Previous ಗುರು ಬಸವಣ್ಣನವರ ವಚನಗಳು ಬಸವಣ್ಣನವರ ವಚನಗಳಲ್ಲಿ ವಿಜ್ಞಾನ Next

ವಿಶ್ವಗುರು ಬಸವಣ್ಣನವರ ಜೀವನದ ಪ್ರಮುಖ ಘಟನೆಗಳು 1134-1196

*
1 ಧರ್ಮಪಿತ ವಿಶ್ವಗುರು ಬಸವಣ್ಣನವರ ಜನನ:ಆನಂದ ನಾಮ ಸಂವತ್ಸರದ ವೈಶಾಖ ಮಾಸದ ಅಕ್ಷಯ ತೃತೀಯಾದಂದು, ರೋಹಿಣಿ ನಕ್ಷತ್ರದಲ್ಲಿ; ತಾಯಿ:ಮಾದಲಾಂಬಿಕೆ, ತಂದೆ:ಮಾದರಸ 30 ಎಪ್ರಿಲ್ 1134.
2 ಮನೆಯಿಂದ ಬಾಲಕನ ನಿರ್ಗಮನ; ಸಂಗಮಕ್ಕೆ ಆಗಮನ 1142
3 ಮೂರೇಳು ವಯಸ್ಸಿನವರೆಗೆ (21) ಗುರುಕುಲಾಭ್ಯಾಸ ಅರ್ಚಕವೃತ್ತಿ, ವಿವಾಹ ಪ್ರಸ್ತಾಪ, ಸಗುಣ ಸಾಕ್ಷಾತ್ಕಾರ, ಇಷ್ಟಲಿಂಗದ ಪರಿಕಲ್ಪನೆ, ದೇವಾನುಗ್ರಹದ ಅವತೀರ್ಣ, ಹೊಸಧರ್ಮದ ಕಲ್ಪನೆಯ ರೂಪುಗೊಂಡುದು; ಮಂಗಳವೇಡೆಗೆ ಆಗಮನ, ನೀಲಗಂಗಳೊಡನೆ ವಿವಾಹ. 1155
4 ಮಂಗಳವೇಡೆಯಲ್ಲಿ ವಾಸ್ತವ್ಯ; ಕರಣಿಕ ಕಾಯಕ 1155 ರಿಂದ 1160
5 ಕಲ್ಯಾಣಕ್ಕೆ ಆಗಮನ, ವಿಕ್ರಮ ನಾಮ ಸಂವತ್ಸರ ಶ್ರಾವಣ ಶುದ್ಧ ಪಂಚಮಿ 1160
6 ಅನುಭವ ಮಂಟಪ ಸ್ಥಾಪನೆ 1169
7 ಚೆನ್ನಬಸವಣ್ಣನವರ ಜನನ 1172
8 ಅಲ್ಲಮ ಪ್ರಭುದೇವ ಮತ್ತು ಸಿದ್ಧರಾಮೇಶ್ವರ ಆಗಮನ 1184
9 ಶೂನ್ಯ ಪೀಠ ಸ್ಥಾಪನೆ, ಪ್ರಭುದೇವರ ಪೀಠಾರೋಹಣ, ವಿಶ್ವಾವಸು ಸಂವತ್ಸರ, ಚೈತ್ರಶುದ್ಧ ಪಾಡ್ಯ ಯುಗಾದಿ ದಿವಸ ಸೋಮವಾರ, ರೇವತಿ ನಕ್ಷತ್ರದಲ್ಲಿ 1185
10 ಹರಳಯ್ಯನವರ ಮಗ ಶೀಲವಂತನಿಗೆ ಮಧುವರಸರ ಮಗಳು ಲಾವಣ್ಯವತಿಯನ್ನು ಕೊಟ್ಟು ವರ್ಣಾಂತರ ವಿವಾಹ, ರಾಕ್ಷಸನಾಮ ಸಂವತ್ಸರ ಫಾಲ್ಗುಣ ಏಕಾದಶಿ ಸೋಮವಾರ 12 ಫೆಬ್ರವರಿ 1196
11 ಧರ್ಮಪಿತ ಬಸವಣ್ಣನವರ ಗಡಿಪಾರು (ದ್ವಾದಶಿ) 13 ಫೆಬ್ರವರಿ 1196
12 ವಿವಾಹದಲ್ಲಿ ಭಾಗಿಗಳಾದ ಶರಣರ ಬಂಧನ 14 ಫೆಬ್ರವರಿ 1196
13 ವಿಚಾರಣೆ, ಶಿಕ್ಷೆ (ಚತುರ್ದಶಿ) 15 ಫೆಬ್ರವರಿ 1196
14 ಬಿಜ್ಜಳನ ವಧೆ (ಹೋಳಿ ಹುಣ್ಣಿಮೆಯಂದು) 16 ಫೆಬ್ರವರಿ 1196.
15 ಶೂನ್ಯ ಪೀಠಾಧೀಶ ಅಲ್ಲಮ ಪ್ರಭುದೇವರ ಲಿಂಗೈಕ್ಯ:ಕದಳಿಯಲ್ಲಿ 3 ಜೂನ 1196
16 ಧರ್ಮಪಿತ ಬಸವಣ್ಣನವರ ಲಿಂಗೈಕ್ಯ ಕೂಡಲ ಸಂಗಮದಲ್ಲಿ, ನಳನಾಮ ಸಂವತ್ಸರ ಶ್ರಾವಣಶುದ್ಧ ಪಂಚಮಿ 30 ಜುಲೈ 1196.

ಗ್ರಂಥ ಋಣ: ವಚನ ಸಂಗಮ : ಗುರು ಬಸವಣ್ಣನವರ ವಚನಗಳ ಸಂಗ್ರಹ, ಸಂಪಾದಕರು: ಪೂಜ್ಯ ಶ್ರೀ ಮಾತೆ ಮಹಾದೇವಿ, ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
*
Previous ಗುರು ಬಸವಣ್ಣನವರ ವಚನಗಳು ಬಸವಣ್ಣನವರ ವಚನಗಳಲ್ಲಿ ವಿಜ್ಞಾನ Next