![]() | ಬೆಳವಾಡಿ (ಬೆಳವಡಿ) ಮಲ್ಲಮ್ಮ | ಲಿಂಗಾಯತ | ![]() |
ಶರಣೆ ಹೇಮರೆಡ್ಡಿ ಮಲ್ಲಮ್ಮ |
ಸುಮಾರು ೫೦೦ ವರ್ಷಗಳ ಹಿಂದೆ ಶ್ರೀಶೈಲದ ಸಮೀಪ ಶರಣೆಯಾಗಿ ಜೀವಿಸಿದ್ದವಳು ಹೇಮರೆಡ್ಡಿ ಮಲ್ಲಮ್ಮ.
ಆಂದ್ರಪ್ರದೇಶವನ್ನು ಬಹು ವಿಜೃಂಭಣೆಯಿಂದ ಆಳಿದ ಅರಸರೆಂದರೆ ಶಿವಭಕ್ತ ಸಂಪನ್ನರಾದ ವಾರಂಗಲ್ಲಿನ ಕಾಕತೀಯ ಅರಸರು ಕ್ರಿ.ಶ 1326 ರಲ್ಲಿ ಕಾಕತೀಯರ ಸಾಮ್ರಜ್ಯ ಪತನವಾದ ನಂತರ ಕಾಕತೀಯ ಪ್ರತಾಪರುದ್ರದೇವನ ಸೇನಾಪತಿಯಾದ ಪ್ರೋಲಯ ವೇಮಾರಡ್ಡಿ ಸ್ವತಂತ್ರನಾಗಿ 'ಮಿನುಕೊಂಡ ' ಪ್ರದೇಶವನ್ನು 1339ರ ವರೆಗೆ ಆಳಿದನು. ಇವನ ನಂತರ ಮಗನಾದ 'ದೇಸಟಿ ವೇಮಾರಡ್ಡಿ'ಯು 1350ರ ವರೆಗೆ ಆಳಿದನು.ಇವನು ಪರಾಕ್ರಮಿಯಂತೆ, ಧರ್ಮಿಷ್ಟನಾಗಿದ್ದನು.ಅವಚಿ ದೇವಯ್ಯ ಶೆಟ್ಟಿಯ ಸಹಾಯದಿಂದ ಶ್ರೀಶೈಲ ಪರ್ವತಕ್ಕೆ ಸೋಪಾನ ಕಟ್ಟಿಸಿ, ಆಂದ್ರದ ಮಹಾಕವಿ ಶ್ರೀನಾಥನಿಂದ 'ವೀರ ಮಾಹೇಶ್ವರ ಚಕ್ರವರ್ತಿ ' ಎಂದು ಹೋಗಳಿಸಿಕೊಂಡಿರುವನು. ಇವನ ನಂತರ ಅನಪೋತ ಭೂಪಾಲ ಅನವೇಮಾರಡ್ಡಿ,ಕುಮಾರ ಗಿರಿರಡ್ಡಿ ಅಧಿಕಾರಕ್ಕೆ ಭಂದರು.ಕುಮಾರಗಿರಿರಡ್ಡಿ ರಾಜ್ಯ ಭಾರಕ್ಕೆ ಅಸಮರ್ಥನಾಗಿದ್ದರಿಂದ ಅನವೇಮರಡ್ಡಿಯ ಮೊಮ್ಮಗ 'ಪದಕೋಟಿ ವೇಮಭೂಪಾಲನು ' ಅವನು ರಾಜ್ಯವನ್ನು ವಶಪಡಿಸಿಕೊಂಡನು ಅನಿವಾರ್ಯವಾಗಿ ಕುಮಾರಗಿರಿರಡ್ಡಿ ತನ್ನ ಮಕ್ಕಳಾದ ಕೋಮಟಿ ವೆಂಕಾರಡ್ಡಿ,ನಾಗೇಂದ್ರರಡ್ಡಿ,ಭರಮರ ಡ್ಡಿ ಹಾಗು ವೇಮರಡ್ಡಿಯರೊಂದಿಗೆ ಶ್ರೀಶೈಲ ಪರ್ವತ ಸಮೀಪದ ಸಿದ್ದಾಪುರಕ್ಕೆ ಬಂದು ನೆಲಿಸಿದನು.ಇವನ ಮೂರನೆಯ ಮಗನಾದ ಭರಮರಡ್ಡಿಯು ದೈವಭಕ್ತಿ ಸಂಪನ್ನನಾದ ಮುಗ್ದನು.ಶಾಂತ ಸ್ವಭಾವದವನು.ಇವನ ಸತಿಯಾಗಿ ಶಿವಭಕ್ತಿ ಸಂಪನ್ನೆಯಾದವಳು ಮಲ್ಲಮ್ಮ.
ಶ್ರೀಶೈಲ ಪ್ರದೇಶ ಬೆಟ್ಟ ಗುಡ್ಡಗಳ ಶ್ರೇಣಿ ಪ್ರರ್ವತವಾದಂತೆ,ವನ ಸಿರಿಯ ತಾಣವಾಗಿತ್ತು.ಕ್ರಿ.ಶ.15 ನೆಯ ಶತಮಾನದಲ್ಲಿ ಈ ಪ್ರದೇಶವನ್ನು ಅನೇಕ ರಡ್ಡಿ ಜನಾಂಗದ ಮನೆತನಗಳು ಆಳುತ್ತಿದ್ದವು ಈ ಮನೆತನಗಳಿಗೆ ಪಕನಾಕರಡ್ಡಿ.ಕೊಂಡವೀಡುರಡ್ಡಿ ಮತ್ತು ಬಡಗನಾಡುರಡ್ಡಿ ಎಂದು ಕರೆಯತ್ತಿದ್ದರು ಇತಿಹಾಸ ಪ್ರಸಿದ್ದವಾದ ಶ್ರೀಶೈಲದ ದಕ್ಷಿಣ ಭಾಗದಲ್ಲಿರುವ 'ರಾಮಪುರ'ವು ಶಿವಭಕ್ತಿ ಸಂಪನ್ನರಿಂದ ತುಂಬಿತ್ತು.ಈ ಊರಿನಲ್ಲಿ ಧರ್ಮ ಮತ್ತು ಭಕ್ತಿಗೆ ಸೋಮರಡ್ಡಿಯೆಂಬ ಮನೆತನ ಹೇಸರಗೀತ್ತು ಸೋಮರಡ್ಡಿಯ ಮನೆಯಲ್ಲಿ ನಾಗರಡ್ಡಿ ಮತ್ತು ಗೌರಮ್ಮ ದಂಪತಿಗಳು ಶ್ರೀಶೈಲ ಮಲ್ಲಿಕಾರ್ಜುನನ ಪರಮ ಭಕ್ತರು.ಸದಾಕಾಲ ಸೇವಾನಿರತರು ಧನ-ಕನಕಾದಿಯಿಂದ ಸಂಪನ್ನರು ಆದರೆ ಇವರಿಗೆ ಮಕ್ಕಳ ಭಾಗ್ಯ ಮಾತ್ರ ಇರಲಿಲ್ಲ.ಮಕ್ಕಳಿಗಾಗಿ ಹಗಲಿರುಳು ಶ್ರೀಶೈಲ ಮಲ್ಲಿಕಾರ್ಜುನನನ್ನು ಪ್ರಾರ್ಥಿಸುತ್ತಿದ್ದರು. ಶ್ರೀಶೈಲ ಮಲ್ಲಿಕಾರ್ಜುನನು ಅವರ ಭಕ್ತಿಗೆ ಮೇಚ್ಚಿದನು.ಒಂದು ದಿನ ದಂಪತಿಗಳು ಪ್ರಾರ್ಥಿಸಿ ಮಲಗಿದಾಗ ಕನಸಿನಲ್ಲಿ ಬಂದು "ಭಕ್ತರೆ,ಚಿಂತಿಸಬೇಡಿ,ನಿಮಗೆ ಮಹಿಮಾಶಾಲಿಯೂ,ಕುಲವದಾರಕಳಾದ ಸತ್ಪುತ್ರಿ ಜನಿಸುವಳು,ನಿಮ್ಮ ಮನೆತನದ ಕೀರ್ತಿಯನ್ನು ಲೋಕದಲ್ಲಿ ಬೆಳಗುವಳೆಂದು,ಅನುಗ್ರಹಿಸಿ" ಮಾಯವಾದನು. ಎಚ್ಚತ್ತ ದಂಪತಿಗಳು ಶ್ರೀಶೈಲ ಮಲ್ಲಿಕಾರ್ಜುನನು ಕನಸಿನಲ್ಲಿ ನೀಡಿದ ಆಶೀರ್ವಾದವು ಬೇಗ ದೊರೆಯಲೆಂದು ಅನುದಿನ ಮಲ್ಲಯ್ಯನನ್ನು ಪೂಜಿಸಿದರು. "ನಂಬಿ ಕರೆದಡೆ ಓ ಎನ್ನನೆ ಶಿವನು" ಎಂಬಂತೆ ಶ್ರೀ ಮಲ್ಲಿಕಾರ್ಜುನನ ಕ್ರುಪಾಶೀರ್ವಾದದಿಂದ ಬಹುಬೇಗನೆ ಅವರ ಕನಸು ನನಸಾಯಿತು.ಗೌರಮ್ಮ ತಾಯಿ ಆದಳು ವಾಗರಡ್ಡಿಯ ಬಂಧು-ಬಳಗದವರು ವಿಷಯ ತಿಳಿದು ಸಂತೋಷ ಪಟ್ಟು ಕುಪ್ಪಸ ಕಾರಣ ನೆರವೇರಿಸಿದರು ಗೌರಮ್ಮನಿಗೆ ನವಮಾಸ ತುಂಬಿ ಕ್ರಿ.ಶ 1422 ರಲ್ಲಿ ಶುಭ ಮುಹೂರ್ತದಲ್ಲಿ ಸುಲಕ್ಷಣವಾದ ಸುಪುತ್ರಿಗೆ ಜನ್ಮವಿತ್ತಳು.ಬಂದು-ಭಾಂಧವರು ಸೇರಿ ಗುರುಗಳ ಸಮ್ಮುಖದಲ್ಲಿ ಸಂತೋಷದಿಂದ ಶ್ರೀಶೈಲ ಮಲ್ಲಿಕಾರ್ಜುನನ ಹರಕೆಯಿಂದ ಮಗು ಪಡದಿದ್ದರಿಂದ "ಮಲ್ಲಮ್ಮ"ನೆಂದು ನಾಮಕರಣ ಮಾಡಿದರು.
ಬೆಳೆಯ ಸಿರಿ ಮೊಳಕೆಯಲ್ಲಿ ಎಂಬಂತೆ ಚಿಕ್ಕ ಮಗುವೀರುವಾಗಲೆ ಮಲ್ಲಮ್ಮ ದೈವಿ ಭಕ್ತಳು.ತನ್ನ ವಾರಿಗೆಯ ಮಕ್ಕಳೊಂದಿಗೆ ಆಟವಾಡುವಾಗಲು ದೇವರ ಪೂಜೆ ಮಾಡುವಳು ಸಾಮಾನ್ಯವಾಗಿ ಮಕ್ಕಳು ಗುಳ್ಳಿ,ಗೊಂಬೆ,ಕಲ್ಲು ಮಣ್ಣಿನಲ್ಲಿ ಆಡಿದರೆ ಮಲ್ಲಮ್ಮ ಪ್ರತಿಯೋಂದರಲ್ಲಿಯೂ ದೈವತ್ವ ಕಾಣುವಳು ತನಗೆ ದೊರೆತ ಕಲ್ಲನ್ನೇ ನೆಟ್ಟಗೆ ನಿಲ್ಲಿಸಿ ದೇವರೆಂದು ಪುಜಿಸುವಳು.ಸಿಕ್ಕ ಕಾಳು-ಹಣ್ಣು ನೈವೇದ್ಯಮಾಡಿ ಉಣಿಸುವಳು ಮಲ್ಲಮ್ಮನ ಈ ವರ್ತನೆ ವಾರಿಗೆಯವರಿಗೆ ವೀಚೀತ್ರವೆನಿಸಿ "ಮಲ್ಲಮ್ಮ ಅದೇನು ಕಲ್ಲಿನ ಮುಂದೆ ಕುಳಿತು ಧ್ಯಾನಿಸುವಿಯಲ್ಲ ?ಅದೇನು ದೇವೆರೆ ?" ಎಂದು ಕೇಳಿದರೆ ಹೌದು ನನಗೆ ಅದೆ ದೇವರು ದೇವರಿಗೆ ಮಕ್ಕಳೆಂದರೆ ತುಂಬಾ ಇಷ್ಟ.ಚಿಕ್ಕಮಕ್ಕಳೊಂದಿಗೆ ಆಟ ಆಡುವನು.ಊಟ ಮಾಡುವನು.ನಾನು ನೀಡಿದ ನೈವೇದ್ಯವೆಲ್ಲವನು ತಿನ್ನುವನು ಎಂದು ಹೇಳುವಳು ಮಲ್ಲಮ್ಮನ ಆಟ-ಅವಳ ಸ್ವಭಾವ ತಿಳಿಯದ ಗೆಳತಿಯರು ಏನೊ ಅವಳ ಆಟವೇ ವಿಚಿತ್ರ ಎನ್ನುವರು.ದೇವರ ಆಟದಲ್ಲಿಯೇ ಮಲ್ಲಮ್ಮ ಬೆಳೆದಳು.
ಸಿರಿವಂತರ ಮನೆಯಲ್ಲಿ ಹುಟ್ಟಿದರೂ ಮಲ್ಲಮ್ಮನಲ್ಲಿ ಜಂಭವಿರಲಿಲ್ಲ ಎಲ್ಲರೋಂದಿಗೆ ನಯ -ವಿನಯದಿಂದ ನಡೆದುಕೊಳ್ಳುವಳು ದೊಡ್ಡ ಮನೆಯಲ್ಲಿ ಆಕಳ ಕರುಗಳು ಇರುವದು ಸಹಜ ಅವುಗಳಿಗೆ ಮೇವು ಹಾಕಿ ನೀರು ಕೂಡಿಸಿ ಪ್ರಿತಿಯಿಂದ ಮಾತಾಡುವಳು ಮನೆಯ ಸುತ್ತಲು ಬೆಳೆದ ಹೂ - ಗಿಡಗಳಿಗೆ ನೀರು ಹಾಕಿ ಬೆಳೆಸುವಳು ಮನೇಯಲ್ಲಿ ಹಿರಿ-ಕಿರಿಯರಿಗೆ ಅಚ್ಚು ಮೆಚ್ಚಿನವಳಾದಂತೆ ಹೊರಗಿನವರಿಗೂ ಪ್ರೀತಿಯ ಮಗಳಾಗಿದ್ದಳು
ದಿನಾಲೂ ಮನೆಯಲ್ಲಿ ಹಿರಿಯರು ಹೇಳುವನು ಶಿವನು ಲೀಲೆಯ ಕಥೆಯಗಳನ್ನು ಶ್ರದ್ದೆಯಿಂದ ಕೇಳುವಳು ಪ್ರಾಣಿ - ಪಕ್ಷಿಗಳಲ್ಲಿ ಡೇವತ್ವವನ್ನೆ ಕಾಣುವಳು
ಮಲ್ಲಮ್ಮನ ದೈವಭಕ್ತಿ ಪರೀಕ್ಷೆ ಎಂಬತೆ ಒಂದು ದಿನ ಒಬ್ಬ ಮುದಕು ನಡುಗುತ್ತ ಅವಳ ಮನೆಗೆ ಬಂದನು.ಹಣ್ಣು ಹಣ್ಣು ಮುದಕು ಮೇಲಾಗಿ ರೋಗದಿಂದ ಬಳಲುತಿದ್ದ ನರಳುತ್ತ ಮನೆಯ ಮುಂದೆ ನಿಂತು ಅಮ್ಮಾ ನೀರು ಕೊಡಿ ನನಗೆ ಬಾಯಾರಿಕೆ ಆಗಿದೆ ನೀರು ಕೊಡಿ ತಾಯಿ ಎಂದು ಬೇಡಿದ ಓಣಿಯಲ್ಲಿ ತಿರುಗಾಡುವ ಜನರು ನೋಡಿದರೂ ನೋಡದಂತೆ ಮೂಗು ಬಾಯಿ ಮುಚ್ಚಿಕೊಂಡು ನಡೆದರು ಒಬ್ಬರೂ ಅವನಿಗೆ ನೀರು ಕೊಡಲು ಮುಂದೆ ಬರಲಿಲ್ಲ ಕೇಲವರು ರೋಗಿಯಾದ ಮುದಕನ ಹತ್ತಿರ ಹೋದರೆ ತಮಗೂ ರೋಗ ಬರಬಹುದೇಂದು ಆ ದಾರಿಗೆ ಬರುವದನ್ನೆ ಬಿಟ್ಟರು.
ಮುದಕು ಒಂದು ಸಮನೆ ಕೂಗಿಕೋಳ್ಳುವದನ್ನು ಮನೆಯ ಮುಂದೆ,ಗೆಳತಿಯರೊಂದಿಗೆ ಆಟವಾಡುವ ಮಲ್ಲಮ್ಮ ನೋಡಿದಳು ಒಬ್ಬರೂ ಮೂದುಕನಿಗೆ ನೀರು ಕೋಡದ್ದನ್ನು ಗಮನಿಸಿ ಆಡುವದು ಬಿಟ್ಟು ಒಡಿ ಬಂದು ಮನೆಯೊಳಗೆ ಹೋಗಿ ತಂಬಿಗೆಯಲ್ಲಿ ನೀರು ತಂದು ಕುಡಿಯರಿ ಎಂದು ಕರೆದು ಕೊಟ್ಟಳು,ನೀರು ಕುಡಿದು ಮುದಕು ನಿನ್ನ ದಯಾಗುಣದಿಂದ ಬದುಕಿದೆನು ಮಗಳೆ ನಿನ್ನ ಕೀರ್ತಿ ನಾಡಿನ ತುಂಬಾ ಬೆಳಗಲಿ ಎಂದು ಆಶೀರ್ವಾದಿಸಿ ಹೋದನು ದಿನಗಳೆದಂತೆ ಮಲ್ಲಮ್ಮ ಬಿದಿಗಿಯ ಚಂದ್ರನಂತೆ ಬೆಳೆದು ದೊಡ್ಡವಳಾದಳು ಮಲ್ಲಮ್ಮನ ಬಾಲ್ಯ ಜೀವನದ ಆಟಗಳನ್ನು ಗಮನಿಸಿದ ತಂದೆ ತಾಯಿ ಬಂದು - ಬಲಗದವರು ಸಂತೋಷ ಪಡುವುದರಲ್ಲಿಯೇ ಮಲ್ಲಮ್ಮನಲ್ಲಿಯೂ ದೈವಭಕ್ತಿ ಬೆಳೆಯಿತು.
ಮಲ್ಲಮ್ಮ ದಿನಾಲು ಬೆಳಿಗ್ಗೆ ಎದ್ದು ಸ್ನಾನಾದಿ ಕರ್ಮಗಳನ್ನ ಮಾಡಿ ತಪ್ಪದೇ ಮನೆಯ ದೇವರಾದ ಶ್ರೀಶೈಲ ಮಲ್ಲಿಕಾರ್ಜುನನ ಪೂಜಿಸುವಳು ಓಕ್ಕುಲತನದ ದೊಡ್ಡ ಮನೇಯಾದರಿಂದ ಆಕಳು-ಕರುಗಳಿಗೆ ಮೇವು ಹಾಕುವುದು ನೀರು ಕೂಡಿಸುವುದು ಹಾಲು ಕರೆಯುವದು ಮನೆ ಕೆಲ್ಸ ಮಾಡುವದರಲ್ಲಿ ಭಾಗಿ ಆಗುವಳು ಮಗಳಲ್ಲಿ ಬೆಳೆದ ಸದ್ಬುದ್ಧಿ ದೈವಭಕ್ತಿ ಕಂಡು ವೇಮನಾಗರಡ್ಡಿ ಮತ್ತು ಗೌರಮ್ಮನಿಗೆ ತುಂಬಾ ಸಂತೋಷವಾಯಿತು ತಡಮಾಡಿಯಾದರು ಶ್ರೀಶೈಲ ಮಲ್ಲಿಕಾರ್ಜುನ ತಮಗೆ ಒಳ್ಳೆಯ ಬುದ್ದಿವಂತ ಸುಪುತ್ರಿಯನ್ನು ದಯಾಪಾಲಿಸಿದನೆಂದು ಮನದುಂಬಿ ಹರಿಸಿದರು. ಮಲ್ಲಮ್ಮ ದಿನಗಳೆದಂತೆ ಪ್ರೌಡೆಯಾಗಿ ಬೆಳೆದಿದ್ದು ನೋಡಿ ತಂದೆ ತಾಯಿ ತಕ್ಕ ವರನಿಗಾಗಿ ಚಿಂತಿಸಿದರು ಬೆಳೆದ ಮಗಳಿಗೆ ಒಪ್ಪುವಂತಹ ಅನುರೂಪ ಮತ್ತು ಗುಣಶಶೀಲ ವರನನ್ನು ದೊರಕಿಸಿ ಕೊಡೆಂದು ಮಲ್ಲಯ್ಯನಲ್ಲಿ ಪ್ರಾರ್ಥಿಸಿದರು.
ಶ್ರೀಶೈಲ ಪರ್ವತದ ಇನ್ನೊಂದು ಭಾಗದಲ್ಲಿ ನೈಸರ್ಗಿಕವಾಗಿ ಸಂಪದ್ಭರಿತವಾದ ಸಿದ್ದಾಪುರ ವೆಂಬ ಗ್ರಾಮವಿದ್ದು ಅಲ್ಲಿ ರಡ್ಡಿ ವಂಶದ ರಾಜಮನೆತನಕ್ಕೆ ಸೇರಿದ ಮನೆತನದ ಕುಮಾರಗಿರಿರಡ್ಡಿಯು ರಾಜ್ಯವಾಳುತಿದ್ದುನು ಕುಮಾರಗಿರಿರಡ್ಡಿಯು ದೈವಭಕ್ತನದುದರಿಂದ ರಾಜ್ಯವನ್ನು ತನ್ನ ತಂಗಿಯಾದ ಮಲ್ಲಾಂಬಿಕೆಯ ಗಂಡ ಕಾಟಯ್ಯರಡ್ಡಿಗೆ ಒಪ್ಪಿಸಿ ಸಿದ್ದಾಪುರದಲ್ಲಿ ಧಾರ್ಮಿಕ ಕಾರ್ಯ ಮಾಡುತಿದ್ದನು ಗಿರಿರೆಡ್ಡಿಯ ಹೆಂಡತಿ ಪದ್ಮಾವತಿಯೇ ಮನೆ ವ್ಯವಹಾರ ನಡೆಸುವಳು
ಗಿರಿರಡ್ಡಿ ಪದ್ಮಾವತಿ ದಂಪತಿಗಳಿಗೆ ಐದು ಗಂಡು ಮಕ್ಕಳು ಜನಿಸಿದರು ಮೊದಲನೆಯವನು ಕೋಮಟಿ ವೇಂಕಾರಡ್ಡಿ, ಎರಡನೆಯವನು ನಾಗರಡ್ಡಿ,ಮೂರನೆಯವನು ಭರಮರಡ್ಡಿ,ನಾಲ್ಕನೆಯವನು ನಾಗೇಂದ್ರರಡ್ಡಿ,ಐದನೇಯವನು ವೇಮನರಡ್ಡಿ.ಇವರಲ್ಲಿ ಮೂರನೆಯವನಾದ ಭರಮರಡ್ಡಿಯು ಸ್ವಭಾವತ ಮುಗ್ದನೂ ವ್ಯವಹಾರ ಚತುರನಲ್ಲದಿದ್ದುರೂ ದೈವಭಕ್ತಿ ಸಂಪನ್ನುನು.ಹೇಮರಡ್ಡಿಯವರ ಮಗಳು ಮಲ್ಲಮ್ಮನ ಮದುವೆ (ಕ್ರಿ.ಶ.1444 ರಲ್ಲಿ ) ಶುಭ ದಿನದಲ್ಲಿ ವಿಜೃಂಭಣೆಯಿಂದ ನೆರೆವೇರಿತು.ಗುರು - ಹಿರಿಯರು,ಆಪ್ತರು ಸೇರಿ ನವ ದಂಪತಿಗಳಿಗೆ ಆಶೀರ್ವಾದಿಸಿದರು.
ಮದುವೆಯಾಗಿ ಗಂಡನ ಮನೆಗೆ ಹೋಗುವ ಮಲ್ಲಮ್ಮನಿಗೆ ಪತಿಯ ಮನೆಯಲ್ಲಿ ನಡೆದುಕೊಳ್ಳುವ ರೀತಿ ನೀತಿಗಳನ್ನು ತಂದೆ ತಾಯಿ ತಿಳಿಸಿ ಕಳಿಸಿ ಕೊಟ್ಟರು ತವರಿನವರ ಅಗಲಿಕೆಯ ದುಃಖದೊಂದಿಗೆ ಮಲ್ಲಮ್ಮ ಸಿದ್ದಾಪುರಕ್ಕೆ ಬಂದಳು ಗಂಡನ ಮನೆಯಲ್ಲಿ ಮಲ್ಲಮ್ಮ ಎಂದಿನಂತೆ ಬೆಳಿಗ್ಗೆ ಎದ್ದು ಮನೆಯ ಕಸ ಹೊಡೆದು ಪಾತ್ರೆ ತೊಳೆದು ಆಕಳ ಕರು ಬಿಟ್ಟು ಹಾಲು ಕರೇವಳು ನಂತರ ಸ್ನಾನ ಮಾಡಿ ಭಕ್ತಿಯಿಂದ ಮಲ್ಲಯನ ಪೂಜಿಸಿ ಅಡಿಗೆ ಮಾಡುವಳು ಅತ್ತೆ ಮಾವಂದಿರಿಗೆ ನಮಸ್ಕರಿಸುವಳು, ನಾದಿನಿಯರಿಗೆ ಗೌರವ ಕೊಡುವಳು ಪತಿಯೇ ಪರದೈವವೆಂದು ನಂಬಿ ಗಂಡನ ಸೇವೆಯನ್ನು ತಪ್ಪದೇ ಮಾಡುವಳು ಸದಾ ಮಲ್ಲಯ್ಯನ ನಾಮಸ್ಮರಣೆಯೊಂದಿಗೆ "ಪತಿ ಮನೆಯ ದೇವ ಮಂದಿರ,ಅಲ್ಲಿಯ ಹಿರಿಯರ ಸೇವೆ ಮಾಡುವದೇ ದೇವರ ಸೇವೆಯೆಂದು" ಬಗೆದು ಸತ್ಯ ಶುದ್ದ ಮನಸ್ಸಿನಿಂದ ಸೇವೆ ಮಾಡುವಳು ಪರರನ್ನು ನಿಂದಿಸದೆ ಸುಳ್ಳು ಮಾತಾಡದೆ ಇನ್ನೊಬ್ಬರ ಬಗ್ಗೆ ಇಲ್ಲಸಲ್ಲದು ಆಡಿಕೊಳ್ಳದೆ ತನ್ನ ಕೆಲಸದಲ್ಲಿ ಮಗ್ನಳಾಗಿರುವಳು.
ಮನೆಯವರಲ್ಲದೆ ಮನೆಗೆ ಬಂದ ಅತಿಥಿಗಳಿಗು ವಿನಮ್ರತೆಯಿಂದ ಉಪಚರಿಸಿಸುವಳು ಭಿಕ್ಷುಕರನ್ನು ಕಂಡರೆ ಕಡೆಗಣಿಸದೆ ಭಿಕ್ಷೆ ನೀಡಿ ಸಂತೈಸಿ ಕಳಿಸುವ ಮಲ್ಲಮ್ಮನ ಗುಣ ನೋಡಿ ತಮ್ಮ ಮನೆಗೆ ತಕ್ಕ ಸೊಸೆ ಬಂದಳೆಂದು ಅತ್ತೆ-ಮಾವ ಹಿಗ್ಗಿದರು. ಮಲ್ಲಮ್ಮ ದಿನಾಲು ಅಡವಿಗೇ ಹೋಗಿ ದನ ಕರುಗಳನ್ನು ಮೇಯಿಸಿ ಮನೆಗೆ ಹೋಡೆದುಕೊಂಡು ಬಂದರು ಮನೆಯಲ್ಲಿದ್ದ ನೇಗಣ್ಣಿಯರಾದ ಮಹಾದೇವಿ-ನಾಗಮ್ಮರಿಗೆ ಸಮಾದಾನವಿರಲಿಲ್ಲ ದನ ಕಾಯುವ ಕೇಲಸದಲ್ಲೀಯು ಸಂತೋಷ ತೋರಿಸುವ ಮಲ್ಲಮ್ಮಳ ಬಗ್ಗೆ ಅವರಿಗೆ ಅಸೂಯೆ ಹೆಚ್ಚಿತು ಬಿಸಿಲಿಗೆ ಬಾಡಿ ಕಲ್ಲು ಮುಳ್ಳು ತುಳಿದು ಬೆಂಡಾಗಿ ಬರುವ ಮಲ್ಲಮ್ಮಳಿಗೆ ನೆಮ್ಮದಿಯಿಂದ ಇರಲು ಬಿಡುತ್ತಿರಲಿಲ್ಲ ನಾಗರಡ್ಡಿಯದು ದೊಡ್ಡ ಒಕ್ಕಲುತನದ ಮನೆ ಜೋಳ ಹಸನು ಮಾಡಿ ಕಲ್ಲಿಗೆ ಕೂತು ಬೀಸಿದ ಹಿಟ್ಟಿನಿಂದ ಎಲ್ಲರಿಗೂ ರೊಟ್ಟಿ ಬಡಿದು ಹಾಕುವದು ಓಬ್ಬರಿಂದ ಸಾಧ್ಯಾವಾಗದ ಕೆಲಸ ಆದರೆ ಅತ್ತೆ ಪದ್ಮಾವತಿ ನೆಗೆಣ್ಣಿಯರು ಕೂಡಿ ಮಲ್ಲಮ್ಮ ದನ ಕಾಯ್ದು ಮನೆಗೆ ಬಂದರೆ ಸಾಕು ಜೋಳ ಹಸನು ಮಾಡಲು ಹೇಳುವರು ಮಲ್ಲಮ್ಮಳೆ ಎಷ್ಟೋತ್ತಾದರು ಬೀಸುವಳು ಬೀಸಿದ ಹಿಟ್ಟಿನಿಂದ ಎಲ್ಲಾರಿಗೂ ರೊಟ್ಟಿ ಬಡೆಯುವಳು ಕೊನೆಗೆ ಎಲ್ಲಾರು ಸ್ನಾನ ಮಾಡಿದ ಬಟ್ಟೆಗಳನ್ನು ಒಗೆದು ಹಾಕುವಳು ಮಲ್ಲಮ್ಮ ಅತ್ತೆ ಮಾತಾಗಲಿ ನೆಗೆಣ್ಣಿಯರು ಮಾತಾಗಲಿ ತಿರಸ್ಕರಿಸದೆ ಬೇಜಾರು ಮಾಡಿಕೊಳ್ಳದೆ ಇದೆಲ್ಲ ನಾನು ಮಾಡುವ ಕರ್ತವ್ಯವೆಂದೇ ತಪ್ಪದೆ ಮಾಡುವಳು ಮಲ್ಲಮ್ಮ ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರು ನೆಗೆಣ್ಣಿಯರಿಗೆ ಸಂತೋಷವಾಗುತ್ತಿರಲಿಲ್ಲ ಅವಳ ಕೆಲಸದಲ್ಲಿ ಏನಾದರೂ ತಪ್ಪು ಹುಡುಕುವದೆ ಅವರ ಸ್ವಭಾವ ವಾಗಿತ್ತು ಮಲ್ಲಮ್ಮ ಒಗೆದ ಬಟ್ಟೆಯಲ್ಲಿ ಸ್ವಲ್ಪ ಕಲೆ ಇದ್ದರೆ ಸಾಕು ಮಲ್ಲಮ್ಮ ನಿಮ್ಮ ಬಟ್ಟೆ ಸರಿಯಾಗಿ ಒಗೆಯುವದಿಲ್ಲ ಅವಳಿಗೆ ಮಹಾ ಸೊಕ್ಕು ನಿಮ್ಮ ಮೇಲೆ ಮಲ್ಲಮ್ಮಳಿಗೆ ತಿರಸ್ಕಾರ ಅದಕ್ಕೆ ಹೀಗೆ ಮಾಡುತ್ತಾಳೆ ಎಂದು ಅತ್ತೆಗೆ ಚಾಡಿ ಹೇಳುವರು ಸೊಸೆಯರ ಮಾತನ್ನೇ ವೇದವಾಕ್ಯವೇಂದು ತಿಳಿದ ಪದ್ಮಾವತಿ ಮಲ್ಲಮ್ಮಳಿಗೆ ಮತ್ತೊಮ್ಮೆ ಬಟ್ಟೆ ಓಗೆಯಲು ಆಜ್ಞಾಪಿಸುವಳು ಅತ್ತೆಯ ಮಾತನ್ನು ತಿರಸ್ಕಾರ ಮಾಡದೆ ಮಲ್ಲಮ್ಮ ಪುನಃ ಬಟ್ಟೆ ಒಗೆದು ಹಾಕುವಳು ಯಾರ ಮಾತನ್ನು ಮನಸ್ಸಿಗೆ ಹಚ್ಚಿಕೊಳ್ಳದ ಮಲ್ಲಮ್ಮ ತಾನು ಮಾಡುವ ಕೆಲಸವನ್ನು ಶ್ರದ್ಧೆಯಿಂದ ಭಕ್ತಿಯಿಂದ ಮಾಡುವಳು ಮನೆಯೆಲ್ಲಿ ಬಿಡುವಿಲ್ಲದ ಕೆಲಸ ಮಾಡುವ ಮಲ್ಲಮ್ಮಳಿಗೆ ವಿಶ್ರಾಂತಿ ನೆಮ್ಮದಿ ಸಿಗುವದು ಅಡವಿಗೆ ದನಗಳನ್ನು ಮೇಯ್ಯಲು ಹೊಡೆದುಕೊಂಡು ಹೋದಾಗಲೆ ಅಲ್ಲಿಯೇ ತನ್ನ ಆರಾದ್ಯ ದೈವನಾದ ಶ್ರೀಶೈಲ ಮಲ್ಲಿಕಾರ್ಜುನನ ಧ್ಯಾನ ಮಾಡುವಳು.
ಮಲ್ಲಮ್ಮ ಗಿರಿರಡ್ಡಿಯವರ ಮನೆಗೆ ಸೊಸೆಯಾಗಿ ಬಂದ ಮೇಲೆ ಯಾವ ಸಂಪತ್ತಿಗೂ ಕೊರತೆಯಾಗಿರಲಿಲ್ಲ ಉತ್ತು ಬಿತ್ತುದರಿಂದ ಬೆಳೆ ಬೆಳೆದು ವರ್ಷ ವರ್ಷವೂ ಶ್ರೀಮಂತಿಕೆ ಹೆಚ್ಚಿತು ಆದರೆ ಮೊದಲಿನಂತೆ ಮನೆಯವರಲ್ಲಿ ತುಂಬಿಕೊಂಡಿದ್ದ ಆಚಾರ ವಿಚಾರಗಳು ಇರ್ಲಿಲ್ಲ ಮನೇಯವರಲ್ಲಿ ದಾನ ಧರ್ಮವಾಗಲಿ ಮನೆಗೆ ಬಂದವರಿಗೆ ನಯ ವಿನಯದ ನಡತೆಯಾಗಲಿ ಹಿರಿಯರಿಗೆ ಗೌರವ-ಆದರ ಆತಿಥ್ಯ ನಿಡುವುದಾಗಲಿ ಮಾಯವಾಗಿದ್ದವು ಅತಿಯಾದ ಸಿರಿವಂತಿಕೆಯಿಂದ ಸೌಜನ್ಯತೆ ಅಳಿಯಿತು ಬಡ-ಬಗ್ಗರ ಬಗ್ಗೆ ಕರುಣೆ ತೋರುವ ಗುಣವಿಲ್ಲದೆ ತಮ್ಮ ಸಂಪತ್ತಿನ ಸುಖದಲ್ಲೆ ಮಗ್ನರಾಗಿದ್ದರು.
ಇವರಿಗೆ ಪರೀಕ್ಷಿಸಬೇಕೆಂದು ಒಂದು ದಿನಾ ಮಲ್ಲಿಕಾರ್ಜುನನು ಹಣ್ಣಾದ ಮುದುಕನ ವೇಷ ಧರಸಿ ನಾಗರಡ್ಡಿ ಮನೆಗೆ ಬಂದು ತಾಯಿ ನನಗೆ ಬಹಳ ಹಸಿವಾಗಿದೆ ಅನ್ನ ಹಾಕಿ ಪುಣ್ಯ ಕಟ್ಟಿಕೊಳ್ಳಿ ಎಂದನು ಗಿರಿರಡ್ಡಿಯ ಮನೇಯಲ್ಲಿದ್ದ ಸೊಸೆಯರು ಹೊರಗೆ ಬಂದು ಯಾರು ಬಂದಿರುವರೆಂದು ನೋಡಲಿಲ್ಲ ಮುದಕ ಅಮ್ಮ ಹಸಿವೆಯಾಗಿದೆ ಅನ್ನ ನೀಡಿರೆಂದು ಪದೇ ಪದೇ ಕೂಗಿದರು ಅತ್ತೆ ಮಾವ ಯಾರೂ ಕೇಳಿಸಿಕೊಳ್ಳದೆ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು ಸಿರಿ ಬಂದ ಕಾಲಕ್ಕೆ ಕರೆದು ದಾನವ ಮಾಡು ಎಂಬ ಲೋಕೋಕ್ತಿಯನ್ನು ಮೆರೆತು ಸಿರಿವಂತಿಕೆಯ ಅಹಂಕಾರದಲ್ಲಿ ಎಲ್ಲರೂ ಮೆರೆದಾಡುತ್ತಿದ್ದರು ಪರೀಕ್ಷೆಗೆ ಬಂದ ಮಲ್ಲಿಕಾರ್ಜುನನು ಬಿಡದೆ ಮತ್ತೆ ದೊಡ್ಡ ದನಿ ತೆಗೆದು ಕೂಗಿದನು ಕೊನೆಗೆ ಕೂಗು ಕೇಳಿದ ಅತ್ತೆ-ಸೊಸೆಯರು ಹೊರಗೆ ಬಂದು ನೋಡಿದರು ಮನೆಯ ಮುಂದೆ ನಿಂತ ಹಣ್ಣು ಮುದಕ ದನಿ ಕೇಳಿ ಏನಾದರೂ ಅನ್ನ ನೀಡಲು ತಂದಿರಬೇಕು ಆಸೇಯಿಂದ ಅಮ್ಮ ಬಹಳಷ್ಟು ಹಸಿವೇ ಆಗಿದೆ ನಿಡಿಯಮ್ಮ ಎಂದು ಕೈಯಲ್ಲಿಯ ಪಾತ್ರೆಯನ್ನು ಮುಂದೇ ಚಾಚಿದನು ಅನ್ನ ನೀಡುವ ಬದಲು ಅತ್ತೆ ಸೊಸೆಯಂದಿರು ಭಿಕ್ಷುಕನ ಮೇಲೆ ಅಸಹ್ಯ ಪಟ್ಟು ನಡಿ ಆಚೆಗೆ ಬಂದವರಿಗೆಲ್ಲ ಅನ್ನ ನೀಡಲು ಇದೇನು ಅನ್ನ ಛತ್ರವೇ ಧರ್ಮಶಾಲೆಗೆ ಹೋಗೇಂದು ಬೈದರು ಅಮ್ಮ ಭಹಳ ಹಸೀವಾಗಿದೆ ಮತ್ತೊಮ್ಮೆ ಬರುವದಿಲ್ಲ ಏನಾದರೂ ನೀಡಿ ಎಂದು ಬೇದಿಕೋಂಡನು ಏ ಮುದುಕ ಹೇಳಿದರೂ ಕೇಳುವುದಿಲ್ಲವೋ ಹೋಗು ಆಚೆಗೆ ಎಂದು ಬೈದು ಹೊಡೆದು ಅಂಗಳದಿಂದ ಎಳೆದು ಹೊರಗೆ ನೂಕಿದರು ಗಿರಿರಡ್ಡಿಯವರ ಮನೆಯವರಿಂದ ಬೈಗಳ ಹೊಡೆತದಿಂದ ತತ್ತರಿಸಿದ ಮಲ್ಲಿಕಾರ್ಜುನ ಮನನೋಂದು ಇನ್ನೂ ಎಂದಿಗೂ ಈ ಮನೆಗೆ ಭಿಕ್ಷಕ್ಕೆ ಬರಬಾರದೇಂದು ನಿರ್ಧರಿಸಿ ನಿತ್ಯ ಉಣ್ಣಿಸುವ ಸದ್ಭಕ್ತಳಾದ ಮಲ್ಲಮ್ಮನ ಬಳಿ ಮಲ್ಲಿಕಾರ್ಜುನ ಬಂದನು.
ಮಲ್ಲಮ್ಮ ಎಂದಿನಂತೆ ಗುಡಿಸಿಲಿನಲ್ಲಿ ಕೆಲಸ ಮಾಡುತ್ತಿದ್ದಳು ಮಲ್ಲಿಕಾರ್ಜುನ ಭಿಕ್ಷುಕನ ವೇಷದಲ್ಲಿ ಬಂದು ಗುಡಿಸಲಿನ ಮುಂದೇ ನಿಂತೂ ಅಮ್ಮ ಅನ್ನ ನೀಡಿ ಎಂದು ಕೂಗಿದ್ದು ಕೇಳಿ ಹೊರಗೆ ಬಂದು ನಿಂತಿರುವ ಮುದುಕನ ನೋಡಿ ಬಂದು ನಿಂತಿರುವ ಮುದುಕನ ನೋಡಿ ಬಂದು ಕಾಲಿಗೆ ನಮಸ್ಕರಿಸಿದಳು ಬನ್ನಿ ಗುಡಿಸಲು ಒಳಗೆ ಬನ್ನಿ ಹೊರಗಡೆ ಬಿಸಿಲಲ್ಲಿ ನಿಲ್ಲಬೇಡಿ ಎಂದು ಕರೆದು ಗುಡಿಸಲಿನಲ್ಲಿ ಹಾಸಿದ ಕಂಬಳಿಯ ಮೇಲೆ ಕುಡಿಸಿದಳು ಏಲ್ಲಿಂದ ಬಂದಿರುವದು ಮುಖ ಬಾಡಿದೆ ಬಹಳ ಹಸಿವೆಯಾಗಿದೆಯೇ ಎಂದು ಪರಿಪರಿಯಾಗಿ ಬೇಡಿಕೊಂಡಳು ಆಗ ಮಲ್ಲಿಕಾರ್ಜುನನು ಗಿರಿರಡ್ಡಿಯ ಮನೆಯವರು ಮಾಡಿದ ರಾದ್ದಾಂತವನ್ನು ವಿವರಿಸಿ ಹೇಳಿದನು ಇನ್ನು ಮುಂದೆ ಆ ಮನೆಗೆ ಉಳಿಗಾಲವಿಲ್ಲವೇಂದನು ಆಗ ಮಲ್ಲಮ್ಮಳು ದೈನತೆಯಿಂದ ಅಪ್ಪಾ ತಾವು ಹಿರಿಯರು ಪುಜ್ಯರು ಸಣ್ಣವರು ಅರಿಯದೆ ಮಾಡಿದ ತಪ್ಪನ್ನು ಮನ್ನಿಸಿ ಬುದ್ದಿ ಹೇಳುವರು ತಾವೇ ಕೋಪಿಸಿಕೊಂಡು ನಮ್ಮ ಮನೆಗೆ ಶಾಪ ಕೊಟ್ಟರೆ ಹೇಗೆ ದಯವಿಟ್ಟು ಮನ್ನಿಸಿರಿ ತಾವು ಬಹಳ ಹಸಿದಿರುವರಿ ಊಟ ಮಾಡುತ್ತಿರೇನು ತಾನು ತಂದಿದ್ದ ಅಂಬಲಿ ನುಚ್ಚನ್ನು ಭಿಕ್ಷುಕ ರೂಪದಲ್ಲಿ ಬಂದ ಮಲ್ಲಿಕಾರ್ಜುನನಿಗೆ ನೀಡಿದಳು ಮಲ್ಲಯ್ಯನು ಮಲ್ಲಮ್ಮಳು ನೀಡಿದ ಹಳಸಿದ ಅಂಬಲಿ ನುಚ್ಚನ್ನು ಮ್ರಷ್ಠಾನ್ನದ ಭೋಜನದಂತೆ ಹೊಟ್ಟೆ ತುಂಬಾ ಉಂಡನು ನಿನ್ನ ಭಿಕ್ಷೆ ಲೋಕಕ್ಕೆ ಹರಡಲೆಂದು ಆಶೀರ್ವದಿಸಿ ಹೋದನು ಮಲ್ಲಮ್ಮನ ಭಿಕ್ಷೆಯ ಕರೆಯನ್ನು ಮೆಚ್ಚಿ ಮಲ್ಲಿಕಾರ್ಜುನನು ಭೇಟಿಯಾಗಿ ಅವಳ ಸುಖ ದುಃಖದಲ್ಲಿ ಕಾರ್ಯದಲ್ಲಿ ಸಾಹಾಯ ಮಾಡುತಿದ್ದನು ಅವಳು ಕಾಡಿನಲ್ಲಿ ಧಾನಾಸಕ್ತಳಾಗಿ ಪ್ರಾರ್ಥಿಸಿದರೆ ಸಾಕು ಮಲ್ಲಿಕಾರ್ಜುನ ಪ್ರತ್ಯಕ್ಷನಾಗುತ್ತಿದ್ದನು ಅವಳ ಭಿಕ್ಷೆಗೆ ಸೋತು ಮನ ತಣಿಯುವಂತೆ ಮಾತಾಡಿ ಮನಸ್ಸು ಹಗುರಗೊಳಿಸಿ ಸಾಂತ್ವನ ನೀಡುತ್ತಿದ್ದನು.
ಮಲ್ಲಮ್ಮನ ಭಕ್ತಿಗೆ ಮೆಚ್ಚಿ ಮಲ್ಲಿಕಾರ್ಜುನನು ಭೇಟಿಯಾಗಿ ಮಾತನಾಡುವುದನ್ನು ಅವರಿವರ ಬಾಯಿಯಿಂದ ಕೇಳಿದ ಸವತಿಯರು ಮತ್ತಷ್ಟು ಕೋಪಿಷ್ಠರಾದರು ನೆಗಣ್ಣೆಯರಾದ ಮಹಾದೇವಿ,ನಾಗಮ್ಮರ ಹೊಟ್ಟೆಕಿಚ್ಚು ಅಲ್ಲಿಗೆ ನೀಲ್ಲಲಿಲ್ಲ ಇಲ್ಲದ ಸಲ್ಲದ ಮಾತನ್ನು ಅತ್ತೆಗೂ ತಿಳಿಸಿದರು ಮಲ್ಲಮ್ಮ ಮಲ್ಲಿಕಾರ್ಜುನನ ಭಕ್ತಿ ಪ್ರೇಮದ ಅರಿವಿಲ್ಲದೆ ಅತ್ತೆ ಹಾದರದ ಆರೋಪವನ್ನು ಹೊರಿಸಿದಳು ಅದಕ್ಕೆ ನೆಗಣ್ಣೆಯರು ಊರಿನವರಿಗೂ ಸಾರಿ ಸಾರಿ ಹೇಳಿದರು ಏನೋ ಭರಮಾ ಮನೆಯಲ್ಲಿ ನೀನು ಬಿದ್ದಿರುತ್ತಿ ನಿನ್ನ ಹೆಂಡತಿ ಮಲ್ಲವ್ವ ಅಲ್ಲಿ ದನ ಮೇಯಿಸುವ ನೆಪಮಾಡಿ ಪುರುಷರೊಂದಿಗೆ ಚಕ್ಕಂದವಾಡುತ್ತಿರುವಳು ನಿನ್ನ ಹೆಂಡತಿ ಮಾಡಿದ ಕಳ್ಳಾಟದಿಂದ ನಮ್ಮ ಮನೆಯ ಮರ್ಯಾದೆ ಮಣ್ಣುಪಾಲಾಯಿತು ದಿನಾಲು ನಿನ್ನ ಹೆಂಡತಿಯೋಂದಿಗೆ ಹೊಲದ ಗುಡಿಸಿಲಿನಲ್ಲಿ ಸರಸವಾಡುವ ಆ ಪರಪುರುಷನಿಗೆ ಬುದ್ದಿ ಕಲಿಸೆಂದು ಮನೇಯಲ್ಲಿನ ಕೊಡಲಿ ತಂದು ಕೊಟ್ಟು ಹೋಗು ಭರಮಾ ಭೇಗನೆ ಹೋಗಿ ಮರೆಯಲ್ಲಿ ಕುಳಿತು ನಿನ್ನ ಹೆಂಡತಿಯೊಂದಿಗೆ ಸರಸವಾಡುವ ಆ ಪುರುಷನನ್ನು ತಡೆದುಹಾಕೆಂದು ಹೇಳಿ ಕಳಿಸಿದಳು ತಾಯಿಯ ಮಾತು ವೇದವಾಕ್ಯವೆಂದು ನಂಬಿದ ಭರಮರಡ್ಡಿ ಹಿಂದೆ ಮುಂದೇ ಆಲೋಚನೆ ಮಾಡದೆ ಕೊಡಲಿ ಹಿಡಿದು ಹೊಲಕ್ಕೆ ಬಂದನು ಹೆಂಡತಿಗೆ ಕಾಣದಂತೆ ಗಿಡದ ಮರೆಯಲ್ಲಿ ಗುಡಿಸಲಿನ ಹಿಂದೆ ಬಂದು ಅಡಗಿ ಕುಳಿತನು ಗುಡಿಸಲ ಒಳಗೆ ಗುನು ಗುನು ಮಾತನಾಡುವ ದ್ವನಿ ಕೇಳಿಸಿತು ತಾಯಿ ಹೇಳಿದ್ದು ನಿಜವೇಂದು ತಟ್ಟನೆ ಎದ್ದು ಮೆಲ್ಲನೆ ಗುಡಿಸಲ ಹಿಂದೆ ಕೊಡಲಿ ಹಿಡಿದು ಬಂದನು ಗುಡಿಸಲು ಒಳಗೆ ಊಟ ಮಾಡುತಿದ್ದ ಮಲ್ಲಿಕಾರ್ಜುನನಿಗೆ ಹೊರಗೆ ಭರಮರಡ್ಡಿ ಕೊಡಲಿ ಹಿಡಿದು ಬರುವುದನ್ನು ಅರಿತು ಮಲ್ಲಮ್ಮ ನೀರು ತರುವುದರಲ್ಲೇ ಎದ್ದು ಹೋಗಿ ಮರೆಯಾದನು ಮಲ್ಲಮ್ಮ ನೀರು ಕೊಡಲು ಒಳಗೆ ಬಂದು ಮಲ್ಲಿಕಾರ್ಜುನ ಇಲ್ಲದ್ದು ಕಂಡು ಗಾಬರಿಯಾಗಿ ಊಟ ಮಾಡುವದನ್ನು ಬಿಟ್ಟು ಎಲ್ಲಿಗೆ ಹೋದನು ದಿನಾಲು ನನ್ನೋಂದಿಗೆ ಮಾತಾಡಿ ಮನಸ್ಸು ಹಗುರಗೊಳಿಸುವ ನಾನು ನೀಡುವ ಅನ್ನ ಊಟ ಮಾಡುವ ದೇವ ಎಲ್ಲಿ ಹೋದರು ಇಂದು ನಾನು ನಿನಗೆ ಮಾಡಿದ ಅಪರಾಧವೇನು ದೇವರೆ ಹೇಳದೇ ಕೇಳದೆ ಎಲ್ಲಿಗೆ ಹೋದೆ ನಾನು ಮಾಡಿದ ತಪ್ಪು ಏನು ತಿಳಿಸದೆ ಹೋದಿರಲ್ಲ ಗುರುವೆ ನೀನು ಬಂದು ಊಟ ಮಾಡುವವರೆಗೂ ನಾನು ಊಟ ಮಾಡುವದಿಲ್ಲ ದಯಮಾಡು ಗುರುವೆ ಎಂದು ಪರಿಪರಿಯಾಗಿ ಭೇಡಿಕೊಳ್ಳುತ್ತ ಗುಡಿಸಲು ಹೊರಗೆ ಬಂದು ಸುತ್ತಲು ಹುಡಕಿದಳು ಎಲ್ಲಿಯೂ ಮಲ್ಲಿಕಾರ್ಜುನ ಕಾಣಿಸಲಿಲ್ಲ ಇಂದು ನನಗೆ ಮೋಸಮಾಡಿ ಹೋದ ಮಲ್ಲಯ್ಯನ ಬಿಟ್ಟು ನಾನು ಊಟ ಮಾಡುವದೇ ಭೇಡ ಅವನು ಬಂದರೆ ಇಬ್ಬರೂ ಕೂಡಿ ಊಟ ಮಾದುವೆನೆಂದು ನಿರ್ಧರಿಸಿ ಮತ್ತೇ ದನ ಕಾಯಲು ಹೋದಳು ಗುಡಿಸಲು ಹಿಂದೆ ಅಡಗಿ ಕುಳಿತಿದ್ದ ಭರಮರಡ್ಡಿಗೆ ಮಲ್ಲಮ್ಮ ಮಾತಾಡುವದು ಸ್ಪಷ್ಟವಾಗಿ ಕೇಳಿಸಲಿಲ್ಲ ಯಾರೊಂದಿಗೆ ಮಾತನಾಡುತ್ತಿರಭೆಕೆಂದು ಗುಡಿಸಲಿನ ಹಿಂದೆ ಬಂದು ನಿಂತನು ಅನುಮಾನವೇಂದು ಬಾಗಿಲ ಸಮೀಪ ನಿಂತು ಇಣಕಿ ನೋಡಿದನು ಗುಡಿಸಲಿನ ಒಳಗೆ ಯಾರೂ ಕಾಣಿಸಲಿಲ್ಲ ಮಲ್ಲಮ್ಮ ಆಗಲೇ ದನ ಕಾಯಲು ಹೋಗಿದ್ದಳು ಒಬ್ಬಳೆ ಗುಡಿಸಲಿನಲ್ಲಿ ಯಾರೊಂದಿಗೆ ಮಾತನಾಡಿದಳು ಎಂದು ಸಂಶಯ ಬಂದು ಒಳಗೆ ಹೋಗಿ ನೋಡಿದನು ಯಾರು ಇಲ್ಲದಿದ್ದು ಕಂಡು ಎಲ್ಲೋ ಇಲ್ಲೆ ಅಡಗಿ ಕುಲತೀರಭೇಕು ಇಂದು ಪರೀಕ್ಷೆ ಮಾಡಿ ನೋಡಭೇಕು ಯಾರೇಂದು ಗುರುತಾದರೆ ಅವನ ಕತೆ ಮುಗಿಸಭೆಕೆಂದು ಯೋಚಿಸಿ ಭರಮರಡ್ಡಿ ಮಲ್ಲಮ್ಮಗೆ ಗುರುತಾಗದಂತೆ ಅಲ್ಲಿಯೇ ಅಡಗಿ ಕುಳಿತನು ಹೊತ್ತು ಮುಳುಗುವ ಸಮಯವಾದರೂ ಮತ್ತೇ ಮಲ್ಲಯ್ಯ ಪ್ರತ್ಯಕ್ಷನಾಗಲಿಲ್ಲ ಮಲ್ಲಮ್ಮ ಯಾರೊಂದಿಗೂ ಮಾತನಾಡುವುದು ಕೇಳಿಸಲಿಲ್ಲ ದಿನದಂತೆ ಸಂಜೆಯಾಗಲು ದನಕರುಗಳನ್ನು ಗುಡಿಸಲ ಕಡೆಗೆ ಹೊಡೆದುಕೊಂಡು ಬಂದಳು ಮಲ್ಲಮ್ಮನ ವಿಟನನ್ನು ಕಾಣದೆ ಸಂಜೆಯಾಗುವರೆಗೆ ಕಾದು ಕುಳಿತ ಭರಮರಡ್ಡಿ ಕೊನೆಗೆ ಸೋತು ಇಂದು ನಾ ಬಂದದ್ದು ಗೂರತಾಗಿ ತಪ್ಪಿಸಿಕೊಂಡಿದ್ದಾನೆ ಇಬ್ಬರಿಗೂ ಗೊತ್ತಾಗದಂತೆ ಕೆಲವು ದಿನ ಬಿಟ್ಟುಬಂದು ಹಿಡಿದು ಬುದ್ದಿ ಕಲಿಸಭೇಕು ಎಂದು ಯೋಚಿಸುತ್ತ ಮನೆಗೆ ಬಂದನು ಭರಮರಡ್ಡಿ.
ಮಲ್ಲಮ್ಮಳ ವಿಟನನ್ನು ಹಿಡಿಯುವನೆಂದು ತಿಳಿದು ತಾಯಿ ಪದ್ಮಾವತಿ ಸಂತೋಷದಿಂದ ಇದ್ದಳು ಭರಮರಡ್ಡಿ ಬಂದಿದ್ದು ನೋಡಿ ಏನೋ ಭರಮ ಹೇಳಿದ ಮಾತು ಮೀರದೆ ನಿನ್ನ ಹೆಂಡತಿಯ ವಿಟನನ್ನು ಹಿಡಿದು ತಂದೆಯಾಗಿ ಎಂದು ಕೇಳಿಲು ಭರಮರಡ್ಡಿ ಮಾತನಾಡದೆ ತಲೆಕೆಳಗೆ ಮಾಡಿ ಅಮ್ಮಾ ಅವರು ಮಾತನಾಡುವುದು ಕೇಳಿಸಿತು ಹೋಗಿ ನೋಡಿದರೆ ಗುಡಿಸಲಲ್ಲಿ ಯಾರು ಇರಲಿಲ್ಲ ಹಿಡಿಯಲು ಕಾದು ಕುಳಿತು ಸಾಕಾಯಿತು ಎಲ್ಲಿ ಅಡಗಿ ಬಿಟ್ಟೆನೋ ತಿಳಿಯಲಿಲ್ಲ ಎಂದು ಹೇಳಲು
ನೀನು ಹೇಡಿ ಮಗ ನಿನ್ನಂತಹ ಮಗನ ಹಡೆದದ್ದು ನನ್ನ ಕರ್ಮ ಎಂದು ಬಾಯಿಗೆ ಬಂದಂತೆ ಬೈದಳು ಮಲ್ಲಮ್ಮನಿಗೆ ಮನೆಗೆ ಕರಿಸಿ ಎಲೇ ಮಲ್ಲಿ ನೀನೂ ದನಕಾಯುವ ನೆಪದಲ್ಲಿ ದಿನಾಲೂ ವಿಟನ ಜೊತೆ ಚಕ್ಕಂದ ಮಾಡುವುದಕ್ಕೆ ನಾಚಿಕೆ ಆಗುವುದಿಲ್ಲವೇ ನಮ್ಮ ಮನೆಯ ಮಾನ ಕಳಿದಿಯಲ್ಲೇ ಇನ್ನು ಮೇಲೆ ನಿನ್ನ ಮುಖ ತೋರಿಸಭೇಡ ಆ ಪರಪುರುಷನೋಂದಿಗೆ ಹಾಳಾಗಿ ಹೋಗು ಬೈದು ಅತ್ತೆ ನೆಗೆಣ್ಣಿಯರು ಮಲ್ಲಮ್ಮಳಿಗೆ ಹೊಡೆದು ಮನೇಯಿಂದ ಹೊರದೂಡಿದರು ಹೆಂಡತಿ ತಾಯಿ ಸವತಿಯರು ಬಡಿದು ಹೊರ ಹಾಕಿದರು ಭರಮರಡ್ಡಿ ಒಂದು ಮಾತನಾಡದೆ ಮೌನವಾಗಿದ್ದನು ಗಂಡನ ಎದುರಿಗೆ ತನ್ನ ಮೇಲೆ ವ್ಯಭಿಚಾರದ ಆರೋಪ ಹೊರಸಿದರೂ ಮಲ್ಲಮ್ಮ ಧೃತಿಗೆಡಲಿಲ್ಲ ಸಿಟ್ಟಿಗೆ ಬಂದು ಅತ್ತೆ ನೆಗೆಣ್ಣಿಯರಿಗಾಗಲಿ ಗಂಡನಿಗಾಗಲಿ ಮರು ಮಾತನಾಡಲಿಲ್ಲ ಎಂದೂ ಮಾತನಾಡಿಸದ ಅತ್ತೆ ನೆಗೆಣ್ಣಿಯರು ಇಂದು ಮಾತನಾಡಿಸಿದರು ಕೈಯಿಂದ ಮುಟ್ಟಿದರೆಂದು ಸಂತೋಷದಿಂದ ಮಲ್ಲಮ್ಮ ಮತ್ತೆ ಅಡವಿಯಲ್ಲಿ ಹಾಕಿದ ದನದ ಹಟ್ಟಿಗೆ ಹೋದಳು.
ಹೇಮರೆಡ್ಡಿ ಮಲ್ಲಮ್ಮಳ ಅತ್ತೆ ಆಕೆಗೆ ಉಣ್ಣುವುದಕ್ಕೆ, ಉಡುವುದಕ್ಕೆ ಸರಿಯಾಗಿ ಕೊಡದೆ, ಅವಳನ್ನು ಅಡವಿಗೆ ನೂಕಿ ಸಂಕಷ್ಟಗಳ ಸಂಕೋಲೆಗೆ ಸಿಗಿಸುವಳು. ಆದರೂ ಹೇಮರೆಡ್ಡಿ ಮಲ್ಲಮ್ಮ ನೊಂದುಕೊಳ್ಳದೆ ಕಾಡಿನಲ್ಲಿ ದನಗಳನ್ನು ಕಾಯುತ್ತಾ ಮಲ್ಲಿಕಾರ್ಜುನನ ಉಪಾಸನೆಯಲ್ಲಿ ಮಗ್ನ ಳಾಗಿರುತ್ತಿದ್ದಳು. ದಾನಚಿಂತಾಮಣಿಯಾದ ಮಲ್ಲಮ್ಮನಿಗೆ ಬುದ್ಧಿ ಕಲಿಸಲು ಅವಳ ಅತ್ತೆ ಮನೆಯ ಮುಂದೆ ಭಿಕ್ಷುಕ ಬಂದಾಗ ಸಿಟ್ಟುಗೊಂಡು ಒಲೆಯಲ್ಲಿನ ನಿಗಿನಿಗಿ ಕೆಂಡವನ್ನು ಅವಳ ಬೊಗಸೆಗೆ ಹಾಕಿ, ಬಾಗಿಲಲ್ಲಿ ನಿಂತಿದ್ದ ಭಿಕ್ಷುಕನಿಗೆ ನೀಡಲು ಹೇಳಿದಾಗ, ಮಲ್ಲಮ್ಮ ಅತ್ತೆಕೊಟ್ಟ ಕೆಂಡವನ್ನು ಸ್ವೀಕರಿಸಿ ಮನದಲ್ಲಿ ಮಲ್ಲಿಕಾರ್ಜುನನನ್ನು ನೆನೆದು ಭಿಕ್ಷಾರ್ಥಿಯ ಜೋಳಿಗೆಗೆ ಅದನ್ನೇ ನೀಡಿದಾಗ ಅದು ಧಾನ್ಯವಾಗಿ ಮಾರ್ಪಡುತ್ತದೆ. ಅಂದಿನಿಂದ ಮಲ್ಲಮ್ಮನ ಹೆಸರು ಬೆಂಕಿದಾನದ ಮಲ್ಲಮ್ಮ ಎಂದಾಯಿತು.
ದುಶ್ಚಟಗಳ ದಾಸನಾದ ವೇಮನ ವೇಶ್ಯಾಸ್ತ್ರೀಯೊಬ್ಬಳ ಮನದಾಸೆ ಈಡೇರಿಸಲು, ಅತ್ತಿಗೆಯಾಗಿದ್ದ ಹೇಮರೆಡ್ಡಿ ಮಲ್ಲಮ್ಮನ ಮೂಗುತಿಯನ್ನು ಬೇಕೆಂದು ಕೇಳುತ್ತಾನೆ. ಹೇಮರೆಡ್ಡಿ ಮಲ್ಲಮ್ಮ ಮೈದುನನಾದ ವೇಮನನಿಗೆ ಮೂಗುತಿ ಕೊಡಲು ಒಪ್ಪಿ ಕರಾರೊಂದನ್ನು ವಿಧಿಸುತ್ತಾಳೆ. ಅದೆಂದರೆ-"ವೇಮನ ಹೇಮರೆಡ್ಡಿ ಮಲ್ಲಮ್ಮನ ಮೂಗುತಿಯನ್ನು ಆ ವೇಶ್ಯಾಸ್ತ್ರೀಗೆ ಕೊಡುವಾಗ, ಆಕೆ ನಗ್ನಳಾಗಿ ಬಂದು ವೇಮನ ಕುಳಿತದ್ದ ಮಂಚವನ್ನು ಮೂರು ಸುತ್ತು ಸುತ್ತಬೇಕು. ಮೂರು ಸುತ್ತು ಹಾಕಿದ ನಂತರ ಹಿಂಬದಿಗೆ ಬಾಗಿ, ಎರಡು ಕಾಲುಗಳ ನಡುವೆ ಬಗ್ಗಿ ಕೈ ಚಾಚಿ ವೇಮನನಿಂದ ಮೂಗುತಿಯನ್ನು ಪಡೆಯಬೇಕು. ಅವಳು ಆ ಮೂಗುತಿಯನ್ನು ಪಡೆಯುವವರೆಗೂ ವೇಮನ ಆಕೆಯ ನಗ್ನಶರೀರವನ್ನು ತದೇಕ ಚಿತ್ತನಾಗಿ ನೋಡಬೇಕು". ವೇಮನ ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮನ ಮಾತನ್ನು ಚಾಚು ತಪ್ಪದೆ ಪಾಲಿಸುತ್ತಾನೆ. ತನ್ನ ಪ್ರೇಯಸಿಯ ನಗ್ನ ಶರೀರವನ್ನು ಕಂಡೊಡನೆ ಅವನೊಳಗೆ ಭಯಂಕರವಾದ ಜಿಗುಪ್ಸೆ, ಅಸಹ್ಯಭಾವನೆ ಆವರಿಸಿ ಒಡನೆಯೇ ಗಾಭರಿಗೊಂಡು ಕಣ್ಮುಚ್ಚಿ -
ತಾಯಿಯ ಗರ್ಭದಿಂದ ತಾಂ ಬರುವ ಸಮಯದಿ
ಮೊದಲು ವಸ್ತ್ರಮಿಲ್ಲ, ತುದಿಗುಮಿಲ್ಲ
ನಡುವೆ ಬಟ್ಟೆಯುಡುವುದೇಕೆಂದು ತಿಳಿಯಿರಿ
ವಿಶ್ವತೋಭಿರಾಮ ಕೇಳುವೆ ಮಾ||
ಎಂದು ತತ್ವ್ತಜ್ಞಾನ ಹೇಳುತ್ತಾ, ತಾನು ನಗ್ನನಾಗಿ ವೈರಾಗಿಯಂತೆ ಕಾಲ್ತೆಗೆದು ಹೊರ ಹೋರಟವನು, ಮುಂದೆ ತನ್ನ ಸಾಧನೆಯಿಂದ ಮಹಾಯೋಗಿಯಾದನು.
ಮಲ್ಲಮ್ಮ ಮನೆ ಬಿಟ್ಟು ಹೋದಮೇಲೆ ಗಿರಿರಡ್ಡಿಯ ಮನೆಯೆಲ್ಲಿ ಅನೇಕ ಮಾರ್ಪಾಡುಗಳಾದವು ಮಲ್ಲಯ್ಯನಿಗೆ ಅವಮಾನ ಮಾಡಿದ್ದರಿಂದಲೆ ಏನೋ ವರ್ಷದಂತೆ ಬೆಳೆ ಸರಿಯಾಗಿ ಬರಲಿಲ್ಲ ವ್ಯವಹಾರದಲ್ಲಿಯು ಗಳಿಕೆ ಆಗಲಿಲ್ಲ ಮಾಡಿದ ಪ್ರತಿಯೊಂದು ಉದ್ಯೋಗದಲ್ಲಿಯೂ ನಷ್ಟವೇ ಆಯಿತು ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು ಎಂಬಂತೆ ಮನೆ ಬರಿದಾಯಿತು ದೊಡ್ಡ ಓಕ್ಕುಲುತನದ ಮನೆಯಾದ್ದರಿಂದ ಗಿರಿರಡ್ಡಿಯವರಿಗೆ ಚಿಂತೇ ಹೆಚ್ಚಿತು ದವಸ ಧಾನ್ಯವಿಲ್ಡೇ ಎಲ್ಲಾರು ಬದಕುವದಾದರು ಹೇಗೆ ಮನೇಯಲ್ಲಿ ಹಣ ಸರಿದು ಚಿನ್ನದ ಒಡವೆಗಳನ್ನು ಮಾರಿದನು ದನಕರುಗಳು ಬಿಟ್ಟರೆ ಏನು ಉಳಿಯಲಿಲ್ಲ ಕೊನೆಗೆ ಉಣ್ಣಲು ಅಂಬಲಿಗು ಗತಿ ಇಲ್ಲದ ಸ್ಥಿತಿ ಬಂದು ಒದಗಿತ್ತು ದಿನ ದಿನ ಬಡತನದ ದಾರಿದ್ರ್ಯದಲ್ಲಿ ಗಿರಿರಡ್ಡಿ ಚಿಂತಿತನಾದನು.
ಅತ್ತೆ ಸೊಸೆಯಂದಿರಿಗೆ ಅನೇಕ ರೋಗಗಳು ಬಂದು ವಾಸಿಯಾಗದೆ ಕಂಡಕಂಡವರ ಮುಂದೆ ಕಾಪಾಡಿ ಎಂದು ಕಣ್ಣೀರಿಟ್ಟರು ಯಾರು ಔಷಧ ಕೊಟ್ಟರು ಅವರಿಗೆ ಬಂದ ರೋಗಗಳು ವಾಸಿಯಾಗಲಿಲ್ಲ ಇದಕ್ಕೆಲ್ಲ ಏನು ಕಾರಣವೇಂದು ಗಿರಿರಡ್ಡಿ ಪರಿತಪಿಸಿದನು ರೋಗದಿಂದ ಬಳಲುತಿದ್ದರು ಅತ್ತೆ ನಾದಿನಿಯರು ಮಲ್ಲಮ್ಮನ ಬಗ್ಗೆ ದ್ವೇಷವನ್ನೆ ಸಾಧಿಸಿದರು ಇದಕ್ಕೆಲ್ಲಾ ನಿಮ್ಮ ಮುದ್ದಿನ ಸೊಸೆ ಮಲ್ಲಮ್ಮನೇ ಕಾರಣಳು ಅವಳಿಂದಲೆ ನಮ್ಮ ಮನೆ ಸಂಪತ್ತು ಹಾಳಾಗಿ ಬಡತನ ಬಂದಿರುವದು ಅವಳು ಆ ಪರ ಪುರುಷನಿಗೆ ಎಲ್ಲಾ ಸಂಪತ್ತು ದಾನ ಮಾಡಿರುವಳು ಎಂದು ಆರೋಪಿಸಿದರು ಹೆಡಂತಿ ಸೊಸೆಯರು ಮಾತು ನಂಬದ ಗಿರಿರಡ್ಡಿ ನೀವು ಎಲ್ಲಾ ಸ್ವಾರ್ಥಿಗಳು ನಿಮ್ಮ ಕೆಟ್ಟ ನಡತೆಯಿಂದಲೇ ನಿಮಗೆ ಈ ಸ್ಥಿತಿ ಬಂದಿದೆ ಸುಮ್ಮನೆ ಮಲ್ಲಮ್ಮನ ಮೇಲೆ ಆರೋಪ ಹೊರಸುವುದು ಸರಿಯಲ್ಲ ಇನ್ನಾದರೂ ತಿಳಿದು ನಡೆಯಿರಿ ನಿಮ್ಮ ಸಹವಾಸವೇ ಸಾಕು ಎಂದು ವ್ಯಥೆಪಟ್ಟು ಸಾದ್ವಿ ಆದ ಮಲ್ಲಮ್ಮನ ಹಟ್ಟಿಗೆ ಬಂದು ನೆಲಿಸಿದನು ದಿನಗಳೆದಿಂತೆ ಗಿರಿರಡ್ಡಿಯ ಮನೆಯಲ್ಲಿ ರೋಗ ಉಲ್ಬಣವಾದುವು ಮೈ ಕೀವು ತುಂಬಿದ ಹುಣ್ಣು ರೋಗ ಸೊಸೆಯಿಂದಿರಾದ ಮಹಾದೇವಿ ನಾಗಮ್ಮಳಿಗೆ ಬಂದರೆ ಅತ್ತೆಯಾದ ಪದ್ಮಾವತಿಗೆ ತೊನ್ನು ರೋಗ ಬಂದಿತು ಯಾರು ಸಮಿಪಕ್ಕೆ ಬಾರದೆ ತಮ್ಮ ಹಾಸಿಗೆಯಲ್ಲಿ ಬಿದ್ದು ಅಯ್ಯೋ ದೇವರೆ ನಮಗೆ ಎಂತಾ ಹೊತ್ತು ತಂದೆ ಅಪ್ಪಾ ನಾವು ಏನು ಪಾಪ ಮಾಡಿದ್ದೇವೆ ರೋಗದಿಂದ ಬಳಲುವುದಕಿಂತ ಸಾಯುವುದೇ ಲೇಸು ದೇವರೆ ಭೇಗ ಸಾವನ್ನಾದರೂ ಕರುಣಿಸೆಂದು ಪರಿಪರಿಯಿಂದ ಬೇಡಿಕೊಂಡರು.
ಮನೇಯಲ್ಲಿ ಬಿದ್ದು ರೋಗದಿಂದ ನೇರಳುತ್ತಿರುವ ತಾಯಿ ಅತ್ತಿಗೇಯರನ್ನು ನೋಡಿ ಭರಮರಡ್ಡಿಗೆ ಸಿಟ್ಟು ಬಂದಿತು ನೀವು ಸುಮ್ಮನೆ ನನ್ನ ಹೆಂಡತಿಯ ಮೇಲೆ ಜಾರಣಿಯ ಕಳಂಕ ಹೊರೆಸಿ ಕೊಲ್ಲಲು ಕೊಡಲಿ ಕೊಟ್ಟು ಕಳಸಿದಿರಿ ನಾನು ಹೋಗಿ ನೋಡಿದರೆ ಗುಡಿಸಲಿನಲ್ಲಿ ಸಾಕ್ಷಾತ್ ಮಲ್ಲಯ್ಯನೋಂದಿಗೆ ನನ್ನ ಹೆಂಡತಿ ಮಾತನಾಡುತ್ತಿದ್ದಳು ಪತಿಭಕ್ತಳಾದ ನನ್ನ ಹೆಂಡತಿ ಮಲ್ಲಮ್ಮನ ಮೇಲೆ ವಿಷಕಾರಿ ನಾನಾ ರೀತಿ ತೋಂದರೆ ಕೊಟ್ಟಿರುವಿರಿ ಎಂದ.
ಮಲ್ಲಮ್ಮ ಇಹಲೋಕ ಯಾತ್ರೆ ಮುಗಿಸುವ ಮೊದಲು ಆಕೆಗೆ ಮಲ್ಲಿಕಾರ್ಜುನ, ಆಕೆಯ ನಿಷ್ಕಳಂಕ ಭಕ್ತಿಗೆ ಮನಸೋತು ಮಲ್ಲಮ್ಮನಿಗೆ ದರ್ಶನವಿತ್ತು ವರವೇನು ಬೇಕು ಕೇಳು ಎಂದಾಗ ಮಲ್ಲಮ್ಮ- ತನ್ನ ಬಳಗಕ್ಕೆಂದೂ ಬಡತನ ಬಾರದಿರಲಿ, ಅವರಿಗೆಂದೂ ಉಣ್ಣಲು-ಉಡಲು-ತೊಡಲು ಯಾವ ಕೊರತೆಯೂ ಆಗದಿರಲಿ, ಮಲ್ಲಿಕಾರ್ಜುನನ ಪೂಜೆ, ಜಾತ್ರೆ ಮತ್ತು ಉತ್ಸವಗಳು ನಿರಂತರ ನಡೆಯಬೇಕು ಎನ್ನುತ್ತಾಳೆ. ಮಲ್ಲಿಕಾರ್ಜುನ ಅವಳು ಬೇಡಿದಂತಹ ವರವನ್ನು ನೀಡುತ್ತಾನೆ.
ತನ್ನ ಬಳಗದವರಿಗೆ ಬುದ್ದಿವಾದ
ನಂತರ ಮಲ್ಲಮ್ಮ "ಸಂಪತ್ತಿಗೆ ಸೊಕ್ಕಬೇಡಿ, ಸಿರಿ ಬಂದ ಕಾಲಕ್ಕೆ ಮೈಮರೆತು ಹಿಗ್ಗದೇ, ದಾನಧರ್ಮ ಮಾಡುವುದರ ಮೂಲಕ ತನ್ನ ಬಳಗದವರು ದಾನಗುಣವನ್ನು ಬೆಳೆಸಿಕೊಳ್ಳಬೇಕು" ಎಂದು ತನ್ನ ಬಳಗದವರಿಗೆ ಬುದ್ದಿವಾದ ಹೇಳುತ್ತಾಳೆ.
ರಾಂಪುರದ ನಾಗರೆಡ್ಡಿ-ಗೌರಮ್ಮರ ಸುಪುತ್ರಿ
ಹೇಮರೆಡ್ಡಿ ಮಲ್ಲಮ್ಮ ಸಿದ್ದಾಪುರದ ಸೊಸಿ
ಶ್ರೀಶೈಲ ಮಲ್ಲಿಕಾರ್ಜುನನನ್ನು ಪೂಜಿಸಿ
ಅತ್ತೆ-ನೆಗೆಣ್ಣಿಯರ ಕಾಟ ಸಹಿಸಿ
ಮಬ್ಬು ಗಂಡನ ಮಹಾದೇವನೆಂದು ಮನ್ನಿಸಿ
ಮತಿಗೇಡಿ ಮೈದುನನ ಯೋಗಿ ವೇಮನನ ಮಾಡಿ
ಮಹಾಯೋಗಿಯ ಮಹಾತಾಯಿಯಾಗಿ
ಮಲ್ಲಮಾಂಬೆ ಬೆಳಗಿದಳು ರೆಡ್ಡಿಕುಲವ.
ಸಂತ ಶಿಶುನಾಳ ಷರೀಫರು ಹೇಮರೆಡ್ಡಿ ಮಲ್ಲಮ್ಮ ಬಗ್ಗೆ ಹೆಣೆದಿರುವ ವಿಶಿಷ್ಟ ಗೀತೆಯೆಂದರೆ-
ಹೇಮರೆಡ್ಡಿ ಮಲ್ಲಮ್ಮ
ರೆಡ್ಡಿಕುಲಧರ್ಮ ಉದ್ಧಾರ ಮಾಡಿದೆಯಮ್ಮಾ || ಪ ||
ನಿನ್ನ ಭಕ್ತಿಭಾಗ್ಯದ ನೇಮ
ಮಲ್ಲಯ್ಯನ ಕಟ್ಟಿದ ಪ್ರೇಮ
ಶ್ರೇಷ್ಟವಾಗಿ ತೋರುವದು ರಡ್ಡಿಕುಲಧರ್ಮ
ಶ್ರೀಶೈಲ ನಿನಗಾಗಿದೆ ಕಾಯಮ ||ಅ.ಪ.||
ನಿನ್ನ ಕಷ್ಟ ದುಃಖ ಹೇಳಲಾರೆನಮ್ಮ
ಗಂಡನ ಮೇಲೆ ಪ್ರೇಮ
ಹೊತ್ತಿಗಂಬಲಿ ಸಿಗಲಿಲ್ಲವಮ್ಮ
ಮಣ್ಣು ಪಾತ್ರೆ ಮಜ್ಜಿಗೆ ನೇಮ
ಮಲ್ಲಯ್ಯನು ಪಾಲುಗಾರನಮ್ಮ
ಉಂಡುಹೋದ ಉಳಿಯಲಿಲ್ಲವಮ್ಮ ||೧||
ನೀ ಬೀಸುದು ನೇಮ ದಿನ ದಿನ ಕಾಯಮ
ಕೈಯಲ್ಲಿ ಗುರುಳೆಮ್ಮ
ಬೀಸಿಹೋದ ಭಕ್ತಳಮ್ಮ
ಭಕ್ತಿಗೊಲಿದು ಬಂದನು ಜಂಗಮ
ಭಿಕ್ಷೆ ಬೇಡಿ ನಿಂತ ನೋಡಮ್ಮ
ಬಿಡದ ನಚ್ಚುನೇಗರನಮ್ಮ ||೨||
ನಿನ್ನ ಮೂಗುತಿ ಮರ್ಮ
ತಿಳಿಲಿಲ್ಲ ಹೇಮ ಬೇಡಿ ಒಯ್ದನಮ್ಮ
ಶಿಶುನಾಳ ಊರು ಗ್ರಾಮ
ಗುರುಗೋವಿಂದನ ನಾಮ
ಆತನ ಪಾದಸೇವೆ
ನಂಬಿ ನಾನು ಮಾಡಿದೆನಮ್ಮ ||೩||
References:
[1] ಮೂಗುತಿ ಮಹಿಮೆ : ಸಂ.ಹನುಮಂತಪ್ಪ ಅಂಡಗಿ.
[2] ಹೇಮರೆಡ್ಡಿ ಮಲ್ಲಮ್ಮನ ಪುರಾಣ - ರುದ್ರಕವಿ.
![]() | ಬೆಳವಾಡಿ (ಬೆಳವಡಿ) ಮಲ್ಲಮ್ಮ | ಲಿಂಗಾಯತ | ![]() |