Previous ನ್ಯೂ ಇಯರ್, ಮತ್ತು ಯುಗಾದಿ ಬಸವ ಪಂಚಮಿ ನಿಮಿತ್ತ ಲೇಖನ Next

ತಮಿಳು ನಾಡಿನಲ್ಲಿ ಬಸವಣ್ಣನ ಪ್ರತಿಮೆ!

*

- ✍ ವರದಿ: ಹಾ.ವೀ.ಮಂಜುಳಾ ಶಿವಾನಂದ

ತಮಿಳುನಾಡಿನ ನೀಲಗಿರಿ ಜಿಲ್ಲೆಗೆ ಸೇರಿದ ಕಾಟೇರಿ (ಡ್ಯಾಂ) ಈ ಗ್ರಾಮದವರಿಗೆ ಬಸವಣ್ಣನೊಬ್ಬನೇ ದೇವರು.

ಒಂದು ಗ್ರಾಮ ಅಲ್ಲಿ ಲಿಂಗಾಯಿತರಲ್ಲದೆ ಬೇರೆ ಜನಾಂಗದವರಿಲ್ಲ. ಗ್ರಾಮದಲ್ಲಿ ಮೂರು ಶ್ರೀ ಮಠಗಳಿವೆ. 1915-20ರ ಆಸುಪಾಸಿನಲ್ಲಿ ನಿರ್ಮಾಣವಾದ ಶ್ರೀ ಮಠ ಮತ್ತು ಲಿಂಗೇಶ್ವರ ಸ್ವಾಮಿಗಳಿಂದ ನಿರ್ಮಾಣಗೊಂಡ ಶ್ರೀಮಠ, ಹಾಗೂ ಅನತಿ ದೂರದಲ್ಲಿ ಕಾಡಿನ ಮಧ್ಯದಲ್ಲಿ ಶಿಥಿಲಾವಸ್ಥೆಯಲ್ಲಿರುವ ಶ್ರೀಮಠ, ಇಲ್ಲಿನ ಮಂದಿ ಬಸವ ಣ್ಣನವರ ಚಿಂತನೆಗಳನ್ನು ಆದಷ್ಟು ಮಟ್ಟಿಗೆ ತಮ್ಮ ಬದುಕಿನಲ್ಲಿ ಅಳವಡಿ ಸಿಕೊಂಡಿದ್ದಾರೆ. ಬಸವಣ್ಣನನ್ನು ಬಿಟ್ಟರೆ ಮತ್ಯಾವ ದೇವರುಗಳನ್ನು ಪೂಜಿಸುವುದಿಲ್ಲ.

Basava Statue in Kateri dam, Nilgiri district, Tamilnadu


25-30 ವರ್ಷಗಳ ಹಿಂದೆ ಅಲ್ಲಿನ ಹಿರಿಯರು ಬಸವೇಶ್ವರರ ಮಂಟಪವನ್ನು ಕಟ್ಟಿಸಿದರು. ತದನಂತರ ಅದರ ಜೀರ್ಣೋದ್ಧಾರವನ್ನು ಮಾಡಿದರು. ಶ್ರೀಮಠದ ಅಧ್ಯಕ್ಷರಾದ ಲೋಗೇಂದ್ರ ಕಾರ್ಯದರ್ಶಿಗಳಾದ ಬಸವರಾಜು, ಮುರುಗೇಶ್, ರಾಮದಾಸ್, ಶರವಣ, ಚಂದ್ರಶೇಖರ, ಸುಂದರಮೂರ್ತಿ ಮತ್ತು ಶೇಖರ್, ದೇವರಾಜು, ಲಿಂಗರಾಜು, ರಾಮಪ್ರಸಾದ್‌, ಪಟೇಲರಾದ ರಾಜಪ್ಪ ಮುಂತಾದವರೆಲ್ಲಾ ಸೇರಿ ಬಸವೇಶ್ವರರ ಒಂದು ಮೂರ್ತಿಯನ್ನು ಮಾಡಬೇಕೆಂದು ಮನಸ್ಸು ಮಾಡಿದರು. ವಿಷಯ ತಿಳಿದ ಸುತ್ತ-ಮುತ್ತಲ ಗ್ರಾಮದವರು ಸಹಾಯ ಹಸ್ತ ನೀಡಿದರು. ಶುಭಾರಂಭವಾಯಿತು. ತಂಜಾವೂರಿನ ಹತ್ತಿರದ ತಿರುವಾರೂರಿನ ಮುಖ್ಯ ಶಿಲ್ಪಿ, ಅಯ್ಯಪ್ಪ ಹಾಗೂ ಸಂಗಡಿಗರಿಂದ ನಿರ್ಮಾಣಗೊಂಡ 16ಅಡಿ ಎತ್ತರದ ಸುಂದರವಾದ ಭಕ್ತಿಯೇ ವೈವೆತ್ತಂತೆ ಇರುವ ಭವ್ಯವಾದ ಬಸವೇಶ್ವರರ ಮೂರ್ತಿಯನ್ನು ಬಸವ ಜಯಂತಿಯ ದಿನ (14-5-2021) ಊರಿನವರೆಲ್ಲಾ ಸೇರಿ ಉದ್ಘಾಟಿಸಿದರು.
Basava Statue in Kateri dam, Nilgiri district, Tamilnadu

*
Previous ನ್ಯೂ ಇಯರ್, ಮತ್ತು ಯುಗಾದಿ ಬಸವ ಪಂಚಮಿ ನಿಮಿತ್ತ ಲೇಖನ Next