Previous ಮಹಾಯೋಗಿ ಶ್ರೀ ವೇಮನ ಲಿಂಗಾಯತ ರಾಜಮನೆತನಗಳು Next

ಲಿಂಗಾಯತ ಧರ್ಮ ಸರ್ವಸ್ವತಂತ್ರ ಧರ್ಮ

*

ಲಿಂಗಾಯತ ಧರ್ಮ ಸರ್ವಸ್ವತಂತ್ರ ಧರ್ಮ :- (ವೀರಶೈವ ಧರ್ಮವೆ0ಬುದಕ್ಕೆ ವೀರಶೈವರು ತಮ್ಮ ದಾಖಲೆಗಳನ್ನು ತೋರಿಸಿ ) ವೀರಶೈವ ಅನ್ನೋದನ್ನ ಹುಟ್ಟಿಹಾಕಿದ ಕೀಳು ಮಾನವರು ಯಾರು .......ಅವರಿಗೆ ಪ್ರತಿಷ್ಠೆ ಏನು ? ಏನು ಪುರುಷಾರ್ಥ ?

ಸುಮಾರು ಒಂದುನೂರು ನಲವತ್ತು ವರ್ಷಗಳ ಹಿಂದಿನ ಮಾತು ,ನಮ್ಮ ದೇಶಕ್ಕೆ ಇನ್ನೂ ಸ್ವಾತಂತ್ರ್ಯ ಬಂದಿರಲಿಲ್ಲ .ಬ್ರಿಟಿಷರು ಜಾತಿ ಮತ್ತು ಧರ್ಮಗಳ ಆಧಾರದ ಮೇಲೆ ಜನಗಣತಿ ಮಾಡಬೇಕೆಂದು ಬಯಸಿ ಭಾರತದಲ್ಲಿ ಅಸ್ತಿತ್ವದಲ್ಲಿರುವ ಧರ್ಮಗಳ ಅಧ್ಯಯನ ಮಾಡಿ ಹಿಂದೂ,ಸಿಖ್ ,ಬೌದ್ಧ ,ಜೈನ,ಮುಸಲ್ಮಾನ ಕ್ರಿಶ್ಚಿಯನ ,ಪಾರ್ಸಿ ಮತ್ತು ಲಿಂಗಾಯತಗಳನ್ನೂ ಸ್ವತಂತ್ರ ಧರ್ಮಗಳೆಂದು ಗುರುತಿಸಿದ್ದರು .

ಅಂದಿನ ಬ್ರಿಟಿಶ್ ಸರ್ಕಾರದ ರಾಷ್ಟ್ರೀಯ ಜನಗಣತಿ ದಾಖಲೆಗಳ ಪ್ರಕಾರ ೧೮೭೧ ನೆ ಇಸವಿಯಿಂದ ೧೯೩೧ರ ಇಸವಿಯವರೆಗೆ ಲಿಂಗಾಯತವು ಸ್ವತಂತ್ರ ಧರ್ಮವೆಂದೇ ನೊಂದಣಿಯಾಗಿತ್ತು. ಎಂದು ಬಾಮ ಸೆಫ್ ಮೂಲನಿವಾಸಿ ನಾಯಕ ದಿನಾಂಕ ೦೧ನೆ ಏಪ್ರಿಲ್ ೨೦೧೦ ದೈನಿಕ ವರದಿ ಸ್ಪಷ್ಟವಾಗಿ (www.mulnivasinayak.com) ಹೇಳುತ್ತದೆ. ನಂತರದ ದಿನಗಳಲ್ಲಿ ಈ ಸಮಾಜವು ತಾವು ಸನಾತನಿಯರೆಂದು ಹೇಳಿಕೊಂಡು ,ನಮ್ಮದು ವೀರಶೈವ ಎಂದು ಪರಿಗಣಿಸಬೇಕೆಂದು ಹೋರಾಟ ಪ್ರಾರಂಬಿಸಿತು. ಅದರ ಫಲವಾಗಿ ಲಿಂಗಾಯತ್ ಧರ್ಮವು ಸ್ವತಂತ್ರ ಧರ್ಮವೆಂದು ಹೋಗಿ, ಹಿಂದೂ ಲಿಂಗಾಯತವಾಗಿ, ಬರಬರುತ್ತಾ ಹಿಂದೂ ಧರ್ಮದ ಒಂದು ಜಾತಿಯಾಗಿ ಪರಿಗಣಿಸಲ್ಪಟ್ಟಿತ್ತು.

ಒಂದು ವೇಳೆ ನಾವು ಸಿಖ್ ,ಜೈನ ,ಬೌದ್ಧ ಧರ್ಮದವರಂತೆ ಸ್ವತಂತ್ರ ಧರ್ಮವೆಂದು ಗುರುತಿಸಿಕೊಂಡು ಬಂದಿದ್ದರೆ,ಜನಸಂಖ್ಯ ಆಧಾರಿತ ಲಿಂಗಾಯತ ಧರ್ಮವು ಅಲ್ಪ ಸಂಖ್ಯಾತರ ಪಟ್ಟಿಯಲ್ಲಿ ಸೇರ್ಪಡೆಯಾಗುತ್ತಿತ್ತು. ಎಲ್ಲಾ ಅಲ್ಪಸಂಖ್ಯಾತರಿಗೆ ಸಿಗುವ ಸೌಲಭ್ಯಗಳು ,ಅವಕಾಶಗಳು ಸಿಗುತ್ತಿದ್ದವು .ಜೊತೆಗೆ ಜಾಗತಿಕ ಮಟ್ಟದಲ್ಲಿಯೂ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮವೆಂದು ಮನ್ನಣೆ ದೊರೆಯುತ್ತಿತ್ತು .

ಈ ಜನಗಣತಿಯ ಆಧಾರದ ಮೇಲೆ ಭಾರತದ ಸಂಸತ್ತಿನಲ್ಲಿ ನಮ್ಮದು ಸ್ವತಂತ್ರ ಧರ್ಮವೆಂದು ಪ್ರಸ್ತಾವನೆಯನ್ನು ಮಂಡಿಸಬೇಕಾಗುತ್ತದೆ.ಅಥವಾ ಭಾರಾತ್ದ ಸರ್ವೋಚ್ಚ ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕಾಗುತ್ತದೆ .ನಮ್ಮ ಹೋರಾಟಕ್ಕೆ ಬಲವಾದ ಸಾಕ್ಷಾಧಾರಗಳು ಬೇಕಾಗುತ್ತವೆ. ಅವು ಲಿಂಗಾಯತ ಧರ್ಮದಲ್ಲಿ ಮಾತ್ರ ಸಿಗುತ್ತವೆ. ಅವುಗಳು ಕೆಳಗಿನ ಸಾಲುಗಳಲ್ಲಿ ನೋಡಿ :

೧. ಯಾವ ಗುಣ ಲಕ್ಷಣ ತತ್ವ ಸಿದ್ಧಾಂತ ಕಾರಣಗಳಿಂದ ಬೌದ್ಧ ,ಜೈನ ಮತ್ತು ಸಿಖ್ ಧರ್ಮಗಳು ಮಾನ್ಯತೆ ಪಡೆದಿವೆಯೋ ಅವೇ ಗುಣ ಲಕ್ಷಣ,ದರ್ಶನ ಸಿದ್ಧಾಂತ ,ತತ್ವಜ್ಞಾನ ,ಸಂಸ್ಕಾರ ಕಾರಣಗಳಿ೦ದಾಗಿ ಲಿಂಗಾಯತವು ಸಹ ಸ್ವತಂತ್ರ ಧರ್ಮವಾಗಿದೆ .
೨. ಬ್ರಿಟಿಷ್ ಸರಕಾರದ ಅವಧಿಯ ೧೮೭೧ನೆ ಇಸವಿಯಿಂದ ೧೯೩೧ನೆ ಇಸವಿಯವರೆಗಿನ ಜನಗಣತಿಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮವೆಂದು ದಾಖಲಾಗಿದ್ದು .ಇವೆ ಆಧಾರದ ಮೇಲೆ ನಮ್ಮನ್ನು ಮತ್ತೊಮ್ಮೆ ಸ್ವತಂತ್ರ ಧರ್ಮವೆಂದು ಪರಿಗಣಿಸಬೇಕು .
೩. ಮೈಸೂರು ಪ್ರಾಂತ್ಯದ extract census of india 1891 ಪ್ರಕಾರ ಲಿಂಗಾಯತದಲ್ಲಿ ೩೮ ಜಾತಿಗಳಿವೆ.ಅವುಗಳಲ್ಲಿ ಲಿಂಗಾಯತ-ಆರಾಧ್ಯ ,ಲಿಂಗಾಯತ-ಬಡಗಲವ,ಲಿಂಗಾಯತ-ಜಂಗಮ ,ಲಿಂಗಾಯತ-ಷಟಸ್ಥಲ ಹೀಗೆ ೩೮ನೆ ಯದು ಲಿಂಗಾಯತ -ವೀರಶೈವ .ಇದರಲ್ಲಿ ವೀರಶೈವ ಎಂಬುದು ಲಿಂಗಾಯತದ ಪಂಗಡವಾಗಿದೆ.
೪. Extract Census of India 1901 ಪ್ರಕಾರ ಲಿಂಗಾಯತದಲ್ಲಿ ೪೩ ಉಪಜಾತಿಗಳನ್ನು ಗುರುತಿಸಿವೆ.
೫. ೧೮೮೧ರ ಕೇರಳ ಪ್ರಾಂತ್ಯದ ಜನಗಣತಿ ವರದಿಯಾಗಿರುವ -extract imperial census of india ೧೮೮೧, ಇದು ಈ ಧರ್ಮವನ್ನು ಲಿಂಗಾಯತವೆಂದು ಗುರುತಿಸಿದೆ,
೬. Hindu Law, Raghavachariars revised by Prof. Venkataraaman, publishers Madras Law office, Mylapore, Madras-04.(page 32-33 hindu law) ಇದರ ಪ್ರಕಾರ ಲಿಂಗಾಯತರು ಸಹ ಸಿಖ್,ಜೈನ್,ಬೌದ್ಧರಂತೆ ಸಾಂಪ್ರಾದಾಯಿಕ ಹಿಂದೂ ಧರ್ಮದಿಂದ ಭಿನ್ನ. ಮತ್ತು ಲಿಂಗಾಯತರು ಜಾತಿ ಪದ್ಧತಿಯನ್ನು ಮನ್ನಿಸುವವರಲ್ಲ.

ಈ ಮೇಲಿನ ಆಧಾರಗಳಿಂದ ಕಾನೂನು ಬದ್ಧವಾಗಿ ಲಿಂಗಾಯತವು ಸ್ವತಂತ್ರ ಧರ್ಮವೆಂದು ಹೇಳಬಹುದಾಗಿದೆ.

ಪರಿವಿಡಿ (index)
*
Previous ಮಹಾಯೋಗಿ ಶ್ರೀ ವೇಮನ ಲಿಂಗಾಯತ ರಾಜಮನೆತನಗಳು Next
cheap jordans|wholesale air max|wholesale jordans|wholesale jewelry|wholesale jerseys