Previous ಹಿಂದೂ, ಲಿಂಗಾಯತ ವ್ಯತ್ಯಾಸ ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆ Next

|| ಓಂ ಶ್ರೀ ಗುರು ಬಸವಲಿಂಗಾಯ ನಮಃ ||

4. ಲಿಂಗಾಯತ ಧರ್ಮದ ಲಕ್ಷಣಗಳು

- ಪೂಜ್ಯ ಶ್ರೀ ಮಹಾ ಜಗದ್ಗುರು ಮಾತೆ ಮಹಾದೇವಿ

ಇಬ್ಬರು ವ್ಯಕ್ತಿಗಳಿರುತ್ತಾರೆ. ಅವರಿಗೆ ತಮ್ಮವೇ ಆದ ಅಂಗಾಂಗಗಳಿರುತ್ತವೆ. ಹಾಗೆಯೇ ಧರ್ಮಗಳಿಗೆ ತಮ್ಮವೇ ಆದ ಲಕ್ಷಣಗಳು ಇರುತ್ತವೆ. ಲಿಂಗಾಯತ ಧರ್ಮದ ಲಕ್ಷಣಗಳು ಹೀಗಿವೆ:

02. ಧರ್ಮಸಂಹಿತೆ ವಚನ ಸಾಹಿತ್ಯ
03. ಧರ್ಮ ಭಾಷೆ ಕನ್ನಡ
04. ದೇವರ ಹೆಸರು ಲಿಂಗದೇವ
05. ಧರ್ಮಲಾಂಛನ ಸೃಷ್ಟಿಕರ್ತ ಲಿಂಗದೇವನ ಕುರುಹಾದ ಇಷ್ಟಲಿಂಗ
06. ಧರ್ಮಕ್ಷೇತ್ರ ಬಸವಣ್ಣನವರ ಐಕ್ಯಕ್ಷೇತ್ರ ಕೂಡಲ ಸಂಗಮ, ಶರಣ ಭೂಮಿ ಬಸವ ಕಲ್ಯಾಣ
07. ಧಾರ್ಮಿಕ ವಾರ್ಷಿಕ ಸಮಾವೇಶ ಶರಣ ಮೇಳ
08. ಧಾರ್ಮಿಕ ವ್ರತ ಶರಣ ವ್ರತ
09. ಧರ್ಮ ಸಂಸ್ಕಾರ ಇಷ್ಟಲಿಂಗ ದೀಕ್ಷೆ
10. ಧಾರ್ಮಿಕ ಕೇಂದ್ರ ಬಸವ (ಅನುಭವ) ಮಂಟಪ
11. ಧಾರ್ಮಿಕ ವಿಧಿ -ವಿಧಾನ - ಗುರು-ಲಿಂಗ-ಜಂಗಮದ ಅರ್ಚನೆ
12. ವಾರದ ಸಮಾವೇಶ- ಶರಣ ಸಂಗಮ -ಸಾಮೂಹಿಕ ಪ್ರಾರ್ಥನೆ
13. ಪವಿತ್ರ ಮಾಸ ಶ್ರಾವಣ
14. ಧರ್ಮ ಧ್ವಜ ಷಟ್ಯೂನ ಮಧ್ಯೆ ಇಷ್ಟಲಿಂಗ
15. ಪರಂಪರೆ ಬಸವಣ್ಣನವರೇ ಆದಿಗುರುವಾಗಿ ಬಂದ ಶರಣ ಪರಂಪರೆ
16. ಧಾರ್ಮಿಕ ಸಹೋದರತ್ವ ಇತರ ಧರ್ಮದ ಜನರನ್ನು ಮಾನವೀಯತೆ ಮತ್ತು ಸಹೋದರತೆಯಿಂದ ನಡೆಸಿಕೊಳ್ಳುವುದು
17. ಧರ್ಮದ ಧೈಯ ಜಾತಿ ವರ್ಣ ವರ್ಗರಹಿತ ಧರ್ಮಸಹಿತ ಕಲ್ಯಾಣ ರಾಜ್ಯ ನಿರ್ಮಾಣ

ಹೀಗೆ ಸಿದ್ದಾಂತ, ಸಾಧನೆ, ದರ್ಶನ ಶಾಸ್ತ್ರ ಸಮಾಜ ಶಾಸ್ತ್ರವಿಲ್ಲ ದೃಷ್ಟಿಯಿಂದಲೂ ಸ್ವಾವಲಂಬಿಯಾಗಿರುವ ಮತ್ತು ಕೇವಲ ಕೆಲವೊಂದು ಅಂಶಗಳನ್ನು ಹೊರತು ಪಡಿಸಿ, ಹೆಚ್ಚಿನ ವಿಷಯಗಳಲ್ಲಿ ಸಂಪೂರ್ಣ ಭಿನ್ನಮತವನ್ನು ಹೊಂದಿರುವ ಲಿಂಗಾಯತ ಧರ್ಮ ಹಿಂದು ಧರ್ಮದ ಅಂಗವಾಗಿ, ಒಂದು ಜಾತಿ ಅಥವಾ ಮತ (ಸೈದ್ಧಾಂತಿಕ ಅಭಿಪ್ರಾಯ) ಅಥವಾ ಪಂಥವಾಗಿರಲು ಸಾಧ್ಯವೇ ಇಲ್ಲ. ಒಂದು ರಾಜ್ಯದಲ್ಲಿ ಇನ್ನೊಂದು ರಾಜ್ಯ ಹೇಗೆ ಇರುವುದಿಲ್ಲವೋ ಹಾಗೆ ಒಂದು ಧರ್ಮದಲ್ಲಿ ಇನ್ನೊಂದು ಧರ್ಮ ಇರುವುದು ಸಾಧ್ಯವೇ ಇಲ್ಲ.

ಸಾಂಸ್ಕೃತಿಕ ಸಾಮ್ಯ

ಲಿಂಗಾಯತರಲ್ಲಿ ಉಡುವಿಕೆ, ಹೆಸರುಗಳನ್ನು ಇಡುವಿಕೆ, ಕೆಲವೊಂದು ಶಿಷ್ಟಾಚಾರ ಪಾಲನೆಯಲ್ಲಿ ಹಿಂದುಗಳೊಡನೆ ಸಾಮ್ಯತೆ ಇದೆ. ಕ್ರೈಸ್ತರು ಮತಾಂತರದ ಕಡೆಗೆ ಸದಾ ಕಣ್ಣಿಟ್ಟವರು. ಸಾಮಾನ್ಯವಾಗಿ ಹಿಂದುಳಿದ ಜನಾಂಗದವರು ಅದರಲ್ಲೂ ದಲಿತರು ಹೆಚ್ಚಾಗಿ ಕ್ರೈಸ್ತರಾಗುವ ಪ್ರಕ್ರಿಯೆ ನಡೆಯುತ್ತದೆ. ಕ್ರೈಸ್ತರ ಹೆಸರುಗಳು ಬೇರೆ ದೇಶದವೇ ಆಗಿದ್ದು, ಅಲ್ಲಿ ಕುಂಕುಮಧಾರಣೆ ಇತ್ಯಾದಿ ಇಲ್ಲ ಎಂದು ದಲಿತರು ಮತಾಂತರಕ್ಕೆ ಹಿಂಜರಿದಾಗ ಬಹುದೊಡ್ಡ ತಿದ್ದುಪಡಿಯನ್ನು ಕ್ಯಾಥೋಲಿಕ್ ಪಂಥ ಮಾಡಿ ಮಹಿಳೆಯರಿಗೆ ಕುಂಕುಮಧಾರಣೆಗೆ ಅವಕಾಶ ನೀಡಿತು. ಅದೇ ರೀತಿ ಈಗ ಹಿಂದು ಸಂಸ್ಕೃತಿಯ ಹೆಸರುಗಳನ್ನು ಮಕ್ಕಳಿಗೆ ಇಡಲಾಗುತ್ತಿದೆ. ಸಂಸ್ಕೃತಿಯ ವಿಷಯಕ್ಕೆ ಬಂದಾಗ ಭಾಷೆಗೂ ಸಂಸ್ಕೃತಿಗೂ ನಿಕಟ ಸಂಬಂಧವಿದ್ದು, ಇಲ್ಲಿ ಭಾಷೆ ಮತ್ತು ಭೌಗೋಳಿಕತೆಯು ಕೆಲಸ ಮಾಡುತ್ತದೆ. ಆದ್ದರಿಂದ ಹಿಂದು ಸಂಸ್ಕೃತಿ ಎನ್ನುವುದಕ್ಕಿಂತಲೂ ಭಾರತೀಯ ಸಂಸ್ಕೃತಿ ಎಂಬುದು ಹೆಚ್ಚು ಸೂಕ್ತವೆನಿಸಿತು. ಮುಸಲೀಮ್ ಮಹಿಳೆಯರು ತಾಳಿ ಕಟ್ಟುತ್ತಾರೆ, ಬಳೆ ತೊಡುತ್ತಾರೆ. ಅಂದ ಮಾತ್ರಕ್ಕೆ ಕ್ರೈಸ್ತರು, ಮುಸಲೀಮರನ್ನು ಹಿಂದುಗಳೆನ್ನಲು ಬರುವುದೆ ? ಹಾಗೆಯೇ ಲಿಂಗಾಯತರು ಹೆಸರುಗಳಲ್ಲಿ, ಬಳೆ - ಕುಂಕುಮ-ಮಾಂಗಲ್ಯ -ಕಾಲುಂಗುರ ಮುಂತಾಗಿ ಧರಿಸುವುದರಲ್ಲಿ ಹಿಂದು ಸಂಸ್ಕೃತಿಯನ್ನು ಹೊಂದಿದ್ದಾರೆ ಎಂದ ಮಾತ್ರಕ್ಕೆ ತಾತ್ವಿಕವಾಗಿ, ಧಾರ್ಮಿಕವಾಗಿ ಹಿಂದುಗಳು ಎನ್ನಲು ಬರುವುದಿಲ್ಲ,

ವಚನ ಸಾಹಿತ್ಯ ಅಧ್ಯಯನ ಮಾಡದೆ ತಮ್ಮ ಧರ್ಮದ ಸ್ವರೂಪವನ್ನು ತಿಳಿಯದ ಬಹುಪಾಲು ಲಿಂಗಾಯತರು (ಮತ್ತು ಮಠಾಧೀಶರು ಸಹ) ತಮ್ಮ ಧರ್ಮಕ್ಕೆ ವಿರುದ್ಧವಾಗಿ ಹೋಮ-ಹವನಾದಿಗಳನ್ನು ಬಹುದೇವತೋಪಾಸನೆಯನ್ನು ಮಾಡುವರು, ಜಾತಿ ಭೇದ -ಅಸ್ಪೃಶ್ಯತೆ ಆಚರಿಸುವರು. ಅವರು ಹಿಂದು ಆಚರಣೆ ಮಾಡುತ್ತಾರೆ ಎಂದ ಮಾತ್ರಕ್ಕೆ ಅವರ ಧರ್ಮಕ್ಕೇನೂ ಕುಂದು ಬರುವುದಿಲ್ಲ, ವ್ಯಕ್ತಿಗಳು ಭ್ರಷ್ಟಾಚಾರಿಗಳಾದ ಮಾತ್ರಕ್ಕೆ ಸಂವಿಧಾನವು ಕಲಂಕಿತವಾಗುವುದಿಲ್ಲ. ಲಿಂಗಾಯತ ಸಮಾಜದಲ್ಲಿ ಯಾರೋ ಕೆಲವರು ತಮ್ಮ ಧರ್ಮ ಸಾಹಿತ್ಯವನ್ನು ಅಧ್ಯಯನ ಮಾಡದೆ ಸುತ್ತಮುತ್ತಲಿನವರನ್ನು ನೋಡಿ ಆಚರಿಸುವ ಕಾರಣ ಇಂಥ ತಪ್ಪು ಮಾಡುವರು. ಯಾರೋ ಕೆಲವರು ತಮ್ಮ ವೈಯಕ್ತಿಕ ದೌರ್ಬಲ್ಯದಿಂದ ಮಾಂಸಾಹಾರ ಮಾಡಿದ ಮಾತ್ರಕ್ಕೆ ಲಿಂಗಾಯತ ಧರ್ಮವು ಮಾಂಸಾಹಾರಿ ಧರ್ಮವಾಗದು. ಅದೇ ರೀತಿ ಆಚರಣೆಗಳಲ್ಲಿ ಕೆಲವರು ತಪ್ಪು ಮಾಡಿದ ಮಾತ್ರಕ್ಕೆ ಲಿಂಗಾಯತ ಧರ್ಮದ ಅವಿಭಾಜ್ಯ ಅಂಗವಾಗಿ ಆ ತಪ್ಪು ಇರದು.

ಗ್ರಂಥ ಋಣ:
1) ಲಿಂಗಾಯತರು ಹಿಂದುಗಳಲ್ಲ - A book written by Her Holiness Maha Jagadguru Mata Mahadevi, Published by: Vishwakalyana Mission 2035, II Block, chord Road, Rajajinagar, Bangalore-560010.

*
ಪರಿವಿಡಿ (index)
Previous ಹಿಂದೂ, ಲಿಂಗಾಯತ ವ್ಯತ್ಯಾಸ ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆ Next