| ಲಿಂಗಾಯತರು *ಲಿಂಗವಂತ*ರು :👈 | 👉:ನಿಮ್ಮನ್ನು ನೀವು ತಿದ್ದಿಕೊಳ್ಳಿ |
ಲಿಂಗಾಯತರಲ್ಲಿ ದೇಹವೇ ದೇವಾಲಯ |
ಉಳ್ಳವರು ಶಿವಾಲಯ ಮಾಡಿಹರು, ನಾನೇನ ಮಾಡಲಿ ಬಡವನಯ್ಯಾ
ಉಳ್ಳವರು ಶಿವಾಲಯ ಮಾಡಿಹರು,ನಾನೇನ ಮಾಡಲಿ ಬಡವನಯ್ಯಾ,
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೆ ಹೊನ್ನ ಕಲಶವಯ್ಯಾ,
ಕೂಡಲಸಂಗಮದೇವಾ, ಕೇಳಯ್ಯಾ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ. - ಬಸವಣ್ಣ ಸವಸ1/821
ಕಲ್ಲ ಮನೆಯ ಮಾಡಿ
ಕಲ್ಲ ದೇವರ ಮಾಡಿ
ಆ ಕಲ್ಲು ಕಲ್ಲ ಮೇಲೆ ಕೆಡೆದರೆ
ದೇವರೆತ್ತ ಹೋದರೋ
ಲಿಂಗ ಪ್ರತಿಷ್ಠೆಯ ಮಾಡಿದವಂಗೆ
ನಾಯಕ ನರಕ ಗುಹೇಶ್ವರ - ಅಲ್ಲಮಪ್ರಭು
ದೇಹವೇ ದೇವಾಲಯವಾಗಿದ್ದ ಮೇಲೆ
ಮತ್ತೆ ಬೇರೆ ದೇಗುಲಕ್ಕೆ ಎಡೆಯಾಡುವರಿಗೆ
ಏನ ಹೇಳುವೆನಯ್ಯ?
ಗುಹೇಶ್ವರ, ನೀ ಕಲ್ಲಾದೆಡೆ ನಾನೇನಪ್ಪೆನು? - ಅಲ್ಲಮಪ್ರಭು
ಮನುಷ್ಯರನ್ನು ದೇವರು ಕಾಪಾಡುತ್ತಾನೆನ್ನುವರು ಜನ! ಇನ್ನು ಕಾಪಾಡುವ ದೇವರೆ ಕಲ್ಲಾದರೆ ಆರಾಧಿಸುವ ಭಕ್ತನೇನಾದಾನು?
| ಲಿಂಗಾಯತರು *ಲಿಂಗವಂತ*ರು :👈 | 👉:ನಿಮ್ಮನ್ನು ನೀವು ತಿದ್ದಿಕೊಳ್ಳಿ |