Previous ಲಿಂಗಾಯತರು ಹಿಂದೂಗಳಲ್ಲ -ಡಾ.ಎನ್.ಜಿ.ಮಹಾದೇವಪ್ಪ ಲಿಂಗಾಯತ ಎಂದರೇನು? What is Lingayat Next

ಲಿಂಗಾಯತವು ಒಂದು ಧರ್ಮ, ಜಾತಿಯಲ್ಲ.

*

ಹುಟ್ಟಿನಿಂದ ಮಾನವರನ್ನ ಮೇಲು ಕೇಳೆಂದು ವಿಭಜನೆ ಮಾಡುವುದು ಜಾತಿ; ಹುಟ್ಟಿನಿಂದ ಎಲ್ಲರು ಸಮಾನರು ಎಂದು ಘೋಷಿಸಿ ಯಾವ ಜಾತಿ, ವರ್ಗ, ವರ್ಣ ಭೇದವಿಲ್ಲದೆ ಆಸಕ್ತಿ ಇದ್ದವರೆಲ್ಲರೂ ದೀಕ್ಷಾ ಸಂಸ್ಕಾರ ಪಡೆಯಲು ಬರುತ್ತದೆ ಎಂದು ಹೇಳುವುದು ಧರ್ಮ. ಈ ಧಾರ್ಮಿಕ ಸಂಸ್ಕಾರ ದಿಂದ, ವ್ಯಕ್ತಿ ಯು ಸಾಧಿಸಿದ ನಿಲುವಿನಿಂದ ಅವನು ಶ್ರೇಷ್ಠ, ಕನಿಷ್ಠನಾಗುವುನು ಎನ್ನುವುದು ಧರ್ಮ. ಲಿಂಗಾಯತ ಧರ್ಮವು ಜನನ ದಿಂದ ಯಾರನ್ನೂ ಮೇಲು ಕೀಳೆಂದು ಅಳೆಯದೆ 'ಹೊಲೆ ಗಂಡಲ್ಲದೆ ಪಿಂಡದ ನೆಲೆಗೆ ಅಶ್ರಯವಿಲ್ಲ ಎಂದು ಸಾರಿ; 'ಮರೆತವನು ಮಾನವ, ಅರಿತವನು ಶರಣ' ಎಂದು ಬೋದಿಸುವುದು, ಮರೆತ ಮಾನವನು ಅರಿತ ಶರಣ ನಾಗಲಿಕ್ಕೆ ಬೇಕಾಗುವ ದೀಕ್ಷಾಸಸ್ಕಾರವನ್ನು, ಪೂಜೆಯ ಸ್ವಾತಂತ್ರ್ಯವನ್ನು ಎಲ್ಲರಿಗೂ ನೀಡುವುದು, ಆದಕಾರಣ ಇದು ಧರ್ಮ.

ಇಷ್ಟಲಿಂಗ ಯೋಗ ಸಾಧನ

ಇಷ್ಟ ಲಿಂಗಕ್ಕೆ ಕಪ್ಪಾದ ಕಾಂತಿಯುಕ್ತವಾದ ಕಂಥೆಯ ಕವಚವು ಇರುವ ಕಾರಣ ಅದು ದೃಷ್ಟಿ ಯೋಗ ಅಥವಾ ತ್ರಟಕ ಯೋಗಕ್ಕೆ ಸಹಾಯಕ ಸಾಧನವಾಗುವುದು. ಆಲಿಯ ಕಪ್ಪು- ಕಂಥೆಯ ಕಪ್ಪು ಪರಸ್ಪರ ಆಕರ್ಶಿಸಲ್ಪಟ್ಟು ಬೇಗನೆ ಚಿತ್ತ ಏಕಾಗ್ರತೆಯ ಅನುಭವವಾಗುವುದು.ಆಧ್ಯಾತ್ಮಿಕವಾಗಿ ಇದು ಭಾವಸಾಗರವನ್ನು ದಾಂಟಿಸುವ ಹಡಗಿನಂತೆ. ಹಸುವಿನ ಕೆಚ್ಚಲಿನಲ್ಲಿರುವ ಹಾಲಿನಲ್ಲಿ ತುಪಾವಿರುವುದು ಸತ್ಯಾಂಶ. ಒಂದು ವೇಳೆ ಹಸುವು ಬಿದ್ದು ಪೆಟ್ಟದರೆ, ಬಿಸಿ ತುಪ್ಪವನ್ನ ಹಚ್ಚಿ ಆದ ಗಾಯ ಅಥವಾ ಪೆಟ್ಟನ್ನ ವಾಸಿ ಮಾಡುವುದು ಸರಿಯಾದುದು. ಆದರೆ "ಕೆಚ್ಚಲಿನಲ್ಲಿ ಹಾಲಿದೆ, ಹಾಲಿನಲ್ಲಿ ತುಪ್ಪವಿದೆ" ಎಂದು ಅತಿ ಬುದ್ದಿವಂತರಂತೆ(ಅಹಂ ಬ್ರಹ್ಮಾಸ್ಮಿ) ಕೂತರೆ ಹೇಗೆ ಹಸುವನ್ನ ಪೋಷಿಸಿ, ಕೆಚ್ಚಲಿಂದ ಹಾಲನ್ನ ಕರೆದು, ಹಾಲಿಗೆ ಸಂಸ್ಕಾರಕೊಟ್ಟು ತುಪ್ಪವ ಮಾಡಿ ಹಚ್ಚಿದರೆ ತಾನೇ ನೋವು ಮಾಯವಾಗುವುದು! ಅದೇ ರೀತಿ ಮಾನವನ ಒಳಗಿರುವ ಆತ್ಮ ಚೈತನ್ಯವು ಭವನ್ನ ಕಳೆಯಲಾರದು; ಇದನ್ನರಿತ ಶ್ರೀ ಗುರುವು ಅಂತರಂಗದ ಆತ್ಮ ಚೈತನ್ಯವನ್ನು ಚುಳಕಾಗಿ ಹೊರತೆಗೆದು ಹುಟ್ಟುಲಿಂಗವನ್ನಾಗಿ ರೂಪಿಸಿ, ಎರಡನ್ನು ಅಭಿನ್ನವಾಗಿ ಇಂಬಿಟ್ಟು ಶಿಷ್ಯನಿಗೆ ಧಾರಣ ಮಾಡುವನು. ಈ ಕರಸ್ತಲದ ಚ್ಯೋತಿ, ಅರುಹಿನ ಕುರುಹು ಮತ್ತೆ ಅಂತರಂಗವನ್ನು ಪ್ರವೇಶಿಸಿ ಕಾಯವನ್ನೇ ಕೈಲಾಸವನ್ನಾಗಿ ಮಾಡಿ ಪುನೀತಗೊಳಿಸುವುದು.

ಲಿಂಗಾಯತವು ಸ್ಯೆದ್ದಾಂತಿಕ ಧರ್ಮ

ಒಂದು ಸ್ಯೆದ್ದಾಂತಿಕ ಘಟನೆಯು ಧರ್ಮ ಎನ್ನಿಸಿಕೊಳ್ಳಬೇಕಾದರೆ ಅದಕ್ಕೆ ತನ್ನದೇ ಆದ ಏಕಾದಶ ಲಕ್ಷಣಗಳಿರಬೇಕು. ಅವಾವೆಂದರೆ ಜೀವ, ಜಗತ್ತು, ಈಶ್ವರ ರ ಸಂಭಂದವನ್ನು ವಿವೇಚಿಸುವ ಸಿದ್ದಾಂತ; ಈ ಸಿದ್ದಾಂತವನ್ನು ಅಳವಡಿಸಿಕೊಳ್ಳಲಿಕ್ಕೆ ಅಂದು ಸಾಧನೆ. ಸಾಧನೆಯಿಂದ ಸಿದ್ದಾಂತವನ್ನು ಸಕ್ಷಾತ್ಕರಿಸಿಕೊಂಡುದನ್ನು ಹೇಳುವ ಅನುಭಾವ ಪೂರ್ಣ ದರ್ಶನ, ಈ ತತ್ವ ದ ಅನುಯಯಿಯಾಗಬೇಕೆಂದು ಹಂಬಲಿಸುವ ವ್ಯಕ್ತಿಯನ್ನು ಇಂಬಿಟ್ಟುಕೊಳ್ಳಲಿಕ್ಕೆ ಬೇಕಾದ ದೀಕ್ಷಾ ಸಂಸ್ಕಾರ, ಈ ಸಮಾಜದ ಅನುಯಾಯಿದವನು ತನ್ನ ಸಮಾಜದೊಡನೆ ಮತ್ತು ಅನ್ಯ ಸಮಾಜದೊಡನೆ ಯಾವ ತತ್ವದ ಅನುಯಾಯಿಯದವನು ತನ್ನ ಸಮಾಜದೊಡನೆ ಮತ್ತು ಅನ್ಯ ಸಮಾಜದೊಡನೆ ಯಾವ ತತ್ವದ ಆಧಾರದಮೇಲೆ ಹೊಂದಿಕೊಂಡು ಬಾಳಬೇಕೆಂಬ ಸಮಾಜ ಶಾಸ್ತ್ರ. , ಮಾನವರು ಯಾವ ಕ್ರಿಯೆಗಳಿಂದ ಪರರಿಗೆ ಹಿತವನ್ನುಂಟು ಮಾಡಬಹುದು; ಅವರ ವ್ಯವಹಾರ ಗಳು ಹೇಗಿರಬೇಕೆಂದು ಹೇಳುವ ನೀತಿಶಾಸ್ತ್ರ, ಸಮಾಜ-ರಾಷ್ಟ್ರದ ವ್ಯಕ್ತಿಯು ರಾಷ್ಟ್ರದ ಆರ್ಥಿಕಾಭಿವೃದ್ದಿಯಲ್ಲಿ ಹೇಗೆ ಭಾಗವಹಿಸಬೇಕೆಂದು ಹೇಳುವ ಅರ್ಥಶಾಸ್ತ್ರ; ಅನ್ಯ ಸಮಾಜದ ಆಚರಣೆಗಳಿಂದ ಭಿನ್ನವಾದ ಸಂಸ್ಕೃತಿ; ಈ ಎಲ್ಲಾ ತತ್ವ ಗಳನ್ನು ಅಳವಡಿಸಿಕೊಂಡು ಒಂದು ಪರಂಪರೆ; ಇವೆಲ್ಲವು ಗಳನ್ನೂ ವಿವೇಚನೆ ಮಾಡುವ ಸಾಹಿತ್ಯ; ಇಂಥ ಹಲವಾರು ತತ್ವಗಳುಳ್ಳ ಒಂದು ಪಥವನ್ನು ಹಾಕಿಕೊಟ್ಟ ಧರ್ಮಗುರು. ಈ ಹನ್ನೊಂದು ಲಕ್ಷಣಗಳು ಇದ್ದಾಗ ಮಾತ್ರವೇ ಅದು ಧರ್ಮ; ಇಲ್ಲವಾದರೆ ಅದು ಜಾತಿ, ಅಥವಾ ಮತ, ಈ ದೃಷ್ಟಿಯಿಂದ ನೋಡಿದಾಗ ಲಿಂಗಾಯತ ಧರ್ಮಕ್ಕೆ ಶಕ್ತಿ ವಿಶಿಷ್ಟಾದ್ವ್ಯೆತ ವೆಂಬ ದರ್ಶನ ವುಂಟು, ಲಿಂಗ ಧೀಕ್ಷೆ ಎಂಬ ಧರ್ಮ ಸಂಸ್ಕಾರವುಂಟು, ಅಪ್ರಾಕೃತ ಅಥವಾ ಅತಿವರ್ಣಾಶ್ರಮ ಸಮಾಜ ಶಾಸ್ತ್ರ, ಮಾನವೀಯ ನೀತಿಶಾಸ್ತ್ರ ವುಂಟು, ಕಾಯಕವೇ ಕ್ಯೆಲಾಸ, ದಸೋಹವೇ ದೇವಧಾಮ ಎಂಬ ಅರ್ಥಶಾಸ್ತ್ರವುಂಟು, ಅನ್ಯ ಸಮಾಜಗಳಿಂದ ಭಿನ್ನವಾದ ಶರಣ ಸಂಸ್ಕೃತಿ ಯುಂಟು ; ಮಂತ್ರ ಪುರುಷ ಬಸವಣ್ಣ ನವರೇ ಆದಿಯಾಗಿ ಅಂದಿನಿಂದಲೂ ಅವ್ಯಾಹತವಾಗಿ ಹರಿದು ಬಂದ ಶರಣ ಪರಂಪರೆ ಯುಂಟು; ಇವೆಲ್ಲವುಗಳನ್ನು ಒಳಗೊಂಡ ವಿವೇಚನಾತ್ಮಕ ಸ್ವತಂತ್ರ ವಚನ ಸಾಹಿತ್ಯ ಸಂವಿಧಾನದ ಕತೃವಾದ ಬಸವಣ್ಣನವರೆಂಬ ಧರ್ಮ ಗುರುವುಂಟು. ಆದುದರಿಂದ ಲಿಂಗಯತವು ಕುರುಬ, ಹರಿಜನ, ಬ್ರಾಹ್ಮಣ. ರೆಡ್ಡಿ. ಒಕ್ಕಲಿಗ ಇತ್ಯಾದಿ ಗಳಂತೆ ಜಾತಿಯಾಗದೆ ಸ್ವತಂತ್ರ ಧರ್ಮವಾಗದು, ಜಾತಿಯನ್ನು ತ್ಯಜಿಸಿ ಧರ್ಮವಂತ ನಾಗಲು ಬರುವುದು; ಧರ್ಮವನ್ನು ತ್ಯಜಿಸಿ ಕುರುಬ ಜಾತಿಯವನಾಗ್ಲಿ ಆಗಲು ಬಾರದು, ಏಕೆಂದರೆ ಹುಟ್ಟಿನಿಂದ ಬರವುದು ಜಾತಿ ; ಸಂಸ್ಕಾರದಿಂದ ಬರವುದು ಧರ್ಮ. ಲಿಂಗಾಯತ ಧರ್ಮವು ಸಂಸ್ಕಾರ ದಿಂದ ಬರವುದು, ಇದನ್ನು ಪ್ರವೇಶಿಸಲು ಎಲ್ಲರಿಗೂ ಹಕ್ಕಿದೆ.

ಪರಿವಿಡಿ (index)
*
Previous ಲಿಂಗಾಯತರು ಹಿಂದೂಗಳಲ್ಲ -ಡಾ.ಎನ್.ಜಿ.ಮಹಾದೇವಪ್ಪ ಲಿಂಗಾಯತ ಎಂದರೇನು? What is Lingayat Next