ಬಸವಣ್ಣನವರ ಬಗ್ಗೆ ಮಹನೀಯರ ನುಡಿ :👈 👉:ಬಸವಣ್ಣ ಕುರಿತು ಅಕ್ಕಮಹಾದೇವಿ

ಗುರು ಬಸವಣ್ಣನವರ ಕುರಿತು ಸರ್ವಜ್ಞನವರ ವಚನಗಳು

ಲಿಂಗಾಯತ ಧರ್ಮ ಸಂಸ್ಥಾಪಕ ವಿಶ್ವಗುರು ಬಸವಣ್ಣನವರ ಕುರಿತು ಸರ್ವಜ್ಞನವರ ವಚನಗಳು

ಬಸವ ಪೀಠವು ಎದ್ದು ಒಸೆದು ನಾಣ್ಯವ ಹುಟ್ಟಿ
ಬಸವನ ಮುದ್ರೆ ಮೆರೆದಾವು | ಧರೆಯೊಳಗೆ
ವಶವಾಗದಿಹುದೆ ಸರ್ವಜ್ಞ ||

ಬಸವ ಗುರುವಿನ ಹೆಸರು ಬಲ್ಲವರಾರಿಲ್ಲ
ಹುಸಿಮಾತನಾಡಿ ಕೆಡದಿರಿ | ಲಿಂಗಾಯತಕೆ
ಬಸವಣ್ಣನೆ ಕರ್ತೃ ಸರ್ವಜ್ಞ ||

ಬಸವನೆಂದಡೆ ಪಾಪ ದೆಶೆಗೆಟ್ಟು ಹೋಗುವುದು
ಬಸವನ ಪಾದವ ನಂಬಿದ | ಭಕ್ತರು
ಹಸನಾದರಯ್ಯ ಸರ್ವಜ್ಞ ||

ನಂಬಿ ಹೇಳುವೆ ಬಸವ ನಿಂಬಿಸಿ ಮಹಿಮೆಯ
ಶಂಭುವಿನ ಕರುಣ ನಿನಗುಂಟ | ನಾನಿಮ್ಮ
ನಂಬಿ ಹೇಳಿದೆನು ಸರ್ವಜ್ಞ ||

ಕಂತುಹರ ಬಸವಣ್ಣ ಚಿಂತಾಯಕ ಬಸವಣ್ಣ
ಮಂತ್ರಸಿದ್ದನು ಬಸವಣ್ಣ | ನ ಪಾದಕ್ಕ
ಶರಣೆನ್ನಿರೆಲ್ಲ ಸರ್ವಜ್ಞ ||

ಬಸವನೆ ಜಗದಾದಿ ಬಸವನೆ ಜಗದೀಶ
ಬಸವನೇ ಜಗದ ಗುರುಪ್ರಣವ | ವೆಂದರಿದು
ಬಸವನನು ಜಪಿಸು ಸರ್ವಜ್ಞ ||

ಏನಯ್ಯ ಗುರುರಾಯ ನಾ ನಿನ್ನ ನಂಬಿದೇನು
ನೀನು ದಯತೋರು ಜಗದೀಶ | ಬಸವನಿಗೆ
ನಾನು ಶರಣೆಂದೇ ಸರ್ವಜ್ಞ ||

ಪರಿವಿಡಿ (index)
ಬಸವಣ್ಣನವರ ಬಗ್ಗೆ ಮಹನೀಯರ ನುಡಿ :👈 👉:ಬಸವಣ್ಣ ಕುರಿತು ಅಕ್ಕಮಹಾದೇವಿ