ಅಲ್ಲಮ ಪ್ರಭುವಿನ ವಚನಗಳಲ್ಲಿ ಖಗೋಳ ವಿಜ್ಞಾನ
|
|
*
ಅಲ್ಲಮ ಪ್ರಭುಗಳು ಸೃಷ್ಟಿಯ ಉಗಮದ ಆರಂಬದ ಕ್ಷಣದ ಬಗ್ಗೆ ವಿವರಿಸಿದ್ದಾರೆ.
12 ನೇ ಶತಮಾನದ ಅಲ್ಲಮ ಪ್ರಭುವಿನ ಅನೇಕ ವಚನಗಳಲ್ಲಿ ನಾವು ಆಧುನಿಕ ಖಗೋಳವಿಜ್ಞಾನದ ಸಂಶೋಧನಾ ಅಂಶಗಳನ್ನು ಕಾಣಬಹುದು.
ಹಿಂದಣ ಅನಂತವನು,ಮುಂದಣ ಅನಂತವನೂ,
ಒಂದು ದಿನ ಒಳಗೊಂಡಿತ್ತು ನೋಡಾ !
ಒಂದು ದಿನ ಒಳಕೊಂಡು ಮಾತಾಡುವ
ಮಹಾಂತನ ಕಂಡು ಬಲ್ಲವರಾರಯ್ಯಾ ?
ಆದ್ಯರು,ವೇದ್ಯರು ಅನಂತ ಹಿರಿಯರು
ಲಿಂಗದಂದುವನರಿಯದೆ ಅಂತೆ ಹೋದರು ಕಾಣಾ ಗುಹೇಶ್ವರಾ.
ಮೇಲಿನ ವಚನದಲ್ಲಿ ಅಲ್ಲಮ ಪ್ರಭುಗಳು ಸೃಷ್ಟಿಯ ಉಗಮದ ಆರಂಬದ ಕ್ಷಣದ ಬಗ್ಗೆ ವಿವರಿಸಿದ್ದಾರೆ.ಆಧುನಿಕ ಖಗೋಳ ವಿಜ್ಞಾನಿಗಳ ಪ್ರಕಾರ ಸುಮಾರು 15 ಸಾವಿರ ಬಿಲಿಯನ್ ವರ್ಷಗಳ ಹಿಂದೆ ಉಂಟಾದ ಈ ಸೃಷ್ಟಿಯು ಎಲ್ಲವೂ ಒಂದು ಅಣುವಿನಲ್ಲಿ ಅಡಗಿತ್ತು,ಅದು BIG BANG ಎಂಬ ಸ್ಪೋಟದ ಮೂಲಕ ಎಲ್ಲ ಗ್ರಹ ನಕ್ಷತ್ರಗಳಾದಿಯಾಗಿ ಗ್ಯಾಲಾಕ್ಷಿಯನ್ನೋಳಗೊಂಡ ವಿಶ್ವವು ಜನ್ಮತಾಳಿದೆ.ಇದನ್ನೆ ಮೇಲಿನ ವಚನದಲ್ಲಿ ಅಲ್ಲಮ ಪ್ರಭುಗಳು.
ಹಿಂದಣ ಅನಂತವನು,ಮುಂದಣ ಅನಂತವನೂ, ಒಂದು ದಿನ ಒಳಗೊಂಡಿತ್ತು ನೋಡಾ ! ಎಂದಿದ್ದಾರೆ.ಮುಂದುವರೆದು ಈ ಸತ್ಯವನ್ನು 12 ನೇ ಶತಮಾನಕ್ಕೂ ಮುಂಚಿನ ಆದ್ಯರು,ವೇದ್ಯರು ಅನಂತ ಹಿರಿಯರು ಅರಿತಿರದ ಬಗ್ಗೆ ಮರುಗಿದ್ದಾರೆ.ಜಗತ್ ಸೃಷ್ಟಿಗೆ ಕಾರಣವಾದ ಆ ಮೂಲ ಕಣವನ್ನೆ (PRIMITIVE ATOM) ಗುಹೇಶ್ವರ ಲಿಂಗವೆಂದು ಕರೆದಿದ್ದಾರೆ,
ಬಸವಣ್ಣನವರ ವಚನಗಳಲ್ಲಿ ವಿಜ್ಞಾನ
ಜಗದಗಲ ಮುಗಿಲಗಲ
ಮಿಗೆಯಗಲ ನಿಮ್ಮಗಲ
ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ
ಬ್ರಹ್ಮಾಂಡದತ್ತತ್ತ ನಿಮ್ಮ ಶ್ರೀ ಮುಕುಟ
ಅಗಮ್ಯ,ಅಗೋಚರ,ಅಪ್ರತಿಮ ಲಿಂಗವೆ ನೀವೆನ್ನ
ಕರಸ್ಥಳಕ್ಕೆ ಬಂದು ಚುಳುಕಾದಿರಯ್ಯಾ
ಕೂಡಲಸಂಗಮದೇವಯ್ಯ.
ಈ ವಚನದಲ್ಲಿ ಆಕಾಶದ ವಿಸ್ತಾರ ಮತ್ತು ಆಕಾಶ ಕಾಯಗಳ ಬಗ್ಗೆ ತಿಳಿಸಿದ್ದಾರೆ, ವಿಜ್ಞಾನಿಗಳ (ಖಗೋಳ) ಅನಿಸಿಕೆಯಂತೆ ನಾವು ವಾಸಿಸುವ ಭೂಮಿಯು ನಮ್ಮದೆ ಸೂರ್ಯನೊಳಗೊಂಡಂತೆ ಬಿಲಿಯನ್ ನಕ್ಷತ್ರಗಳ ಸಮೂಹವಾದ "ಹಾಲು ಹಾದಿ" ಎನ್ನುವ ಗ್ಯಾಲಾಕ್ಷಿಯ ಅತ್ಯಂತ ಚಿಕ್ಕ ಕಾಯ ,ಬ್ರಹ್ಮಾಂಡದಲ್ಲಿ ಬಿಲಿಯನ್ ಗಟ್ಟಲೆ ಗ್ಯಾಲಾಕ್ಷಿಗಳು ಹರಡಿಕೊಂಡಿರುವುದನ್ನೆ ಬಸವಣ್ಣನವರು
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ ಬ್ರಹ್ಮಾಂಡದತ್ತತ್ತ ನಿಮ್ಮ ಶ್ರೀ ಮುಕುಟ ಎಂದಿರುವರು, ವಿಜ್ಞಾನಿಗಳಿಗೂ ಸಹ ಇಡಿ ಬ್ರಹ್ಮಾಂಡವನ್ನು ಸುತ್ತುವಂತೆ ಮಾಡಿರುವ ಚಾಲನಾಶಕ್ತಿಯ ಬಗ್ಗೆ ಇಲ್ಲಿಯವರೆಗೆ ತಿಳಿದುಬಂದಿಲ್ಲ ಅದನ್ನೆ ಬಸವಣ್ಣ ನವರು ಅಗಮ್ಯ,ಅಗೋಚರ,ಅಪ್ರತಿಮ ಲಿಂಗವೆ ನೀವೆನ್ನ ಕರಸ್ಥಳಕ್ಕೆಬಂದು ಚುಳುಕಾದಿರಯ್ಯಾ ಕೂಡಲಸಂಗಮದೇವಯ್ಯ.ಎನ್ನುವ ಮೂಲಕ ಜಾಗತಿಕ ಚಾಲನಾ ಶಕ್ತಿಯನ್ನು ಕೂಡಲಸಂಗಮದೇವನ ರೂಪದಲ್ಲಿ ಕಂಡಿದ್ದಾರೆ.
[1] ಈ ತರಹದ ಸಂಖ್ಯೆಯ ವಿವರ: ಸವಸ-7/845 :- ಸಮಗ್ರ ವಚನ ಸಂಪುಟ -7, ವಚನ ಸಂಖ್ಯೆ-845 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)
*