ಲಿಂಗಾಯತರ ಪ್ರಮುಖ ಹಬ್ಬಗಳು

*

ಪ್ರಮುಖ ಹಬ್ಬಗಳು

೧) ಸಂಕ್ರಾಂತಿ - ಜನೆವರಿ- ೧೪
೨) ಸಿದ್ಧರಾಮೇಶ್ವರ ಜಯಂತಿ - ಜನೆವರಿ- ೧೪
೩) ಮಹಾ ಶಿವರಾತ್ರಿ
೪) ಪ್ರಥಮ ಶೂನ್ಯ ಪೀಠಾಧೀಶ ಅಲ್ಲಮ ಪ್ರಭು ಜಯಂತಿ (ಉಗಾದಿ/ಯುಗಾದಿ)
೫) ಗುರು ಬಸವ ಜಯಂತಿ (ವೈಶಾಖ ಮಾಸ, ಅಕ್ಷಯ ತೃತೀಯ)
೬) ಜಗನ್ಮಾತೆ ಅಕ್ಕ ಮಹಾದೇವಿ ಜಯಂತಿ
೭) ಕಾಯಕ ದಿನಾಚರಣೆ (ಮೇ ಡೇ)
೮) ಬಸವ ಪಂಚಮಿ (ಶ್ರಾವಣ ಮಾಸ, ಶುದ್ಧ ಪಂಚಮಿ) [ನಾಗ ಪಂಚಮಿ] ಗುರು ಬಸವಣ್ಣನವರು ಲಿಂಗೈಕ್ಯರಾದ ದಿನ
೯) ನೀಲಮ್ಮ ಷಷ್ಠಿ (ಬಸವ ಪಂಚಮಿಯ ಮಾರನೆ ದಿನ) ನೀಲಾಂಬಿಕೆ ಲಿಂಗೈಕ್ಯರಾದ ದಿನ
೧೦) ಚಿನ್ಮಯ ಜ್ಞಾನಿ ಚೆನ್ನ ಬಸವಣ್ಣ ಜಯಂತಿ (ದೀಪಾವಳಿ ಪಾಡ್ಯ)

2019 ನೇ ಸಾಲಿನ ಬಸವಾದಿ ಶರಣರ ಸ್ಮರಣೋತ್ಸವಗಳು

ಜನೇವರಿ -೧೪ ಲಿಂಗಾಯತ ಧರ್ಮ ಸಂಸ್ಥಾಪನ ದಿನ (ಸಂಕ್ರಾಂತಿ)
ಜನೇವರಿ -೧೫ ಸಿದ್ದರಾಮೇಶ್ವರರು ಜಯಂತೋತ್ಸವ
ಫೆಬ್ರವರಿ - ೪ ಮಹಾ ಶಿವರಾತ್ರಿ (ಸಾಮೊಹಿಕ ಇಷ್ಟಲಿಂಗ ಪೂಜಾ ಉತ್ಸವ)
ಫೆಬ್ರವರಿ - ೧೯ ಡೋಹರ ಕಕ್ಕಯ್ಯ ಜಯಂತೋತ್ಸವ
ಮಾರ್ಚ್-೬ ಅಲ್ಲಮ ಪ್ರಭುದೇವ ಜಯಂತೋತ್ಸವ; ಯುಗಾದಿ ಪಾಡ್ಯ
ಏಪ್ರಿಲ್ -೧೯ ಅಕ್ಕಮಹಾದೇವಿ ಜಯಂತೋತ್ಸವ; ದವನದ ಹುಣ್ಣಿಮೆ
ಮೇ - ೧ ಮಡಿವಾಳ ಮಾಚಿದೇವ ಜಯಂತಿ, ಕಾಯಕ ದಿನಾಚರಣೆ
ಮೇ -೭ ವಿಶ್ವಗುರು ಬಸವೇಶ್ವರ ಜಯಂತಿ
ಮೇ - ೧೮ ಶಿವನಾಗಮಯ್ಯ ಜಯಂತೋತ್ಸವ; ಆಗಿ ಹುಣ್ಣಿಮೆ
ಜೂನ್ -೦೩ ಕುರಬ ಗೋಲ್ಲಾಳೇಶ್ವರ ಜಯಂತೋತ್ಸವ; ಬಾದಾಮಿ ಅಮಾವಾಸ್ಯೆ
ಜೂನ್ -೧೭ ಅಂಬಿಗ ಚೌಡಯ್ಯ ಜಯಂತೋತ್ಸವ; ಕಾರ ಹುಣ್ಣಿಮೆ
ಜೂನ್-೩೦ ಪೂಜ್ಯ ಲಿಂಗಾನಂದ ಸ್ವಾಮಿಜಿಯವರ ಲಿಂಗೈಕ್ಯ ಸಂಸ್ಮರಣೆ
ಜುಲೈ - ೦೨ ಫ. ಗು. ಹಳಕಟ್ಟಿಯವರ ಜಯಂತೋತ್ಸವ
ಜುಲೈ - ೦೨ ಕುಂಬಾರ ಗುಂಡಯ್ಯ ಜಯಂತೋತ್ಸವ; ಮಣ್ಣೆತ್ತಿನ ಅಮಾವಾಸ್ಯೆ
ಜುಲೈ -೧೬ ಹಡಪದ ಅಪ್ಪಣ್ಣ ಜಯಂತೋತ್ಸವ; ಕಡ್ಲಿಗಡಬ ಹುಣ್ಣೆಮೆ
ಆಗಸ್ಟ - ೧ ಶಂಕರ ದಾಸಿಮಯ್ಯ ಜಯಂತೋತ್ಸವ; ಶ್ರಾವಣ
ಆಗಸ್ಟ - ೫ ಗುರುಬಸವ ಲಿಂಗೈಕ್ಯ ದಿನಾಚರಣೆ (ಬಸವ ಪಂಚಮಿ)
ಆಗಸ್ಟ - ೬ ನೀಲಗಂಗಾಂಬಿಕೆ ಲಿಂಗೈಕ್ಯ ದಿನಾಚರಣೆ (ನೀಲಮ್ಮ ಷಷ್ಠಿ)

ಆಗಷ್ಟ -೧೫ ನುಲಿಯ ಚಂದಯ್ಯ ಜಯಂತೋತ್ಸವ; ನೂಲ ಹುಣ್ಣಿಮೆ
ಸಪ್ಟೆಂಬರ್ - ೨ ಪ್ರವಚನ ಪಿತಾಮಹ ಲಿಂಗಾನಂದ ಸ್ವಾಮಿ ಜಯಂತಿ; ಗಣೇಶ ಚೌತಿ; ರಾಷ್ಟ್ರೀಯ ಬಸವದಳ ಹುಟ್ಟುಹಬ್ಬ;
ಸಪ್ಟೆಂಬರ್ -೧೩ ಹೂಗಾರ ಮಾದಣ್ಣ ಜಯಂತೋತ್ಸವ; ಅನಂತನ ಹುಣ್ಣಿಮೆ
ಅಕ್ಟೋಬರ್ - ೭ ಹರಳಯ್ಯ- ಮಧುವಯ್ಯ ಸ್ಮರಣೋತ್ಸವ; ಮಹಾನವಮಿ
ಅಕ್ಟೋಬರ್ - ೮ ಕಲ್ಯಾಣ ಕ್ರಾಂತಿ ಸ್ಮರಣೋತ್ಸವ; ವಿಜಯದಶಮಿ
ಅಕ್ಟೋಬರ್ - ೨೮ ಜ್ಞಾನನಿಧಿ ಶ್ರೀ ಉಳವಿ ಚನ್ನಬಸವಣ್ಣ ಜಯಂತೋತ್ಸವ; ದೀಪಾವಳಿ ಪಾಡ್ಯ

ಶರಣರ ಜಯಂತಿಗಳನ್ನು ಈ ಕೆಳಗಿನಂತೆ ಆಚರಿಸಿರಿ.

೧) ಮೊದಲು ಲಿಂಗಾಯತ ಧರ್ಮ ಸ್ಥಾಪಕ ಗುರು ಬಸವಣ್ಣವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿರಿ, ನಂತರ ಯಾವ ಶರಣರ/ಶರಣೆಯರ ಜಯಂತಿ ಇರುವುದೊ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿರಿ,
೨) "ಶರಣ ಸಂಗಮ", "ವಚನ ಕಮ್ಮಟ" ಗಳನ್ನು ಅಯೋಜಿಸಿರಿ. ವಚನ ಕಂಠಪಾಠ, ವಚನ ಗಾಯನ, ಮತ್ತು ವಚನ ವಿಶ್ಲೇಷಣೆ ಮುಂತಾದ ಕಾರ್ಯ ಕ್ರಮಗಳನ್ನು ಆಯೋಜಿಸಿರಿ.
೩) ಎಲ್ಲಾ ಹಬ್ಬಗಳಂದು ಸಾಮೂಹಿಕ ಪ್ರಸಾದ ದಾಸೋಹ ವನ್ನು ಏರ್ಪಡಿಸಿರಿ.
೪) ಬಡ ಮಕ್ಕಳಿಗೆ ಪುಸ್ತಕಗಳನ್ನು ಹಂಚಿ ಹಾಗೂ ಬಡ ಪ್ರತಿಭಾವಂತರಿಗೆ ಹಣಕಾಸು/ಇತರೆ ಸಹಾಯ ಮಾಡಿರಿ.
೫) ಶರಣ/ಶರಣೆಯರ ಜಯಂತಿ ಅಂಗವಾಗಿ, ಜನರಿಗೆ ಕೆಟ್ಟ ಚಟಗಳನ್ನು ಬಿಡುವಂತೆ ಪ್ರೇರೆಪಿಸಿರಿ, ತಂಬಾಕು, ಗುಟ್ಕಾ, ಸರಾಯಿ, ಸಿಗರೇಟು ಇವುಗಳ ಕೆಟ್ಟ ಪರಿಣಾಮಗಳನ್ನು ತಿಳಿಸಿರಿ.
೬) ಸಮಾಜ ಕಾರ್ಯಗಳನ್ನು ಮಾಡಿರಿ, ರಕ್ತದಾನ ಶಿಬಿರ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛ ಗೊಳಿಸುವುದು, ಸಸಿಗಳನ್ನು ನೆಡುವುದು ಇತ್ಯಾದಿ.

ಪರಿವಿಡಿ (index)
*
Previousಲಿಂಗಾಯತ ಪದಕೋಶಲಿಂಗಾಯತ ಮತ್ತು ಇಷ್ಟಲಿಂಗNext
Guru Basava Vachana

Akkamahadevi Vachana

[1] From the book "Vachana", pub: Basava Samiti Bangalore 2012.