಹುಣ್ಣಿಮೆಯಂದು) |
16 ಫೆಬ್ರವರಿ 1196. |
15 |
ಶೂನ್ಯ ಪೀಠಾಧೀಶ ಅಲ್ಲಮ ಪ್ರಭುದೇವರ ಲಿಂಗೈಕ್ಯ:ಕದಳಿಯಲ್ಲಿ |
3 ಜೂನ 1196 |
16 |
ಧರ್ಮಪಿತ ಬಸವಣ್ಣನವರ ಲಿಂಗೈಕ್ಯ ಕೂಡಲ ಸಂಗಮದಲ್ಲಿ, ನಳನಾಮ ಸಂವತ್ಸರ ಶ್ರಾವಣಶುದ್ಧ ಪಂಚಮಿ |
30 ಜುಲೈ 1196. |
ಗ್ರಂಥ ಋಣ: ವಚನ ಸಂಗಮ : ಗುರು ಬಸವಣ್ಣನವರ ವಚನಗಳ ಸಂಗ್ರಹ, ಸಂಪಾದಕರು: ಪೂಜ್ಯ ಶ್ರೀ ಮಾತೆ ಮಹಾದೇವಿ, ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.
*