Previous ಬಸವಣ್ಣನವರಿಂದ ಲಿಂಗಾಯತ ಧರ್ಮದ ಸ್ಥಾಪನೆ ವಿಶ್ವಗುರು ಬಸವಣ್ಣನವರ ಸಂಕ್ಷಿಪ್ತ ಪರಿಚಯ Next

ಗುರು ಬಸವಣ್ಣನವರ ಬಗ್ಗೆ ಮಹನೀಯರ ನುಡಿಗಳು

*

ಗುರು ಬಸವಣ್ಣನವರ ಬಗ್ಗೆ ಮಹನೀಯರ ನುಡಿಗಳು

ನಾನು ಇಡಿ ಜಗತ್ತಿನಲ್ಲಿ ಅನೇಕ ದಾರ್ಶನಿಕರನ್ನು ಕುರಿತು ಅಭ್ಯಾಸ ಮಾಡಿದ್ದೇನೆ. ಅವರ ಲೋಕೋತ್ತರ ಅಲೋಚನೆಗಳನ್ನು ಅರ್ಥ ಮಾಡಿಕೊಂಡಿದ್ದೇನೆ ಆದರ ಅವರ್ಯಾರೊಬ್ಬರು ಕರ್ನಾಟಕದ ಶರಣರಂತೆ ಅದನ್ನು ಜಾರಿಗೆ ತರಲು ಪ್ರಯತ್ನಿಸಿರುವುದು ವಿರಳ. 800 ವರ್ಷಗಳ ಹಿಂದೆ ಅಂತಹದೊಂದು ತಂಡ ಬಸವಣ್ಣವರ ನೇತೃತ್ವದಲ್ಲಿ ಇಲ್ಲಿ ಕೆಲಸ ಮಾಡಿದೆ. ಈ ದೃಷ್ಠಿಯಲ್ಲಿ ಕರ್ನಾಟಕದಲ್ಲಿರುವ ಲಿಂಗಾಯತ ಸಮುದಾಯವನ್ನು ನಾನು ಒಂದು ಸುದೈವಿ ಸಮುದಾಯವೆಂದು ಕರೆಯುತ್ತೇನೆ. -ಸಿ.ಪಿ ಬೌನ್ (1840ರಲ್ಲಿ ಬ್ರಿಟೀಷ್ ಸರ್ಕಾರದಲ್ಲಿ ನ್ಯಾಯಾಧೀಶರು)
“ಅವರು ಆಹಾರ ಮತ್ತು ಪಾನೀಯಗಳಲ್ಲಿ ಕಟ್ಟುನಿಟ್ಟಾದ ಶಿಸ್ತು ಪಾಲಿಸುವವರು ಮತ್ತು ನಿಜವಾದ ಯಾರೇ ಲಿಂಗಾಯತನಿಗೆ ಯಾವುದೇ ಕಾರಣಕ್ಕೆ, ಯಾವುದೇ ರೂಪದಲ್ಲಿ ಮಾಂಸವನ್ನು ಮುಟ್ಟಲು ಅಥವಾ ಯಾವುದೇ ಬಗೆಯ ಮದ್ಯಪಾನ ಸೇವಿಸಲು ಅವಕಾಶವಿರುವುದಿಲ್ಲ. ಈ ಶುದ್ಧ ಸರಳತೆ ಅವರನ್ನು ಸಾಮಾಜಿಕ ಸ್ತರದಲ್ಲಿ ಮೇಲ್ಮಟ್ಟಕ್ಕೆ ಒಯ್ದಿದ್ದು, ಅದರಿಂದಾಗಿ ಅವರು ದೃಢವಾದ ಒಂದು ನ್ಯಾಯಬದ್ಧ ಸಮಾಜವಾಗಿ ರೂಪುಗೊಂಡಿದ್ದಾರೆ. ಅವರು ತಮ್ಮ ಹಿರಿಯ ತಲೆಮಾರಿನ ಪದ್ದತಿಗಳ ಸಂಪ್ರದಾಯಸ್ಥರು ಮತ್ತು ಇದುವರೆಗೆ ಹೆಚ್ಚುತ್ತಿರುವ ವಿದೇಶಿ ವಿಚಾರಗಳನ್ನು ವಿರೋಧಿಸುತ್ತ ಬಂದಿರುವ ಒಡಕಿಲ್ಲದ ಒಂದು ಸಂಘಟನೆಯಾಗಿದೆ. ಅವರು ಸುಂದರವಾದ ಅತ್ಯಂತ ನಯವಾದ ಮತ್ತು ಶಕ್ತಿಯುತವಾದ ಕನ್ನಡವನ್ನು ಉಳಿಸಿಕೊಳ್ಳುವಲ್ಲಿ ನೆರವಾಗಿದ್ದಾರೆ ಎಂಬಲ್ಲಿ ಯಾವುದೇ ಸಂಶಯವಿಲ್ಲ”. -ಎಡ್ಗರ್ ಥರ್ಸ್‌ಟನ್ ಭಾರತದ ಜನಾಂಗ ಸರ್ವೇಕ್ಷಣದ (ಎತ್ನೋಗ್ರಾಫಿಕ್ ಸರ್ವೇ ಆಫ್ ಇಂಡಿಯಾ) ಮೇಲ್ವಿಚಾರಕರಾಗಿದ್ದ ಅವರು ತಮ್ಮ ಕ್ಯಾಸ್ಟ್ಸ್ ಅಂಡ್ ಟ್ರೈಬ್ಸ್ ಆಫ್ ಸೌದರನ್ ಇಂಡಿಯಾ" (ದಕ್ಷಿಣ ಭಾರತದ ಜಾತಿಗಳು ಮತ್ತು ಬುಡಕಟ್ಟುಗಳು, 1909, ಸಂಪುಟ-4, ಪು 115) ಪುಸ್ತಕದಲ್ಲಿ.
ವಚನ ಸಾಹಿತ್ಯ ಎರವಲು ತಂದದ್ದಲ್ಲ; ಅದು ಕನ್ನಡದ ಸ್ವಾರ್ಜಿತಸ್ವತ್ತು. ವಚನಕಾರರು ಸಂಸ್ಕೃತದ ಆಚಾರರಲ್ಲ; ಅವರು ಅಚ್ಛಕನ್ನಡದ ಬೇಸಾಯಗಾರರು. ಎಂ.ಆರ್.ಶ್ರೀನಿವಾಸಮೂರ್ತಿ (ವಚನಧರ್ಮದ ಉದಯ)
ಉಪನಿಷತ್ತಿನಲ್ಲಿ ಇರುವುದೆಲ್ಲವೂ ವಚನ ಸಾಹಿತ್ಯದಲ್ಲಿದೆ. ಆದರೆ ವಚನ ಸಾಹಿತ್ಯದಲ್ಲಿ ಇರುವುದೆಲ್ಲವೂ ಉಪನಿಷತ್ತಿನಲ್ಲಿ ಇಲ್ಲ. ರಂಗನಾಥ ದಿವಾಕರ 1936ರಲ್ಲಿ ಬರೆದ “ವಚನಶಾಸ್ತ್ರ ರಹಸ್ಯ”
ಭಾರತದ ಇಂದಿನ ಸಮಾಜ ಸುಧಾರಕರು ಬಸವೇಶ್ವರರ ತತ್ವಗಳನ್ನೇ ಉಪದೇಶಿಸುತ್ತಲೂ ಅವರ ವಿಚಾರಗಳನ್ನೇ ಆಚಾರದಲ್ಲಿ ತರಲು ಹವಣಿಸುತ್ತಲೂ ಇದ್ದಾರೆ. - ಸರ್ ಜೇಮ್ಸ್, ಕ್ಯಾಂಪ್‌ಬೆಲ್
ಲಿಂಗಾಯತರು 12ನೇ ಶತಮಾನದ ಶರಣ ಚಳುವಳಿಯ ಮೂಲ ಪುರುಷರಾದ ಹೆಸರಾಂತ ಬಸವೇಶ್ವರ ವಚನಗಳನ್ನಾಧರಿಸಿ ಸಂಸ್ಕೃತದಲ್ಲಿರುವ ಹಿಂದೂ ಕೃತಿಗಳನ್ನು ತಿರಸ್ಕರಿಸುವರು, ಪಂಚಸೂತಕಗಳನ್ನು ಆಚರಿಸುವದಿಲ್ಲ, ಗುರು ಬಸವಣ್ಣನವರೇ ಹೇಳುವಂತೆ ಲಿಂಗಾಯತರು ಶುದ್ಧ ಶಾಖಾಹಾರಿಗಳಾಗಿರುವರು, ಜಾತಿ ಪದ್ಧತಿಗಳನ್ನು ತಿರಸ್ಕರಿಸುವವರು ಆಗಿದ್ದಾರೆ. - ಆರ್. ಬೈಕ್ ಮಾಯಿಕೇಲ್ (ರಿಲಿಜನ್ ಆಫ್ ವೀರಶೈವ ಗ್ರಂಥದಿಂದ)
ಸಮಾಜ ಸುಧಾರಣೆಯ ಕಳಕಳಿಯುಳ್ಳವರಾದ ಕಾಳಾಮುಖರು ಬಸವಣ್ಣನವರ ಪೂರ್ವದಲ್ಲಿ ಸಂಘಟಿತರಾಗಿದ್ದರು. ಬಸವಣ್ಣನವರ ಹೊಸ ಸಮಾಜ ಸುಧಾರಣೆಯಲ್ಲಿ ಇವರು ಸಹಕರಿಸಿದರು. ಇವರ ಎಲ್ಲ ಮಠಗಳು ಲಿಂಗಾಯತ (ವೀರಶೈವ) ಮಠಗಳಾಗಿ ಪರಿವರ್ತಿತವಾದದ್ದು ಸ್ಪಷ್ಟವಾಗಿ ತಿಳಿದು ಬರುತ್ತದೆ. - ಡೇವಿಡ್ ಎನ್. ಲೊರೆಂಜಿನ್ (ದಿ ಕಾಪಾಲಿಕಾಸ ಮತ್ತು ಕಾಳಾಮುಖಾಸ ಗ್ರಂಥದಿಂದ)
ಬಸವಣ್ಣನವರು 12ನೇ ಶತಮಾನದಲ್ಲಿ ಲಿಂಗಾಯತ ಧರ್ಮ ಸಂಸ್ಥಾಪಿಸಿದರು. ಈ ಕಾರ್ಯದಲ್ಲಿ ಅನೇಕ ಶರಣರು ಅವರೊಂದಿಗೆ ಸಹಕರಿಸಿದರು. - ಜೆ. ಪಿ. ಸೌಟನ್‌ (ರೆವುಲುಷನ್‌ ಆಫ್‌ ದಿ ಡೈನಿಸ್ಟಿಕ್ಸ್‌ ಗ್ರಂಥದಿಂದ)
ಲಿಂಗಾಯತರು ದೇವನಲ್ಲಿ ನಿಷ್ಠಾಭಕ್ತಿಯುಳ್ಳವರು ಅವರು ತಮ್ಮ ದೇವರಾದ ಲಿಂಗವನ್ನು ಕೊರಳಲ್ಲಿ ಕಟ್ಟಿಕೊಳ್ಳುವರು ಮಾಂಸಾಹಾರಿಗಳಲ್ಲವೆಂದೂ ಹೇಳಿರುವರು -ಅಬ್ರಾಹಮ್‌ ರೊಗೇರಿ ಡಚ್‌ ಕ್ರೀಸ್ತ ಧರ್ಮೋಪದೇಶಕರು 1651 (The open door to the hidden paganism)
ಲಿಂಗಾಯತ ಧರ್ಮ ಬಸವಣ್ಣನವರು ಸೃಷ್ಠಿಸಿದ ಹೊಸ ಧರ್ಮದ ಮಹಾಮನೆಯಾಗಿದೆ ಕೂಡಲಸಂಗನ ಈ ಮಹಾಮನೆಯೊಳು ಧರ್ಮಸಂತಾನ ಭಂಡಾರಿ ಬಸವಣ್ಣನವರು ಮುಹೂರ್ತಗೊಂಡಿರುವರು. -ಓ. ಎಸ್‌. ಮಾರ‍್ದನ್‌ ಪಂಡಿತರು 1894-1924 Pushing to the Front
ಬಸವೇಶ್ವರರು ಜಾತಿ-ವರ್ಗ-ವರ್ಣ ಹಾಗೂ ಲಿಂಗಭೇದಗಳ ವಿರುದ್ಧ ಹೋರಾಡಿ, ಧರ್ಮದ ನಿಜ ಅರ್ಥ ಪ್ರತಿಪಾದಿಸಿ, ಸಾಮಾಜಿಕ ಕ್ರಾಂತಿಗೆ ಕಾರಣರಾದವರು. ಎಂಟನೂರು ವರ್ಷಗಳ ಹಿಂದೆ ಅವರು ಸಾರಿದ್ದ ಸಾಮಾಜಿಕ ನ್ಯಾಯ, ಸಮಾನತೆ-ಕಾಯಕದ ಮಹತ್ವ ಹಾಗೂ ಆಧ್ಯಾತ್ಮಿಕ ವಿಚಾರಧಾರೆ, ವಿಶ್ವ ಮಾನ್ಯ ಸಂದೇಶವಾಗಿದೆ. ಆದ್ದರಿಂದ, ಬಸವೇಶ್ವರರು ಜಗದ್ಗುರುವಿನ ಸ್ಥಾನ ಪಡೆದಿದ್ದಾರೆ. ಇಂತಹ ಬಸವತತ್ವ ಪಾಲಿಸಿದರೆ, ಸಮಾಜದಲ್ಲಿ ಶಾಂತಿ-ಸೌಹಾರ್ದತೆ-ಸಹಬಾಳ್ವೆ ಒಡಮೂಡುತ್ತದೆ. -ಅಟಲ್ ಬಿಹಾರಿ ವಾಜಪೇಯಿ ಮಾಜಿ ಪ್ರಧಾನ ಮಂತ್ರಿ

Quotes about Guru Basava

Whatever legend may say about Basava the fact is pretty clear that he was the first Indian free thinker. He might be called the Luther of India the acknowledge leadership of the priests was in full swing when Basava came upon the scene and there was a movement on foot to replace caste and priestly authority with intelligence and free thinking Basava a shaivaite Brahmin, was in the camp of liberals. -Arthor Miles (Land of Lingama, London 1933 P-iii)
He mounted the rostrum for the abolition of caste and ceremonies and preached that all men by birth equal that one sex was important as another. That child marriage was wrong and widows should be permitted to re marry he promised the Lingayat's the freedom of individual action. All wherever of divine Linga , where to occupy a common level. They were to eat together and intermarry. -Arthor Miles (Land of Lingama, London 1933 P-iii)

At the Belgaum session of the Indian National Congress in 1924, Mahatma Gandhi spoke about Basavanna.

“Rev. N. C. Sargent aptly says, “Basava’s aim was not to oppose or propose any religious or philosophical system; but to show people the existing social and religious evils and, if possible, to remove these evils from society”.[1] -Mahatma Gandhi

It has not been possible for me to practice all precepts of Basaveshwara which he taught 800 years ago and which he also practiced. Eradication of untouchability and dignity of labour were among his core precepts. One does not find even shades of casteism in him. Had he lived during our times, he would have been a saint worthy of worship”.
Among the galaxy of eminent savant-saints of India. Lord Basaveshwara can legitimately claim a pride of place by virtue of his distinguish services in the field of Kannada literature and humanitarian activity. His saintly philosophical through embodied in the illustrious ‘Basava Vachanas’ has enriched Kannada poetry. The 12th century celebrations of lord Basaveshwara will, therefore, be hailed on a nation wide scale. - Zakir Husain (former President of India)
Basavanna was a great saint and social reformer and we should try not merely to express our appreciation of his valuable teaching but to put them into practice in our daily life”.
- S. Radha Krishanan (former President of India)
Lord Basaveshwara is one of the great saints who heralded social change in mediaeval India. He stressed devotion and intellect. He expounded his profound ideas in the common speech, charged with power and beauty. He stressed the quality of man in the eyes of his maker”. - Indira Gandhi (former Prime Ministor)
It is no exaggeration to say that message of Basava is like a reservoir into which all previous thoughts flowed in and from which all later thoughts flowed out. Kind like Buddha, simple like Mahaveera, gentle like Jesus, Bold like Mohammad. Basava strikes us as almost as a wonder of creation. But what attracts us almost to him are those teachings of his in which he anticipated the greatest of modern thinkers Karl marks & Mahatma Gandhi. - K.S. Srikanthan

The Times of India in its issue dated may 17, 1918 paid a glowing tribute to Basava:

It was the distinctive feature of his mission that while illustrious religious and social reformers in India before him had each laid his emphasis on one or other items of religion and social reformer, either subordinating more or less other items toit or ignoring them altogether, Basava sketched and boldly tried to work out a large and comprehensive programme of social reform with the elevation and independence of womanhood as its guiding pointing. Neither social conferences which are usually held in these days in several parts of India, nor Indian social reformers, an improve upon that programme as to essentials. The present day’s social reformer in India is but speaking the language and seeking to enforce the mind of Basava

Totally Basavanna stands out as one of the most outstanding personalities in the religious history of India. His life and teachings have been source of inspiration to millions of people in south India for the last 800 plus years and influenced and moulded their lives.

Basava’s great task as a religious preacher and a social reformer, he brought, as an inalienable ancestral heritage, a great spiritual tradition of sacrificial devotion and dedicated service. He was a great standard-bearer of the honour of his society and the soldier of her ancient religion, and a tireless champion of the suffering and downtrodden. He had no prejudice of caste, colour, creed or race. He was one of God’s chosen to pilot the overburdened ship of a troubled society across the stormy sea of those times, to the safe shore of peace and happiness.

[1] Prof V. V. Sangamad In the book Basaveshwara is founder of Lingayath Religion the author collected the statement

ಗ್ರಂಥ ಋಣ:
೧) ಪೂಜ್ಯ ಮಾತಾಜಿ ಬರೆದ "ವಿಶ್ವಧರ್ಮ ಪ್ರವಚನ" ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ. ಪ್ರಕಟಣೆ: ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಬಸವಣ್ಣನವರಿಂದ ಲಿಂಗಾಯತ ಧರ್ಮದ ಸ್ಥಾಪನೆ ವಿಶ್ವಗುರು ಬಸವಣ್ಣನವರ ಸಂಕ್ಷಿಪ್ತ ಪರಿಚಯ Next