ಪ್ರಶ್ನೆ
|
ಉತ್ತರ
|
ಚಿನ್ಮಯಜ್ಙಾನಿ ಬಿರುದು ಪಡೆದವರು ಯಾರು? |
ಚನ್ನಬಸವಣ್ಣ |
ಬಸವಣ್ಣನವರ ಮಾವನವರ ಹೆಸರು? |
ಬಲದೇವರಸ |
ಬಸವಣ್ಣನವರ ಯಾವ ರಾಜನ ಮಂತ್ರಿಯಾಗಿದ್ದರು? |
ಬಿಜ್ಜಳ |
ಬಸವಣ್ಣನವರಿಗೆ ಏನು ಶಿಕ್ಷೆ ವಿಧಿಸಲಾಯಿತು? |
ಗಡಿಪಾರು ಶಿಕ್ಷೆ |
ಬಸವಣ್ಣನವರು ಪ್ರತಿಪಾದಿಸಿದ ಸಿದ್ಧಾಂತ ಯಾವುದು? |
ಶಕ್ತಿವಿಶಿಷ್ಟಾದ್ವೈತ |
ಬಸವಣ್ಣನವರ ಮಗನ ಹೆಸರು? |
ಬಾಲಸಂಗಯ್ಯ |
ಸಿದ್ಧಾಂತಗಳು ಎಷ್ಟು ಪ್ರಕಾರ |
4 (4) |
ಸಿದ್ಧಾಂತಗಳು ಯಾವವು? |
ದ್ವೈತ, ಅದ್ವೈತ, ವಿಶಿಷ್ಟಾದ್ವೈತ , ಶಕ್ತಿವಿಶಿಷ್ಟಾದ್ವೈತ |
ವಚನಭಂಡಾರಿ ಯಾರು? |
ಶಾಂತರಸ |
ಹಡಪದ ಅಪ್ಪಣ್ಣನ ವಚನಾಂಕಿತ ಯಾವುದು? |
ಬಸವಪ್ರಿಯ ಕೂಡಲ ಚನ್ನಸಂಗ |
ಶರಣೆಯಾಗಿ ಮಾರ್ಪಟ್ಟ ವೇಶ್ಯ ಯಾರು? |
(ಸೂಳೆ)ಸಂಕವ್ವೆ |
ಸೂಳೆಸಂಕವ್ವೆ ವಚನಾಂಕಿತ ಯಾವುದು? |
ನಿರ್ಲಜ್ಜೇಶ್ವರ |
ಹಡಪದ ಅಪ್ಪಣ್ಣನ ಪತ್ನಿಯ ಹೆಸರು? |
ಲಿಂಗಮ್ಮ |
ಮುಕ್ತಾಯಕ್ಕನ ವಚನಾಂಕಿತ ಯಾವುದು? |
ಅಜಗಣ್ಣ |
ಮೋಳಿಗೆ ಮಾರಯ್ಯನ ಧರ್ಮಪತ್ನಿ ಯಾರು? |
ಮಹಾದೇವಿ |
ಆಯ್ದಕ್ಕಿ ಮಾರಯ್ಯನ ಧರ್ಮಪತ್ನಿ ಯಾರು? |
ಲಕ್ಕಮ್ಮ |
ಅನುಭವ ಮಂಟಪದಲ್ಲಿ ಪ್ರಸಾದ ಸಿದ್ಧಪಡಿಸುತ್ತಿದ್ದವರು ಯಾರು? |
ಪಾಕದ ಭೀಮಣ್ಣ |
ಅಮರೇಶ್ವರಲಿಂಗ ಯಾರ ವಚನಾಂಕಿತ |
ಆಯ್ದಕ್ಕಿ ಮಾರಯ್ಯ |
ಅಂಬಿಗರ ಚೌಡಯ್ಯ ಯಾರ ವಚನಾಂಕಿತ |
ಅಂಬಿಗರ ಚೌಡಯ್ಯ |
ಉರಿಲಿಂಗಪೆದ್ದಿಗಳ ವಚನಾಂಕಿತ ಯಾವುದು? |
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ |
ಬಸವಣ್ಣನವರ ಆಪ್ತ ಸಹಾಯಕ ಯಾರು? |
ಹಡಪದ ಅಪ್ಪಣ್ಣ |
ಕಾಮ ಭೀಮ ಜೀವನದೊಡೆಯ ಯಾರ ವಚನಾಂಕಿತ |
ಒಕ್ಕಲಿಗ ಮುದ್ದಣ್ಣ |
ರಾಮನಾಥ ಯಾರ ವಚನಾಂಕಿತ |
ಜೇಡರ ದಾಸಿಮಯ್ಯ (ದೇವರ ದಾಸಿಮಯ್ಯ) |
ಶರಣೆಯಾದ ರಾಜನರ್ತಕಿ ಯಾರು? |
ಮಾಯಾದೇವಿ |
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಇದು ಯಾರ ವಚನದ ಭಾಗ |
ಬಸವಣ್ಣ |
ಬಸವಣ್ಣನವರ ಅಕ್ಕನ ಹೆಸರು? |
ಅಕ್ಕನಾಗಮ್ಮ |
ಬಸವಣ್ಣನವರ ಶಿಕ್ಷಾ ಗುರು ಯಾರು? |
ಜಾತವೇದ ಮುನಿ |
ತೋಂಟದ ಸಿದ್ಧಲಿಂಗ ಶಿವಯೋಗಿಗಳ ವಚನಾಂಕಿತ ಯಾವುದು? |
ಮಹಾಲಿಂಗ ಗುರು ಶಿವ ಸಿದ್ಧೇಶ್ವರ ಪ್ರಭು |
ಅಖಂಡೇಶ್ವರ ಯಾರ ವಚನಾಂಕಿತ |
ಷಣ್ಮುಖ ಶಿವಯೋಗಿಗಳು |
ಸಿದ್ಧರಾಮೇಶ್ವರರ ಪೂರ್ವಾಶ್ರಮದ ಹೆಸರು? |
ಧೂಳಿಮಹಾಂಕಾಳಯ್ಯ |
ಯೋಗಿನಾಥ ಯಾರ ವಚನಾಂಕಿತ |
ಸಿದ್ಧರಾಮೇಶ್ವರರ |
ಅಕ್ಕಮಹಾದೇವಿ ದೀಕ್ಷಾ ಗುರು ಯಾರು? |
ಗುರುಲಿಂಗಸ್ವಾಮಿ |
ಸಿದ್ಧರಾಮೇಶ್ವರರ ದೀಕ್ಷಾ ಗುರು ಯಾರು? |
ಚನ್ನಬಸವಣ್ಣ |
ಅಕ್ಕನಾಗಮ್ಮನವರ ದೀಕ್ಷಾ ಗುರು ಯಾರು? |
ಬಸವಣ್ಣ |
ಬಸವಪುರಾಣಮು ಬರೆದವರಾರು? |
ಪಾಲ್ಕುರಿಕೆ ಸೋಮನಾಥ |
ಬಸವ ಪುರಾಣ ಬರೆದವರಾರು? |
ಭೀಮ ಕವಿ |
ಬಸವಣ್ಣನವರ ಕುರಿತಾದ ಹರಿಹರನ ಕೃತಿ ಯಾವುದು? |
ಬಸವರಾಜದೇವರ ರಗಳೆ |
ಸಂಸತ ಭವನದ ಮುಂದೆ ಬಸವಣ್ಣನವರ ಪುತ್ಥಳಿ ಸ್ಥಾಪಿತ ವರ್ಷ ಯಾವುದು? |
2003 (2003) |
ಸಂಸತ ಭವನದ ಮುಂದೆ ಬಸವಣ್ಣನವರ ಪುತ್ಥಳಿ ಅನಾವರಣ ಮಾಡಿದವರು ಯಾರು? |
ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ |
ಅಷ್ಟವಿಧಾರ್ಚನೆ ಎಂದರೇನು? |
ಜಲ, ಗಂಧ, ಅಕ್ಷತೆ, ಪತ್ರ-ಪುಷ್ಪ, ಧೂಪ, ದೀಪ, ನೈವೇದ್ಯ, ತಾಂಬೂಲ |
ಅಷ್ಟಾಂಗ ಯೋಗಗಳು ಯಾವುವು? |
ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ |
ಆದಿ ಅಕ್ಷರ ಯಾವುದು? |
ಓಂ |
ಓಂಕಾರ ಸ್ವರೂಪಿ ಯಾರು? |
ಪರಾತ್ಪರ ಪರವಸ್ತು (ಪರಶಿವ) |
ಓಂ ಅಕ್ಷರದಲ್ಲಿರುವ ಅಡಕಗಳು ಯಾವುವು? |
ಅ, ಉ, ಮ |
ಷಟ್ ಚಕ್ರಗಳು ಯವುವು? |
ಆಧಾರ, ಸ್ವಾಧಿಷ್ಟಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಗ್ನೇಯ |
ಪ್ರಭುಲಿಂಗ ಲೀಲೆ ಬರೆದವರಾರು? |
ಚಾಮರಸ |
ವಚನ ಪಿತಾಮಹ ಯಾರು? |
ಫ.ಗು. ಹಳಕಟ್ಟಿ |
ಫ.ಗು. ಹಳಕಟ್ಟಿ ಪೂರ್ಣ (ಪೂರ್ತಿ) ಹೆಸರೇನು? |
ಫಕೀರಪ್ಪ ಗುಂಡಪ್ಪ ಹಳಕಟ್ಟಿ |
ಸಪ್ತಧಾತುಗಳು ಯಾವುವು? |
ರಸ, ರುಧಿರ, ಮಾಂಸ, ಮಜ್ಜೆ, ಮೆದಸ್ಸು, ಅಸ್ಥಿ, ಶುಕ್ಲ |
ಸಮಗ್ರ ವಚನ ಸಂಪುಟ ಪ್ರಕಟಿಸಿದ ಮುಖ್ಯಮಂತ್ರಿ ಯಾರು? |
ಎಂ. ವೀರಪ್ಪ ಮೊಯಿಲಿ |