ನ್ಯೂ ಇಯರ್ ಡೇ ಯೂ, ಮತ್ತು ಯುಗಾದಿ ಯೂ.
|
|
*
ಆಶ್ಚರ್ಯವಾದರೂ ಸತ್ಯ ಇದು ನಮ್ಮ ಭಾರತದ್ದೇ ಮೂಲ ಕಾಲಮಾನ.
ಜನವರಿ 1ರಂದು New Year Day ಆಚರಣೆಗೆ ಬಂದದ್ದು ಹೇಗೆ ಎನ್ನುವುದು ನಾವು ಭಾರತೀಯರು ತಿಳಿದುಕೊಳ್ಳಲೇಬೇಕಾದ ವಿಷಯವಾಗಿದೆ. 1753ರಲ್ಲಿ ಇಂಗ್ಲೆಂಡಿನಲ್ಲಿ ಪ್ರಥಮ ಬಾರಿಗೆ New Year Day ಯನ್ನು ಆಚರಿಸಲಾಯಿತು. ಮತ್ತದರ ಜನ್ಮವನ್ನು ಜಾಲಾಡುತ್ತಾ ಹೋದಾಗ ಆಶ್ಚರ್ಯಕಾರಿ ವಿಷಯಗಳು ಹೊರ ಹೊಮ್ಮುತ್ತವೆ.
ಪ್ರಾಚೀನ ಕಾಲದಿಂದಲೂ ಕಾಲಮಾನ ಪದ್ಧತಿ, ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯಶಾಸ್ತ್ರಗಳ ಬಳಕೆಯಲ್ಲಿ ಭಾರತೀಯರು ಮತ್ತು ರೋಮನ್ನರದ್ದು ಮೇಲುಗೈ. ಅದೇ ತರಹ ಭಾರತೀಯರು ಕಾಲ ನಿರ್ಣಯವನ್ನು ಗ್ರಹ ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿ , ತಿಥಿ, ವಾರ, ಮಾಸ, ಸಂವತ್ಸರಗಳನ್ನು ನಿಖರವಾಗಿ ಸಿದ್ಧಗೊಳಿಸುವ ಪಂಚಾಂಗಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ ಪ್ರಾಚೀನ ರೋಮ್ ಸಾಮ್ರಾಜ್ಯದ ಕಾಲ ನಿರ್ಣಯ ಪದ್ದತಿ ಹೇಗಿತ್ತು? ಒಂದು ವರ್ಷಕ್ಕೆ ಹತ್ತೇ ತಿಂಗಳೆಂದು ರೋಮನ್ನರು ನಂಬಿದ್ದರು. 'ಭಾರತಿಯ ಕಾಲಶಾಸ್ತ್ರ ನಿರ್ಣಯ ಪದ್ಧತಿಯಿಂದ ಕಲಿತು ರೋಮನ್ನರು ರೋಮನ್ ಕ್ಯಾಲೆಂಡರಿಗೆ ಜನವರಿ ಮತ್ತು ಫೆಬ್ರವರಿಗಳನ್ನು ಸೇರಿಸಿ ಅವರ ಪ್ರಕಾರದ ವರ್ಷಕ್ಕಿರುವ ಒಟ್ಟು ತಿಂಗಳುಗಳನ್ನು ಹತ್ತರಿಂದ ಹನ್ನೆರಡಕ್ಕೆ ಏರಿಸಿದರು. ಜೂನ್ ತಿಂಗಳಲ್ಲಿ 29 ದಿವಸಗಳು ಮಾತ್ರ ಇದ್ದು ಅದನ್ನು 30ಕ್ಕೆ ಏರಿಸಿದರು. ನಂತರ ರೋಮ್ ದೊರೆ 'ಜೂಲಿಯಸ್ ಸೀಸರ್' ಆತನ ಹೆಸರಿನಲ್ಲಿಯೇ "ಜುಲೈ" ತಿಂಗಳನ್ನು ನಾಮಕರಣ ಮಾಡಿದನು. ಆತನ ಉತ್ತರಾಧಿಕಾರಿ "ಆಗಸ್ಟಸ್" ಆತನ ಹೆಸರಿನಲ್ಲಿ ಮುಂದಿನ ತಿಂಗಳನ್ನು 'ಆಗಸ್ಟ್' ಎಂದು ಕರೆದನು. ಭಾರತೀಯ ಶಾಸ್ತ್ರದಿಂದ ರೋಮನ್ನರು ಅವರ ಮುಂದಿನ ತಿಂಗಳುಗಳನ್ನು; ಸೆಪ್ಟೆಂಬರ್ (ಸಂಸ್ಕೃತ - ಸಪ್ತ = 7 ನೇ+ ಅಂಬರ= ತಿಂಗಳು/ ಆಕಾಶ) , ಅಕ್ಟೋಬರ್ (ಅಷ್ಟ = 8ನೇ), ನವೆಂಬರ (ನವ= 9ನೇ) ಮತ್ತು ದಶಂಬರ (ದಶ= 10ನೇ) ಅಂಬರ /ತಿಂಗಳು ಎಂದು ಕರೆದರು. ಜನೆವರಿ ಮತ್ತು ಫೆಬ್ರವರಿ ನೂತನ ಎರಡು ಮಾಸಗಳನ್ನು ಸೇರಿಸುವ ಮೊದಲು ಇವುಗಳು ಕ್ರಮವಾಗಿ 7, 8, 9, 10 ನೇ ತಿಂಗಳುಗಳು ಆಗಿದ್ದವು. ಆದರೆ ನೂತನ ಎರಡು ತಿಂಗಳುಗಳನ್ನು ಅವರ ತಿಂಗಳುಗಳ ಪಟ್ಟಿಯಲ್ಲಿ ಕೊನೆಗೆ ಸೇರಿಸುವ ಬದಲು ಮೊದಲಿಗೆ ಸೇರಿಸಿದರು. ಈ ಸೇರ್ಪಡೆಯಿಂದ ಮಾರ್ಚಿನಿಂದ ಡಿಸೆಂಬರದವರೆಗಿನ ಎಲ್ಲಾ ತಿಂಗಳುಗಳು 2 ಸ್ಥಾನ ಕೆಳಗೆ ಜಾರಿದವು. ಆದ ಕಾರಣ ಈಗ ಸೆಪ್ಟಂಬರ್, ಅಕ್ಟೋಬರ್, ನವೆಂಬರ್, ದಶಂಬರ್ ತಿಂಗಳುಗಳು ನಿಜವಾದ ಅರ್ಥ ಕಳೆದು ಕೊಂಡು ವಿರೋಧವಾಗಿ 9, 10, 11, 12ನೇ ತಿಂಗಳುಗಳಾಗಿವೆ. ನವೆಂಬರ (ನವ ಅಂಬರ) 9ರ ಬದಲಿಗೆ 11ಕ್ಕೆ ಬಂದಿದ್ದು, ಡಿಸೆಂಬರ (ದಶ ಅಂಬರ 10)ರ ಬದಲಿಗೆ 12ಕ್ಕೆ ಬಂದಿದೆ!
ಅದೇ ಪ್ರಾಚೀನ ಭಾರತೀಯ ಸಂಸ್ಕೃತಿಯ ಪ್ರಕಾರ ಯುಗಾದಿಯ ದಿನದಂದು ಹೊಸ ವರ್ಷವೆಂದು ಆಚರಿಸುತ್ತಿದ್ದರು. ಇದು ಸರಿಸುಮಾರು ಪಾಶ್ಚಿಮಾತ್ಯರ (ರೋಮನ್ನರ ) ಮಾರ್ಚ್ ತಿಂಗಳಿನಲ್ಲಿ ಬರುತ್ತದೆ. ಮತ್ತು ರೋಮನ್ನರ ಹಳೆಯ ಕ್ಯಾಲೆಂಡರ್ ನಲ್ಲೂ ಕೂಡ ನ್ಯೂ ಇಯರ್ ಮಾರ್ಚ್ ನಿಂದ ಪ್ರಾರಂಭವಾಗುತ್ತಿತ್ತು. ಆದರೆ ಅವರು ಹೆಚ್ಚುವರಿಯಾಗಿ ಸೇರಿಸಿದ ಜನೆವರಿ ಮತ್ತು ಫೆಬ್ರವರಿಗಳನ್ನು ಕೊನೆಯ ತಿಂಗಳಾದ ಡಿಸೆಂಬರ್ ನಂತರ ಸೇರಿಸುವ ಬದಲು ಪ್ರಥಮ ತಿಂಗಳು ಮಾರ್ಚ್ ಗಿಂತ ಮೊದಲು ಸೇರಿಸಿ ಜನವರಿಯಿಂದ ತಿಂಗಳುಗಳ ಲೆಕ್ಕ ಹಾಕಿದರು. ಹಾಗಾಗಿ ಅಂದಿನಿಂದ ಅವರ ಹೊಸದಾಗಿ ತಯಾರಾದ ಕ್ಯಾಲೆಂಡರ್ ಜನವರಿ ಯಿಂದ ಪ್ರಾರಂಭವಾಗಿ ಡಿಸೆಂಬರ್ ಗೆ ಕೊನೆಗೊಳ್ಳುತ್ತದೆ.
ಆದರೆ ದುರದೃಷ್ಟ ಏನೆಂದರೆ ನಾವಿಂದು ನಮ್ಮ ಮೂಲ ಕಾಲಮಾನ ಪದ್ದತಿ ಗೊತ್ತಿದ್ದರೂ ಸಹ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ನಮ್ಮ ಮೂಲತನವನ್ನೇ ಕಳೆದುಕೊಂಡು ಅವರ ಕ್ಯಾಲೆಂಡರ್ ನಂತೆ ಹೊಸವರ್ಷವನ್ನು ಆಚರಿಸುತ್ತಿರುವುದು. ಮಾರ್ಚ್ ತಿಂಗಳಿನಲ್ಲಿ ಬರುವ ಯುಗಾದಿಯ ಸಮಯದಲ್ಲಿ ಹವಾಮಾನದಲ್ಲಿ ಬದಲಾವಣೆಯನ್ನು ಕಾಣ ಬಹುದು, ಅದೇ ಕಾರಣಕ್ಕೆ ಯುಗಾದಿಯ ನಂತರ ನಮ್ಮ ರೈತರು ಬೆಳೆ ಬಿತ್ತುವುದು. ಆದರೆ ಈಗಿನ ನಮ್ಮ ಯುವ ಜನರು ಪಾಶ್ಚಾತ್ಯ ಸಂಸ್ಕೃತಿಯ DAYಯನ್ನು ಆಚರಿಸುವ ಮೂಲಕ ನಮ್ಮ ಭಾರತೀಯ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಅಷ್ಟೇ ಅಲ್ಲದೇ ಈ New Year Day ಸಂದರ್ಭದಲ್ಲಿ ಹಲವಾರು ಯುವಕ, ಯುವತಿಯರು ಕುಡಿತ, ಸಲುಗೆ, ಕಾಮಕೇಳಿಯಂತಹ ದುಶ್ಚಟಕ್ಕೆ ಬಿದ್ದು, ತಮ್ಮ ಪ್ರಾಣ, ಮಾನವನ್ನು ಹಾಳು ಮಾಡಿ ಕೊಳ್ಳುತ್ತಿದ್ದಾರೆ. New Year Day ಆಚರಣೆಯಲ್ಲಿ ಕುಡಿತದ ಮತ್ತಿನಲ್ಲಿ ಎಷ್ಟೋ ಅಪಘಾತ ಆಗಿರುವುದನ್ನು ನೋಡಿದ್ದೇವೆ. ಅದೇ ರೀತಿ ಈ ಸಂದರ್ಭದಲ್ಲಿ ಬಹಳಷ್ಟು ರಾಷ್ಟ್ರಗಳಲ್ಲಿ ( ಭಾರತವೂ ಸೇರಿ ) ಅನ್ಯಮತೀಯರ ಮತಾಂತರ ಆಗುತ್ತವೆ.
ಇನ್ನಾದರೂ ಯೋಚನೆ ಮಾಡೋಣ..
ನಮ್ಮ ಯುಗಾದಿಗೆ ಮಹತ್ವ ಕೊಡೋಣ. ಶುಭ ದಿನ...
- ಸಂಗ್ರಹ
*