Previous ಎಡೆಯೂರು ತೊರಗಲ್ಲು Next

ಹಗರಟಗೆ

ಹಗರಟಗೆ ಕ್ಷೇತ್ರ

ತಾಳೀಕೋಟೆ ಸಮೀಪದ ಹಗರಟಗೆ ಅನ್ನು ಆಳುತ್ತಿದ್ದವರು ಭೂಸಕುಲದ ಶಿವಭಕ್ತ ಅರಸರು. ಈ ಮನೆತನದ ವಿರುಪರಾಜನ ಕಾಲದಲ್ಲಿ ಹುಟ್ಟಿದ ತಾಳೀಕೋಟೆ ಶಾಸನ (ಕ್ರಿ.ಶ. ೧೧೮೪) ಶರಣರ ಸಂಕ್ರಮಣಕಾಲದ ಪರಿಸರಕ್ಕೆ ಸ್ಪಂದಿಸಿದೆ.

ಪರಿಯಳಿಗೆ ಅಣಿಲೆವಾಡ, ಮೊದಲಾದ ಹತ್ತು ಗ್ರಾಮಗಳಲ್ಲಿ ಪರಸಮಯವನ್ನು ಧ್ವಂಸಗೊಳಿಸಿ ಶಿವಸಮಯವನ್ನು ಸಮುಜ್ವಲಗೊಳಿಸಿದ ವೀರಶರಣರನ್ನು ಉಲ್ಲೇಖಿಸುವ ಶಾಸನ ಈ ಬೈಸಕುಲದ ಲಿಂಗಾಯತ ಅಧಿಕಾರಿವರ್ಗದಲ್ಲಿ 'ಆದಿಗಣಾವತಾರ' ನೆನಿಸಿದ ಹೊನ್ನಬೊಮ್ಮಿ ಸೆಟ್ಟಿ ಗಮನಾರ್ಹ ವ್ಯಕ್ತಿ. ಆತನ ಶರಣ ವ್ಯಕ್ತಿತ್ವದ ಬಗೆಗೆ ರಟ್ಟಿಹಳ್ಳಿ ಶಾಸನ

ಜಂಗಮಯ್ಯ ಜಂಗಮದ ನಚ್ಚಿಕೆ ಜಂಗಮದಚ್ಚು ಮತ್ತವಾಂ
ಜಂಗಮದಾಟ ಜಂಗಮದ ನೋಟಮೆ ಜಂಗಮದ ಕೂಟವಾಗಳುಂ
ಜಂಗಮದಾಸೆ ಜಂಗಮದ ಭಾಷೆಯೊಳುದ್ಭವಿಕಾಸ ರಾಜಸಿ
ಪ್ಪಂಗಡನೆಂದು ಬಣ್ಣಿಪುದು ಭೂವಳೆವೆನ್ನದೆ ಹೊಂನಿಬೊಂಮನಂ ||

ಎಂದು ವರ್ಣಿಸಿದೆ. ಚಿಕ್ಕೋಡಿ, ತಾಳಿಕೋಟೆ, ಜಮಖಂಡಿ, ಮುಧೋಳಗಳಲ್ಲಿ ಕೆಲಕಾಲ ವಸತಿ ಮಾಡಿದ ಶರಣರು ನೇರವಾಗಿ ತೊರಗಲ್ಲಿನ ಕಡೆಗೆ ಆಗಮಿಸಿರುವರು.

ಪರಿವಿಡಿ (index)
Previous ಎಡೆಯೂರು ತೊರಗಲ್ಲು Next