Previous ಹಂಪಿ ಉಳವಿ Next

ಶರಣರ ಕ್ಷೇತ್ರಗಳು


ಅಬ್ಬಲೂರು ಅಲ್ಲಮ ಗಿರಿ (ಅಲ್ಲಮಪ್ರಭು ಡೋಂಗರ್‌) ಅಳತೆ ಇಂಗಳೇಶ್ವರ
ಇಳಿಹಾಳ ಉಡುಗಣಿ ಉಳವಿ
ಎಡೆಯೂರು ಎಣ್ಣೆ ಹೊಳೆ ಕಿತ್ತೂರು ಸಂಸ್ಥಾನ
ಕುರುಗೋಡ ಕೂಡಲ ಸಂಗಮ ಗುಡ್ಡಾಪುರ
ಗುಮ್ಮಳಾಪುರ ಗೊಡಚಿ ತೊರಗಲ್ಲು
ದೇವನೂರು ನಾಗನೂರು ಬಿಜನಳ್ಳಿ
ಬನವಾಸಿ ಬಳ್ಳಿಗಾವೆ ಬಸವಕಲ್ಯಾಣ
ಬಸವನ ಬಾಗೆವಾಡಿ ಬೈಲಹೊಂಗಲ ಮಲೆ ಮಹಾದೇಶ್ವರ ಬೆಟ್ಟ
ಮುರುಗೋಡ ಶರಣ ಕ್ಷೇತ್ರಗಳ - ಆಕರಗಳು ಶರಣ ಕ್ಷೇತ್ರಗಳು Lingayat Piligram Centers
ಶರಣಕ್ಷೇತ್ರಗಳ ಶ್ರೀಮಂತ ಪರಂಪರೆ ಶರಣಸಂಸ್ಕೃತಿ : ಕೆಲ ಕುರುಹುಗಳು ಶ್ರೀ ಶೈಲ
ಸಿದ್ಧಗಂಗಾ ಸುತ್ತೂರು ಸೊಲ್ಲಾಪುರ
ಹಂಪಿ ಹಗರಟಗೆ

ಶರಣರ ಕ್ಷೇತ್ರಗಳು

ಶರಣ ಸ್ಮಾರಕಗಳನ್ನು ವಚನಪಿತಾಮಹ ಫ.ಗು. ಹಳಕಟ್ಟಿ ತಮ್ಮ 'ಶಿವಶರಣ ಚರಿತೆ ಭಾಗ-೨' ರಲ್ಲಿ ಸೂಚಿಸಿರುವರು. ಅಂದು ಅವರು ಸೂಚಿಸಿದ ಜಿಲ್ಲೆ ತಾಲ್ಲೂಕುಗಳು ಇಂದು ವಿಭಜನೆಗೊಂಡುದರಿಂದ ಶರಣರ ಕ್ಷೇತ್ರಗಳನ್ನು ಗುರುತಿಸುವುದು ತೊಂದರೆಯಾಗಿದೆ. ಇಲ್ಲಿಯ ಮಹತ್ವಪೂರ್ಣ ಶರಣಕ್ಷೇತ್ರಗಳನ್ನು ಅದಕ್ಕೆ ಸಂಬಂಧಿಸಿದ ಶರಣರನ್ನು ಹೆಸರಿಸುವ ನಿರೀಕ್ಷೆಯಲ್ಲಿ ಇಷ್ಟು ಶರಣಸ್ಥಾನಗಳನ್ನು ಗುರುತಿಸಬಹುದು.

ಸೊಲ್ಲಾಪುರದ ಅಮುಗಿದೇವ, ಹಾವಿನಹಾಳ ಕಲ್ಲಯ್ಯ, ಗುಡ್ಡಾಪುರದ ವರದಾನಿ ಗುಡ್ಡಮ್ಮೆ, ಹೀರೂರಿನ ತಿಲಕ, ಗೋಲ ಗಿರಿಯ ಗೊಲ್ಲಾಳ, ಕರಜಿಗೆಯ ಗಜೇಶ ಮಸಣಯ್ಯ, ಶಿವಣಿಗೆಯ ನುಲಿಯ ಚಂದಯ್ಯ, ಕೋಹಳ್ಳಿಯ ಕೋವೂರು ಬ್ರಹ್ಮಯ್ಯ, ಮಸಳಿಯ ಅಜಗಣ್ಣ, ಮುಕ್ತಾಯಕ್ಕಗಳು, ತಾಳಿಕೋಟೆಯ ಶಿವದೇವ, ಇಲಾಳದ (ಇಳಿಹಾಳ) ಬೊಮ್ಮಯ್ಯ, ಮಸೂತಿಯ ಮುಸಡಿ ಚೌಡಯ್ಯ, ಪಟ್ಟದಕಲ್ಲಿನ ಅನುಮಿಷದೇವ.

ಬಾಹೂರಿನ ಬಾಸೂರು ಬ್ರಹ್ಮಯ್ಯ, ಚಿಮ್ಮಲಗಿರಿಯ ಚಂದಿಮರಸ, ನಿಜಗುಣ, ಅಲ್ಲಮಪ್ರಭು, ಎಡೆಮಠದ ನಾಗಿದೇವ, ಮಸಣಮ್ಮ, ಹಡಪದ ಲಿಂಗಮ್ಮ, ಅಮುಗಿ ರಾಯಮ್ಮ, ಮಹಾದೇವಿಯಕ್ಕ, ಕೊಟ್ಟಣದ ಸೋಮವ್ವ, ಸತ್ಯಕ್ಕ ಗೊಗ್ಗವ್ವ, ನೀಲಲೋಚನೆ, ಅಕ್ಕಮಹಾದೇವಿ, ಮುಕ್ತಾಯಿ, ಮೋಳಿಗೆಯ ಮಹಾದೇವಿಯಮ್ಮ, ಗಂಗಾಂಬಿಕೆ, ಗಜೇಶ ಮಸಣಯ್ಯಗಳ ಪುಣ್ಯ, ಸೂಳೆ ಸಂಕವ್ವ, ರೇಕಮ್ಮ, ರೇಚವ್ವ, ಅಕ್ಕಮ್ಮ, ಅಕ್ಕನಾಗಮ್ಮ, ರಾಯಮ್ಮ, ನಂಬೆಕ್ಕ, ಐಹೊಳೆಯ ಮಲ್ಲರಸ, ನಿಂಬಾಳದ ಗಣೇಶ್ವರ, ಇಂಡಿಯ ಶಾಂತಯ್ಯ, ಪಟ್ಟದಕಲ್ಲಿನ ಗೋರಕ್ಷ, ಮಸಳಿಯ ಕದಿರ ರೆಮ್ಮವ್ವ, ಕೊಂಡಗುಳಿ ಕೇಶಿರಾಜ, ಕೋಳೂರು ಕೊಡಗೂಸು (?) ಅಗ್ನಿಯ ಅಗ್ನವಣಿ ಹೊನ್ನಯ್ಯ, ಓಲೆಯ ಶಾಂತಯ್ಯ, ಗೊಟ್ಟೂರಿನ ಬಿಬ್ಬ ಬಾಚಯ್ಯ, ಸಗರದ ಬ್ರಹ್ಮಯ್ಯ, ಕೆಂಭಾವಿ ಭೋಗಣ್ಣ, ಅಮರೇಶ್ವರದ ಆಯ್ದಕ್ಕಿ ಮಾರಯ್ಯ, ಲಕ್ಕಮ್ಮ, ಮುದನೂರಿನ ಜೇಡರ ದಾಸಿಮಯ್ಯ, ಏಲೇರಿಯ ಏಲೇಶ ಕೇತಯ್ಯ, ಬೀದರಿನ ವೀರಸಂಗಯ್ಯ, ಕಂದ ಹಾರದ ಉರಿಲಿಂಗದೇವ, ಉರಿಲಿಂಗಪೆದ್ದಿ, ಕಾಳವ್ವ, ಕೋಲಂಬೆಯ ಕೋಲಾಂಬೆ, ಭಾಲ್ಕಿಯ ಕುಂಬಾರ ಗುಂಡಯ್ಯ, ಪರಳಿಯ ವೈಜಕವ್ವ, ಹಿರೇಜಂಬೂರಿನ ಮಹಾಕಾಳಯ್ಯ ಸತ್ಯಕ್ಕ ಬಿಜ್ಜಾವರದ ಅಮ್ಮವ್ವ, ಭೀಮಾವತಿಯ ಮೈದುನ ರಾಮಯ್ಯ, ಕದಿರೆಯ ಕದಿರೆ ರೆಮ್ಮವ್ವ, ಅಣ್ಣಲದೇವಿ, ಬೆಜವಾಡದ ಶ್ರೀಪತಿ ಪಂಡಿತ, ವೇಮನಾರಾಧ್ಯ, ತಂಗಳೂರಿನ ಮಾರಯ್ಯ, ಕೋಟಗಿರಿಯ ಬಹುರೂಪಿ ಚೌಡಯ್ಯ, ಲಿಂಗಂಪಲ್ಲಿಯ ತೆಲುಗೇಶ ಮಸಣಯ್ಯ, ಕಲ್ಲು ಕುರಿಕೆಯ ಸಕಳೇಶ ಮಾದರಸ, ಕಂಚಿಯ ಮಾದಾರ ಚೆನ್ನಯ್ಯ, ಪಿಟ್ಟವ್ವ, ತಿರುವಾಂಕೂರಿನ ಮೆರೆಮಿಂಡದೇವ, ಪೋರಾಂಡಲದ ಸೂರಂಬೆ, ಚಂದವೂರಿನ ಶಿವಪ್ರಿಯನಾಚಿ, ಬಳ್ಳಾರಿಯ ಬಳ್ಳೇಶ ಮಲ್ಲಯ್ಯ, ಅವಲೂರಿನ ಗೊಗ್ಗವ್ವ, ಕೊಳು ಕೊಟ್ಟೆಯ ಭದ್ರಗಾಯಕ, ಕುಡುಗಲೂರಿನ ಚಾರಮರಾಯ, ರಾಯಮ್ಮ ಕರ್ಣಿಕಾಪುರದ ಸುಜ್ಞಾನಿದೇವ, ನನ್ನಯ್ಯ, ಕಾಶಿಯ ಶಿವಲೆಂಕ ಮಂಚಣ್ಣ, ಶಿವಪುರದ ಆದಯ್ಯ, ಸೊಡ್ಡಳ ಬಾಚರಸ, ಲಕ್ಷ್ಮೀಶ್ವರದ ಆದಯ್ಯ, ಪುಲಿಗೆರೆಯ ಸೋಮಯ್ಯ, ಅಬ್ಬಲೂರಿನ ಏಕಾಂತ ರಾಮಯ್ಯ, ಮಾಂಡವ್ಯಪುರದ ಬೊಂತಾದೇವಿ, ಹಡಪದ ಲಿಂಗಮ್ಮ, ಅಪ್ಪಣ್ಣ, ನಿಜಲಿಂಗ ಚಿಕ್ಕಯ್ಯ, ದೇವರಗುಡಿಯ ಚಿಕ್ಕಯ್ಯ, ರೇವಣಸಿದ್ದೇಶ್ವರ, ರುದ್ರಮುನಿ, ಬಸವೇಶ್ವರ, ಸಿದ್ದರಾಮ, ಮಡಿವಾಳ ಮಾಚಿದೇವ, ಸಪ್ಪೆಯಲ್ಲಮ ದೇವ, ಅಣ್ಣಲದೇವಿ, ಶಂಕಿತೊಂಡಿ, ಗುಪ್ತ ಮಂಚಣ್ಣ, ಬಾಲ್ಕಿಯ ಲದ್ದೆ ಗ್ರಾಮದ ಲದ್ದೆಯ ಸೋಮ, ತಿಪಟೂರಿನ ಗುಬ್ಬಿ ಪ್ರದೇಶದ ನೊಣಬೇಶ, ಇಂಚಲದ ಬಂಕನಾಥ, ಚೌಡದಾನಪುರದ ಶಿವದೇವ, ಕುರುಗೋಡ ರಾಚಮಲ್ಲ, ಕೊರದಾರ ಗ್ರಾಮದ ನಿರ್ಲಜ್ಜ ಶಾಂತಯ್ಯ, ಎಡೆಯೂರ ತೋಂಟದ ಸಿದ್ದಲಿಂಗ, ಜೇವರ್ಗಿಯ ಷಣ್ಮುಖ ಶಿವಯೋಗಿ, ಕಲ್ಯಾಣರಾಗದ ಸಂಗಣ್ಣ, ಪೂಡೂರಿನ ಕಿನ್ನರಿ ಬ್ರಹ್ಮಯ್ಯ ಮುಂತಾದವರ ಶರಣ ಕ್ಷೇತ್ರಗಳು ನಮ್ಮ ಕಣ್ಮುಂದಿವೆ.

ಶಾಸನ ಕಲ್ಯಾಣದ ಶರಣಕ್ಷೇತ್ರಗಳಲ್ಲಿ ಬಸವಪೂರ್ವಯುಗದ ಶರಣರ ಕ್ಷೇತ್ರಗಳು, ಬಸವಯುಗದ ಶರಣ ಕ್ಷೇತ್ರಗಳ ತರುವಾಯ ಬಸವೋತ್ತರ ಯುಗದ ಶರಣ ಕ್ಷೇತ್ರಗಳಲ್ಲಿ ಅಣಂಪೂರು, ತಾಳೀಕೋಟೆ, ಇಂಗಳಗಿ, ವಿಜಾಪುರದ ಶರಣೆ ಗುಡ್ಡಮ್ಮೆ, ಪರಿಯಳಿಗೆ ವೈಜಕವ್ವ, ಕೆಂಭಾವಿ ಭೋಗಣ್ಣ, ಗೊಟ್ಟೂರು ಚಿಕ್ಕಮುದೇನೂರು ಕಿರಿಯಿಂಡಿ ಗಿಜಗನಹಳ್ಳಿ ಬಿದರೆ ಅಬ್ಬಲೂರಿನ ಜೇಡರ ದಾಸಿಮಯ್ಯ, ದೇವೂರಿನ ಸುಗ್ಗಲದೇವಿ, ಕೊಂಡಗುಳಿ ಕೇಶಿರಾಜ, ಅಮರಗುಂಡದ ಮಲ್ಲಿಕಾರ್ಜುನ, ಬಯಿರಿತ್ತಿ, ಸಿರಿವಾಳ ಅವೈಯರಹಳ್ಳಿಯ ರೇವಣ ಸಿದ್ದ, ಚೌಡದಾನಪುರದ ಶಿವದೇವ, ಅರ್ಜುನವಾಡ, ಕವಿಳಾಸಪುರದ ಹಾಲಬಸವಿದೇವ, ಗುಡಿಹಾಳ ಕುಂಟೋಜಿ, ಆನಂದಪುರಮಠ, ನಾಗಲೋಟಿ, ಜೋಡಿದಾಸೇನಹಳ್ಳಿ, ಕಾನಕಾನಹಳ್ಳಿ ಬಸವಣ್ಣ, ಚಿಕ್ಕ ಹೆಚ್ಚಾಕೆಯ ಪ್ರಭುದೇವ, ಚೆನ್ನಬಸವಣ್ಣ, ಸಿದ್ಧರಾಮನ ಇಂಗಳಗಿ, ಗುಂಡಕರ್ಜಗಿ ಮರಡಿಪುರ, ಗುಬ್ಬಿ ಫಡಕೇನೂರು, ಬುಡರಸಿಂಗಿ, ಕಣನೂರು, ಇಂಡಿ ತಾಲ್ಲೂಕಿನ ಚೂರ್ಗಿ, ಕೂಡಗಿ, ಕಪ್ಪನಿಂಬರಗಿ, ಸೊರಬ ತಾಲ್ಲೂಕಿನ ಕೋಳಿಸಾಲೆ, ಧಾರವಾಡ ತಾಲ್ಲೂಕಿನ ಕೊಟಬಾಗಿ, ಸವಣೂರ ತಾಲ್ಲೂಕಿನ ಮಂತ್ರ ವಾಡಿ, ಹಾವೇರಿ ತಾಲ್ಲೂಕಿನ ಸಂಗೂರು, ತುಳಜಾಪುರ ತಾಲ್ಲೂಕಿನ ಇಟ್ಕಲ್, ನಿರೈಗಾವ, ಈಸೇಗಾವ, ಜಂಬಗಾವ ಹೀಗೆ ದೊರಕಿದ ಒಟ್ಟು ೨೨ ಶಾಸನಗಳು ಸಿದ್ಧರಾಮನ ಕ್ಷೇತ್ರದ ಪರಿಚಯ ಮಾಡಿಕೊಡು ತ್ತವೆ. ಮಡಿವಾಳ ಮಾಚಿದೇವನಿಗೆ ಸಂಬಂಧಿಸಿ ಕಲ್ಯಾಣ, ಅಮ್ಮಿನ ಭಾವಿ, ಕಾನಕಾನಹಳ್ಳಿ ಶಾಸನಗಳು, ನೆಲುವಿಗೆಯ ಶಾಂತಯ್ಯನನ್ನು ಕುರಿತ ಭೂಯಾರ, ಮರಡಿಪುರ, ಹುಳಿಯಮೇಶ್ವರ ಚಿಕ್ಕಯ್ಯನ ದೇವರಗುಡಿ ಕಲ್ಲೇದೇವರಪುರ, ಏಕಾಂತ ರಾಮಯ್ಯನ ಅಬ್ಬಲೂರು, ಭೋಗಾವಿ, ಕುಡುತಿನಿ ಮರಡಿಪುರ, ಬಂದಳಿಕೆ, ಕೆಂಪನಪುರದ ಶಾಸನಗಳು ಮುಖ್ಯವಾದವು.

ಬಸವೋತ್ತರ ಯುಗದಲ್ಲಿ ಕುರುಗೋಡ ರಾಚಮಲ್ಲ, ರಟ್ಟೆಹಳ್ಳಿ ಮೂರು ಜಾವಿದೇವ, ಗುಂಡಬ್ರಹ್ಮಯ್ಯ, ಗೋವೆಯ ವಜ್ರರಾಯ, ಪುರಾಣದ ಮಾಯಿದೇವಪಂಡಿತ, ಶಿವರಾತ್ರಿ ಮಾಯಿದೇವ, ಗೋಪೆಯ ಶಿವದೇವ ಶಿವಶರಣ ಲಕ್ಕಣ್ಣದಂಡೇಶನ ರಾಯಗಿರಿ, ಆಚಣ್ಣಹಳ್ಳಿ ತೀರ್ಥಮಲೈ, ಮರಗಲ್ಲು, ಮುಳಬಾಗಿಲ, ವಿರೂಪಾಕ್ಷ ಪುರ, ಮಿಟ್ಟಹಳ್ಳಿ, ತೇಕಲ್ಲು, ಕಿರಗಸೂರು, ತಿರುವರೂ‌ ಬಾರಕೂರ, ಆಡುಶುರೈ ಸಿಕ್ಕೆಲ್, ಬಾರಕೂರು ವಾಗಟ, ಮಾದಾಪಟ್ಟಗಳು, ಗುಮ್ಮಳಾಪುರದ ಕೆಲವು ಶರಣರು, ಎಡೆಯೂರ ಸಿದ್ದಲಿಂಗೇಶ್ವರನ ಎಡೆಯೂರು, ಕಗ್ಗೆರೆ, ಚಿತ್ರದುರ್ಗ, ಶಾಸನಗಳು, ಬುಕ್ಕಸಾಗರದ ಕರಿಸಿದ್ದೇಶ್ವರ ಕ್ಷೇತ್ರ. ಹೀಗೆ ಶರಣಕ್ಷೇತ್ರಗಳು ಬಸವೋತ್ತರ ಕಾಲದಲ್ಲಿಯೇ ದೊರಕುತ್ತವೆ.

ಲಕ್ಕಣ್ಣದಂಡೇಶನ ಕಾಲದಲ್ಲಿ ಅನೇಕ ಮಹಿಳೆಯರು ಶಿವಭಕ್ತಿಯ ರಾಗಿದ್ದು ಹಕ್ಕಲಕಾಯದ ಗೌರಮ್ಮ, ಹರದೆ ಓಬಳಕ್ಕ, ನಾಗಾಯಮ್ಮ, ಜ್ಯೋತಿಯಮ್ಮ, ಮತ್ತಿಲ ಕಾಯಕದ ಎರಮ್ಮ, ಗಂದಿಗರ ಕಾಯಕದ ಲಕ್ಕಮ್ಮ, ದೇವಾಯಮ್ಮ, ಮೇಳಾದೇವಿ ಬಸವಾತಾಯಿ, ಜಾನಾಯಿದೇವಿ, ಹಾಲಮ್ಮ, ಅವಾರಿ ದಾಸೋಹಿ ಹರಿಯಪ್ಪರಾಣೆ ಯರು, ಅಮರಾಯಿ ಮದಾಯಿಗಳಲ್ಲದೆ ಗುಬ್ಬಿ ಮಲ್ಲಣಾರ್ಯ ಕಾಲದ ಕುಲದೀಪಕರಾದ ಸಪ್ಪೆಯಮ್ಮ, ಮಳಲವಾಡಿಯ ಭೀಮಯ್ಯನ ಪತ್ನಿ ಭೀಮಕ್ಕ, ಕಳಲೆಯ ಬೋಳಮ್ಮ, ಹೆಗ್ಗವೆಯ ದೇವಾಂಗಮ್ಮ, ಕಾಣಕರಹಳ್ಳಿಯ ಶೀಲವಂತೆ, ಅಣವ ಗೆರೆಯ ನಾಗಮ್ಮ, ತೆರಕಣಬ್ಬೆಯ ನಂಜಮ್ಮ, ಗುರುಹಳ್ಳಿಯ ಮರುಳಮ್ಮ, ಕಬ್ಬುಕಲ್ಲು ಸಿದ್ದಮ್ಮ, ಬಿಜ್ಜಮಹದೇವಿ ನಾವದಗಿಯ ಗುಡ್ಡಮ್ಮ, ಶಿವಭಕ್ಕೆ ಗೌರಮ್ಮ, ಮೊರಬದ ನೀಲಮ್ಮ, ಬೇಲೂರ ಮಹಾದೇವಿ, ಪೆರುಮಾಧಿಯ ದೇಮಾಯಿ, ಕೋರುಮಾರುಂಗಲ್ಲ ಕೇಸೂರಿನ ಮಾಯಿತಾಯಿ, ಮಚ್ಚೆಯ ಬೋಳಮ್ಮ ಮುಂತಾದವರ ಶರಣಕ್ಷೇತ್ರ ಗಳು ದೊರಕುತ್ತಿವೆ.

ಬಸವಪೂರ್ವಯುಗ, ಬಸವಯುಗ, ಶಾಸನಯುಗ, ಬಸವೋತ್ತರ ಯುಗ ಕಾಲಕಾಲಕ್ಕೆ ದೊರೆವ ಶರಣಕ್ಷೇತ್ರಗಳು ಕನ್ನಡನಾಡಿನ ಧಾರ್ಮಿಕ ಸಂಪ್ರದಾಯದಲ್ಲಿ ಹೊಸ ಅಧ್ಯಾಯವನ್ನೇ ಪ್ರಾರಂಭಿಸಿವೆ.

Previous ಹಂಪಿ ಉಳವಿ Next