ಮಾಂಸಹಾರ ಏಕೆ ಬೇಡ? | ಲಿಂಗಾಯತವೇ ಸತ್ಯ |
ಲಿಂಗಾಯತರು ಭಾರತೀಯರು ಆದರೆ ಹಿಂದುಗಳಲ್ಲ |
- ಡಾ ಶಶಿಕಾಂತ ಪಟ್ಟಣ.
ದಿನಾಂಕ 24-11-2015ರಂದು ವಿಜಯವಾಣಿ ಪತ್ರಿಕೆಯಲ್ಲಿ ಕೆ. ಎಸ. ನಾರಾಯಣಾಚಾರ್ಯ ಅವರು ಬರೆದ ಲೇಖನ ಅವರ ಬೌದ್ಧಿಕ ಅಧೋಗತಿಗೆ ಹಿಡಿದ ಕೈಕನ್ನಡಿ.ಅವರು ಹಿಂದೂ ಧರ್ಮವನ್ನೂ ಮತ್ತು ವಚನ ಸಾಹಿತ್ಯವನ್ನು ಸರಿಯಾಗಿ ಓದಿಕೊಂಡಿಲ್ಲ ಎಂದೆನಿಸುತ್ತದೆ. ವಯಸ್ಸು ೮೦ ರ ಆಸುಪಾಸು ಅರಿವು ಮರಿವು ಭ್ರಮೆ ಹೀಗೆ ಅನೇಕ ಗೊಂದಲಗಳ ಮಧ್ಯೆ ಬಿಜೆಪಿ ಮತ್ತು ಸಂಘ ಪರಿವಾರದವರ ವಕ್ತಾರರಾಗಿ ಅವರನ್ನು ಓಲೈಸುವ ಫಲಾನುಭವಿಗಳ೦ತೆ ಬರೆದಿರುವುದು ಅವರ ದಿವಾಳಿತನ ತೋರಿಸುತ್ತದೆ.
"ಇವರು ನಿಷೇಧಬಯಸುವ ಮೂಢ ನಂಬಿಕೆಗಳು" ಇವರ ಲೇಖನದ ಶೀರ್ಷಿಕೆ ಒಬ್ಬ ಬಹುಶ್ರುತ ವಿ೦ಧ್ವಾಸ ವರ್ತಮಾನವಿಧ್ಯಮಾನಗಳ ವಿಶ್ಲೆಷಕ ಇಂತಹ ಅತ್ಯಂತ ಕೀಳು ಮಟ್ಟದ ಕಳಪೆಯ ಲೇಖನ ಬರೆದಿರುವುದು ಅವರಿಗೆ ಶೋಭೆ ತರುವದಿಲ್ಲ.ಮೂಢ ನಂಬಿಕೆಗಳ ನಿಷೇಧ ಕಾನೂನು ಇಂದಿನ ಅನೇಕ ಪ್ರಗತಿಪರ ಚಿಂತಕರ ಮಠಗಳ ಆಗ್ರಹ ಇದು ಅಗತ್ಯವೂ ಅಹುದು . ಕಂದಾಚರಣೆ ಮೂಢ ನಂಬಿಕೆಗಳು ಸಮಾಜದಲ್ಲಿ ಇರುವವರೆಗೆ ಶೋಷಣೆ ತಪ್ಪಿದ್ದಲ್ಲ .ಪುರೋಹಿತ ವರ್ಗವೂ ಎಲ್ಲಾ ವರ್ಗದಲ್ಲಿಯೂ ಇದ್ದಾರೆ.ಕಂದಾಚರಣೆ ಮೂಢ ನಂಬಿಕೆಗಳು ಎಲ್ಲಾ ಧರ್ಮದಲ್ಲಿವೆ.ಆದರೆ ಹಿಂದೂ ಧರ್ಮದಲ್ಲಿ ಬರುವ ಕಂದಾಚರಣೆ ಮೂಢ ನಂಬಿಕೆಗಳು ಇನ್ನಾವ ಧರಮದಲ್ಲಿ ಕಂಡು ಬರುವದಿಲ್ಲ.
*
ಬಸವಣ್ಣ ಮತ್ತು ಶರಣ ತತ್ವಗಳ ಬಗ್ಗೆ ಬರೆಯುವ ಮಾತನಾಡುವ ಯಾವುದೇ ನೈತಿಕ ಅಧಿಕಾರ ಕೆ ಎಸ ನಾರಾಯಣಾಚಾರ್ಯ ಇವರಿಗಿಲ್ಲ.ಕಾರಣ ಇವರು ಜಾತಿ ವ್ಯವಸ್ಥೆ ಮಡಿ ಸೂತಕ ಪಂಚಾಗ ಹೋಮ ಯಜ್ಞ ಗಳಲ್ಲಿ ಬಲವಾದ ನಂಬಿಕೆ ಇಟ್ಟವರು.
ಬಸವಣ್ಣ ಭಾರತವು ಕಂಡ ಮೊದಲ ನಾಸ್ತಿಕ -ಕಾರಣ ಬಸವಣ್ಣ ಮೂರ್ತಿ ಪೂಜೆ ಧಿಕ್ಕರಿಸಿದವನು ಬಸವಣ್ಣ ವೇದ ಆಗಮ ಶಾಸ್ತ್ರ ಪುರಾಣಗಳನ್ನೂ ತಿರಸ್ಕರಿಸಿದನು.
ಧರ್ಮ ಶಾಸ್ತ್ರಜ್ಞ ಪಾಣಿನಿ ಪ್ರಕಾರ ಆಸ್ತಿಕ ನೆಂದರೆ ಭಾರತಿಯ ಜನ್ಯ ವೇದ ಆಗಮ ಶಾಸ್ತ್ರ ಪುರಾಣಗಳಲ್ಲಿ ನಂಬಿಕೆ ಇಟ್ಟವನು.
ಮೂರ್ತಿ ಪೂಜೆಯನ್ನು ಆಚರಿಸುವವನು . ಯಜ್ಞ ಹವನ ಹೋಮಗಳನ್ನು ಧಾರ್ಮಿಕ ಬದುಕಿನಲ್ಲಿ ಅಳವಡಿಸಿಕೊಳ್ಳುವವನು.
ಪ್ರಾಯಶ ಬಸವಣ್ಣ ಈ ಎಲ್ಲ ಗುಣಗಳನ್ನು ಸಾರಾಸಗಟಾಗಿ ತಳ್ಳಿಹಾಕಿ ವೈದಿಕ ಪ್ರಭುತ್ವವನ್ನು ಧಿಕ್ಕರಿಸಿ ಸ್ವತಂತ್ರ ಲಿಂಗಾಯತ ಧರ್ಮವನ್ನು ಬಸವಣ್ಣನವರು ಸ್ಥಾಪಿಸಿದರು.
ನಾಸ್ತಿಕವಾದವನ್ನು ಬಸವಣ್ಣ ಗಟ್ಟಿಯಾಗಿ ಪ್ರತಿಪಾದಿಸಿದ್ದಾರೆ.
ಉಳ್ಳವರು ಶಿವಾಲಯವ ಮಾಡುವರು
ನಾನೇನು ಮಾಡಲಿ ಬಡವನಯ್ಯ ?
ಎನ್ನ ಕಾಲೇ ಕಂಬ ದೇಹವೇ ದೇಗುಲ
ಶಿರವೇ ಹೊನ್ನ ಕಳಸವಯ್ಯಾ.
ಕೂಡಲ ಸಂಗಮ ದೇವ ನಿ ಕೇಳಯ್ಯ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.
ಇಲ್ಲಿ ಬಸವಣ್ಣ ಸ್ಥಾವರ ಪೂಜಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಜಂಗಮ ತತ್ವದ ಸ್ಪಷ್ಟ ಕಲ್ಪನೆ ಬಸವಣ್ಣನವರದ್ದು.ಹೀಗಾಗಿ ಕೆ ಎಸ ನಾರಾಯಣಾಚಾರ್ಯಅವರು ಬರೆದಿರುವ ನಾಸ್ತಿಕ್ಯವು ಹಂಚುವ ಅಮೃತವಲ್ಲ .ಹೆಂಡ ಬೇರೆ ಅಮೃತ ಬೇರೆ ಯಾವುದನ್ನೂ ಹಂಚಬೇಕು ಯಾವುದನ್ನಲ್ಲ ಎಂದು ತಿಳಿದವರು ಬಸವಣ್ಣನವರ ಹೆಸರಿಗೆ ಜೋತುಬಿದ್ದು ಮಹಾತ್ಮರಿಗೆ ಭಾರಿ ಅಪಚಾರ ಮಾಡುತ್ತಿದ್ದಾರೆ ಎಲ್ಲರೂ ಹಿಂದುಗಳೇ ಎಂಬ ಸುಜ್ಞಾನ ಎಂದು ಮೂಡೀತು ? ಎಂಬ ಕೊಂಕು ನುಡಿಗಳನ್ನು ಮೊಂಡ ಹುರಳಿಲ್ಲದ ವಾದವನ್ನು ಪ್ರತಿಪಾದಿಸಿದ್ದಾರೆ.
ಬಸವ ಧರ್ಮಿಗಳು ಹಿಂದುಗಳಲ್ಲ . ಆದರೆ ಭಾರತೀಯರು ಅಪ್ಪಟ ರಾಷ್ಟ್ರ ಪ್ರೇಮಿಗಳು . ಬಸವ ಭಕ್ತರು ಇಷ್ಟಲಿಂಗವನ್ನು ತಮ್ಮ ಚಿತ್ಕಳೆ ಎಂದು ಭಾವಿಸಿದವರು.
ಒಂದು ಹಂತದಲ್ಲಿ ಬಸವಣ್ಣ ಎರೆದರೆ ನೆನೆಯದು ಮರೆದರೆ ಬಾಡದು ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ ,ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು ಎಂದು ಹೇಳಿ ಲಿಂಗ ತತ್ವದ ನೈಜ ಅರ್ಥ ತಿಳಿಸಿದ್ದಾರೆ. ವಚನ ಸಾಹಿತ್ಯದ ಗಂಧ ಗಾಳಿ ಗೊತ್ತಿರದ ಕೆ ಎಸ ನಾರಾಯಣಾಚಾರ್ಯಅವರು ಮೊದಲು ತಾವು ಧರ್ಮ ವೈದಿಕ ಸಂಪ್ರದಾಯಗಳು ಮೂಢ ನಂಬಿಕೆಗಳ ಸರಮಾಲೆಗಳನ್ನು ಒಮ್ಮೆ ಬಿಚ್ಚಿಟ್ಟು ಶರಣ ಸಾಹಿತ್ಯವನ್ನು ಓದಲಿ ಇದು ಅವರಿಗೆ ನಾವು ನೀಡುವ ಸಲಹೆಗಳು .ಅವರೇ ಹೆಂಡವನ್ನು ಜನರಿಗೆ ನೀಡಿ ಸಮಾಜದಲ್ಲಿ ಒಡಕು ಉಂಟು ಮಾಡುವ ದುಸ್ಸಾಹಸಕ್ಕೆ ಕೈಹಾಕಿದ್ದಾರೆ.
ಕಮೇಡಿಯನ ಭೌ ಭೌ ಬೊಗಳುವ ಟಿವಿಗೆ ಪೋಸು ಕೊಡುವ ಕ್ರಾಂತಿಯ ಭ್ರಾಂತಿಯಲ್ಲಿರುವವರು ಲಿಂಗಾಯತರು ಹಿಂದುಗಳಲ್ಲ ಎಂಬ ಅಭಿಮತಕ್ಕೆ ಬಂದಿದ್ದಾರೆ ಎಂಬ ಧಾರವಾಡ ಮಿಸ್ಸಳ ಎಂದು ಗೇಲಿ ಮಾಡುವ ಮೂರ್ಖತನ ಕೆ ಎಸ ನಾರಾಯಣಾಚಾರ್ಯ ಅವರಿಗೆ ಏಕೆ ಬಂದಿದೆ ಗೊತ್ತೇ ? ಇತ್ತೀಚಿಗೆ ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಭಾಯಿ ಮೋದಿಜಿ ಅವರು ಇಂಗ್ಲೆಂಡಿನಲ್ಲಿ ಬಸವ ಪುತ್ತಳಿ ಅನಾವರಣ ಮಾಡಿ ಅಪ್ಪ ಬಸವನ ವಿಶ್ವ ಗುರು ಎಂದು ಸಂಬೋಧಿಸಿ ಬಸವಣ್ಣ ಪಾರ್ಲಿಮೆಂಟ್ ವ್ಯವಸ್ಥೆಯ ಜನಕ ಎಂಬುದನ್ನು ಜನರಿಗೆ ಜಗತ್ತಿಗೆ ಸಾದರ ಪಡಿಸಿದರು. ವಿಷ್ಣು ಭಟ್ ನಾರಾಯಣಕ್ರಮಿತ ಕಲ್ಯಾಣ ಕ್ರಾಂತಿಗೆ ಶರಣರ ಹತ್ಯಾ ಕಾಂಡಕ್ಕೆ ಕಾರಣಿಭೂತರು . ಬಹುಷ್ಯ ಕೆ ಎಸ ನಾರಾಯಣಾಚಾರ್ಯ ಅವರ ವಾರಸುದಾರರು ಇರಬಹುದೆಂಬ ಸಂಶಯ ನನ್ನಂತಹ ಅನೇಕರಿಗೆ ಕಾಡುತ್ತದೆ. ಇಂಗ್ಲೆಂಡಿನಲ್ಲಿ ಬಸವನ ಕೀರ್ತಿ ವ್ಯಾಪಕವಾಗಿ ಹರಡುತ್ತಿದ್ದಂತೆ ವೈದಿಕರಿಗೆ ಹೊಟ್ಟೆ ಉರಿ .ಲಿಂಗಾಯತ ಮಠಗಳ ಕೆಲ ಸ್ವಾಮಿಗಳ ಮೇಲೆ ಅದರಲ್ಲೂ ವಿಶೇಷವಾಗಿ ಚಿತ್ರದುರ್ಗ ಮುರುಘಾ ಶರಣರನ್ನು ಮತ್ತು ಮಾತಾಜಿ ಅವರನ್ನು ಗಮನದಲ್ಲಿಟ್ಟು ಭಾವೊದ್ರೆಕರಾಗಿ ತಮ್ಮ ಅಸೂಹೆ ಕೊಳಕುತನ ಹೊರ ಹಾಕಿದ್ದಾರೆ.
ಇನ್ನು ಒಂದು ಅ೦ಶ ಕೆ ಎಸ ನಾರಾಯಣಾಚಾರ್ಯ ಅವರು ಸರಿ ಹೇಳಿದ್ದಾರೆ. ಕೆಲವರು ಹಿಂದೂ ಸಭೆಗಳಲ್ಲಿ ನಮ್ಮ ಕೆಲ ಸ್ವಾಮಿಗಳು ಅದರಲ್ಲೂ ಬೇಲಿ ಮಠದ ಶಿವರುದ್ರ ಸ್ವಾಮಿಗಳು ಪೇಜಾವರದ ಸ್ವಾಮಿ ಗಳ ಪ್ರೀತಿಗೆ ಒತ್ತಾಯಕ್ಕೆ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ ಚಿತ್ರದುರ್ಗ ಶರಣರು ಸಹಿತ ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಇದು ನಿಜಕ್ಕೂ ಖಂಡನೀಯ . ಹಾಗಂತ ಇವರೇ ಲಿಂಗಾಯತ ಧರ್ಮದ ಭವಿಷ್ಯ ಬರೆವರು ಅಂತಾ ಕೆ ಎಸ ನಾರಾಯಣಾಚಾರ್ಯ ಅವರು ತಿಳಿದಿರುವುದು ತಪ್ಪು . ಇದುಭಕ್ತರ ಧರ್ಮ .ಸನಾತನ ವೈದಿಕ ಧರ್ಮ ಜಿಡ್ಡು ಗಟ್ಟಿ ಸಾಯುವಾಗ ಜನಪರ ಕಾಳಜಿ ಹೊತ್ತು ಬಸವಣ್ಣ ಮತ್ತು ಅವನ ಸಮಕಾಲೀನರು ಒಂದು ಹೊಸ ಸಾಮಾಜಿಕ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಂಡರು.
ಇನ್ನು ಮಾತೆ ಮಾಹಾದೇವಿ ಅವರ ಲಿಂಗದೇವ ವಚನಾಂಕಿತವನ್ನು ಪ್ರಸ್ತಾಪ ಮಾಡಿದ್ದಾರೆ. ಮಾತಾಜಿ ಖಂಡಿತ ತಪ್ಪು ಮಾಡಿದ್ದಾರೆ , ಅವರು ತಮ್ಮ ಸಂಶೋಧನೆಯೆಂದು ವಚನಾಂಕಿತ ತಿದ್ದಿ ತಮ್ಮ ಜೀವನವಿಡಿ ಮಾಡಿದ್ದ ಸಾಧನೆಗೆ ತಾವೇ ಮಸಿ ಬಳಿದಿದ್ದಾರೆ. ಹಾಗಂತ ಅವರ ಹೋರಾಟ ತಪ್ಪಲ್ಲ . ಭಿನಾಭಿಪ್ರಾಯಗಳು ಲಿಂಗಾಯತ ಧರ್ಮದ ಅಂತರಿಕ ವಿಷಯವಾಗಿದೆ.೨೦ ವರ್ಷ ನಾರಾಯಣಾಚಾರ್ಯರು ಮಲಗಿದ್ದರೆ?ಮಾತಾಜಿ ವಚನಾಂಕಿತ ತಿದ್ದಿದಾಗ ಒಂದು ಶಬ್ದವನ್ನು ಹೇಳದೇ, ಸಧ್ಯ ಅದನ್ನೇ ಬಂಡವಾಳ ಮಾಡಿರುವದು ಅವರ ಬೌದ್ಧಿಕ ದಿವಾಳಿತನಕ್ಕೆ ಉತ್ತಮ ಉದಾಹರಣೆ .
ಸ್ವ ಶ್ರೆಷ್ಠತೆ (Self Superiority ) - ಇದು ಲಿಂಗಾಯತರ ಮನೋರೋಗ ಅಂತ ಹೇಳಿದ್ದಾರೆ . ಅದು ಶುದ್ಧ ತಪ್ಪು ಪ್ರತ್ಯೇಕ ಧರ್ಮ ಕೇಳುವದು ಸ್ವ ಶ್ರೆಷ್ಠತೆ (Self Superiority ) ಅಲ್ಲ ಅದು ಸ್ವಾಭಿಮಾನ ( Self respect ) ಸಪ್ತ ಶೀಲ ವಚನವನ್ನು ತಪ್ಪಾಗಿ ಅರ್ಥೈಸುವ ಆಚಾರ್ಯರು ಕಳಬೇಡ ಕೊಳ ಬೇಡ ಹುಸಿಯ ನುಡಿಯಲು ಬೇಡ ಮುನಿಯ ಬೇಡ ತನ್ನ ಬಣ್ಣಿಸಬೇಡ ಇದಿರು ಹಳಿಯಲು ಬೇಡ ಅಂತಾ ಹೇಳಿ ತಮ್ಮ ಸಣ್ಣತನ ಪ್ರದರ್ಶಿಸಿದ್ದಾರೆ. ಡೊಂಗಿಗಳು ಪ್ರತ್ಯೇಕತಾವಾದಿಗಳು ಇಂತಹ ಹೇಯ ಕೀಳು ಮಟ್ಟದ ಭಾಷೆ ಇವರಿಗೆ ತರವಲ್ಲ .
ಇನ್ನು ಗೋಮಾ೦ಸವಾದಿಗಳಿಗೆ ಲಿಂಗ ಧೀಕ್ಷೆ ಕೊಡುತ್ತೇವೆ ಅಂತಾ ಇತ್ತೀಚೆಗೆ ಒಬ್ಬ ಸ್ವಾಮಿಗಳು ಹೇಳಿರುವದನ್ನು ಟೀಕಿಸಿದ ಆಚಾರ್ಯರು ಯಾರು ಆ ಸ್ವಾಮೀ ಗಳು ಎಂದು ಎಲ್ಲಿಯೂ ಹೇಳಿಲ್ಲ. ಮತ್ತು ಇದನ್ನು ಅವರಿಗೆ ನೇರವಾಗಿ ಪ್ರಶ್ನಿಸಿ ಉತ್ತರ ಪಡೆಯಬೇಕೆ ಹೊರತು ಅದನ್ನು ಸಾರ್ವತ್ರಿಕಗೊಳಿಸುವದು ಮೂರ್ಖತನದ ಲಕ್ಷಣ . ಶರಣರು ಸಸ್ಯಾಹಾರಿ ಆದರೆ ಅಂದಿನ ಅನೇಕ ದಲಿತರು ಮಾ೦ಸಾಹರಿಗಳು ಶರಣ ಚಳುವಳಿ ಯಲ್ಲಿ ಪಾಲ್ಗೊಂಡಿದ್ದರು .ಅವರು ಕ್ರಮೇಣ ಮಾ೦ಸಾಹಾರವನ್ನು ಬಿಟ್ಟಿರಬಹುದು.
ಕಂದಾಚರಣೆ ಮತ್ತು ಮೂಢ ನಂಬಿಕೆಗಳ ವಿರುದ್ಧ ಅಂತಹ ಶೋಷಣೆ ವಿರುದ್ಧ ಬಸವಣ್ಣ ಯುದ್ಧ ಸಾರಿದರು . ಈಗ ಸ್ಮಶಾನದಲ್ಲಿ ರಾತ್ರಿ ಶಿವಾನುಭವ ಮಾಡೋದು ಮತ್ತು ಊಟ ಮಾಡುವದು ಅವರವರ ವಿಚಾರಕ್ಕೆ ತಕ್ಕಂತೆ ಪ್ರತಿಭಟಿಸುವ ಯೋಜನೆಗಳು .ಅದನು ಪ್ರಶ್ನಿಸುವ ಹುಂಬುತನ ಆಚಾರ್ಯರಿಗೆ ಏಕೆ? ಕಂದಾಚರಣೆ ಮತ್ತು ಮೂಢ ನಂಬಿಕೆಗಳ ವಿರುದ್ಧ ಅದು ಕೇವಲ ಹಿಂದೂಗಳ ಅಥವಾ ವೈದಿಕ ವ್ಯವಸ್ಥೆಯ ವಿರುದ್ಧವಲ್ಲ .ಅವರು ಕುದಿಯುವ ಮುಸ್ಲಿಮರ ಕಂದಾಚರಣೆ ಮತ್ತು ಮೂಢ ನಂಬಿಕೆಗಳ ಬಗ್ಗೆಯೂ ಇದೆ ಬಾಬಾ ಫಕೀರ ಇವರ ಶೊಶನೆಯೂ ಮೊಟಕುಗೋಳ್ಳುವದು . ಪಂಚಾಗ ಜ್ಯೋತಿಷ್ಯ ಮಾತಾ ಮಂತ್ರದಿಂದ ಆಚಾರ್ಯರು ದುಡ್ಡು ಮಾಡುತ್ತಿದ್ದರು .ಅವರ ದಂದೆಗೆ ಪೆಟ್ಟು ಬಿದ್ದ ಕಾರಣ ಏನೋ ನೆಪಗಳನ್ನು ಮುಂದು ಮಾಡಿ ತಮ್ಮ ವಿಧ್ವತ್ತು ಪ್ರದರ್ಶಿಸಲು ಹೋಗಿ ವಿಫಲರಾಗಿದ್ದಾರೆ. ಕಂದಾಚರಣೆ ಮತ್ತು ಮೂಢ ನಂಬಿಕೆಗಳ ನಿಷೇಧ ಕಾನೂನು ದೇಶದಲ್ಲಿ ಬರಲೇಬೇಕು .
ಮಡಿ ವಿಷಯದಲ್ಲಿ ಮಂದಿರಗಳಲ್ಲಿ ಒಳ ಪಂತಿ ಹೊರ ಪಂತಿ ಅಂತಾ ಎರಡು ಬಗೆಯುಂಟು ಅಶ್ಪ್ರಸ್ಯ್ರನ್ನು ದಲಿತರನ್ನು ಮಂದಿರ ಮಠಗಳಲ್ಲಿ ಹೊರ ಇಡುತ್ತಿದ್ದರು .
ಅದೇ ರೀತಿ ಮಹಿಳೆಯರ ಋತುಮತಿ ಅದೊಂದು ನಿಸರ್ಗದತ್ತ ಸಹಜ ಜೈವಿಕ ಪ್ರಕ್ರೀಯೆ .ಅದರಿಂದಲೇ ಮನುಷ್ಯನ ಹುಟ್ಟು . ಋತುಮತಿ ಮುಟ್ಟು ನಿಲ್ಲುವದರಿಂದಲೇ ಪಿಂಡಕ್ಕೆ ಆಶ್ರಯ ವಿಲ್ಲಾ ಎಂದಿದ್ದಾರೆ .ಭ್ರೂಣ ತಯಾರಾಗುವುದೇ ಮಹಿಳೆಯ ಋತುಮತಿಯಿಂದಾ . ಮತ್ತು ಸೂತಕಗಳು ಮನುಷ್ಯನ ಕಲ್ಪನೆಗಳು . ಇಂತಹ ಕೊಳಕು ವ್ಯವಸ್ಥೆಯಲ್ಲಿ ಅರ್ಥವಿಲ್ಲದ ಮಡಿ ಸೂತಕ ನಿಷೇದಿಸುವುದು ಏನು ತಪ್ಪು?
ಅಲ್ಲಿ ಹಿಂದೂ ಧರ್ಮದ ಶ್ರೆಣಿಕ್ರತ ಸಾಮಾಜಿಕ ವ್ಯವಸ್ಥೆ ಇರುವದಿಲ್ಲ ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಪಂಚಮ ಎಂಬ ವರ್ಗಗಳಿಲ್ಲ. ಹಿಂದುಗಳೆಂದರೆ ಸಿಂಧೂ ನದಿ ಮತ್ತು ಅದರ ಉಪನದಿಗಳ ಸುತ್ತಮುತ್ತ ಬೆಳೆದ ಪ್ರಾಚೀನ ನಾಗರಿಕತೆಯ ಜನರು. ತದನಂತರ ವಿವಿಧ ಪ್ರದೇಶಗಳಲ್ಲಿ ಹರಿದು ಹಂಚಿಹೋಗಿದ್ದಾರೆ. ಪ್ರಾಚೀನ ಭಾರತದಲ್ಲಿ ವೈದಿಕ ಪಂಥದ ಜತೆಗೆ ಬೇರೆ ಬೇರೆ ಪಂಥಗಳಿದ್ದವು. ಅವುಗಳನ್ನು ನಾವು ಷಟ್ದರ್ಶನಗಳಲ್ಲಿ ನೋಡಬಹುದು. ಇದರಲ್ಲಿ ಜೈನ ಪಂಥ,ಬೌದ್ಧ ಪಂಥ,ಚಾರ್ವಾಕ ಪಂಥ,ಲಿಂಗಾಯತ ಸಿಖ್ ಹೀಗೆಯೇ ಹಲವು ತಾಂತ್ರಿಕ ಪಂಥಗಳು ಈ ದೇಶದಲ್ಲಿ ಹುಟ್ಟಿ ಜನತೆಯ ಬೌದ್ಧಿಕ ಪರಿಧಿಯನ್ನು ವಿಶಾಲಗೊಳಿಸಿವೆ.ಇವೆಲ್ಲವೂ ಸಿಂಧೂ ಅಥವಾ ಹಿಂದು ಸಂಪ್ರದಾಯಗಳು ಎಂದು ಕರೆಯಲಾಗುತ್ತಿತ್ತು.ಈ ದೇಶದಲ್ಲಿ ಆರಂಭದಿಂದಲೂ ರಾಜರುಗಳ ಪ್ರಭುತ್ವ ಮುಂದುವರೆಯುತ್ತಾ ಬಂದಾಗ ಕೆಲವರು ಒಂದೊಂದು ಪಂಥವನ್ನು ಮುನ್ನಲೆಗೆ ತಂದು ತಮಗೊಪ್ಪಿತವಲ್ಲದನ್ನು ತಿರಸ್ಕರಿಸುತ್ತಾ ಬಂದಿದ್ದಾರೆ. ರಾಜರ ಬೆಂಬಲವಿಲ್ಲದ ಹಲವು ಶೈವ ಪಂಥಗಳು ಈ ದೇಶದಲ್ಲಿವೆ .ಇಂದು ವೈದಿಕ ಪಂಥವೊಂದೇ ಹಿಂದುಧರ್ಮ ಎನ್ನುವ ಸಂಕುಚಿತ ಅರ್ಥ ಪಡೆದುಕೊಂಡಿದೆ.
ಕಾರ್ಲ್ ಮಾರ್ಕ್ಸ್ ಧರ್ಮ ಎಂಬುದು ಅಫೀಮು ಎಂದು ಹೇಳಿದಂತೆ ಕೆಲವರು ತಮ್ಮ ಸನಾತನ ಕೊಳಕು ಮೌಢ್ಯ ವ್ಯವಸ್ಥೆಯೇ ಪರಮಶ್ರೇಷ್ಠ ಎಂಬ ಭ್ರಾಂತಿಯಲ್ಲಿ ಇಂದು ಅಧಿಕಾರದ ಬೆಂಬಲದಿಂದ ತಾವು ಮಾತಾಡಿದ್ದೇ ಸರಿ ಎನ್ನುವ, ತಾವು ನಡೆಯುವುದೇ ಸರಿಯಾದ ದಾರಿ ಎಂದು ತಿಳಿದು ವಿಚಾರಶೂನ್ಯರಾಗಿ ಹಳೆಯ ಕಥೆಗಳನ್ನೇ ಇಂದು ವೈಭವೀಕರಿಸಿ ಇಂತಹ ಅವಗಢಕ್ಕೆ ಕಾರಣಿ ಭೂತವಾಗುತ್ತವೆ .
ಕೊನೆಗೆ ಕೆ ಎಸ ನಾರಾಯಣಾಚಾರ್ಯರು ಇತ್ತೀಚಿಗೆ ಒಬ್ಬರು ಕಲ್ಲಿನ ಮೇಲೆ ಮೂತ್ರ ಮಾಡುವದಾಗಿ ಹೇಳಿದರು ಅದು ನಿಮ್ಮ ಧರ್ಮವೇ ? ಎಂದು ಪ್ರಶ್ನಿಸಿದ್ದಾರೆ. ಅವರು ಡಾ ಎಂ ಎಂ ಕಲಬುರ್ಗಿ ಅವರ ಕೊಲೆಯನ್ನು ಸಂತೋಷವಾಗಿ ಆಚರಿಸುವ ಕುಹುಕು ಮನಸ್ಸಿನವರಾಗಿದ್ದಾರೆ. ದೊಡ್ಡ ಗಾತ್ರದ ಶರೀರ ಕುಬ್ಜ ಮನಸ್ಸು ಹೊಂದಬಾರದು. ಪ್ರಗತಿಶೀಲ ಮನಸ್ಸಿಗೆ ಮತ್ತು ಬಸವ ಧರ್ಮಕ್ಕೆ ಹೀಗೆ ಮನ ಬಂದಂತೆ ಬರೆಯುವದು ಅವರ ಮೂಲಭೂತವಾದವನ್ನು ತೋರಿಸುತ್ತದೆ. ನಾಡಿನ ಒಂದು ಶ್ರೇಷ್ಠ ಪತ್ರಿಕೆ ಇಂತಹ ವಿವಾದಗಳನ್ನು ಹುಟ್ಟು ಹಾಕುವ ಲೇಖಕರನ್ನು ದೂರವಿಡಬೇಕು.
- ಡಾ ಶಶಿಕಾಂತ ಪಟ್ಟಣ - ಪೂನಾ.
*ಮಾಂಸಹಾರ ಏಕೆ ಬೇಡ? | ಲಿಂಗಾಯತವೇ ಸತ್ಯ |