ಲಿಂಗಾಯತರಲ್ಲಿ ಗ್ರಹಣದ ಬಗ್ಗೆ
|
|
*
ಶರಣರು ಗ್ರಹಣವನ್ನು ಪ್ರಕೃತಿಯ ಒಂದು ಭಾಗವಾಗಿ ನೋಡಿದರು. ಮತ್ತು ಅದರಿಂದ ಯಾವುದೆ ಫಲ ಇರುವುದಿಲ್ಲ ಎಂದು ಸಾರಿದರು.
ಇಪ್ಪತ್ತುನಾಲ್ಕು ತಿಥಿಯಿಂದ ವೆಗ್ಗಳ,
ಗ್ರಹಣ-ಸಂಕ್ರಾಂತಿಯಿಂದ ವೆಗ್ಗಳ,
ಏಕಾದಶಿ-ವ್ಯತೀಪಾತದಿಂದ ವೆಗ್ಗಳ,
ಸೂಕ್ಷ್ಮ ಶಿವಪಥವನರಿದಂಗೆ
ಹೋಮ-ನೇಮ-ಜಪ-ತಪದಿಂದ ವೆಗ್ಗಳ,
ಕೂಡಲಸಂಗಮದೇವಾ ನಿಮ್ಮ ಮಾಣದೆ ನೆನೆವಂಗೆ -610 [1]
ವೆಗ್ಗಳ = ಅಧಿಕ, ಹೆಚ್ಚಳ, ಶ್ರೇಷ್ಠ, ಅತಿಶಯ; ಮಾಣದೆ = ಮಾಡದೆ
ಇಂತಪ್ಪ ಲಿಂಗಾಂಗದ ಸಮರಸವ ತಿಳಿಯದೆ,
ಆವ ನೇಮ ವ್ರತವ ಪಿಡಿದು ಆಚರಿಸಿದಡೆ
ಮುಂದೆ ಭವಬಂಧನವೇ ಪ್ರಾಪ್ತಿಯಾಗುವದು.
ಮತ್ತಂ, ವಾರದಫಲ ಬಯಸುವವರಿಗೆ ಗುರುವಿಲ್ಲ.
ಮಾಸದ ಫಲ ಬಯಸುವವರಿಗೆ ಲಿಂಗವಿಲ್ಲ.
ಚತುರ್ದಶಿ ಫಲ ಬಯಸುವವರಿಗೆ ಜಂಗಮವಿಲ್ಲ.
ಆ ಮಾಸದ ಫಲ ಬಯಸುವವರಿಗೆ ಪಾದೋದಕವಿಲ್ಲ.
ಗ್ರಹಣ ಫಲ ಬಯಸುವವರಿಗೆ ಪ್ರಸಾದವಿಲ್ಲ.
ಇಂತಪ್ಪ ಫಲವ ಬಯಸಿ ಮಾಡಬೇಕೆಂಬವರಿಗೆ
ವಿಭೂತಿ, ರುದ್ರಾಕ್ಷಿ, ಮಂತ್ರ ಮೊದಲಾದ ಅಷ್ಟಾವರಣವು ಇಲ್ಲ.
ಇತಂಪ್ಪ ವ್ರತಭ್ರಷ್ಟ ಹೊಲೆಯರಿಗೆ ವೀರಮಹೇಶ್ವರರೆಂದಡೆ
ನಿರ್ಮಾಯಪ್ರಭುವಿನ ಶರಣರು ನರಕದಲ್ಲಿಕ್ಕದೆ ಬಿಡುವರೆ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ ? -212 [1]
17
ಪರಮಬೆಳಗಿನಿಂದೆಸೆವ
ನಿಜ ಭಕ್ತಜಂಗಮಲಿಂಗ ಘನಗಂಭೀರರು
ಪಂಚಾಭಿಷೇಕ ಮೊದಲಾದ ಅನಂತ ಅಭಿಷೇಕ
ಪತ್ರಿ ಪುಷ್ಪ ಫಲಹಾರ ಪಂಚಕಜ್ಜಾಯ ಪರಮಾನ್ನ ಪಾಯಸ
ಮೊದಲಾದ ಕಟ್ಟಳೆಗಳ ಮಾಡದೆ,
ವಾರ ತಿಥಿ ನಕ್ಷತ್ರ ವ್ಯತಿಪಾತ ವೈಧೃತಿ,
ಚಂದ್ರಸೂರ್ಯ ಗ್ರಹಣ
ಹುಣ್ಣಿಮೆ ಅಮವಾಸ್ಯೆ
ಸತ್ತ ಹೆತ್ತ ಕರ್ಮದ ತಿಥಿಗಳು,
ಕಾರ್ತಿಕ, ಮಾಘ, ಶ್ರಾವಣ, ಶಿವರಾತ್ರಿ, ನವರಾತ್ರಿ
ಸಂಕ್ರಾಂತಿ, ಕತ್ತಲರಾತ್ರಿ, ದಿನರಾತ್ರಿಗಳೆಂಬ
ದಿವಾರ್ಚನೆ, ಸಾಮಾನ್ಯದಾರ್ಚನೆ, ಮೊದಲಾದ
ಶೈವಜಡಕರ್ಮಗಳ ಹೊದ್ದಲೀಯದೆ,
ಸತ್ಯಶುದ್ಧ ನಡೆನುಡಿಯಿಂದ
ಕೇವಲ ನಿಜಗುರುಲಿಂಗಜಂಗಮಮೂರ್ತಿಗಳ
ಬಂದ ಬರವ ನಿಂದ ನಿಲುಗಡೆಯನರಿದು,
ಅಷ್ಟವಿಧಾರ್ಚನೆ ಷೋಡಶೋಪಚಾರಗಳೊದಗಿದಂತೆ
ನಿಜಾನಂದಭರಿತದಿಂದರ್ಚನಂಗೈದು,
ಪರಶಿವಯೋಗಾನುಸಂಧಾನದಿಂದಾಚರಿಸುವುದೇ
ನಿರವಯಪ್ರಭು ಮಹಾಂತನ ಪ್ರತಿಬಿಂಬರೆಂಬೆ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
[1] ಈ ತರಹದ ಸಂಖ್ಯೆಯ ವಿವರ: ಸವಸ-1/554 :- ಸಮಗ್ರ ವಚನ ಸಂಪುಟ -1, ವಚನ ಸಂಖ್ಯೆ-554 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)
*