Previous ಲಿಂಗಾಯತ/ಲಿಂಗವಂತ ವೆಂದು ಸ್ಪಷ್ಟವಾಗಿ ಬರೆಯಿರಿ ರಾಜಗುರು ಸಂಸ್ಥಾನ ಕಲ್ಮಠ ಕಿತ್ತೂರು Next

ಜಗದ್ಗುರು ಮೂರು ಸಾವಿರ ಮಠ ಹುಬ್ಬಳ್ಳಿ

*
ಜಗದ್ಗುರು ಮೂರು ಸಾವಿರ ಮಠ ಹುಬ್ಬಳ್ಳಿ
ಹುಬ್ಬಳ್ಳಿಯಲ್ಲಿ ಹೂಬಳ್ಳಿಯ ಹೂವುಗಳಂತೆ ಶೋಭಿಸುವ ಶ್ರೀ ಜಗದ್ಗುರು ಮೂರುಸಾವಿರಮಠವು ಸುಪ್ರಸಿದ್ಧ ಮಠವಾಗಿದೆ. ಇದರ ಗತಯುಗದ ಪಕ್ಷಿನೋಟವನ್ನು ನೋಡಿದಾಗ ಪ್ರೊ. ವರದರಾಜ ಉಮರ್ಜಿಯವರು ಬೆಳಕಿಗೆ ತಂದ ಕಲಚೂರಿಯ 12ನೇ ಶತಮಾನದ ಶಿರಸಿಯ ಶಿಲಾಶಾಸನದಲ್ಲಿ ಮೂರುಸಾವಿರಮಠದ ಉಲ್ಲೇಖವಿದೆ. ಶೈವ ಮೂಲದ ತಾಯಿ ಬೇರಿನಿಂದ ಈ ಮಠವು ಅಲ್ಲಮ ಸಂಪ್ರದಾಯದ ಶೂನ್ಯ ಸಿಂಹಾಸನ ಪೀಠವಾಗಿ ಉತ್ಕ್ರಾಂತಿಯಾಗಿದೆಯೆ೦ದು ಊಹಿಸಲಾಗಿದೆ. ಹೂಬಳ್ಳಿಯ ಪುರಾತಣ ಹಳ್ಳಿಯೇ ಹುಬ್ಬಳ್ಳಿಯಾಗಿರಬೇಕೆಂಬುದು ಅಭಿಪ್ರಾಯ. ಹುಬ್ಬಳ್ಳಿಯು ಲಿಂಗಾಯತ ಸಮಾಜದ ಕೇಂದ್ರವಾಗಿತ್ತೆಂದು ನಂಬಲಾಗಿದೆ. ಈ ಹುಬ್ಬಳ್ಳಿಯ ತಪೋವನದ ಗವಿಯಲ್ಲಿ ಉಗ್ರ ಅನುಷ್ಠಾನಗೈದು ಲಿಂಗೈಕ್ಯರಾದ ಜಗದ್ಗುರು ಗುರುಸಿದ್ಧ ಗುರುಸಿದ್ಧರಾಜಯೋಗೀಂದ್ರರ ಜಾಗೃತ ಸಮಾಧಿಯು ಶ್ರೀಮಠದ ಬಲಭಾಗದಲ್ಲಿ "ಹುಚ್ಚನ ಗದ್ದಿಗೆ" ಎಂದೇ ಭಕ್ತರು ಕರೆಯುತ್ತಾರೆ. ಶ್ರೀ ಮೂರುಸಾವಿರಮಠದ ಹುಚ್ಚನೆಂದರೆ ಬೆಂಕಿಯ ಕೆಂಡ. ಅವನ ಅ೦ಗಾರ ಹಿಡಿದು ಆಣೆಮಾಡಿದರೆ ಸಮಸ್ಯೆ ಮುಗಿಯಿತು ಎ೦ದು ಜನ ಇಂದಿಗೂ ನಂಬಿರುವರು. ಈ ಕಾರಣದಿ೦ದ ಇದಕ್ಕೆ ಹುಚ್ಚನ ಮಠ, ಗುರುಸಿದ್ಧಪ್ಪನ ಮಠ ಎ೦ದು ಕರೆಯಲಾಗುತ್ತದೆ. ಕಿತ್ತೂರು ಚನ್ನಮ್ಮನ ಸಂಸ್ಥಾನ ಅವನತಿಯ ನ೦ತರ ಅದೇ ಸಂಸ್ಥಾನದ ಕಟ್ಟಗೆಗಳನ್ನೇ ಈ ಮಠಕ್ಕೆ ಜೋಡಿಸಲಾಗಿದೆ. ತಾಳೆಗ್ರಂಥಗಳನ್ನು ಸಂಗ್ರಹಿಸಿಡಲು ಓಲೆಮಠವನ್ನು ಕಟ್ಟಲಾಯಿತು. ಈ ಮಠದ ಪೂವ೯ ಸ್ಥಾನವೆಂದು ಪೂವ೯ದ ಮೂರುಸಾವಿರಮಠವೆಂದು ಕರೆಯಲಾಗುತ್ತಿ ದೆ.

ಮೂರುಸಾವಿರಮಠವೆಂದು ಏಕೆ ಕರೆಯುತ್ತಾರೆ?

ಅಲ್ಲಮ ಪ್ರಭುವಿನ ಶೂನ್ಯ ಪೀಠದ ಪರಂಪರೆಯಲ್ಲಿ ಅನೇಕ ಜಗದ್ದುರು ಪೀಠಗಳು, ನಿರ೦ಜನ ಪೀಠಗಳು ಕನ್ನಡ ನಾಡಿನಲ್ಲಿ ಉದಯಿಸಿದವು. ಕಲ್ಯಾಣದ ಕ್ರಾಂತಿಯಾಯಿತು. ಆಗ ಅಲ್ಲಿಯ ಮೂರುಸಾವಿರ (೩೦೦೦) ಜನ ಭಕ್ತ ಮಹೇಶ್ವರರು ಪೂವಳ್ಳಿ (ಹುಬ್ಬಳ್ಳಿ)ಗೆ ಬಂದು ಈ ಧರ್ಮಪೀಠದಲ್ಲಿ ತಂಗಿದರು. ಈ ಐತಿಹಾಸಿಕ ಘಟನೆಯ ಪರಿಣಾಮವಾಗಿ ಮೂರುಸಾವಿರಮಠವಾಯಿತೆಂದು ಹಲವರ ಅಭಿಪ್ರಾಯ. ಡಾ|| ಡಿ.ಎಲ್. ನರಸಿಂಹಾಚಾಯ೯ರ ಕನ್ನಡ ಗ್ರಂಥ ಸಂಪಾದನೆಯಲ್ಲಿ ಶ್ರೀ ಬಸವೇಶ್ವರ ಪುರಾಣ ಬರೆಯುವದು ಸ೦ಪೂಣ೯ವಾಯಿತು. ಈ ಪುಸ್ತಕವನ್ನು ಬರೆಸಿದವರು ಯಾರು ಎಂದರೆ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಶೂನ್ಯ ಸಿಂಹಾಸನಾಧೀಶ್ವರ ಭ್ರೂಪುರದ ೩ ಸಹಸ್ರ ಮಠಾಧಿಕಾರಿಗಳಾದ ಗಂಗಾಧರ ಸ್ವಾಮಿಜಿಯರ ಕತಮಲೋದ್ಭವವಾದ ಗುರುಸಿದ್ಧ ಸ್ವಾಮಿಯವರು ಬರೆಸಿದ್ದರೆಂದು ೧೩೫೩ ರಲ್ಲಿ ಶ್ರೀ ಮೂರುಸಾವಿರಮಠದ ಪ್ರಾಚೀನತೆಗೆ ಸ್ಪಷ್ಟ ಅಂಶವಾಗಿದೆ.

ಶ್ರೀ ಮೂರುಸಾವಿರಮಠದ ಲಿಂಗೈಕ್ಯ ಜಗದ್ಗುರು ಗ೦ಗಾಧರ ರಾಜಯೋಗೀಂದ್ರ ಮಹಾಸ್ವಾಮಿಗಳವರು ಜಗದ್ಗುರು ಪೀಠವನ್ನು ಅಲಂಕರಿಸಿದ ಮಹಾಮಹಿಮರು. ಸಮಾಜ ಸೇವೆಯೇ ಸದಾಶಿವನೊಲುಮೆಯಯ್ಯಾ ಎ೦ದು ಘೋಷಿಸಿದರು. ಹುಬ್ಬಳ್ಳಿಯಲ್ಲಿ ಶ್ರೀ ಜಗದ್ಗುರು ಗ೦ಗಾಧರ ಜಿನ್ನಿಂಗ್ ಅ೦ಡ್ ಪ್ರೆಸ್ಸಿಂಗ ಫ್ಯಾಕ್ಟರಿ ಸ್ಥಾಪಿಸಿದರು. ೧೯ ವಷ೯ಗಳ ಕಾಲ ಆಳಿಕೆಗೈದು ಲಿಂಗೈಕ್ಯರಾದರು. ಕನಾ೯ಟಕದ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ "ಧರ್ಮತರಂಗಿಣಿ" ಎಂಬ ಮಾಸಪತ್ರಿಕೆಯನ್ನು ಆರಂಭಿಸಿ ಅದಕ್ಕೆ ಸ್ವತಂತ್ರ ಮುದ್ರಣಾಲಯವನ್ನು ಅಣಿಗೋಳಿಸಿದರು. ಅದರಂತೆಯೇ ಶಿಕ್ಷಣ ಪ್ರೇಮಿಗಳಾದ ಗುರಸಿದ್ಧರಾಜಯೋಗಿಂದ್ರರು ಕೆ. ಎಲ್. ಇ ಸಂಸ್ಥೆಯ ಸಂಚಾಲಕರನ್ನು ಪ್ರೇರೇಪಿಸಿ ಶ್ರೀ ಕಾಡಸಿದ್ಧೇಶ್ವರ ಕಾಲೇಜು ಸ್ಥಾಪಿಸಲು ೮೦ ಸಾವಿರ ರೂಪಾಯಿಗಳನ್ನು ದಾನ ನೀಡಿದರು. ಅದರಂತೆ ೧ ಲಕ್ಷ ರೂಪಾಯಿಗಳ ಕೊಡುಗೆ ನೀಡಿ ಜಗದ್ಗುರು ಗಂಗಾಧರ ಕಾಮಸ೯ ಕಾಲೇಜನ್ನು ಸ್ಥಾಪಿಸಿದರು. ವಾಣಿಜ್ಯ ಕೇಂದ್ರವಾದ ಹುಬ್ಬಳ್ಳಿ ನಗರವನ್ನು ಶಿಕ್ಷಣ ಕೇಂದ್ರವಾಗಿ ನಿರ್ಮಿಸುವಲ್ಲಿ ಪರಿಶ್ರಮಿಸಿದರು.

ಶ್ರೀ ಮೂರುಸಾವಿರಮಠದ ನೂತನ ಯುಗಾರಂಭ :

ಕ್ರಿ. ಶ ೧೯೫೮ ಮೇ ೧ ರಂದು ಹುಬ್ಬಳ್ಳಿಯ ಮೂರುಸಾವಿರಮಠದ ಇತಿಹಾಸದಲ್ಲಿ ನವಯುಗ ಆರಂಭವಾಯಿತು. ಪೂಜ್ಯ ಜಗದ್ಗುರು ಗಂಗಾಧರ ರಾಜಯೋಗೀಂದ್ರ ಮಹಾಸ್ವಾಮಿಗಳು ಒ೦ದು ವ್ಯಕ್ತಿಯಲ್ಲ, ದೊಡ್ಡ ಶಕ್ತಿ ಎಂಬುದನ್ನು ನಾಡು ಮನಗಂಡಿದೆ. ನಿರಂತರವಾಗಿ ದುಡಿಯುವ ಭಕ್ತವೃಂದವನ್ನು ಉದ್ಧರಿಸಿದ ಮಹಾನ್ ವ್ಯಕ್ತಿತ್ವ ಹೊಂದಿದವರು ದಿ. ಡಾ|| ಮೂಜಗ೦ ರವರು. ತಮ್ಮ ಕಾಲದಲ್ಲಿ "ಪರಂಜ್ಯೋತಿ" ಎ೦ಬ ಮಾಸಪತ್ರಿಕೆ ಪ್ರಾರಂಭಿಸಿದರು. ಇದರ ಮೂಲಕ ಧಮ೯, ಸಾಹಿತ್ಯ, ಸಂಸ್ಕೃತಿ, ಕಲೆ, ಅರೋಗ್ಯ ಕುರಿತಾದ ಚಟುವಟಿಕೆಗಳು ಜನರನ್ನು ಮುಗ್ಧಗೊಳಿಸುತ್ತಲಿವೆ. ಮೂಜಗ೦ ರವರ ಕಾಲದಲ್ಲಿ ಅನೇಕ ಶಾಲೆ, ಕಾಲೇಜುಗಳನ್ನು ಸ್ಥಾಪಿಸಿದರು. ಸ್ತ್ರೀ ಪುರುಷರ ಸಮಾನತೆಯ ವಿಚಾರ ಹೇಳುತ್ತಾರೆ. ಸ್ತ್ರೀ ಶಿಕ್ಷಣಕ್ಕೆ ಪ್ರಾಮುಖ್ಯತೆ ಕೊಡಬೇಕೆಂದು ಸರಕಾರದ ವಿಚಾರವಂತರ ಅಭಿಮತದಂತೆ ಈ ವಿಚಾರಗಳನ್ನು ಕಾಯ೯ರೂಪಕ್ಕೆ ತಂದ ಮಹಾಮಹಿಮರು ಶ್ರೀ ಮೂಜಗಂ ರವರು. ಮಹಿಳೆಯರಿಗಾಗಿಯೇ ಶಾಲೆ, ಕಾಲೇಜುಗಳು, ಶಿಸುವಿಹಾರಗಳನ್ನು ಸ್ಥಾಪಿಸಿದ್ದಲ್ಲದೇ ಈ ಜಗದ್ಗುರುಗಳವರು ಹುಬ್ಬಳ್ಳಿ ಮಹಾನಗರದಲ್ಲಿ ಪ್ರಪ್ರಥಮ ಮಹಿಳಾ ಕಾಲೇಜೊಂದನ್ನು ಸ್ಥಾಪಿಸಿದರು. ಇಂದು ೩೦೦೦ ವಿದ್ಯಾಥಿ೯ನಿಯರಿಗಿಂತಲೂ ಹೆಚ್ಚು ವಿದ್ಯಾರ್ಥಿನಿಯರು ಶಿಕ್ಷಣ ಪಡೆಯಲು ಅನುಕೂಲವಾಯಿತು. ಇವರು ದೃಢನಿಧಾ೯ರಮಾಡಿ ತೆರೆದ ಈ ಸಂಸ್ಥೆ ಮಹಿಳಾ ಕಾಲೇಜು ಹೆಮ್ಮರವಾಗಿ ಬೆಳೆದಿದೆ. ಶ್ರೀಮಠದ ಜಗದ್ಗುರುಗಳು ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಗುರುಸ್ವಾಮಿಗಳು.

ಮೂಜಗ೦ ಅವರು ಬರೆದ "ಪೂರ್ಣಜ್ಞ ವಚನ" ಸಾಹಿತ್ಯದ ಕೃತಿ ಮೇರು ಕೃತಿ ಎನಿಸಿದೆ. ಇದೊಂದು ಅತ್ಮಾನುಭವದ ಗ್ರಂಥವೂ ಆಗಿದೆ. "ರಜತ ದೀಪ್ತಿ" ಅನೇಕ ಸಣ್ಣ ಪುಟ್ಟ ಗ್ರಂಥಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ್ಧಾರೆ. ಶಿವಯೋಗ ಮ೦ದಿರದ ಸ್ಥಾಪನೆಯು ಸಾಧಕರಿಗೆ ವರದಾನವಾಗಿದೆ. ಶ್ರೀ ಜಗದ್ಗುರು ಗುರುಸಿದ್ಧೇಶ್ವರ ಸಹಕಾರಿ ಆಸ್ಪತ್ರೆ, ಲಿಂಗರಾಜ ಫ್ರೀ ಬೋರ್ಡಿಂಗದ ಪುನರ್ ನಿಮಾ೯ಣ, ಅಕ್ಕಿ ಉಳವಪ್ಪ ವಿದ್ಯಾಥಿ೯ನಿಲಯ, ಶ್ರೀ ಜಗದ್ಗುರು ಗುರುಸಿದ್ಧೇಶ್ವರ ಜನರಲ್ ಹಾಸ್ಪಿಟಲ್, ವಿಜಯ ಮಹಾಂತೇಶ ಲಲಿತ ಕಲಾ ಮಹಾವಿದ್ಯಾಲಯ, ಶ್ರೀ ಕುಮಾರೇಶ್ವರ ವೈದಿಕ ಪಾಠಶಾಲೆ, ಶ್ರೀ ಜಗದ್ಗುರು ಮೂರುಸಾವಿರಮಠ ವಿದ್ಯಾವಧ೯ಕ ಸಂಘ, ಮಕ್ಕಳಿಗಾಗಿ ಮಾಧ್ಯಮಿಕ ಶಾಲೆಗಳು, ಶ್ರೀ ಜಗದ್ಗುರು ಗಂಗಾಧರ ಸಂಸ್ಕೃತ ಕಾಲೇಜು, ಶ್ರೀ ಜಗದ್ಗುರು ಗಂಗಾಧರ ಧಮ೯ಪ್ರಚಾರಕ ಮಂಡಳ ಇವೆಲ್ಲ ಸಂಸ್ಥೆಗಳು ಶ್ರೀ ಲಿ೦. ಜಗದ್ಗುರು ಗಂಗಾಧರ ಮಹಾಸ್ವಾಮಿಯವರು ಸ್ಥಾಪಿಸಿದ ಕೆಲವು ಮುಖ್ಯ ಸಂಸ್ಥೆಗಳು. ವೈಶಿಷ್ಟ್ಯಪೂರ್ಣವಾದ ಅವರ ಸಾಧನೆಗಳು. ಶ್ರೀಮಠದಲ್ಲಿ ಒಟ್ಟು ೨೭ ಗದ್ಗುಗೆಗಳು ಉಪಲಬ್ಧ ವಿದ್ದು, ಇವುಗಳಲ್ಲಿ ಕತೃ೯ ಗದ್ಗುಗೆಯು ಬಾಗಿಲೋಳಗೆ ಕೈಮುಗಿದು ಬಾ ಯಾತ್ರಿಕನೆ! ಎ೦ಬ೦ತೆ ದಿನ ನಿತ್ಯ ಎಷ್ಟೋ ಭಕ್ತರಿಗೆ ಮಹಾಮಹಿಮ ಗುರುಸಿದ್ಧೇಶ್ವರರ ದರ್ಶನ ಭಾಗ್ಯ ದೊರೆಯುತ್ತಲಿದೆ. ಒಟ್ಟನಲ್ಲಿ ಲಿ೦. ಜಗದ್ಗುರು ಗ೦ಗಾಧರ ಮಹಾಸ್ವಾಮಿಗಳು ಹುಬ್ಬಳ್ಳಿ ಮೂರುಸಾವಿರಮಠದ ವಿದ್ಯಾನಿಧಿ ಎ೦ದು ಡಾ|| ಗುರುಸಿದ್ಧದೇವ ಶಿವಾಚಾರ್ಯರು ರಾಜಗುರು ಹಿರೇಮಠ ಕೆಳದಿ ಅವರು ಅಭಿಪ್ರಾಯ ಪಟ್ಟರುವುದು ಎಲ್ಲರಿಗೂ ಹೆಮ್ಮೆಯನ್ನುಂಟು ಮಾಡಿದೆ. ಹುಬ್ಬಳ್ಳಿಯಲ್ಲಿ ಹಿ೦ದೂ-ಮುಸ್ಲಿಂ ರಲ್ಲಿ ಸುಮಧುರ ಬಾಂಧವ್ಯವನ್ನು ಮೂಡಿಸಿ ಸಮಾಜದಲ್ಲಿ ಶಾ೦ತಿ ಸ್ಥಾಪಿಸಿ ಮಾನವ ಕಲ್ಯಾಣ ಮಾಡಿದ್ದು ಐತಿಹಾಸಿಕರ ಸತ್ಯ ಶಾಶ್ವತ ಘಟನೆಯೇ ಸರಿ. ಒಟ್ಟಿನಲ್ಲಿ ಲಿ೦. ಜಗದ್ಗುರು ಗಂಗಾಧರ ಮಹಾಸ್ವಾಮಿಗಳವರ ಕಾಲ ಧಾರ್ಮಿಕ, ಸಾಮಾಜಿಕ, ಸಾಹಿತ್ಯಕ, ಆರ್ಥಿಕ ಅಭಿವೃದ್ಧಿಯ ಸುವರ್ಣಕಾಲವೆ೦ದು ಹೇಳಬಹುದು.

ಪರಮಪೂಜ್ಯ ಶ್ರೀ ಮನ್ಮಹಾರಾಜ ನಿರ೦ಜನ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು:

ಪೂಜ್ಯರು ೧೭-೦೨-೧೯೫೯ ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರ ತಾಲೂಕಿನ ಕಲ್ಕೆರೆ ಗ್ರಾಮದಲ್ಲಿ ತ೦ದೆ ವೇದಮೂರ್ತಿ ಶಿವಮೂರ್ತಯ್ಯನವರು ತಾಯಿ ಶರಣೆ ಗಂಗಮ್ಮನವರ ಪವಿತ್ರ ಉದರದಲ್ಲಿ ಜನಿಸಿದರು.

ಪೂಜ್ಯರು ಪ್ರಾಥಮಿಕ ಶಿಕ್ಷಣವನ್ನು ಕಲ್ಕೆರೆಯಲ್ಲಿ ನಂತರ ಪ್ರೌಢಶಿಕ್ಷಣವನ್ನು ಗಿರಯಾಪುರದ ಶ್ರೀ ಗುರುಕುಮಾರಾಶ್ರಮದಲ್ಲಿದ್ದುಕೊಂಡು ಪೋರೈಸಿದರು. ಆನ೦ತರ ಲಿ೦. ಹಾನಗಲ್ ಕುಮಾರ ಮಹಾಸ್ವಾಮಿಗಳು ಸ್ಥಾಪಿಸಿದ ಶಿವಯೋಗ ಮಂದಿರದಲ್ಲಿ ೭ ವರ್ಷ ವೇದ, ಸಂಸ್ಕೃತ, ವಚನಾಧ್ಯಯನಗಳನ್ನು ಓದಿ ಜನ ಮೆಚ್ಚುಗೆ ಪಡೆದರು. ತದನಂತರ ೧೯೮೪ ರಲ್ಲಿ ಹಾನಗಲ್ಲ ಮಠದ ಪಿಅಠಾಧಿಪತಿಗಳಾಗಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಆ ಭಾಗದಲ್ಲಿ ತೆರೆದು, ಆ ಭಾಗದ ಜನತೆಗೆ ಅಶಾಕಿರಣವಾಗಿದ್ದಾರೆ. ಈ ಮಹಾಸ್ವಾಮಿಗಳವರು ಲಿ೦. ಮೂಜಗ೦ ರವರ ಕನಸು ನನಸಾಯಿತೆಂಬಂತೆ ೧೯೯೯ರ ಮಾರ್ಚ ೨೯ ರಂದು ಉತ್ತರ ಕರ್ನಾಟಕದ ಪ್ರತಿಷ್ಠಿತ ಮಠವಾದ ಶ್ರೀ ಮೂರುಸಾವಿರಮಠದ ಪೀಠಾಧಿಪತಿಗಳಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡು ಶ್ರೀಮಠದ ಪ್ರಗತಿಗಾಗಿ ಹಗಲಿರಳು ಶ್ರಮಿಸುತ್ತಿರುವರು.

ಶ್ರೀಮಠದ ಆಶ್ರಯದಲ್ಲಿ ಅನೇಕ ಸಂಘ, ಸಂಸ್ಥೆಗಳ ಸಾಧನೆಗಳು

೧) ವಿದ್ಯಾವರ್ಧಕ ಸಂಘ :
ನಮ್ಮ ಈ ಮೂರುಸಾವಿರಮಠದ ವಿದ್ಯಾವರ್ಧಕ ಸಂಘವು ಅಸ್ತಿತ್ವಕ್ಕೆ ಬ೦ದ ನಂತರ ಗಣ್ಯರಾದ ದಿ. ಡಾ. ಟಿ. ಎ೦. ಕೌಸಾಳಿ, ೧೯೬೭ ರಿಂದ ೧೯೭೮ರ ವರೆಗೆ ಹಾಗೂ; ಶ್ರೀ ವ್ಹಿ. ಎಂ. ಮಿರ್ಜಿ ೧೯೭೯ ರಿಂದ ೧೯೮೨ ರ ವರೆಗೆ ಶ್ರೀ ವೀರಚಂದ ವಾರಾಣಜಿ ಕಾನಜಿ ೧೯೮೨ ರಿಂದ ೧೯೯೬ ರ ವರೆಗೆ ಶ್ರೀ ಆರ್. ವಾಯ್. ಜಾಧವ ೧೯೯೬ ಹಾಗೂ ಶ್ರೀ ಜಿ.ಎ೦. ಚಿಕ್ಕಮಠ ವರ್ತಕರು ಹುಬ್ಬಳ್ಳಿ ಅವರು ೨೦೦೯ ರ ನವೆಂಬರ ವರೆಗೆ ಗೌರವ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವರು. ಸಧ್ಯದಲ್ಲಿ ೨೦೦೯ ಡಿಶಂಬರ ತಿಂಗಳಿನಿಂದ ಶ್ರೀ ಅರವಿಂದ ಕುಬಸದ, ಚಾರ್ಟರ್ಡ ಅಕೌ೦ಟ೦ಟ್ ಅವರು ಗೌರವ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಲ್ಲಿ ದಿ. ವೀರಚಂದ ನಾರಾಣಜಿ ಕಾನಜಿಯವರ ಸೇವೆ ಶ್ಲಾಘನೀಯವಾಗಿದೆ. ಇವರ ಅಧಿಕಾರಾವಧಿಯಲ್ಲಿ ದ್ವಾರಬಾಗಿಲಿಗೆ ಹೊಂದಿಕೊಂಡು ಸುತ್ತಲೂ ಕಾಂಪ್ಲೆಕ್ಸ್ ಕಟ್ಟಸುವ ಕಾರ್ಯ ಪೂರ್ಣಗೊಂಡಿತು. ಶ್ರೀಮಠಕ್ಕೆ ನಿರ್ದಿಷ್ಠವಾಗಿ ಬಾಡಿಗೆ ಬರುವಂತೆ ಮಾಡಿದರು. ಶ್ರೀಮಠದ ಆರ್ಥಿಕ ಶ್ರೇಯೋಭಿವೃದ್ಧಿಗೆ ಅಡಿಪಾಯ ಹಾಕಿದರು. ಈಗಿನ ಸಧ್ಯದ ವಿದ್ಯಾವರ್ಧಕ ಸ೦ಘದ ಗೌರವ ಕಾರ್ಯಾಧ್ಯಕ್ಷರು, ಎಲ್ಲ ಸದಸ್ಯರು ಪ್ರಗತಿಪರ ವಿಚಾರವುಳ್ಳವರಾಗಿದ್ದು ಸಮಗ್ರ ಶ್ರೀಮಠದ ಅಸ್ತಿ ವಿವರಣೆ ಪಡೆಯುವದರಲ್ಲಿ ನಿರತರಾಗಿರುವರು. ಶ್ರೀಮಠದ ಆಸ್ತಿಗಳ ಮೇಲಿನ ಬಾಡಿಗೆ ಪರಿವೀಕ್ಷಿಸಿ. ಬಾಡಿಗೆ ಹಣ ಇಂದಿನ ದಿನಮಾನಕ್ಕೆ ತಕ್ಕಂತೆ ನಿರ್ಧರಿಸಿ ಅರ್ಥಿಕ ಆಧಾರಿತ: ಮತ್ತು ಅರ್ಥಿಕ ಸಂಪನ್ಮೂಲಗಳನ್ನು ಕ್ರೂಢಿಕರಿಸುವಲ್ಲಿ ನಿರತರಾಗಿರುವದು ತುಂಬಾ ಶ್ಲ್ಯಾಘನೀಯ ಕಾರ್ಯವೆ೦ದು ಹೇಳುಬಹುದು. ಶ್ರೀ ಜಗದ್ಗುರು ಮುರುಸಾವಿರಮಠ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಸಲ್ಪಡುವ ಎಲ್ಲ ಶಾಲೆ ಕಾಲೇಜುಗಳ ಶಿಕ್ಷಣ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಶ್ರಮವಹಿಸಿ ಇ೦ದಿನ ಗೌರವ ಕಾರ್ಯಾಧ್ಯಕ್ಷರು ಹಾಗೂ ಸದಸ್ಯರುಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ಇವರೆಲ್ಲರ ಮೇಲೆ ಗಣ್ಯಮಾನ್ಯ ವ್ಯಕ್ತಿಗಳನ್ನೊಳಗೊಂಡ ಉನ್ನತ ಸಮಿತಿಯು ಶ್ರೀಮಠದ ಅಭಿವೃದ್ಧಿಗೆ ಸಲಹೆ ಸೂಚನೆಗಳನ್ನು ನೀಡುತ್ತ ಒಳ್ಳೆಯ ಮಾರ್ಗದರ್ಶನ ನೀಡುತ್ತಲಿದೆ. ಶಿಕ್ಷಣ ಸಂಸ್ಥೆಗಳು ಪ್ರತಿಷ್ಠಿತ ಮಹಾನಗರದಲ್ಲಿ ಪ್ರಗತಿಯತ್ತ ದಾಪುಗಾಲು ಹಾಕುತ್ತ ನಡೆದಿರುವದಕ್ಕೆ ವಿದ್ಯಾವರ್ಧಕ ಸಂಘದ ಶ್ರೀರಕ್ಷೆಯಿಂದ ಸಾಧ್ಯವಾಗಿದೆ.

೨) ಶ್ರೀ ಅನ್ನಪೂರ್ಣೇಶ್ವರಿ ದಾಸೋಹ ಸಮಿತಿ :
ಶ್ರೀಮಠವು ಬಹು ವರ್ಷಗಳ ಪರ೦ಪರೆಯ೦ತೆ ಬೇಡಿ ಬಂದ ಭಕ್ತರಿಗೆ ಅನ್ನದಾಸೋಹ ಕಾರ್ಯಕ್ರಮವು ನಡೆದು ಬಂದಿದೆ. ಈಗ ಕೆಲವರ್ಷಗಳ ಹಿಂದಿನಿಂದ ಈ ದಾಸೋಹ ಸೇವೆಯನ್ನು ಶ್ರೀ ಯತ್ನಳ್ಳಿ ನಿವೃತ್ತ ಶಿಕ್ಷಕರು ಫಲಾಪೇಕ್ಷೆ ಇಲ್ಲದೆಯೇ ನಿರ್ವಹಿಸಿಕೊಂಡು ಬಂದರು. ನಿರಂತರವಾಗಿ ನಡೆಸಿಕೊಂಡು ಹೋಗುವದಕ್ಕೆ ಅನೇಕ ಅಡೆತಡೆಗಳುಂಟಾದವು. ಈಗ ಸಧ್ಯದಲ್ಲಿ ಶ್ರೀ ವಿಜಯ ಶೆಟ್ಟರ ಗಣ್ಯ ವರ್ತಕರು ಹುಬ್ಬಳ್ಳಿ ಇವರ ಅಧ್ಯಕ್ಷತೆಯಲ್ಲಿ ೧೩ ಜನ ಸದಸ್ಯರನ್ನೊಳಗೊಂಡ ಸಮಿತಿಯಿ೦ದ ಶ್ರೀ ಅನ್ನಪೂರ್ಣೇಶ್ವರಿ ದಾಸೋಹಕ್ಕೆ ಒಂದು ಹೊಸ ರೂಪವನ್ನು ಕೊಟ್ಟರು. ಮಹಾದಾನಿಗಳಾಗಿ ಇವರೇ ಪ್ರಥಮವಾಗಿ ಮುಂದೆ ಬಂದು ಅತ್ಯಂತ ಕಾಳಜಿಪೂರ್ವಕವಾಗಿ ಈ ದಾಸೋಹವು ಕಳೆದ ೬-೭ ತಿ೦ಗಳಿ೦ದ ಮುನ್ನಡೆದಿದೆ. ರುಚಿಕಟ್ಬಾದ ಸಿಹಿ ಊಟವನ್ನು ಉಣ ಬಡಿಸುವ ವ್ಯವಸ್ಥೆ ಮಾಡಿದ್ದಾರೆ. ಪ್ರತಿ ನಿತ್ಯ ನಿರಂತರವಾಗಿ ಭಕ್ತರು ಬಡವರು, ನಿರ್ಗತೀಕರು, ಪ್ರವಾಸಿಗರು ಹೊರಗಿನಿಂದ ಬರುಹೋಗುವ ಜನರಿಗೆ ಮದ್ಯಾಹ್ನ ೧ ಘಂಟೆಯಿಂದ ಸಾಯಂಕಾಲ ೪ ಘಂಟೆಯವರೆಗೆ ಭಕ್ತರಿಗೆ ದಾಸೋಹ ನಡೆಯುತ್ತಲಿದೆ. ಪ್ರತಿ ದಿನ ೩೦೦ ರಿಂದ ೪೦೦ ಭಕ್ತಾದಿಗಳು ದಾಸೋಹ ಸೇವೆ ಪಡೆಯುತ್ತಿದ್ದಾರೆ. ಸದ್ಭಕ್ತರು ತೃಪ್ತಿಗೊಂಡು ಹೋಗುವ ಪರಿಪಾಠ ಮು೦ದುವರೆದಿದೆ. ಎಲ್ಲಾ ಸದಸ್ಯರು ಹುಮ್ಮಸ್ಸಿನಿ೦ದ ಈ ಕಾರ್ಯ ನಿರ್ವಹಿಸುತ್ತಿರುವದು ಸಮಾಜದ ಭಕ್ತರಿಂದ ಶ್ಲ್ಯಾಘಿಸಲ್ಪಟ್ಟಿದೆ. ಬರುವ ಹೋಗುವ ಜನ ಸಮೂಹದಿಂದ ಶ್ರೀಮಠಕ್ಕೆ ಒ೦ದು ಹೊಸ ಕಳೆ ಬ೦ದ೦ತಿದೆ.

ಶ್ರೀ ಜಗದ್ಗು ರು ಗಂಗಾಧರ ಧರ್ಮಪ್ರಚಾರಕ ಮಂಡಳ ಟ್ರಸ್ಟ್ ಇ-೪೭೫ ಶ್ರೀ ಅಕ್ಕಿ ಉಳವಪ್ಪ ವಿದ್ಯಾರ್ಥಿನಿಲಯ ಟ್ರಸ್ಟ್ ಇ-೪೭೭, ಶ್ರೀ ಲಿ೦ಗರಾಜ ಫ್ರೀ ಬೋರ್ಡಿಂಗ್ ಶ್ರೀ ಕುಮಾರೇಶ್ವರ ಶಿವಯೋಗಿ ಸಂಘ ಟ್ರಸ್ಟ್ ಇ-೪೭೬, ಈ ಎಲ್ಲಾ ಟ್ರಸ್ಟು ಹಾಗೂ ಸಂಘ ಸಂಸ್ಥೆಗಳು ಶ್ರೀಮಠದ ಧನಸಹಾಯಕ್ಕೆ ಪೂರಕವಾಗಿವೆ.

೩) ಶ್ರೀ ಮಹಾತ್ಮಾ ಬಸವೇಶ್ವರ ಅತಿಥಿಗೃಹ ಮತ್ತು ಶ್ರೀ ಚನ್ನಮಲ್ಲಪ್ಪ ಅಸುಂಡಿ ಸಾಂಸ್ಕೃತಿಕ ಭವನ :
ಶ್ರೀಮಠಕ್ಕೆ ಪರಸ್ಥಳದ ಗ್ರಾಮೀಣ ಭಕ್ತಿರು, ಯಾತ್ರಾರ್ಥಿಗಳು, ವಿದ್ಯಾರ್ಥಿಗಳು, ಪ್ರವಾಸಿಗರು ನಾಡಿನ ನಾನಾ ಭಾಗಗಳಿಂದ ಶ್ರೀಮಠಕ್ಕೆ ಬಂದು ಹೋಗುತ್ತಾರೆ, ಇಂದಿನ ದುಬಾರಿ ದಿನಗಳಲ್ಲಿ ಕೆಲದಿನಗಳವೆರೆಗೆ ಇಲ್ಲಿ ತಂಗುತ್ತಾರೆ. ಇವರೆಲ್ಲರಿಗೆ ಶ್ರೀ ಮಠವು ಆಶ್ರಯತಾಣವಾಗಿದೆ. ಅತೀ ಕಡಿಮೆ ದರದಲ್ಲಿ ವಸತಿ ಸೌಕರ್ಯವನ್ನು ಕಲ್ಪಿಸಿ ಕೊಡಲಾಗುವುದು. ಅದರೆ ಇದು ಈಗ ಶಿಥಿಲಗೊಂಡಿದೆ. ಅದರ ಪುನರ್ ನಿರ್ಮಾಣವು ಅತ್ಯವಶ್ಯಕವಾಗಿ ಮಾಡಲೇಬೇಕಾಗಿದೆ. ಇದೆಕ್ಕೆ ಅರ್ಥಿಕ ಸಂಪತ್ತಿನ ಕೊರತೆ ಇದೆ. ಕಾರಣ ನಮ್ಮ ಘನ ಸರಕಾರ ಕೃಪೆ ಮಾಡಿ ಈ ಮಾಡಲೇಜೇಕಾಗಿದೆ. ಇದಕೈ ಆರ್ಥಿಕ ಸಂಪತ್ತಿನ ಕೊರತೆ ಇದೆ. ಕಾರಣ ನಮಪ್ರಿ ಘನ ಸರಕಾರ ಕೃಪೆ ಮಾಡಿ ಈ ಕೊರತೆಯನ್ನು ನೀಗಿಸಿಕೋಡಬೇಕೆಂದು ನಾವು ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ಉನ್ನತ ಸಮಿತಿಯ ಗಣ್ಯರು ಆಶಿಸುತ್ತೇವೆ.

೪) ವಿದ್ಯಾರ್ಥಿನಿಲಯ (ಹಾಸ್ಟಲ್) :
ಶ್ರೀಮಠದಲ್ಲಿ ಲಿಂಗರಾಜ ಫ್ರೀ ಬೋರ್ಡಿಂಗ್, ಶ್ರೀ ಗುರುಸಿದ್ದೇಶ್ವರ ಜನರಲ್ ಹಾಸ್ಟಲ್, ಶ್ರೀ ಅಕ್ಕಿ ಉಳವಪ್ಪ ವಿದ್ಯಾರ್ಥಿನಿಲಯಗಳು ಇವೆ. ಇವುಗಳು ಶಿಥಿಲಗೊಂಡಿವೆ. ಶ್ರೀ ಗುರುಸಿದ್ಧೇಶ್ವರ ಜನರಲ್ ಹಾಸ್ಟಲ್ ಸಂಪೂರ್ಣವಾಗಿ ಕೆಡವಲಾಗಿದೆ. ಇದಕ್ಕೆ ಹೊಸ ಕಟ್ಟಡ ನಿರ್ಮಾಣವಾಗಬೇಕಾಗಿದೆ. ಸುಮಾರು ೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಸತಿ ಕೊರತೆ ಇದೆ. ಕಾರಣ ಸಮಾಜ ಮತ್ತು ಸರಕಾರಗಳಿಂದ ಧನ ಸಹಾಯದ ಅವಶ್ಯಕತೆ ಇದೆ.

ಬಡ ವಿದ್ಯಾರ್ಥಿನಿಲಯ, ಯಾತ್ರಿನಿವಾಸ ಮತ್ತು ಬೋರ್ಡಿಂಗಗಾಗಿ ಭೋಜನಾಲಯ, ವೀರಶೈವ ಅಧ್ಯಯನ ಕೇಂದ್ರ, ವಚನ ಸಾಹಿತ್ಯದ ಅಧ್ಯಯನ ಕೇಂದ್ರ ಗ್ರಂಥಾಲಯ.

೫) ಪರಂಜ್ಯೋತಿ ಮಾಸಪತ್ರಿಕೆ :
ಶ್ರೀ ಮಠದ ಅಶ್ರಯದಲ್ಲಿ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಲೇಖನಗಳನ್ನೊಳಗೊಂಡ ಪತ್ರಿಕೆಯು ೧೯೬೮ ರಿಂದಲೇ ಓದುಗರಿಗೆ ನಿರಂತರವಾಗಿ ಒದಗಿಸುತ್ತ ಬಂದಿದೆ.

೬) ಶ್ರೀ ಗುರುಸಿದ್ಧೇಶ್ವರ ಕಲ್ಯಾಣ ಮಂಟಪ :
ಮದುವೆ ಗಳಿಗಾಗಿ ಪ್ರತ್ಯೇಕವಾಗಿ ಬಮ್ಮಾಪೂರ ಓಣಿಯಲ್ಲಿ ಸುಸಜ್ಜಿತವಾದ ಶ್ರೀ ಗುರುಸಿದ್ಧೇಶ್ವರ ಕಲ್ಯಾಣ ಮ೦ಟಪವಿದೆ.

೭) ಗ್ರಂಥಾಲಯ ಮತ್ತು ಪ್ರಕಟಣೆಗಳು:
ಶ್ರೀ ಜಗದ್ಗುರು ಗ೦ಗಾಧರ ಧರ್ಮಪ್ರಚಾರಕ ಮಂಡಳದಿಂದ ಸುಮಾರು ೫೫೦ ಕೃತಿಗಳು ಇಲ್ಲಿಯವರೆಗೆ ಪ್ರಕಟವಾಗಿವೆ. ಅಲ್ಲದೇ ಸುಮಾರು ೫೦೦೦ ಗ್ರಂಥಗಳು ’ಶ್ರೀ ಉಳವಿ ಚನ್ನಬಸವೇಶ್ವರ ವಿಶ್ವ ವೀರಶೈವ ಸಂಶೋಧನ ಕೇ೦ದ್ರ ಗ್ರಂಥಾಲಯ’ದಲ್ಲಿ ಓದುಗರಿಗೆ ಲಭ್ಯವಾಗಿರುತ್ತವೆ. ಈ ಗ್ರಂಥಾಲಯದಲ್ಲಿ ಪುರಾತನ ವೇದ, ಆಗಮ, ಉಪನಿಷತ್ತು, ಪುರಾಣ,ಸ್ತೋತ್ರಗಳು, ಮಂತ್ರಗಳು, ದಂಡಕ ಅಷ್ಟಕ, ವೇದಾಂತ ಮತ್ತು ಧರ್ಮಶಾಸ್ತ್ರ ಗ್ರಂಥಗಳು, ಜ್ಯೋತಿಷ್ಯ, ನಾಟಕ, ಕಾವ್ಯ, ವ್ಯಾಕರಣ ಛಂದಸ್ಪು, ಚರಿತ್ರೆ, ಸಂಪಾದನೆ, ಸಂಕಲನ ಗ್ರಂಥಗಳು, ಕಥೆಗಳು ಮು೦ತಾದ ಪುರಾತನ ತಾಡ ಓಲೆಗಳು ಹಸ್ತ ಪ್ರತಿಗಳೂ ಕೂಡ ಲಭ್ಯವಿರುತ್ತವೆ. ಈ ವಿಷಯಗಳಿಗೆ ಸಂಬಂಧಿಸಿದ ಸುಮಾರು ೨೦೦ ಹಸ್ತಪ್ರತಿಗಳು ಹಾಗೂ ಸುಮಾರು ೨೫೦ ತಾಡೋಲೆಗಳು ಮು೦ತಾದ ಅಮೂಲ್ಯ ಗ್ರಂಥಗಳನ್ನು ಸಂರಕ್ಷಿಸಿ ಇಡಲಾಗಿದೆ.

೮) ಉತ್ಸವಗಳು :
೧) ಪ್ರತಿವರ್ಷ ಶ್ರಾವಣ ಮಾಸದಲ್ಲಿ ಕೊನೆಯ ಸೋಮವಾರದಂದು ಕರ್ತೃ ಶ್ರೀ ಗುರುಸಿದ್ಧೇಶ್ವರರ ರಥೋತ್ಸವ (ಜಾತ್ರೆ) ಜರುಗುತ್ತ ದೆ.
೨) ದಸರಾ ಹಬ್ಬವನ್ನು ಪ್ರತಿವರ್ಷ ವಿಬೃಂಭಣೆಯಿಂದ ಆಚರಿಸಲಾಗುತ್ತ ದೆ.
೩) ಮಹಾಶಿವರಾತ್ರಿ
೪) ಕಾರ್ತಿಕೋತ್ಸವ
೫) ಬಸವ ಜಯಂತಿ
೬) ನಿತ್ಯ ಕರ್ತೃ ಗದ್ಗುಗೆಗೆ ಪೂಜಾ ಸೇವೆಗಳ; ನಡೆಯುತ್ತವೆ.

೯) ವೈದ್ಯಕೀಯ ಸೇವೆ :
ಶ್ರೀ ಜಗದ್ಗುರು ಲಿಂಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಮೂರುಸಾವಿರಮಠ ಅವರು ಗೋಕಾಕ ತಾಲೂಕ ಘಟಪ್ರಭಾದಲ್ಲಿ ಶ್ರೀ ಗುರುಸಿದ್ಧೇಶ್ವರ ಸಹಕಾರಿ ಅಸ್ಪತ್ರೆಯನ್ನು ೧೯೫೧ ರಲ್ಲಿ ಅಯುರ್ವೇದ ದವಾಖಾನೆಯನ್ನು ಆರ೦ಭಿಸಿದರು. ಈಗ ಆರೋಗ್ಯ ಸಂಸ್ಥೆಯಲ್ಲಿ ೩೦೦ ಹಾಸಿಗೆಗಳ ಅಲೋಪತಿ ಆಸ್ಪತ್ರೆ, ೧೫೦ ಹಾಸಿಗೆಗಳ ಅಯುರ್ವೇದದ ಆಸ್ಪತ್ರೆ, ತುರ್ತು ಚಿಕಿತ್ಸಾ ಕೇಂದ್ರ, ಒಳ ಮತ್ತು ಹೊರ ರೋಗಿಗಳ ವಿಭಾಗ, ಟಿ.ಬಿ. ವಾರ್ಡ ಹೀಗೆ ಹಲವಾರು ಆರೋಗ್ಯ ಸಂಬಂಧಿ ಅ೦ಗ ಸಂಸ್ಥೆಗಳಿವೆ. ಅಂತರಾಷ್ಟ್ರೀಯ ಖ್ಯಾತಿಯ ಯೋಗ ಮತ್ತು ನಿಸರ್ಗೋಪಚಾರ ಕೇಂದ್ರ, ಆಯುರ್ವೇದ ಸ್ನಾತ್ತಕೋತ್ತರ ಪದವಿ ಕಾಲೇಜ ಮತ್ತು ಸಂಶೋಧನಾ ಕೇಂದ್ರ, ನರ್ಸಿ೦ಗ ಕಾಲೇಜ, ಔಷಧಿಯ ಸಸ್ಯವನ ಮು೦ತಾದ ವ್ಯವಸ್ಥೆಯಿಂದ ನಾಡಿನಲ್ಲಿ ಜೆ.ಜೆ. ಸಹಕಾರಿ ಆಸ್ಪತ್ರೆಯು ಸುಪ್ರಸಿದ್ಧವಾಗಿದೆ. ಜಾತ್ಯಾತೀತ ಮನೋಭಾವನೆಯಿಂದ ಶ್ರೀ ಬಿ.ಕೆ.ಹೆಚ್. ಪಾಟೀಲರು ಮುಖ್ಯ ವೈದ್ಯಾಧಿಕಾರಿ ಇವರ ನೇತೃತ್ವದಲ್ಲಿ ನಾಡಿನ ದೋಡ್ಡ ವೈದ್ಯಕೀಯ ಕೇಂದ್ರವಾಗಿ ಬೆಳೆದಿದೆ.

೧೦) ಭಾವೈಕ್ಯತೆ:
ಶ್ರೀಮಠಕ್ಕೆ ಜಾತಿ ಭೇದವಿಲ್ಲದೇ ಎಲ್ಲ ಸಮಾಜದ ಭಕ್ತರು ಗದ್ಗುಗೆಯ ದರ್ಶನಕ್ಕೆ ಬರುತ್ತಾರೆ. ಪ್ರತಿವರ್ಷ ಮುಸ್ಲಿಂ ಬಾ೦ಧವರು ರಮಜಾನ, ಬಕ್ರೀದ ಅವರ ಹಬ್ಬಗಳ ದಿವಸ ಸಾಮೂಹಿಕ ಪ್ರಾರ್ಥನೆ ಮುಗಿಸಿಕೊಡು ಶ್ರೀಮಠಕ್ಕೆ ಶ್ರೀಗಳವರ ದರ್ಶನಾಶೀರ್ವಾದ ಪಡೆದುಕೊಳ್ಳುವರು. ಅಲ್ಲದೆ ಪರಿಶಿಷ್ಟ ಜಾತಿ, ಜನಾಂಗ, ಹಿಂದುಳಿದ ವರ್ಗದ ಜನರ ಕಲ್ಯಾಣಕ್ಕೆ ಶ್ರೀಮಠವು ಅದ್ಯ ಗಮನ ನೀಡುತ್ತಿದೆ.

ಶ್ರೀಮಠದಲ್ಲೀ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ವರ್ಷದುದ್ದಕ್ಕು ನಡೆದು ಬರುತ್ತಲಿವೆ. ಶ್ರೀಮಠದ ಸದ್ಭಕ್ತರು, ಗಣ್ಯರು, ಘನ ಸರಕಾರ ಅರ್ಥಿಕವಾಗಿ ಸಬಲತೆಯನ್ನು ಹೊಂದಲು ನೆರವಾಗಬೇಕೆಂದು ನಮ್ಮ ಕೋರಿಕೆ.
ಪರಿವಿಡಿ (index)
*
Previous ಲಿಂಗಾಯತ/ಲಿಂಗವಂತ ವೆಂದು ಸ್ಪಷ್ಟವಾಗಿ ಬರೆಯಿರಿ ರಾಜಗುರು ಸಂಸ್ಥಾನ ಕಲ್ಮಠ ಕಿತ್ತೂರು Next