ತೊರಗಲ್ಲು ಕ್ಷೇತ್ರ
ಅಂದು ತೊರಗಲ್ಲಿನ ಮಹಾಮಂಡಳೇಶ್ವರರು ಅಪ್ಪಟ ಶಿವಭಕ್ತರು. ದೊರೆ ಬರ್ಮರಸ ಆತನ ಮಡದಿ ಸುಗ್ಗಲದೇವಿ ಪರಮ ಶಿವೋಪಾಸಕರು. ಅವರ ಉತ್ಕಟ ಭಕ್ತಿ ತೊರಗಲ್ಲಿನ ಸುಗ್ಗಲೇಶ್ವರ ದೇವಸ್ಥಾನ ಮತ್ತು ಭೂತೇಶ್ವರ ದೇವಸ್ಥಾನ. ಸುಗ್ಗಲದೇವಿ 'ಘಟಸರ್ಪ ಪವಾಡ' ದಲ್ಲಿ ಯಶಸ್ವಿಯಾದ ಧೀರ ಶರಣೆ.
ತೊರಗಲೆನಾಡಿನ ಅಧಿಕಾರಿ ಕಲ್ಲರಸನ ರಾಣಿ ವೀರಕನ್ನದೇವಿ ಲೊಕ್ಕಿಯ ಚೀಲಾಳದೇವನ ಪರಮಶಿಷ್ಯ. ಪತಿಯ ಮರಣಾನಂತರ ಉಜ್ವಲವೈರಾಗ್ಯ ಈಕೆಯ ಗುರು ರೇವಣಸಿದ್ಧರ ಆಜ್ಞೆಯಂತೆ ಮುಕ್ತಿಕ್ಷೇತ್ರ ಚೌಡದಾನಪುರಕ್ಕೆ ಆಗಮಿಸಿ ವೀರಶಿವದೇವರ ಸಾನ್ನಿಧ್ಯದಲ್ಲಿ 'ಲಿಂಗಜಂಗಮಾರ್ಚನತತ್ಪರೆ'ಯಾಗಿದ್ದನ್ನು ತಿಳಿಸಿದೆ. ಮುಧೋಳದಿಂದ ಬಂದ ಶರಣ ಬಳಗ ತೊರಗಲ್ಲಿನ ಮಲಪ್ರಭೆಯ ದಡದ ಮೇಲಿಳಿದು ಪೂಜೆ ಪ್ರಸಾದ ಕೈಕೊಂಡ ಸ್ಥಳಗಳಲ್ಲಿ ಇಂದಿಗೂ ಎರಡು ಮಂಟಪಗಳು ನಿಂತಿವೆ. ಇಂಥ ಶರಣಸಂಪ್ರದಾಯದ ಮನೆತನ ಶರಣರಗೆ ಆಶ್ರಯವಿತ್ತು ಕಳುಹಿಸಿರಬೇಕೆನಿಸುತ್ತದೆ.
ತೊರಗಲ್ಲಿನಿಂದ ಶರಣಸಮೂಹ ಗೊಡಚಿಯತ್ತ ಆಗಮಿಸಿದೆ.