Previous ಲಿಂಗಾಯತ ಮತ್ತು ವೀರಶೈವ ರಸ ಪ್ರಶ್ನೆ ಹಾಗೂ ಉತ್ತರಗಳು - 2 Next

ಲಿಂಗಾಯತ ಧರ್ಮದ ರಸ ಪ್ರಶ್ನೆ ಹಾಗೂ ಉತ್ತರಗಳು

*

ಪ್ರಶ್ನೆ

ಉತ್ತರ

ಲಿಂಗಾಯತ ಧರ್ಮ ಸಂಸ್ಥಾಪಕರು ಯಾರು? ಬಸವಣ್ಣ
ಅಷ್ಟಾವರಣಗಳು ಯಾವವು? ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ, ಪ್ರಸಾದ
ಪಂಚ ಆಚಾರಗಳು ಯಾವವು? ಶಿವಾಚಾರ, ಸದಾಚಾರ, ಲಿಂಗಾಚಾರ, ಭೃತ್ಯಾಚಾರ, ಗಣಾಚಾರ
ಷಟಸ್ಥಲಗಳು ಯಾವವು? ಭಕ್ತ , ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ
ಅಷ್ಟಮದಗಳು ಯಾವವು? ಕುಲಮದ, ಛಲಮದ, ಧನಮದ, ರೂಪಮದ, ಯೌವನಮದ, ವಿದ್ಯಾಮದ, ರಾಜಮದ, ತಪೋಮದ
ಬಸವಣ್ಣನವರ ಕಾರ್ಯಸ್ಥಳ ಯಾವುದು? ಬಸವ ಕಲ್ಯಾಣ
ಅಕ್ಕಮಹಾದೇವಿ ಜನ್ಮಸ್ಥಳ ಯಾವುದು? ಉಡುತಡಿ
ಉಡತಡಿ ಸದ್ಯಕ್ಕೆ ಯಾವ ಜಿಲ್ಲೆಯಲ್ಲಿದೆ? ಶಿವಮೊಗ್ಗ ಜಿಲ್ಲೆ
ಅಲ್ಲಮ ಪ್ರಭುಗಳ ಜನ್ಮಸ್ಥಳ ಬಳ್ಳಿಗಾವಿ
ಅಲ್ಲಮ ಪ್ರಭುದೇವರ ಪೂರ್ವಾಶ್ರಮದ ಜಾತಿ ಯಾವುದು? ನಟವರ ಜಾತಿ
ಅಲ್ಲಮ ಪ್ರಭುಗಳ ತಂದೆ ಹೆಸರು ಏನು? ನಿರಹಂಕಾರ
ಅಲ್ಲಮ ಪ್ರಭುಗಳ ತಾಯಿ ಹೆಸರು ಏನು? ಸುಜ್ಞಾನಿದೇವಿ
ಅಲ್ಲಮ ಪ್ರಭುಗಳ ದೀಕ್ಷಾಗುರುಗಳು ಯಾರು? ಅನಿಮಿಷದೇವ
ವ್ಯೋಮಕಾಯ ಬಿರುದು ಪಡೆದವರು ಯಾರು? ಅಲ್ಲಮಪ್ರಭು
ಅನುಭವ ಮಂಟಪದ ಪ್ರಥಮ ಅಧ್ಯಕ್ಷರು ಯಾರು? ಅಲ್ಲಮಪ್ರಭು
ಅನುಭವ ಮಂಟಪದ ದ್ವೀತೀಯ ಅಧ್ಯಕ್ಷರು ಯಾರು? ಚನ್ನ ಬಸವಣ್ಣ
ಅನುಭವ ಮಂಟಪದ ತೃತೀಯ ಅಧ್ಯಕ್ಷರು ಯಾರು? ಸಿದ್ಧರಾಮೇಶ್ವರ
ಕನ್ನಡದ ಪ್ರಥಮ ಕವಿಯತ್ರಿ ಅಕ್ಕಮಹಾದೇವಿ
ಶರಣನಾಗಿ ಮಾರ್ಪಟ್ಟ ಕಾಶ್ಮೀರದ ರಾಜನ ಹೆಸರು ಯಾವುದು? ಮಹಾದೇವ ಭೂಪಾಲ
ಬಸವಣ್ಣನವರ ತಂದೆ ಹೆಸರು ಏನು? ಮಾದರಸ
ಬಸವಣ್ಣನವರ ತಾಯಿ ಹೆಸರು ಏನು? ಮಾದಲಾಂಬಿಕೆ
ಅಕ್ಕಮಹಾದೇವಿ ತಂದೆ ಹೆಸರು ಏನು? ನಿರ್ಮಲಶೆಟ್ಟಿ
ಅಕ್ಕಮಹಾದೇವಿ ತಾಯಿ ಹೆಸರು ಏನು? ಸುಮತಿ
ಬಸವಣ್ಣವನರು ಮನೆ ಬಿಟ್ಟಾಗ ವಯಸ್ಸು ಎಷ್ಟು? ಎಂಟು
ಅಕ್ಕಮಹಾದೇವಿಯ ವಚನಾಂಕಿತ ಯಾವುದು? ಚನ್ನಮಲ್ಲಿಕಾರ್ಜುನ
ಗುಹೇಶ್ವರ ಇದು ಯಾರ ವಚನಾಂಕಿತ ಅಲ್ಲಮಪ್ರಭು
ಚನ್ನಬಸವಣ್ಣನವರ ವಚನಾಂಕಿತ ಯಾವುದು? ಕೂಡಲಚನ್ನಸಂಗಮದೇವ
ಬಸವಣ್ಣವನರು ಸೋದರಳಿಯ ಯಾರು? ಚನ್ನಬಸವಣ್ಣ
ಮಾರಯ್ಯಪ್ರಿಯ ಅಮರೇಶ್ವರಲಿಂಗ ಇದು ಯಾರ ವಚನಾಂಕಿತ? ಆಯ್ದಕ್ಕಿ ಲಕ್ಕಮ್ಮ
ಅಕ್ಕನಾಗಮ್ಮನ ಮಗ ಯಾರು? ಚನ್ನಬಸವಣ್ಣ
ಚನ್ನಬಸವಣ್ಣನವರ ತಂದೆ ಯಾರು? ಶಿವಸ್ವಾಮಿ
ಅಕ್ಕನಾಗಮ್ಮನ ಪತಿಯ ಹೆಸರು? ಶಿವಸ್ವಾಮಿ
ಅಕ್ಕನಾಗಮ್ಮನ ವಚನಾಂಕಿತ ಯಾವುದು? ಬಸವಣ್ಣಪ್ರಿಯ ಚನ್ನಸಂಗ
ವೀರ ಗಣಾಚಾರಿ ಯಾರ ಬಿರುದು? ಮಡಿವಾಳ ಮಾಚಿದೇವ
ಕಲಿದೇವರ ದೇವ ಇದು ಯಾರ ವಚನಾಂಕಿತ? ಮಡಿವಾಳ ಮಾಚಿದೇವ
ಅನುಭವ ಮಂಟಪದಲ್ಲಿ ಅಂತರ್ಜಾತಿ ವಿವಾಹಕ್ಕೋಳಗಾದ ವಧುವರರು ಹೆಸರು? ಶೀಲವಂತ ಹಾಗೂ ಲಾವಣ್ಯವತಿ
ಶಿಲವಂತನ ತಂದೆ ಯಾರು? ಹರಳಯ್ಯ
ಶಿಲವಂತನ ತಾಯಿ ಯಾರು? ಕಲ್ಯಾಣಮ್ಮ
ಲಾವಣ್ಯವತಿಯ ತಂದೆ ಯಾರು? ಮಧುವರಸ
ಕಲ್ಯಾಣ ಕ್ರಾಂತಿಗೆ ಕಾರಣ? ಅಂತರ್ಜಾತಿ ವಿವಾಹ
ಕಲ್ಯಾಣದಲ್ಲಿ ಅನುಭವ ಮಂಟಪದ ಕಾಲಾವದಿ 27 (27) ವರ್ಷಗಳು
ಅಮರಗಣಂಗಳ ಸಂಖ್ಯೆ ಎಷ್ಟು? 770 (770)
ಬಸವಣ್ಣನವರ ಲಿಂಗೈಕ್ಯ ಸ್ಥಳ? ಕೂಡಲಸಂಗಮ
ಅಕ್ಕಮಹಾದೇವಿಯ ಲಿಂಗೈಕ್ಯ ಸ್ಥಳ? ಕದಳಿಬನ (ಶ್ರೀ ಶೈಲ)
ಅಲ್ಲಮ ಪ್ರಭುದೇವರಲಿಂಗೈಕ್ಯ ಸ್ಥಳ? (ಶ್ರೀ ಶೈಲ)
ಚನ್ನಬಸವಣ್ಣ ಲಿಂಗೈಕ್ಯ ಸ್ಥಳ? ಉಳವಿ
ಸಿದ್ಧರಾಮೇಶ್ವರ ಲಿಂಗೈಕ್ಯ ಸ್ಥಳ? ಸೋಲಾಪೂರ
ಬಸವಣ್ಣನವರ ಧರ್ಮಪತ್ನಿಯ ಲಿಂಗೈಕ್ಯ ಸ್ಥಳ? ತಂಗಡಗಿ
ಶಿವನಾಗಮಯ್ಯ ಇವರ ವಚನಾಂಕಿತ ಯಾವುದು? ನಾಗಪ್ರಿಯ ಚೆನ್ನರಾಮೇಶ್ವರ
ಕದಳಿಬನ ಯಾವ ರಾಜ್ಯದಲ್ಲಿದೆ? ಆಂಧ್ರಪ್ರದೇಶ
ಪರಿವಿಡಿ (index)
*
Previous ಲಿಂಗಾಯತ ಮತ್ತು ವೀರಶೈವ ರಸ ಪ್ರಶ್ನೆ ಹಾಗೂ ಉತ್ತರಗಳು - 2 Next